Thursday, March 20, 2025
ಕನ್ನಡ

Fact Check

ಎನ್‌ಡಿಟಿವಿ ಸಹಸಂಸ್ಥಾಪಕ ಪ್ರಣೋಯ್ ರಾಯ್‌ ನಿಜ ಹೆಸರು ಪರ್ವೇಜ್‌ ರಾಜಾ?

banner_image

ಎನ್‌ಡಿಟಿವಿ ಮಾರಾಟದ ವಿಚಾರ ಮುನ್ನೆಲೆಗೆ ಬಂದ ಬಳಿಕ, ಸಾಮಾಜಿಕ ಜಾಲತಾಣದಲ್ಲಿ ಇದೀಗ ಪ್ರಣೋಯ್ ರಾಯ್‌ ನಿಜವಾದ ಹೆಸರು, ಜನ್ಮಸ್ಥಳದ ಬಗ್ಗೆ ಪೋಸ್ಟ್‌ ಹರಿದಾಡಿದೆ.

“ಎನ್‌ಡಿಟಿವಿಯ ಮಾಲೀಕ ಪ್ರಣೋಯ್ ರಾಯ್ ಮೇಲೆ ಸಿಬಿಐ ದಾಳಿ ನಡೆಸಿ ಹಲವು ರಹಸ್ಯಗಳನ್ನು ಬಹಿರಂಗಪಡಿಸಿದೆ. ರಾಯ್ ಅವರ ಜನ್ಮ ಪ್ರಮಾಣಪತ್ರವನ್ನು ಕಂಡುಹಿಡಿಯಲಾಯಿತು ಮತ್ತು ಅದರ ಪ್ರಕಾರ ಅವರ ನಿಜವಾದ ಹೆಸರು ಪರ್ವೇಜ್ ರಾಜ ಮತ್ತು ಅವರ ಜನ್ಮ ಸ್ಥಳ ಕರಾಚಿ. ಪತ್ತೆಯಾದ ಮತ್ತೊಂದು ರಹಸ್ಯ ದಾಖಲೆಯ ಪ್ರಕಾರ, ಎನ್‌ಡಿಟಿವಿಯ ಪೂರ್ಣ ರೂಪ ನವಾಜುದ್ ದಿನ್ ತೌಫಿಕ್ ವೆಂಚರ್, ಇದು ಪನ್ನೋಯ್ ರಾಯ್ ಅವರ ತಂದೆಯ ಹೆಸರು. ಅವರ ಪತ್ನಿ ರಾಧಿಕಾ ಅವರ ನಿಜವಾದ ಹೆಸರು ರಾಹಿಲಾ. ನರೇಂದ್ರ ಮೋದಿಯವರ ಮುಖವನ್ನು ಟಾರ್ಗೆಟ್ ಆಗಿ ಬಳಸುವ ಡಾರ್ಟ್ ಬೋರ್ಡ್ ಅವರ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ. ಪ್ರತಿಯೊಬ್ಬ ಭಾರತೀಯನಿಗೆ, ನಿಮ್ಮ ಕಣ್ಣುಗಳನ್ನು ತೆರೆಯಲು ಮತ್ತು ಈ ಎರಡು ಮುಖದ ಜನರನ್ನು ಗುರುತಿಸುವ ಸಮಯ” ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ.

ಎನ್‌ಡಿಟಿವಿ, ಪ್ರಣೋಯ್‌ ರಾಯ್‌, ಪರ್ವೇಜ್‌ ರಾಜಾ, ಸಿಬಿಐ

ಈ ಕುರಿತ ಸತ್ಯಶೋಧನೆ ನ್ಯೂಸ್‌ಚೆಕರ್‌ ನಡೆಸಿದ್ದು, ಇದು ನಿಜವೇ ಎಂಬುದನ್ನು ನೋಡೋಣ.

Fact Check/ Verification

ಪ್ರಣೋಯ್ ರಾಯ್‌ ಅವರು ಇಂಗ್ಲಿಷ್‌ ಸುದ್ದಿವಾಹಿನಿ ಎನ್‌ಡಿಟಿವಿ ಸಂಸ್ಥೆಯ ಸಹಸಂಸ್ಥಾಪಕರಾಗಿದ್ದಾರೆ. ಅವರ ಹೆಸರು ಪರ್ವೇಜ್‌ ರಾಜಾ ಎಂದಿದೆಯೇ ಮತ್ತು ಅವರು ಕರಾಚಿ ಮೂಲದವರೇ ಎಂದು ನೋಡಲು ಕೀವರ್ಡ್‌ ಸರ್ಚ್‌ ನಡೆಸಲಾಗಿದೆ.

ಆ ಪ್ರಕಾರ ಐಸಿಐಸಿಐ ಬ್ಯಾಂಕ್‌ಗೆ 48 ಕೋಟಿ ರೂ. ನಷ್ಟ ಉಂಟು ಮಾಡಿದ ಆರೋಪ ಪ್ರಣೋಯ್ ರಾಯ್‌ ಅವರ ಮೇಲಿದ್ದು, ಈ ಪ್ರಕರಣದಲ್ಲಿ ಸಿಬಿಐ ಎನ್‌ಡಿಟಿವಿ ಸಂಸ್ಥೆಯ ಕಚೇರಿಗಳು ಮತ್ತು ಪ್ರಣೋಯ್ ರಾಯ್‌ ಅವರ ಮನೆಯ ಮೇಲೆ ದಾಳಿ ಮಾಡಿದೆ ಎಂಬುದನ್ನು ವಿವಿಧ ಪತ್ರಿಕೆಗಳು ವರದಿ ಮಾಡಿವೆ.

ಜೂನ್‌ 6 2017  ರಂದು ಹಿಂದೂಸ್ತಾನ್‌ ಟೈಮ್ಸ್ ಈ ಬಗ್ಗೆ ವರದಿ ಮಾಡಿತ್ತು.

ಅದೇ ದಿನ ದಿ ಇಕಾನಾಮಿಕ್‌ ಟೈಮ್ಸ್‌ ಕೂಡ ಈ ಬಗ್ಗೆ ವರದಿ ಮಾಡಿತ್ತು.

ಇದರೊಂದಿಗೆ ಎಲ್ಲ ಪ್ರಮುಖ ಮಾಧ್ಯಮಗಳು ಈ ಸಿಬಿಐ ದಾಳಿಯ ಬಗ್ಗೆ ಸುದ್ದಿಯನ್ನು ಮಾಡಿದ್ದವು. ಆದರೆ ಗಮನಾರ್ಹವಾದ ಅಂಶವೆಂದರೆ, ಪ್ರಣೋಯ್ ರಾಯ್‌ ಅವರ ಮನೆಯಲ್ಲಿ ಸಿಕ್ಕಿದ್ದೇನು ಮತ್ತು ಪ್ರಣವ್‌ ರಾಯ್‌ ಅವರ ಮೂಲ ಹೆಸರು ಪರ್ವೇಜ್‌ ರಾಜ, ಅವರು ಹುಟ್ಟಿದ್ದು ಕರಾಚಿಯಲ್ಲಿ ಮತ್ತು ಎನ್‌ಡಿಟಿವಿಯ ನಿಜವಾದ ಹೆಸರು ನವಾಜುದ್ದೀನ್‌ ತೌಫೀಕ್‌ ವೆಂಚರ್‌ ಎಂಬುದನ್ನು ಹೇಳುವ ದಾಖಲೆಗಳು ಸಿಕ್ಕಿದ್ದನ್ನು ಹೇಳಿಲ್ಲ.

ಇನ್ನು ರಾಯ್‌ ಅವರ ಜನ್ಮಸ್ಥಳ ಕೋಲ್ಕತ್ತಾ ಆಗಿದ್ದು ಅವರು 1949ರಲ್ಲಿ ಜನಿಸಿದ್ದಾರೆ ಎನ್ನುವುದು ವಿವಿಧ ಮಾಧ್ಯಮ ವರದಿಗಳಲ್ಲಿ ತಿಳಿದುಬಂದಿದೆ. ಜೊತೆಗೆ ಅವರು ಪ್ರಣೋಯ್ ರಾಯ್‌ ಎಂದೇ ತಮ್ಮ ಹೆಸರನ್ನು ಬರೆಯುತ್ತಾರೆ. ಇದು ಟ್ವಿಟರ್ ನಲ್ಲೂ ಇದೆ.

Also Read:ರಾಹುಲ್‌ ಗಾಂಧಿ ಶೂ ಲೇಸ್‌ ಕಟ್ಟಿದ ಮಾಜಿ ಸಚಿವ?: ಸುಳ್ಳು ಕ್ಲೇಮ್‌ನೊಂದಿಗೆ ವೀಡಿಯೋ ವೈರಲ್‌

ಇನ್ನು ಎನ್‌ಡಿಟಿವಿ ಹೆಸರು ರಹಸ್ಯ ದಾಖಲೆಗಳಲ್ಲಿ ನವಾಜುದ್ ದಿನ್ ತೌಫಿಕ್ ವೆಂಚರ್ ಎಂದಿದೆ. ಆದರೆ ಇದನ್ನು ಸಾಬೀತು ಪಡಿಸುವಂತೆ ಯಾವುದೇ ಸಾಕ್ಷ್ಯಗಳು ಲಭ್ಯವಿಲ್ಲ.

ಎನ್ ಡಿಟಿವಿ ಎಂದರೆ ನ್ಯೂದಿಲ್ಲಿ ಟಿವಿ ಕಂಪೆನಿ ಎಂದಾಗಿದ್ದು, ಇದೇ ಹೆಸರು ಕಂಪೆನೀಸ್ ಆಕ್ಟ್‌ ಪ್ರಕಾರ ನೋಂದಣಿಗೊಂಡಿದೆ. ಇದರ ಸಂಖ್ಯಾ ವಿವರಗಳು 34ನೇ ವಾರ್ಷಿಕ ಸಭೆಯ ಕುರಿತ ನೋಟಿಸ್‌ನ ಆರಂಭದಲ್ಲಿದೆ. ಈ ನೋಟಿಸ್‌ ಅನ್ನು ಇಲ್ಲಿ ನೋಡಬಹುದು.

ಇದರೊಂದಿಗೆ ಪ್ರಣೋಯ್ ರಾಯ್‌ ಅವರ ಪತ್ನಿಯ ನಿಜವಾದ ಹೆಸರು ರಾಹಿಲಾ ಎಂದು ಹೇಳಲಾಗಿದೆ. ಜೊತೆಗೆ ಪ್ರಣವ್‌ ರಾಯ್‌ ಅವರ ಕೋಣೆಯಲ್ಲಿ ನರೇಂದ್ರ ಮೋದಿ ಅವರ ಭಾವ ಚಿತ್ರ ಇರುವ ಡಾರ್ಟ್‌ ಬೋರ್ಡ್ ಪತ್ತೆಯಾಗಿದೆ ಎಂದೂ ಹೇಳಲಾಗಿದೆ. ಈ ಯಾವುದೇ ವಿಚಾರಗಳ ಬಗ್ಗೆ ಸಿಬಿಐ ದಾಳಿಯ ವೇಳೆ ಮಾಹಿತಿಗಳು ಅಧಿಕೃತವಾಗಿ ಲಭ್ಯವಾಗಿಲ್ಲ.

Conclusion

ಈ ಎಲ್ಲ ಕಾರಣಗಳಿಂದಾಗಿ, ಸಾಮಾಜಿಕ ಜಾಲತಾಣದ ಕ್ಲೇಮ್‌ ಪ್ರಕಾರ, ಪ್ರಣೋಯ್ ರಾಯ್‌ ಅವರ ಮೂಲ ಹೆಸರು ಪರ್ವೇಜ್‌ ರಾಜ್‌ ಮತ್ತು ಜನ್ಮಸ್ಥಳ ಕರಾಚಿ ಎಂಬುದು ಸುಳ್ಳಾಗಿದೆ ಮತ್ತು ಎನ್‌ಡಿಟಿವಿಯ ಹೆಸರು, ಪ್ರಣವ್‌ ರಾಯ್‌ ಅವರ ಪತ್ನಿಯ ಹೆಸರು ಮತ್ತು ಅವರ ಕೋಣೆಯಲ್ಲಿ ಮೋದಿ ಚಿತ್ರ ಇರುವ ಡಾರ್ಟ್‌ ಬೋರ್ಡ್‌ ಲಭ್ಯವಾಗಿದೆ ಎನ್ನವುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಆದ್ದರಿಂದ ಇದು ಸುಳ್ಳಾಗಿದೆ.

Result: False

Our Sources
NDTV Annual General Meeting Notice, Dated: August 27, 2022
Economic Times Report, Dated: June 6, 2017
Hindustan Times Report, Dated: June 6, 2017
Twitter account of Prannoy Roy

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,500

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.