Thursday, April 17, 2025

Fact Check

Fact Check: ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾದ್ದರಿಂದ ಹಾವೇರಿ ರೈತ ಆತ್ಮಹತ್ಯೆ? ಸತ್ಯ ಇಲ್ಲಿದೆ

Written By Ishwarachandra B G, Edited By Pankaj Menon
Nov 8, 2024
banner_image

Claim
ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾದ್ದರಿಂದ ಹಾವೇರಿ ರೈತ ಆತ್ಮಹತ್ಯೆ

Fact
ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾದ್ದರಿಂದ ಹಾವೇರಿ ರೈತ ರುದ್ರಪ್ಪ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ. ಸಾಲದ ಕಾರಣದಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ

ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾದ ಕಾರಣದಿಂದಾಗಿ ಹಾವೇರಿಯ ರೈತರೊಬ್ಬರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿಯೊಂದು ಹರಿದಾಡಿದೆ.

ಪಬ್ಲಿಕ್ ಟಿವಿ ನವೆಂಬರ್ 7, 2024ರ ವರದಿಯಲ್ಲಿ “ಹಾವೇರಿ: ವಕ್ಫ್ ಬೋರ್ಡ್ (Waqf Board) ಆಸ್ತಿ ಕಿರಿಕಿರಿಗೆ ಬೇಸತ್ತು ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ (Haveri) ಜಿಲ್ಲೆಯ ಹರನಗಿ ಗ್ರಾಮದಲ್ಲಿ ನಡೆದಿದೆ. ಹರನಗಿ ಗ್ರಾಮದ ನಿವಾಸಿ ರುದ್ರಪ್ಪ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು (ನ.7) ಕೇಂದ್ರ ಸಂಸದೀಯ ಜಂಟಿ ಕಮಿಟಿಯ (Joint Parliamentary Committee) ಮುಂದೆ ಹಾವೇರಿ ರೈತರು ಪ್ರಸ್ತಾಪಿಸಿದ ಬಳಿಕ ಈ ವಿಚಾರ ಈಗ ಮುನ್ನೆಲೆಗೆ ಬಂದಿದೆ.” ಎಂದಿದೆ.

Fact Check: ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾದ್ದರಿಂದ ಹಾವೇರಿ ರೈತ ಆತ್ಮಹತ್ಯೆ? ಸತ್ಯ ಇಲ್ಲಿದೆ

ಕನ್ನಡ ನ್ಯೂಸ್‌ ನೌ ನವೆಂಬರ್ 7, 2024ರ ವರದಿಯಲ್ಲಿ “ಹಾವೇರಿ : ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮಾನಸಿಕವಾಗಿ ಮನನೊಂದು ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಾವೇರಿ ರೈತರು ಆರೋಪಿಸಿದ್ದಾರೆ. ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತ ಚನ್ನಪ್ಪ ಎಂಬುವರ ಪುತ್ರ ರುದ್ರಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿರುವಾಗಿ ರೈತರು ಆರೋಪಿಸಿದ್ದಾರೆ. 8 ವರ್ಷಗಳ ಹಿಂದೆ 4 ಎಕರೆ ಹೊಲದ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರುವುದಕ್ಕೆ ಮನನೊಂದು ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹಾವೇರಿಯ ರೈತರು ಆರೋಪಿಸಿದ್ದಾರೆ. ಸದ್ಯ ರೈತರು ವಕ್ಫ್ ನೋಟಿಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.” ಎಂದಿದೆ.

Also Read: ಟ್ರಂಪ್‌ ವಿಜಯೋತ್ಸವ ಭಾಷಣದಲ್ಲಿ ಜನರು ‘ಮೋದಿ- ಮೋದಿ’ ಘೋಷಣೆ ಕೂಗಿದ್ದಾರೆಯೇ?

Fact Check: ಜಮೀನು ಪಹಣಿಯಲ್ಲಿ ವಕ್ಫ್‌ ಹೆಸರು ನಮೂದಾದ್ದರಿಂದ ಹಾವೇರಿ ರೈತ ಆತ್ಮಹತ್ಯೆ? ಸತ್ಯ ಇಲ್ಲಿದೆ

ಇದೇ ರೀತಿಯ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕರ್ನಾಟಕ ಮೇಲ್ಮನೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಅವರೂ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗಳು ಇಲ್ಲಿ, ಇಲ್ಲಿವೆ.

ಈ ಪ್ರಕರಣದ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಹೇಳಿಕೆ ಎಂದು ಕಂಡುಕೊಂಡಿದೆ. ಎಂಟು ವರ್ಷದ ಹಿಂದೆ ರೈತನ ಆತ್ಯಹತ್ಯೆ ನಡೆದಿದ್ದು, ವಕ್ಫ್ ಕುರಿತಾಗಿ ಅಲ್ಲ ಬದಲಾಗಿ ಸಾಲದ ಕಾರಣಕ್ಕಾಗಿ ಆಗಿತ್ತು ಎಂದು ತಿಳಿದುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಸರ್ಚ್ ಮಾಡಿದ್ದೇವೆ. ಈ ವೇಳೆ ರೈತನ ಆತ್ಮಹತ್ಯೆಗೆ ಕಾರಣ ತಿಳಿಯುವ ಕುರಿತ ವರದಿ ಕಂಡುಬಂದಿಲ್ಲ. ಬದಲಾಗಿ ಹಾವೇರಿ ಎಸ್‌ ಪಿಯವರು ನೀಡಿರುವ ಸ್ಪಷ್ಟನೆ ಲಭ್ಯವಾಗಿದೆ.

ನವೆಂಬರ್ 7,2024ರಂದು ಹಾವೇರಿ ಎಸ್‌ಪಿಯವರ ಎಕ್ಸ್ ಪೋಸ್ಟ್ ನಲ್ಲಿ “ಹಂಚಿಕೊಂಡಿರುವ ಸುದ್ದಿ ಸುಳ್ಳು. ಅಂತಹ ಯಾವುದೇ ಘಟನೆ ವರದಿಯಾಗಿಲ್ಲ. ಇಲ್ಲಿ ಉಲ್ಲೇಖಿಸಿರುವ ರೈತ ರುದ್ರಪ್ಪ ಚನ್ನಪ್ಪ ಬಾಳಿಕಾಯಿ ಆತ್ಮಹತ್ಯೆ ಪ್ರಕರಣ ದಿನಾಂಕ 06/01/2022 ರಂದು ವರದಿಯಾಗಿದ್ದು, ಸಾಲ ಮತ್ತು ಬೆಳೆ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಆದೂರು ಪಿಎಸ್‌ನಲ್ಲಿ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿದೆ. ಈಗಾಗಲೇ ಅಂತಿಮ ವರದಿ ಸಲ್ಲಿಸಲಾಗಿದೆ” ಎಂದಿದೆ.

ಇದಕ್ಕೆ ಪೂರಕವಾಗಿ ನವೆಂಬರ್ 7, 2024ರಂದು ಪ್ರಜಾವಾಣಿ ವರದಿಯಲ್ಲಿ, “ತಮ್ಮ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿದ್ದರಿಂದ ಮನೊಂದು ಹಾವೇರಿ ಜಿಲ್ಲೆಯ ಹರನಗಿ ಗ್ರಾಮದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತೇಜಸ್ವಿ ಸೂರ್ಯ, ಬಿಜೆಪಿ ರಾಹ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಎಕ್ಸ್ ನಲ್ಲಿ ಹಾಕಿದ ಪೋಸ್ಟ್ ತೀವ್ರ ಟೀಕೆಗೆ ಗುರಿಯಾಗಿದೆ” ಎಂದಿದೆ. 

ಆ ಬಳಿಕ ನಾವು ನವೆಂಬರ್ 8, 2024ರ ಟಿವಿ 9 ವರದಿಯನ್ನು ಗಮನಿಸಿದ್ದು, “ರೈತರೊಬ್ಬರ ಆತ್ಮಹತ್ಯೆ ವಿಚಾರವಾಗಿ ಸುಳ್ಳು ಮಾಹಿತಿ ಹರಡಿದ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸಿಇಎನ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಕರ್ನಾಟಕದಲ್ಲಿ ವಕ್ಫ್ ವಿವಾದ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ, ಹಾವೇರಿಯಲ್ಲಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ವಕ್ಫ್ ನೋಟಿಸ್ ಬಂದಿದ್ದೇ ಆತ್ಮಹತ್ಯೆಗೆ ಕಾರಣ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದರು.” ಎಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಹಾವೇರಿ ಸೆನ್ ಕ್ರೈಂ ಪೊಲೀಸರಿಂದ ಎಫ್‌ಐಆರ್ ಪ್ರತಿಯನ್ನು ಪಡೆದುಕೊಂಡಿದ್ದು, ಇದರ ಪ್ರಕಾರ, “ಎಂಟು ವರ್ಷಗಳ ಹಿಂದೆ ಹರನಗಿ ಗ್ರಾಮದ ರುದ್ರಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ವ್ಯಾಪ್ತಿಯ ಹರನಗಿರಿ ಗ್ರಾಮದ ರೈತ ಸಾಲದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು., ಈ ಕುರಿತು ಈಗಾಗಲೆ ಆಡೂರ ಪೊಲೀಸ್ ಠಾಣೆ ಯುಡಿಆರ್ ನಂ. 3/2022 ಕಲಂ 174 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿ ಅಂತಿಮ ವರದಿಯನ್ನು ತಹಶಿಲ್ದಾರ ಹಾನಗಲ್ ರವರಿಗೆ ಸಲ್ಲಿಸಿದ್ದು, ಪ್ರಕರಣ ಮುಕ್ತಾಯವಾಗಿದೆ. ಇದೇ ಸುದ್ದಿಯನ್ನು ಪ್ರಸ್ತುತ ವಕ್ಫ್ ವಿಚಾರಕ್ಕೆ ನಡೆದಿದೆ ಎಂದು ಸುಳ್ಳು ಸುದ್ದಿ ಮಾಡಲಾಗಿದೆ” ಎಂದು ಸುನಿಲ್‌ ಹುಚ್ಚಣ್ಣನವರ ಎಂಬವರು ನೀಡಿದ ದೂರಿನಲ್ಲಿ ಹೇಳಿದ್ದಾರೆ.

Conclusion

ಆ ಪ್ರಕಾರ, ಮಾಧ್ಯಮಗಳಲ್ಲಿ ಜಮೀನು ಪಹಣಿಯಲ್ಲಿ ವಕ್ಫ್ ಹೆಸರಿದೆ ಎಂಬ ಕಾರಣಕ್ಕೆ ರೈತ ರುದ್ರಪ್ಪ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಲ್ಲ, ಸಾಲದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ತಪ್ಪು ಹೇಳಿಕೆಗಳನ್ನು ಹರಡಲಾಗುತ್ತಿದೆ ಎಂದು ಕಂಡುಬಂದಿದೆ.

Also Read: ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ರೈಲು ಪ್ರಯಾಣಕ್ಕೆ ಟಿಕೆಟ್ ಗಳಲ್ಲಿ ರಿಯಾಯಿತಿ ಸೌಲಭ್ಯ ಘೋಷಿಸಿದೆ ಎನ್ನುವುದು ನಿಜವೇ?

Result: False

Our Sources
‍‍‍X Post By Haveri SP, Dated: November 7, 2024

FIR Report By Haveri SEN Crime Police, Dated: November 7, 2024


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,830

Fact checks done

FOLLOW US
imageimageimageimageimageimageimage