Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ರಾಮ ನವಮಿ ಆಚರಣೆ ವೇಳೆ ಹಿಂದೂಗಳು ಚರ್ಚ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ
Fact
ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಕನ್ನೆಪಲ್ಲಿಯಲ್ಲಿರುವ ಸೇಂಟ್ ಮದರ್ ತೆರೇಸಾ ಆಂಗ್ಲ ಮಾಧ್ಯಮ ಶಾಲೆಗೆ ಹನುಮಾನ್ ಮಾಲಾಧಾರಿ ವಿದ್ಯಾರ್ಥಿಗಳನ್ನು ತರಗತಿಯೊಳಗೆ ಪ್ರವೇಶಿಸಲು ಅವಕಾಶ ನೀಡದ ಕಾರಣಕ್ಕಾಗಿ ಗುಂಪೊಂದು ದಾಂಧೆಲೆ ಮಾಡಿದ ಘಟನೆ ಇದಾಗಿದೆ
ರಾಮ ಭಕ್ತರು ಚರ್ಚ್ ಗೆ ಹೋಗಿ ರಾಮನವಮಿ ಆಚರಿಸಿದ ರೀತಿ ಎಂದು ಕಲ್ಲೆಸೆಯುವ ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಫೇಸ್‌ಬುಕ್ ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, “ರಾಮ ಭಕ್ತರು ಇಂದು ಚರ್ಚ್ ಗೆ ಹೋಗಿ ರಾಮನವಮಿ ಆಚರಣೆ ಮಾಡಿದ ಪರಿ ಜೈ ಶ್ರೀರಾಮ್” ಎಂದಿದೆ.
Also Read: ರಾಮನವಮಿ ದಿನವೇ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮಾಂಸಾಹಾರ ಊಟ ಮಾಡಿದ್ದಾರೆಯೇ?
ಈ ಬಗ್ಗೆ ನ್ಯೂಸ್ ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ಸುಳ್ಳು, ಸಮವಸ್ತ್ರ ಕುರಿತಾದ ವಿವಾದವೊಂದರಲ್ಲಿ ಬಲಪಂಥೀಯ ಸಂಘಟನೆಗಳು ಶಾಲೆಗೆ ಕಲ್ಲೆಸೆದ ಘಟನೆ ಇದಾಗಿದೆ ಎಂದು ಕಂಡುಬಂದಿದೆ.
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋ ಕೀಫ್ರೇಂ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.
ಏಪ್ರಿಲ್ 18, 2024ರ ನ್ಯೂಸ್ ಏಜ್ ವರದಿಯಲ್ಲಿ, ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ, ವಿದ್ಯಾರ್ಥಿಗಳು ಧಾರ್ಮಿಕ ವಸ್ತ್ರಗಳನ್ನು ಶಾಲೆಗೆ ಬಂದಿದ್ದರಿಂದ ಅವರನ್ನು ಪ್ರಾಂಶುಪಾಲರು ಪ್ರಶ್ನಿಸಿದ್ದು, ಇದರ ವಿರುದ್ಧ ಗುಂಪೊಂದು ಶಾಲೆಯಲ್ಲಿ ದಾಂಧಲೆ ನಡೆಸಿ ಶಾಲೆಯ ಸಿಬ್ಬಂದಿಗೆ ಹಿಂಸೆ ನೀಡಿದ ಪ್ರಕರಣ ನಡೆದಿದೆ ಎಂದಿದೆ. ಇದರೊಂದಿಗೆ ವಿದ್ಯಾರ್ಥಿಗಳ ಹೆತ್ತವರು ಶಾಲೆಯ ಸಿಬ್ಬಂದಿ ಮತ್ತು ಪ್ರಾಂಶುಪಾಲರ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಕ್ಕಾಗಿ ದೂರು ನೀಡಿದ್ದು, ಸೂಕ್ತ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ ಎಂದಿದೆ.
ಏಪ್ರಿಲ್ 18, 2024ರ ನ್ಯೂಸ್ ನೈನ್ ವರದಿಯಲ್ಲಿ, ತೆಲಂಗಾಣ: ಕೇಸರಿ ವಸ್ತ್ರ ಧರಿಸಿದ ಮಕ್ಕಳನ್ನು ಮನೆಗೆ ಕಳಿಸಿದ ಬಳಿಕ ಕ್ಯಾಥೋಲಿಕ್ ಶಾಲೆಯನ್ನು ಪುಡಿಗಟ್ಟಿದ ಗುಂಪು ಎಂದಿದೆ. ಈ ವರದಿಯಲ್ಲಿ ಶಾಲೆಯ ಸಮವಸ್ತ್ರ ಬದಲಾಗಿ ಕೇಸರಿ ಬಣ್ಣದ ವಸ್ತ್ರ ಧರಿಸಿ ಬಂದಿದ್ದಕ್ಕಾಗಿ ಶಾಲೆ ಆಡಳಿತ ಮಕ್ಕಳನ್ನು ಮನೆಗೆ ಕಳಿಸಿದ ಆ ಬಳಿಕ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಕನ್ನೆಪಲ್ಲಿಯಲ್ಲಿರುವ ಸಂತ ಮದರ್ ಥೆರೇಸಾ ಇಂಗ್ಲಿಷ್ ಮಾಧ್ಯಮ ಶಾಲೆ ಮೇಲೆ ಬಲಪಂಥೀಯ ಗುಂಪು ಪ್ರವೇಶಿಸಿದೆ. ಘಟನೆ ಕುರಿತಾಗಿ ಶಾಲೆಯ ಆಡಳಿತ, ದಾಂಧಲೆ ನಡೆಸಿದ ಗುಂಪಿನ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ ಎಂದಿದೆ. ಗುಂಪು ಶಾಲೆಗೆ ಬಂದು ಹೂಕುಂಡಗಳನ್ನು ಒಡೆದು ಹಾಕಿ, ಕಿಟಕಿ ಗಾಜು ಒಡೆದು ಹಾಕಿ ಥೆರೇಸಾ ಪ್ರತಿಮೆಗೆ ಕಲ್ಲು ಎಸೆದು ಜೈ ಶ್ರೀರಾಂ ಎಂದು ಕೂಗಿದ್ದಾರೆ. ಜೊತೆಗೆ ಗ್ರಾಮಸ್ಥರು ಪ್ರಾಂಶುಪಾಲ, ಫಾದರ್ ಜೈಮೊನ್ ಜೋಸೆಫ್ ಎಂಬವರ ಮೇಲೂ ದಾಳಿ ನಡೆಸಿದ್ದಾರೆ ಎಂದಿದೆ.
Also Read: ರಾಹುಲ್ ಗಾಂಧಿಯನ್ನು ನೋಡಲು ಜನಸಾಗರ ಎಂದು ಚಿಕ್ಕೋಡಿ ಎತ್ತಿನ ಗಾಡಿ ಸ್ಪರ್ಧೆಯ ವೀಡಿಯೋ ಹಂಚಿಕೆ
ಈ ಬಗ್ಗೆ ನಾವು ಇನ್ನಷ್ಟು ಶೋಧ ನಡೆಸಿದಾಗ, ಆರ್ ಟಿವಿ ಅಡಿಲಾಬಾದ್ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. Adilabad Mother Teresa School Incident, High Tension In Mother Teresa School ಶೀರ್ಷಿಕೆ ಇದಕ್ಕಿದ್ದು, ವರದಿ ಪ್ರಕಾರ ಹನುಮಾನ್ ಮಾಲಾಧಾರಿ ವಿದ್ಯಾರ್ಥಿಗಳನ್ನು ತರಗತಿ ಪ್ರವೇಶಿಸಲು ಶಾಲಾ ಆಡಳಿತ ನಿರಾಕರಿಸಿದ್ದರಿಂದ ಗುಂಪು ಶಾಲೆಯಲ್ಲಿ ದಾಂಧಲೆ ನಡೆಸಿದೆ ಎಂದಿದೆ.
ಈ ಘಟನೆಯ ಕುರಿತ ಮಾಧ್ಯಮ ವರದಿಗಳನ್ನು ಇಲ್ಲಿ, ಮತ್ತು ಇಲ್ಲಿ ನೋಡಬಹುದು.
ಈ ಪುರಾವೆಗಳ ಪ್ರಕಾರ, ಇದು ರಾಮನವಮಿ ಸಂದರ್ಭದ್ದಲ್ಲ. ಹನುಮಾನ್ ಮಾಲಾಧಾರಿ ವಿದ್ಯಾರ್ಥಿಗಳು ತರಗತಿ ಪ್ರವೇಶಿಸಲು ಅನುಮತಿ ನೀಡದ್ದಕ್ಕಾಗಿ ಗುಂಪೊಂದು ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಕನ್ನೆಪಲ್ಲಿಯಲ್ಲಿರುವ ಸಂತ ಮದರ್ ಥೆರೇಸಾ ಇಂಗ್ಲಿಷ್ ಮಾಧ್ಯಮ ಶಾಲೆ ಮೇಲೆ ದಾಂಧಲೆ ನಡೆಸಿದ ಘಟನೆ ಇದಾಗಿದೆ ಎಂದು ತಿಳಿದುಬಂದಿದೆ.
Also Read: ಚಿತ್ರದುರ್ಗದಲ್ಲಿ ಪ್ರಧಾನಿ ಹೆಲಿಕಾಪ್ಟರ್ ನಿಂದ ನಿಗೂಢ ಪೆಟ್ಟಿಗೆ ಇಳಿಸಲಾಯಿತು ಎನ್ನುವ ಪೋಸ್ಟ್ ನಿಜವೇ?
Our Sources
Report By NewsAge, Dated: April 18, 2024
Report By Newsnine, Dated: April 18, 2024
Report By RTV Adilabad, Dated: April 16, 2024
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
April 27, 2024
Prasad S Prabhu
April 18, 2024
Ishwarachandra B G
September 22, 2023