Saturday, April 26, 2025
ಕನ್ನಡ

Fact Check

Fact Check: ಆಂಧ್ರ ಪ್ರದೇಶದಲ್ಲಿ ಸರ್ಕಾರ ವಕ್ಫ್‌ ಬೋರ್ಡ್ ವಿಸರ್ಜಿಸಿದ್ದನ್ನು ‘ರದ್ದು’ ಮಾಡಲಾಗಿದೆ ಎಂದು ಪ್ರಚಾರ!

Written By Kushel Madhusoodan, Translated By Ishwarachandra B G, Edited By Pankaj Menon
Dec 3, 2024
banner_image

Claim
ಆಂಧ್ರ ಪ್ರದೇಶದಲ್ಲಿ ವಕ್ಫ್‌ ಬೋರ್ಡ್ ರದ್ದು

Fact
ಹೊಸ ವಕ್ಫ್‌ ಮಂಡಳಿಗಾಗಿ ಅಸ್ತಿತ್ವದಲ್ಲಿರುವ ವಕ್ಫ್ ಮಂಡಳಿಯನ್ನು ವಿಸರ್ಜಿಸುವ ಸರ್ಕಾರದ ಆದೇಶವನ್ನು ಆಂಧ್ರಪ್ರದೇಶ ಸರ್ಕಾರವು ವಕ್ಫ್ ಮಂಡಳಿಯನ್ನು ಶಾಶ್ವತವಾಗಿ ರದ್ದುಗೊಳಿಸಿದೆ ಎಂಬ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಆಂಧ್ರ ಪ್ರದೇಶ ಸರ್ಕಾರ ವಕ್ಫ್‌ ಬೋರ್ಡ್ ವಿಸರ್ಜನೆ ಮಾಡಿದ ಸುದ್ದಿಯ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ಬೋರ್ಡ್ ರದ್ದುಮಾಡಲಾಗಿದೆ ಎಂಬಂತೆ ಸುದ್ದಿಗಳು ಹರಿದಾಡಿವೆ.

ಈ ಕುರಿತು ಫೇಸ್‌ಬುಕ್ ನಲ್ಲಿ ಬಿಜೆಪಿ ಕರ್ನಾಟಕ ಮಾಡಿದ ಪೋಸ್ಟ್ ನಲ್ಲಿ “ರೈತರ ಜಮೀನಿಗೆ ಕನ್ನ ಹಾಕುತ್ತಿದ್ದ ವೈಎಸ್‌ಆರ್ ಕಾಂಗ್ರೆಸ್ ಆಡಳಿತದ ವಕ್ಫ್ ಮಂಡಳಿಯನ್ನು ರದ್ದುಗೊಳಿಸಿದ ಆಂಧ್ರ ಪ್ರದೇಶದ ಎನ್‌ಡಿಎ ಸರ್ಕಾರ….” ಎಂದಿದೆ. ಎಕ್ಸ್ ನಲ್ಲಿಕಂಡುಬಂದ ಹೇಳಿಕೆಯೊಂದರಲ್ಲಿ “ರೈತರ ಜಮೀನಿಗೆ ಕನ್ನ ಹಾಕುತ್ತಿದ್ದ ವೈಎಸ್‌ಆರ್ ಕಾಂಗ್ರೆಸ್ ಆಡಳಿತದ ವಕ್ಫ್ ಮಂಡಳಿಯನ್ನು ರದ್ದುಗೊಳಿಸಿದ ಆಂಧ್ರ ಪ್ರದೇಶದ ಎನ್‌ಡಿಎ ಸರ್ಕಾರ.” ಎಂದಿದೆ.

Also Read: ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾರೆ ಎಂದ ವೀಡಿಯೋ ಹಿಂದಿನ ಸತ್ಯಾಂಶವೇನು?

ಈ ಬಗ್ಗೆ ನ್ಯೂಸ್‌ ಚೆಕರ್ ಸತ್ಯಶೋಧನೆ ಮಾಡಿದಾಗ ಆಂಧ್ರ ಪ್ರದೇಶ ಸರ್ಕಾರ ವಕ್ಫ್ ಬೋರ್ಡ್ ರದ್ದುಗೊಳಿಸಿಲ್ಲ ಬದಲಾಗಿ ವಿಸರ್ಜನೆ ಮಾಡಿದೆ ಎಂದು ತಿಳಿದುಬಂದಿದೆ.

Fact Check/Verification

ನ್ಯೂಸ್ಚೆಕರ್  “Andhra Pradesh Waqf” ಎಂಬ ಪದಗಳೊಂದಿಗೆ ಕೀವರ್ಡ್ ಸರ್ಚ್ ನಡೆಸಿದೆ. ಇದು ಆಂಧ್ರಪ್ರದೇಶದ ಎನ್ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವು ಹಿಂದಿನ ವೈಎಸ್ಆರ್ ಕಾಂಗ್ರೆಸ್ ಆಡಳಿತವು ರಾಜ್ಯ ವಕ್ಫ್ ಮಂಡಳಿಗೆ ಹೊರಡಿಸಿದ ಹಿಂದಿನ ಆದೇಶಗಳನ್ನು ಹಿಂತೆಗೆದುಕೊಂಡಿದೆ ಮತ್ತು ಶೀಘ್ರದಲ್ಲೇ ಹೊಸ ಮಂಡಳಿಯನ್ನು ರಚಿಸಲಿದೆ ಎಂದು ಹೇಳುವ ಅನೇಕ ಸುದ್ದಿಗಳು ಲಭ್ಯವಾಗಿವೆ. ಅವುಗಳನ್ನು  ಇಲ್ಲಿಇಲ್ಲಿ ಮತ್ತು ಇಲ್ಲಿ, ನೋಡಬಹುದು.

“ವೈಎಸ್ಆರ್ ಕಾಂಗ್ರೆಸ್ ಸರ್ಕಾರ ರಚಿಸಿದ ವಕ್ಫ್ ಮಂಡಳಿ ಮಾರ್ಚ್ 2023 ರಿಂದ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಸುನ್ನಿ ಮತ್ತು ಶಿಯಾ ಸಮುದಾಯಗಳ ವಿದ್ವಾಂಸರು ಮತ್ತು ಮಾಜಿ ಸಂಸದರ ಪ್ರಾತಿನಿಧ್ಯವನ್ನು ಹೊಂದಿಲ್ಲ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಇದು ವಕ್ಫ್ ಕಾರ್ಯಾಚರಣೆಗಳಲ್ಲಿ ಸ್ಥಗಿತಗೊಳ್ಳಲು ಕಾರಣವಾಯಿತು” ಎಂದು ಡಿಸೆಂಬರ್ 1, 2024 ರ ಇಂಡಿಯಾ ಟುಡೇ ವರದಿಯಲ್ಲಿದೆ.

“ಕೆಲವು ಕಾರಣಗಳಿಂದಾಗಿ ರಾಜ್ಯ ವಕ್ಫ್ ಮಂಡಳಿಯನ್ನು ವಿಸರ್ಜಿಸಲಾಗಿದೆ ಮತ್ತು ಶೀಘ್ರದಲ್ಲೇ ಹೊಸ ಮಂಡಳಿಯನ್ನು ರಚಿಸಲಾಗುವುದು ಎಂದು ಆಂಧ್ರಪ್ರದೇಶ ಸರ್ಕಾರ ಭಾನುವಾರ (ಡಿಸೆಂಬರ್ 1) ಸ್ಪಷ್ಟಪಡಿಸಿದೆ. ರಾಜ್ಯ ವಕ್ಫ್ ಮಂಡಳಿಯನ್ನು ರದ್ದುಪಡಿಸಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾದ ಮಧ್ಯೆ ಸಮ್ಮಿಶ್ರ ಸರ್ಕಾರದ ಸ್ಪಷ್ಟೀಕರಣ ಬಂದಿದೆ” ಎಂದು ಡಿಸೆಂಬರ್ 1, 2024 ರ ಎನ್ಡಿಟಿವಿ ವರದಿಯಲ್ಲಿದೆ. ಟಿಡಿಪಿ ನೇತೃತ್ವದ ಸಮ್ಮಿಶ್ರ ಸರ್ಕಾರವು ಶನಿವಾರ (ನವೆಂಬರ್ 30) ವಕ್ಫ್ ಮಂಡಳಿಯನ್ನು ರಚಿಸುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಹಿಂದಿನ ಸರ್ಕಾರ ಹೊರಡಿಸಿದ ಹಿಂದಿನ ಆದೇಶ ಹಿಂತೆಗೆದುಕೊಂಡಿದೆ.

“ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಅಂದಿನ ಸರ್ಕಾರವು ಅಕ್ಟೋಬರ್ 21, 2023 ರಂದು 11 ಸದಸ್ಯರ ಮಂಡಳಿಯನ್ನು ರಚಿಸಿ ಆದೇಶ ಹೊರಡಿಸಿತ್ತು. ಮೂವರು ಚುನಾಯಿತ ಸದಸ್ಯರಲ್ಲಿ ಒಬ್ಬ ಶಾಸಕ ಮತ್ತು ಒಬ್ಬ ಎಂಎಲ್ಸಿ ಇದರಲ್ಲಿದ್ದಾರೆ. ಆಗಿನ ಸರ್ಕಾರವು ಇಬ್ಬರು ಮಹಿಳೆಯರು ಸೇರಿದಂತೆ ಎಂಟು ಸದಸ್ಯರನ್ನು ನಾಮನಿರ್ದೇಶನ ಮಾಡಿತ್ತು. ಸದಸ್ಯರ ನಾಮನಿರ್ದೇಶನವನ್ನು ಪ್ರಶ್ನಿಸಿ ಕೆಲವು ವ್ಯಕ್ತಿಗಳು ಆಂಧ್ರಪ್ರದೇಶ ಹೈಕೋರ್ಟ್ಗೆ ಅಜರ್ಜಿ ಸಲ್ಲಿಸಿದ್ದರಿಂದ ಹೈಕೋರ್ಟ್ 2023 ರ ನವೆಂಬರ್ 1 ರಂದು ತನ್ನ ಆದೇಶದಲ್ಲಿ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರ ಚುನಾವಣೆಗೆ ತಡೆ ನೀಡಿತು” ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದೇ ವೇಳೆ ಆಂಧ್ರ ರಾಜ್ಯ ಸರ್ಕಾರದ ಸತ್ಯಶೋಧನಾ ವಿಭಾಗವು ಡಿಸೆಂಬರ್ 1, 2024 ರಂದು ಎಕ್ಸ್ ನಲ್ಲಿ ಈ ಬಗ್ಗೆ ಸ್ಪಷ್ಟೀಕರಣ ಮಾಡಿದ್ದು ಅದು ಇಲ್ಲಿದೆ.

“ಆಂಧ್ರ ಪ್ರದೇಶ ವಕ್ಫ್ ಮಂಡಳಿ ಮಾರ್ಚ್ 2023 ರಿಂದ ಕಾರ್ಯನಿರ್ವಹಿಸುತ್ತಿಲ್ಲ, ಇದು ಆಡಳಿತಾತ್ಮಕ  ಸ್ಥಗಿತಕ್ಕೆ ಕಾರಣವಾಗಿದೆ. ಹಲವಾರು ಪ್ರಮುಖ ಕಾರಣಗಳಿಂದಾಗಿ ಜಿಒ ಎಂಎಸ್‌ ಸಂಖ್ಯೆ 47 ಅನ್ನು ಹಿಂತೆಗೆದುಕೊಳ್ಳುವುದು ಅನಿವಾರ್ಯವಾಯಿತು. ಇದರ ಸಿಂಧುತ್ವವನ್ನು ಪ್ರಶ್ನಿಸಿ 13 ರಿಟ್ ಅರ್ಜಿಗಳು, ಸುನ್ನಿ ಮತ್ತು ಶಿಯಾ ವಿದ್ವಾಂಸರಿಂದ ಸಾಕಷ್ಟು ಪ್ರಾತಿನಿಧ್ಯದ ಅನುಪಸ್ಥಿತಿ, ಮಾಜಿ ಸಂಸದರನ್ನು ಸೇರಿಸದಿರುವುದು, ಪಾರದರ್ಶಕ ಮಾನದಂಡಗಳಿಲ್ಲದೆ ಕಿರಿಯ ವಕೀಲರ ನೇಮಕ, ಕೆಲವು ಸದಸ್ಯರ ಅರ್ಹತೆಯ ಸುತ್ತಲಿನ ಪ್ರಶ್ನೆಗಳು ಮತ್ತು ನಡೆಯುತ್ತಿರುವ ದಾವೆಯಿಂದಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಅಸಮರ್ಥವಾಗಿದೆ. ಈ ದೋಷಗಳನ್ನು ಪರಿಹರಿಸಲು ಮತ್ತು ಹೊಸ ವಕ್ಫ್ ಮಂಡಳಿಯನ್ನು ಆದಷ್ಟು ಬೇಗ ರಚಿಸಲು ಆಂಧ್ರ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ” ಎಂದು ಸ್ಪಷ್ಟೀಕರಣದಲ್ಲಿ ತಿಳಿಸಲಾಗಿದೆ.

2023 ರಲ್ಲಿ ರಾಜ್ಯ ವಕ್ಫ್ ಮಂಡಳಿಗೆ 11 ಸದಸ್ಯರನ್ನು ನೇಮಿಸಿದ ಹಿಂದಿನ ಜಿಒ ಅನ್ನು ಹಿಂತೆಗೆದುಕೊಳ್ಳುವ ಬಗ್ಗೆ ಆಂಧ್ರಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ 2024 ರ ನವೆಂಬರ್ 11 ರಂದು ಹೊರಡಿಸಿದ ಸರ್ಕಾರಿ ಆದೇಶವನ್ನು (G.O.MS ಸಂಖ್ಯೆ 75) ನಾವು ಪರಿಶೀಲಿಸಿದ್ದೇವೆ. “ಗೌರವಾನ್ವಿತ ಹೈಕೋರ್ಟ್ ನವೆಂಬರ್ 1, 2023 ರ ಆದೇಶಗಳಲ್ಲಿ, 2023 ರ ಡಬ್ಲ್ಯೂಪಿ ಸಂಖ್ಯೆ 28422, 28479, 28440 ಮತ್ತು 28467 ರಲ್ಲಿ ಮಾಡಿದ ಅವಲೋಕನಗಳನ್ನು ಎಚ್ಚರಿಕೆಯಿಂದ ಪರಿಗಣಿಸಿದ ನಂತರ, ಮತ್ತು ಉತ್ತಮ ಆಡಳಿತ, ವಕ್ಫ್ ಆಸ್ತಿಗಳ ರಕ್ಷಣೆ ಮತ್ತು ವಕ್ಫ್ ಮಂಡಳಿಯ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಹಿತದೃಷ್ಟಿಯಿಂದ, ಆಂಧ್ರಪ್ರದೇಶ ಸರ್ಕಾರವು ಈ ಮೂಲಕ ಹೊರಡಿಸಿದ ಆದೇಶಗಳನ್ನು ಹಿಂತೆಗೆದುಕೊಳ್ಳುತ್ತದೆ. ಅಲ್ಪಸಂಖ್ಯಾತರ ಕಲ್ಯಾಣ (ಐಡಿಎಂ-1) ಇಲಾಖೆ ದಿನಾಂಕ:21.10.2023 ರಿಂದ ತಕ್ಷಣದಿಂದ ಜಾರಿಗೆ ಬರುವಂತೆ “ಎಂದು ಸರ್ಕಾರದ ಕಾರ್ಯದರ್ಶಿ ಕಾಟಿ ಹರ್ಷವರ್ಧನ್ ಅವರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಂಧ್ರಪ್ರದೇಶ ವಕ್ಫ್ ಸಿಇಒ ಅವರು “ಮಂಡಳಿಯ ದೀರ್ಘಕಾಲದ ಕಾರ್ಯನಿರ್ವಹಣೆ ಮತ್ತು ಜಿಒಎಂಎಸ್ ಸಂಖ್ಯೆ 47 ರ ಕಾನೂನು ಬದ್ಧತೆಯನ್ನು ಪ್ರಶ್ನಿಸುವ ರಿಟ್ ಅರ್ಜಿಗಳು ಬಾಕಿ ಇರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿದ್ದಾರೆ” ಎಂದು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ದಾವೆಯನ್ನು ಪರಿಹರಿಸಲು ಮತ್ತು ಆಡಳಿತಾತ್ಮಕ ನಿರ್ವಾತವನ್ನು ತಡೆಗಟ್ಟಲು” ಅದರಲ್ಲಿ ಹೇಳಲಾಗಿದೆ.

ಅನಂತರ ನಾವು ಆಂಧ್ರಪ್ರದೇಶದ ವಕ್ಫ್ ಮಂಡಳಿಯನ್ನು ಸಂಪರ್ಕಿಸಿದೆವು, ಅದು ವಕ್ಫ್ ಮಂಡಳಿಯ ರಚನೆಗೆ ಕಾರಣವಾದ ಹಿಂದಿನ ಜಿಒ ಅನ್ನು ಹಿಂತೆಗೆದುಕೊಳ್ಳುವುದು ಸರ್ಕಾರದ ಇತ್ತೀಚಿನ ಆದೇಶವಾಗಿದೆ ಎಂದು ದೃಢಪಡಿಸಿದೆ. “ಅಧ್ಯಕ್ಷರ ಕೊರತೆ ಸೇರಿದಂತೆ ಅನೇಕ ಸವಾಲುಗಳ ನಂತರ ಅವರು ಹಿಂದಿನ ಮಂಡಳಿಯನ್ನು ವಿಸರ್ಜಿಸಲಾಗಿದೆ” ಎಂದು ಮಂಡಳಿ ಹೇಳಿದೆ, ಹಿಂದಿನ ನಿಷ್ಕ್ರಿಯ ಸಮಿತಿಯನ್ನು ಹೊಸ ಸಮಿತಿಯಾಗಿ ಬದಲಾಯಿಸಲಾಗುವುದು ಎಂದು ಅದು ಹೇಳಿದೆ. 

Conclusion

ಹೊಸ ವಕ್ಫ್ ಮಂಡಳಿಗೆ ದಾರಿ ಮಾಡಿಕೊಡಲು ಅಸ್ತಿತ್ವದಲ್ಲಿರುವ ವಕ್ಫ್ ಮಂಡಳಿಯನ್ನು ವಿಸರ್ಜಿಸುವ ಸರ್ಕಾರದ ಆದೇಶವನ್ನು ಆಂಧ್ರಪ್ರದೇಶ ಸರ್ಕಾರವು ವಕ್ಫ್ ಮಂಡಳಿಯನ್ನು ರದ್ದುಗೊಳಿಸಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

Also Read: ಷರಿಯಾ ಕಾನೂನು, ಹಿಜಾಬ್ ವಿರುದ್ಧ ಮುಸ್ಲಿಂ ನೆಲದಲ್ಲೇ ಮಹಿಳೆಯರು ಅರೆನಗ್ನವಾಗಿ ಪ್ರತಿಭಟನೆ ನಡೆಸಿದ್ದಾರೆಯೇ?

Result: Partly False

Our Source
NDTV report, Dated: December 1, 2024

X post By FactCheck.AP.Gov.in, Dated: December 1, 2024

Government order, Dated: November 11, 2024

Conversation with Andhra Pradesh Waqf board official

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,924

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.