Sunday, April 27, 2025
ಕನ್ನಡ

Fact Check

ಲವ್‌ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್‌ ವೀಡಿಯೋ ತಯಾರಕರಿಂದ ಲವ್‌ ಜಿಹಾದ್ ಆರೋಪ ನಿರಾಕರಣೆ

Written By Sabloo Thomas, Translated By Ishwarachandra B G, Edited By Pankaj Menon
Apr 26, 2023
banner_image

Claim
ಕೇರಳದಲ್ಲಿ ಲವ್‌ ಜಿಹಾದ್‌ ಉತ್ತೇಜಿಸಲು ವೀಡಿಯೋ ಮಾಡಲಾಗಿದೆ

Fact
ವೈರಲ್‌ ಆಗಿರುವ ವೀಡಿಯೋವನ್ನು ವೀಡಿಯೊವನ್ನು ಸೂಫಿಯುಮ್ ಸುಜಾತಾಯುಮ್ ಚಿತ್ರದ ದೃಶ್ಯಗಳನ್ನು ಮರುಸೃಷ್ಟಿಸಲು ಮತ್ತು ಅದರ ಹಾಡುಗಳಿಗಾಗಿ ಮಾಡಲಾಗಿದೆ ಎಂದು ವೀಡಿಯೋ ತಯಾರಕರು ಹೇಳಿದ್ದಾರೆ

ಲವ್‌ ಜಿಹಾದ್‌ ಉತ್ತೇಜಿಸಲು ಕೇರಳದಲ್ಲಿ ವೀಡಿಯೋ ಮಾಡಲಾಗಿದೆ ಎಂಬ ಆರೋಪವೊಂದು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿದೆ. ಈದ್-ಉಲ್-ಫಿತರ್ ಹಬ್ಬವನ್ನು ಮುಸ್ಲಿಂ ಸಮುದಾಯ ಆಚರಿಸಿದ ಸಂದರ್ಭದಲ್ಲಿ ಅಂತರ್ ಧರ್ಮೀಯ ದಂಪತಿಯನ್ನು ಚಿತ್ರಿಸುವ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಇದಕ್ಕೆ ಕಾರಣವಾಗಿದೆ.

ಟ್ವಿಟರ್‌ನಲ್ಲಿ ಕಂಡು ಬಂದ ಈ ಕುರಿತ ಕ್ಲೇಮ್‌ ಒಂದರಲ್ಲಿ “ದೇವರ ನಾಡು ಕೇರಳದಲ್ಲಿ ವೈರಲ್ ಆಗಿರುವ “ಈದ್ ಸ್ಪೆಷಲ್” ವೀಡಿಯೋ ಚಿತ್ರಗಳು ಯುವಕ ಯುವತಿಯ ಹಣೆಯ ಬಿಂದಿ ತೆಗೆದು ಹಿಜಾಬ್ ಹಾಕುತ್ತಾನೆ..!! ಗೂಡಾರ್ಥ:- ಲವ್ ಜಿಹಾದ್ ಗೆ ಬೆಂಬಲ??” ಎಂದು ಬರೆಯಲಾಗಿದೆ.

ಲವ್‌ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್‌ ವೀಡಿಯೋ ತಯಾರಕರಿಂದ ಲವ್‌ ಜಿಹಾದ್ ಆರೋಪ ನಿರಾಕರಣೆ

ಹಲವು ಟ್ವಿಟರ್‌ ಬಳಕೆದಾರರು ಈ ವೀಡಿಯೋ ಮತ್ತು ವೀಡಿಯೋದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರ ವೀಡಿಯೋದಲ್ಲಿ ವೀಡಿಯೊದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಮಹಿಳೆಯ ತಿಲಕವನ್ನು ತೆಗೆಯುತ್ತಿರುವುದನ್ನು ತೋರಿಸಲಾಗಿದೆ. ಇದು ಇದು ಇಸ್ಲಾಂಗೆ ಮತಾಂತರಗೊಳ್ಳುವುದನ್ನು ಸೂಚಿಸುತ್ತದೆ ಎಂದು ಹಲವರು ಹೇಳಿದ್ದಾರೆ. ಇದನ್ನು ಹಲವರು  “ಲವ್-ಜಿಹಾದ್” ಅನ್ನು ವೈಭವೀಕರಿಸಿದೆ ಎಂದು ಆರೋಪಿಸಿದ್ದಾರೆ.

ಟ್ವಿಟ್ಟರ್ನಲ್ಲಿ ಅಂತಹ ಹೆಚ್ಚಿನ ಕಾಮೆಂಟ್ಗಳು ಮತ್ತು ಪೋಸ್ಟ್ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

Fact Check/Verification

ವೈರಲ್ ವೀಡಿಯೊದಿಂದ ಹೊರತೆಗೆದ ಕೀ ಫ್ರೇಮ್ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್‌ ನಡೆಸಲಾಗಿದೆ. ಈ ವೇಳೆ ಮೂಲ ವೀಡಿಯೊವನ್ನು thereal_vishnu ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವುದು ತಿಳಿದುಬಂದಿದೆ. ವೀಡಿಯೊದಲ್ಲಿ ಕಂಡುಬರುವಂತೆ ಟೋಪಿ ಧರಿಸಿದ ಮುಸ್ಲಿಂ ವ್ಯಕ್ತಿಯನ್ನು ಚಿತ್ರಿಸಿದ್ದು ನಟ ವಿಷ್ಣು ಕೆ ವಿಜಯನ್ ಎಂಬವರಾಗಿದ್ದು ಅವರ ಖಾತೆಯಲ್ಲಿ ವೀಡಿಯೋ ಕಂಡುಬಂದಿದೆ.

ಲವ್‌ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್‌ ವೀಡಿಯೋ ತಯಾರಕರಿಂದ ಲವ್‌ ಜಿಹಾದ್ ಆರೋಪ ನಿರಾಕರಣೆ
ಚಿತ್ರಕೃಪೆ: Instagram@thereal_vishnu_

ಎಪ್ರಿಲ್ 22, 2023 ರಂದು, ಈದ್-ಉಲ್-ಫಿತರ್ ಶುಭಾಶಯಗಳೊಂದಿಗೆ ಅದೇ ವೀಡಿಯೊವನ್ನು ಅವರ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.

ಲವ್‌ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್‌ ವೀಡಿಯೋ ತಯಾರಕರಿಂದ ಲವ್‌ ಜಿಹಾದ್ ಆರೋಪ ನಿರಾಕರಣೆ
ಚಿತ್ರಕೃಪೆ: Facebook/vishnutheRockstar

ವೀಡಿಯೊದ ಹಿಂದಿನ ಉದ್ದೇಶವನ್ನು ಅರ್ಥೈಸಿಕೊಳ್ಳಲು ನ್ಯೂಸ್‌ಚೆಕರ್ ವಿಷ್ಣು ಕೆ ವಿಜಯನ್ ಅವರನ್ನು ಸಂಪರ್ಕಿಸಿದೆ. “ವೀಡಿಯೋ ಸುತ್ತಲಿನ ವಿವಾದ ದುರದೃಷ್ಟಕರ ಮತ್ತು ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದವರು ಹೇಳಿದ್ದಾರೆ.” “ನಾವು ಲವ್ ಜಿಹಾದ್ ಅನ್ನು ಉತ್ತೇಜಿಸಲು ಇದನ್ನು ಮಾಡಲಿಲ್ಲ. ನಾವು ಅದನ್ನು ನಟರಾಗಿ ಮಾಡಿದ್ದೇವೆ ಮತ್ತು ರೀಲ್ ಅನ್ನು ರಚಿಸುವುದು ನಮ್ಮ ಪ್ರಾಥಮಿಕ ಗುರಿಯಾಗಿತ್ತು. ನಾವು ಧಾರಾವಾಹಿಗಳಲ್ಲಿ ಕೆಲಸ ಮಾಡುವ ಸಹ ಕಲಾವಿದರು. ನಮಗೆ ಯಾರನ್ನೂ ನೋಯಿಸುವ ಉದ್ದೇಶವಿರಲಿಲ್ಲ.” ಎಂದಿದ್ದಾರೆ.

ವೀಡಿಯೊದಲ್ಲಿ ಕಂಡುಬರುವ ಸುಮಿ ರಶಿಕ್ ಎಂಬ ಮಹಿಳೆ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಪುಟದಲ್ಲಿ ತಮ್ಮ ನಟನೆಯ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದಿತಿ ರಾವ್ ಹೈದರಿ ನಟಿಸಿರುವ ಮಲಯಾಳಂ ಚಿತ್ರ ‘ಸೂಫಿಯುಮ್ ಸುಜಾತಾಯುಮ್’ ಚಿತ್ರದ ಹಿಟ್ ಹಾಡುಗಳಲ್ಲಿ ಒಂದಾದ ‘ವತಿಕ್ಕಲು ವೆಲ್ಲರಿಪ್ರವು’ ನಿಂದ ಈ ವೀಡಿಯೋ ಸ್ಫೂರ್ತಿ ಪಡೆದಿದೆ.

ಲವ್‌ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್‌ ವೀಡಿಯೋ ತಯಾರಕರಿಂದ ಲವ್‌ ಜಿಹಾದ್ ಆರೋಪ ನಿರಾಕರಣೆ
ಚಿತ್ರಕೃಪೆ: Instagram@sumirashik_official_

ಸುಮಿಯವರ ಇನ್ಸ್ಟಾಗ್ರಾಮ್ ಖಾತೆಯನ್ನು ಪರಿಶೀಲಿಸಿದಾಗ, ಅವರು ಅನೇಕ ಹಿಂದೂ ಹಬ್ಬಗಳನ್ನು ಆಚರಿಸುತ್ತಿರುವ, ದೇವರ ವಿಗ್ರಹಗಳನ್ನು ಹಿಡಿದಿರುವ ಚಿತ್ರಗಳು ಕಂಡುಬಂದಿವೆ. ಈ ವೀಡಿಯೋ ಹಿನ್ನೆಲೆಯಲ್ಲಿ ನ್ಯೂಸ್‌ ಚೆಕರ್‌ ಜೊತೆಗೆ ಮಾತನಾಡಿದ ಸುಮಿ ರಶಿಕ್‌ ಅವರು “ನನ್ನನ್ನು ಹೊರತುಪಡಿಸಿ ವೀಡಿಯೊಗೆ ಸಂಪರ್ಕ ಹೊಂದಿದ ಬೇರೆ ಯಾರೂ ಮುಸ್ಲಿಮರಿಲ್ಲ” ಎಂದು ಹೇಳಿದ್ದಾರೆ.

ನಟರ ಹೇಳಿಕೆ ಪ್ರಕಾರ ವೈರಲ್‌ ವೀಡಿಯೋ, ಅಂತರ್ ಧರ್ಮೀಯ ಪ್ರೇಮಕಥೆಯನ್ನು ಚಿತ್ರಿಸುವ ಮಲಯಾಳಂ ರೊಮ್ಯಾಂಟಿಕ್ ಚಲನಚಿತ್ರ ಆಧಾರಿತವಾದದ್ದು

ಸೂಫಿಯುಮ್ ಸುಜಾತಯುಮ್ (ಇದರ ಅನುವಾದ ಸೂಫಿ ಮತ್ತು ಸುಜಾತಾ ಎಂದಾಗುತ್ತದೆ) 2020 ರ ಮಲಯಾಳ ಭಾಷೆಯ ಸಿನೆಮಾ ಆಗಿದ್ದು, ನಾರಣಿಪುಳ ಶಾನವಾಸ್  ಅವರು ಬರೆದು ನಿರ್ದೇಶಿಸಿದ್ದಾರೆ ಮತ್ತು ವಿಜಯ್ ಬಾಬು ತಮ್ಮ ನಿರ್ಮಾಣ ಸಂಸ್ಥೆ ಫ್ರೈಡೇ ಫಿಲ್ಮ್ ಹೌಸ್ ಅಡಿಯಲ್ಲಿ ನಿರ್ಮಿಸಲಾಗಿದೆ. ಈ ಚಿತ್ರದಲ್ಲಿ ಜಯಸೂರ್ಯ, ಅದಿತಿ ರಾವ್ ಹೈದರಿ ಮತ್ತು ದೇವ್ ಮೋಹನ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದನ್ನು ಜುಲೈ 3, 2020 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಮಾಡಲಾಗಿದೆ.

Also Read:  ಮಂಗಳೂರಿನಲ್ಲಿ ಕಾಲೇಜು ಕಾಮಗಾರಿ ವೇಳೆ ನಿಧಿ ಸಿಕ್ಕಿದೆಯೇ, ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಸೂಫಿಯುಮ್ ಸುಜಾತಾಯುಮ್ ಚಿತ್ರದಲ್ಲಿ, ಮೂಕ ಕಥಕ್ ನೃತ್ಯಗಾರ್ತಿ ಸುಜಾತಾ ತನ್ನ ನೆರೆಯ ಸೂಫಿ ಪುರೋಹಿತನನ್ನು ಪ್ರೀತಿಸುತ್ತಾಳೆ. ಆದಾಗ್ಯೂ, ಆಕೆಯ ತಂದೆ ದುಬೈನ ಶ್ರೀಮಂತ ಎನ್‌ಆರ್‌ಐ ಜೊತೆಗೆ ಮದುವೆಗೆ ನಿಶ್ಚಯ ಮಾಡಿರುತ್ತಾರೆ. ಹತ್ತು ವರ್ಷಗಳ ನಂತರ, ಆಕೆ ಸೂಫಿಯ ಸಾವಿನ ಸುದ್ದಿಯನ್ನು ಕೇಳಿದ್ದು, ಆತನೊಂದಿಗೆ ಜೊತೆಯಾಗಿ ಕಳೆದ ಸಮಯದ ನೆನಪುಗಳು ಆಕೆಗೆ ಮತ್ತೆ ಕಾಣಿಸಿಕೊಳ್ಳುತ್ತದೆ. ಇದು ಅವಳ ಅತೃಪ್ತ ದಾಂಪತ್ಯದಲ್ಲಿ ಹೆಚ್ಚಿನ ಸಮಸ್ಯೆಯನ್ನು ಉಂಟುಮಾಡುತ್ತದೆ. ಅಂತಿಮವಾಗಿ, ಸುಜಾತಾ ಹಿಂದಿನದ್ದನ್ನು ಬಿಟ್ಟು ತನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವುದರೊಂದಿಗೆ ಚಿತ್ರವು ಕೊನೆಗೊಳ್ಳುತ್ತದೆ.

ಚಿತ್ರದ ಮೂಲ ಹಾಡಿನ ಅನುಕ್ರಮವು ವಿಭಿನ್ನವಾಗಿದ್ದರೂ, ವೈರಲ್ ವೀಡಿಯೊ ಮತ್ತು ಚಲನಚಿತ್ರದಲ್ಲಿ ಕಂಡುಬರುವ ಹಾಡಿನ ನಡುವೆ ಹಲವಾರು ಪರಿಕಲ್ಪನಾತ್ಮಕ ಹೋಲಿಕೆಗಳಿವೆ.

ಲವ್‌ ಜಿಹಾದ್ ಉತ್ತೇಜಿಸಲು ಈ ವೀಡಿಯೋ ಮಾಡಿಲ್ಲ: ಕೇರಳದ ಈದ್‌ ವೀಡಿಯೋ ತಯಾರಕರಿಂದ ಲವ್‌ ಜಿಹಾದ್ ಆರೋಪ ನಿರಾಕರಣೆ
ಚಿತ್ರಕೃಪೆ: Youtube/Prime Video India

Conclusion

ವೈರಲ್ ವೀಡಿಯೊದ ಸೃಷ್ಟಿಕರ್ತರು ಈ ವೀಡಿಯೊವನ್ನು ಸೂಫಿಯುಮ್ ಸುಜಾತಾಯುಮ್ ಚಿತ್ರದ ದೃಶ್ಯಗಳನ್ನು ಮರುಸೃಷ್ಟಿಸಲು ಮತ್ತು ಅದರ ಹಾಡುಗಳಿಗಾಗಿ ಮಾಡಲಾಗಿದೆ. “ಲವ್-ಜಿಹಾದ್” ಅನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Results: Missing Context

Our Sources:

Facebook Post by Vishnu K Vijayan on April 20,2023

Instagram post of the real_vishnu_ on April 21,2023

Instagram post of sumirashik_official_ on April 20,2023

Instagram account of sumirashik_official_

Youtube video of Prime Video India on June 24, 2020

Website of imdb.com

Conversation with Vishnu K Vijayan

Conversation with Sumi Rashik

(ಈ ಲೇಖನವು ಮೂಲತಃ ನ್ಯೂಸ್‌ಚೆಕರ್‌ ಇಂಗ್ಲಿಷ್‌ನಲ್ಲಿ ಸಾಬ್ಲೂ ಥೋಮಸ್‌ ಅವರಿಂದ ಪ್ರಕಟಿಸಲ್ಪಟ್ಟಿದೆ. ಅದನ್ನು ಇಲ್ಲಿ ಓದಬಹುದು)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,944

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.