Sunday, April 27, 2025
ಕನ್ನಡ

Fact Check

Fact Chek: ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಎನ್ನುವುದು ನಿಜವೇ?

Written By Saurabh Pandey, Translated By Ishwarachandra B G, Edited By Chayan Kundu
Jan 19, 2024
banner_image

Claim

ಅಯೋಧ್ಯೆಗೆ ಪಟಾಕಿ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿಕೊಂಡಿದೆ ಎಂದು ವೈರಲ್‌ ವೀಡಿಯೋದೊಂದಿಗೆ ಹೇಳಿಕೆಯೊಂದು ಹರಿದಾಡಿದೆ.

ಪ್ರಮುಖ ಮಾಧ್ಯಮಗಳಾದ ಪಬ್ಲಿಕ್‌ ಟಿವಿ ಮತ್ತು ನ್ಯೂಸ್ ಫಸ್ಟ್ ಕನ್ನಡ ಚಾನೆಲ್‌ ಗಳು ಈ ಹೇಳಿಕೆಯನ್ನು ಹಂಚಿಕೊಂಡಿವೆ.

ಈ ಕುರಿತು ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಭಾಗಶಃ ಸುಳ್ಳು ಎಂದು ಕಂಡುಕೊಂಡಿದೆ.

Fact

ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಸಂಭ್ರಮಕ್ಕೆ ಪಟಾಕಿಗಳನ್ನು ಸಾಗಿಸುತ್ತಿದ್ದ ಲಾರಿಗೆ ಬೆಂಕಿ ಹತ್ತಿಕೊಂಡಿದೆ ಎಂಬ ಹೇಳಿಕೆಯ ಬಗ್ಗೆ ತನಿಖೆ ನಡೆಸುತ್ತಿರುವ ವೇಳೆ ಪಟಾಕಿ ತುಂಬಿದ್ದ ಲಾರಿ ತಮಿಳುನಾಡಿನಿಂದ ಬಹ್ರೈಚ್ ಗೆ ಹೋಗುತ್ತಿತ್ತು ಎಂಬ ಉನ್ನಾವೋ ಪೊಲೀಸರ ಎಕ್ಸ್ ಖಾತೆಯ ಪೋಸ್ಟ್ ಕಂಡುಬಂದಿದೆ. ಇದರಲ್ಲಿ “ಇಂದು 17.01.2024 ರ ಮುಂಜಾನೆ 4:00 ಗಂಟೆ ಸುಮಾರಿಗೆ ಪಟಾಕಿಗಳನ್ನು ಸಾಗಿಸುತ್ತಿದ್ದ ಟ್ರಕ್ ಸಂಖ್ಯೆ ಟಿಎನ್ 28 ಎಎಲ್ 6639 ಪೂರ್ವಾ ಪ್ರದೇಶ ಪೊಲೀಸ್ ಠಾಣೆ ವ್ಯಾಪ್ತಿಯ ಖಾರ್ಗಿಖೇಡಾ ಗ್ರಾಮದ ಬಳಿ ಯಾವುದೋ ಕಾರಣಕ್ಕೆ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಮಾಹಿತಿಯ ಮೇರೆಗೆ ಅಗ್ನಿಶಾಮಕ ದಳವು ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದೆ ಮತ್ತು ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಲಾರಿಯನ್ನು ರಸ್ತೆಯಿಂದ ಸರಿಸಲಾಗಿದ್ದು, ಸಂಚಾರ ಸುಗಮವಾಗಿದೆ. ಲಾರಿ ಮಾಲೀಕರೊಂದಿಗೆ ಮಾತನಾಡಿದಾಗ, ಈ ಲಾರಿ ತಮಿಳುನಾಡಿನಿಂದ ಬಹ್ರೈಚ್ ಗೆ  ಹೋಗುತ್ತಿತ್ತು, ಅದರಲ್ಲಿ ಪಟಾಕಿಗಳು, ಮಕ್ಕಳ ಪೋಸ್ಟರ್ಗಳು, ಚಲನಚಿತ್ರ ಕಲಾವಿದರ ಪೋಸ್ಟರ್ಗಳು ಮತ್ತು ಅಂಗಡಿಗಳ ಪೂರೈಕೆಗಾಗಿ ಧಾರ್ಮಿಕ ಪೋಸ್ಟರ್ಗಳು ತುಂಬಿದ್ದವು ಎಂದು ತಿಳಿದುಬಂದಿದೆ.” ಎಂದಿದೆ.

ಇದಲ್ಲದೆ, 2024 ರ ಜನವರಿ 17 ರಂದು ಆಜ್ ತಕ್ ಮತ್ತು ನ್ಯೂಸ್ 18 ಪ್ರಕಟಿಸಿದ ವರದಿಗಳಲ್ಲಿ  ಪೂರ್ವಾ ಸರ್ಕಲ್ ಆಫೀಸರ್ ಸೋನಮ್ ಸಿಂಗ್ ಅವರ ಹೇಳಿಕೆಯನ್ನು ಗುರುತಿಸಿದ್ದೇವೆ. ಸೋನಮ್ ಸಿಂಗ್ ಅವರ ಪ್ರಕಾರ, ಲಾರಿ ಬಹ್ರೈಚ್ ಗೆ ಹೋಗುತ್ತಿತ್ತು. ಮುಂಜಾನೆ 4 ಗಂಟೆಗೆ ಖಾರ್ಗಿಖೇಡಾ ಗ್ರಾಮದ ಬಳಿ ಅನಾಮಿಕ ಕಾರಣಗಳಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿಯನ್ನು ನಂದಿಸಲಾಗಿದೆ ಮತ್ತು ಇಡೀ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇದಲ್ಲದೆ, ದೈನಿಕ್ ಭಾಸ್ಕರ್ ಪತ್ರಿಕೆಯ ಪತ್ರಕರ್ತೆ ಮಮತಾ ತ್ರಿಪಾಠಿ ಹಂಚಿಕೊಂಡ ಟ್ವೀಟ್ನಲ್ಲಿ ಸಿಒ ಸೋನಮ್ ಸಿಂಗ್ ಅವರ ವೀಡಿಯೋ ಹೇಳಿಕೆಯೂ ಇದೆ. ಲಾರಿ ಬಹ್ರೈಚ್ ಗೆ ಹೋಗುತ್ತಿತ್ತು ಎಂದು ಹಲವಾರು ಸ್ಥಳೀಯ ಪತ್ರಕರ್ತರೂ ವರದಿ ಮಾಡಿದ್ದಾರೆ.

ನಮ್ಮ ತನಿಖೆಯ ಪ್ರಕಾರ, ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಂಭ್ರಮಾಚರಣೆ ನಿಮಿತ್ತ ಪಟಾಕಿಗಳನ್ನು ಸಾಗಿಸುವ ಲಾರಿಯಲ್ಲಿ ಬೆಂಕಿ ಕಾಣಿಸಿದೆ ಎನ್ನುವ ಹೇಳಿಕೆ ತಪ್ಪುದಾರಿಗೆಳೆಯುವಂಥಾದ್ದಾಗಿದೆ. ವಾಸ್ತವವಾಗಿ, ಪಟಾಕಿಗಳನ್ನು ತುಂಬಿದ ಈ ಲಾರಿ ಬಹ್ರೈಚ್ ಗೆ ಹೋಗುತ್ತಿತ್ತು, ಆದರೆ ಮುಂಜಾನೆ 4 ಗಂಟೆಗೆ, ಅನಾಮಿಕ ಕಾರಣಗಳಿಂದಾಗಿ ಖಾರ್ಗಿಖೇಡಾ ಗ್ರಾಮದ ಬಳಿ ಲಾರಿಗೆ ಬೆಂಕಿ ಹತ್ತಿಕೊಂಡಿದೆ.

Result: Partly False

Our Sources:
Tweets shared by Unnao Police and Journalists

Media reports by Aajtak ಮತ್ತು News 18, Dated: January 17, 2024

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,944

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.