Thursday, April 24, 2025

Fact Check

ವಾಲ್ನಟ್‌ನಿಂದಾಗಿ ವೀರ್ಯದ ಗುಣಮಟ್ಟ ವೃದ್ಧಿಯಾಗುತ್ತಾ? 

banner_image

ವಾಲ್‌ನಟ್‌ಗಳನ್ನು ತಿಂದರೆ ವೀರ್ಯದ ಗುಣಮಟ್ಟ ವೃದ್ಧಿಯಾಗುತ್ತದೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

ಫೇಸ್‌ಬುಕ್‌ನಲ್ಲಿ ಕಂಡು ಬಂದ ಈ ಕ್ಲೇಮ್‌ ಪ್ರಕಾರ “ನಿಮಗಿದು ಗೊತ್ತಾ? ವೀರ್ಯಾಣುಗಳ ಗುಣಮಟ್ಟ ಹೆಚ್ಚಿಸಲು ಬಯಸುವಿರಾ? ವಾಲ್ ನಟ್‌ (ಆಕ್ರೋಟ್) ತಿನ್ನಿರಿ” ಎಂದು ಹೇಳಲಾಗಿದೆ. 

ಈ ಕ್ಲೇಮಿನ ಬಗ್ಗೆ ನ್ಯೂಸ್‌ಚೆಕರ್‌ ಸತ್ಯಶೋಧನೆ ನಡೆಸಿದ್ದು, ಇದೊಂದು ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.

ವಾಲ್ನಟ್‌, ಗುಣಮಟ್ಟ, ವೀರ್ಯ
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌

Fact check/ Verification

ಲಭ್ಯ ಇರುವ ಸ್ಕಾಂಟ್‌ ಸಾಕ್ಷ್ಯಗಳ ಪ್ರಕಾರ, ಚೈತನ್ಯ, ಚಲನಶೀಲತೆ ಮತ್ತು ರೂಪವಿಜ್ಞಾನವನ್ನು ವಾಲ್‌ನಟ್‌ ಹೆಚ್ಚುಮಾಡಬಹುದು. ವಾಲ್ನಟ್ ನಲ್ಲಿ ಆಂಟಿ ಆಕ್ಸಿಡೆಂಟ್‌ಗಳಿದ್ದು, ಅದು ವೀರ್ಯದ ಗುಣಮಟ್ಟನ್ನು ಹೆಚ್ಚು ಮಾಡಬಹುದು. ಆಂಟಿ ಆಕ್ಸಿಡೆಂಟ್‌ಗಳು, ನಮ್ಮ ದೇಹದಲ್ಲಿನ ಜೀವಕೋಶಗಳ ಆಮ್ಲೀಕರಣ ಮತ್ತು ವಯಸ್ಸಾಗುವುದನ್ನು ತಡೆಯುವ ಅಣುಗಳಾಗಿವೆ. ಇದರೊಂದಿಗೆ ಆಂಟಿಆಕ್ಸಿಡೆಂಟ್‌ಗಳು ಪುರುಷ ಫಲವತ್ತತೆಯಲ್ಲಿಗುಣಮಟ್ಟದಲ್ಲಿ ಆದ್ಯತೆ ನೀಡುವಂತೆ ಮೂಲಭೂತ ಪಾತ್ರವನ್ನು ನಿರ್ವಹಿಸುತ್ತವೆ. ಮಾನವ ದೇಹವು ಆಂಟಿ ಆಕ್ಸಿಡೆಂಟ್‌ಗಳ ಸಂಕೀರ್ಣ ವ್ಯವಸ್ಥೆಗಳನ್ನು ಹೊಂದಿದೆ. ಆದರೆ ಇವುಗಳನ್ನು ಆಹಾರದಲ್ಲಿ ವಿಶೇಷವಾಗಿ ಹಣ್ಣುಗಳು ಮತ್ತು ತರಕಾರಿಗಳ ಸೇವೆನೆಯೊಂದಿಗೆ ಪಡೆಯಬಹುದು. 

ಆದಾಗ್ಯೂ ವಾಲ್ನಟ್‌ನಿಂದ ವೀರ್ಯಾಣುಗಳ ಗುಣಮಟ್ಟ ಹೆಚ್ಚಾಗುತ್ತದೆ ಎಂಬ ಕುರಿತ ಅಧ್ಯಯನ ವರದಿಗಳ ಸಂಖ್ಯೆ ಅತೀವ ಕಡಿಮೆಯಿದೆ. 

ವಾಲ್‌ನಟ್‌ ಮಾತ್ರ ಅವಲಂಬಿಸುವುದು ಮತ್ತು ಒಟ್ಟಾರೆಯಾಗಿ ಆರೋಗ್ಯಕರ ಜೀವನಶೈಲಿಯನ್ನು ಆಚರಣೆ ಮಾಡದೇ ಇರುವುದರಿಂದ ವೀರ್ಯಾಣುಗಳ ಗುಣಮಟ್ಟ ಹೆಚ್ಚಾಗಲು ಸಾಧ್ಯವಿಲ್ಲ. 

ಈ ಬಗ್ಗೆ ಆಹಾರ ತಜ್ಞರಾದ ಕಮ್ನಾ ಚೌಹಾನ್‌ ಅವರು ಪ್ರತಿಕ್ರಿಯಿಸಿ, ” ವಾಲ್‌ನಟ್ ವೀರ್ಯದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಏಕೆಂದರೆ ವಾಲ್‌ನಟ್ ಜೀವಕೋಶದ ಹಾನಿಗೆ ಕಾರಣವಾಗುವ ಲಿಪಿಡ್ ಪೆರಾಕ್ಸಿಡೇಶನ್ ಅನ್ನು ಕಡಿಮೆ ಮಾಡುತ್ತದೆ. ವೀರ್ಯವು ಬಹು ಅಪರ್ಯಾಪ್ತ ಕೊಬ್ಬಿನಾಮ್ಲದಿಂದ ಮಾಡಲ್ಪಟ್ಟಿದೆ, ಇದು ಲಿಪಿಡ್ ಪೆರಾಕ್ಸಿಡೀಕರಣದಿಂದ ಹಾನಿಗೊಳಗಾಗುತ್ತದೆ. ವಾಲ್‌ನಟ್‌ಗಳು ಬಹು ಅಪರ್ಯಾಪ್ತ ಕೊಬ್ಬಿನಾಮ್ಲದಿಂದ ಮಾಡಿದ ಮರದ ಕಾಯಿ ಮಾತ್ರ ಮತ್ತು ಆದ್ದರಿಂದ ಇದು ವೀರ್ಯ ಕೋಶಗಳನ್ನು ಪರಿಣಾಮಕಾರಿಯಾಗಿ ಮರುಪೂರಣ ಮಾಡುತ್ತದೆ. 1 ಔನ್ಸ್ ಆಕ್ರೋಡು 18 ಗ್ರಾಂ ಒಟ್ಟು ಕೊಬ್ಬಿನಲ್ಲಿ 13 ಗ್ರಾಂ ಬಹುಅಪರ್ಯಾಪ್ತ ಕೊಬ್ಬಿನಾಮ್ಲವನ್ನು ಹೊಂದಿರುತ್ತದೆ. ವೀರ್ಯ ಹಾನಿಯನ್ನು ತಡೆಗಟ್ಟುವ ಮತ್ತು ವೀರ್ಯ ಕೋಶಗಳನ್ನು ಪುನಃ ತುಂಬಿಸುವ ಮೂಲಕ, ವಾಲ್‌ನಟ್ ವೀರ್ಯ ರೂಪುಗೊಳ್ಳುವಿಕೆ, ಹುರುಪು ಮತ್ತು, ಅಂತ್ಯವನ್ನು ಸಾಧಿಸಲು ಸಹಾಯ ಮಾಡುತ್ತದೆ. ಪುರುಷರಲ್ಲಿ ಫಲವತ್ತತೆಯನ್ನು ವೀರ್ಯದ ಗುಣಮಟ್ಟ ಮತ್ತು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಸ್ಖಲನಗೊಂಡ ವೀರ್ಯಾಣುಗಳ ಸಂಖ್ಯೆಯು ತುಂಬಾ ಕಡಿಮೆಯಿದ್ದರೆ ಅಥವಾ ವೀರ್ಯವು ಕಳಪೆ ಗುಣಮಟ್ಟದ್ದಾಗಿದ್ದರೆ, ಗರ್ಭಧಾರಣೆ ಸಾಧ್ಯವಿಲ್ಲ. ಆದ್ದರಿಂದ ವೀರ್ಯದ ಗುಣಮಟ್ಟವನ್ನು ಹಂತ ಹಂತಗಳಲ್ಲಿ ಸುಧಾರಿಸಲು ವಾಲ್ನಟ್‌ ಸಹಾಯ ಮಾಡುತ್ತದೆ” ಎಂದವರು ಹೇಳಿದ್ದಾರೆ.

Also Read: ರೋಸ್‌ಮೆರಿ ಎಲೆ ಆಘ್ರಾಣಿಸುವುದರಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತಾ?

ನಿಯಮಿತವಾಗಿ ವ್ಯಾಯಾಮ ಮಾಡುವುದು, ಉತ್ತಮ ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳುವುದು, ಹೆಚ್ಚಿನ ಭಾರವನ್ನು ಕಡಿಮೆ ಮಾಡುವುದು, ಆಲ್ಕೋಹಾಲ್‌ ಸೇವನೆ ಕಡಿಮೆ ಮಾಡುವುದು, ಉತ್ತಮ ಪ್ರಮಾಣದ ನಿದ್ದೆಯಿಂದ ವೀರ್ಯಾಣು ಗುಣಮಟ್ಟ ಹೆಚ್ಚಾಗುವುದಕ್ಕೆ ಸಾಧ್ಯವಿದೆ. 

Conclusion

ಈ ಸತ್ಯಶೋಧನೆಯ ಪ್ರಕಾರ ವಾಲ್ನಟ್ ತಿನ್ನುವುದರಿಂದ ವೀರ್ಯಾಣು ಗುಣಮಟ್ಟ ಹೆಚ್ಚಾಗುತ್ತದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ. 

Result: Missing Context

Our Sources:
Walnuts improve semen quality in men consuming a Western-style diet: randomized control dietary intervention trial – PubMed (nih.gov)
New Study Finds Walnuts Improve Sperm Quality in Men – California Walnuts
Walnuts Improve Semen Quality in Men Consuming a Western-Style Diet: Randomized Control Dietary Intervention Trial1 | Biology of Reproduction | Oxford Academic (oup.com)
Efficacy of antioxidant therapy on sperm quality measurements after varicocelectomy: A systematic review and meta-analysis – PubMed (nih.gov)

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,898

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.