Saturday, April 26, 2025
ಕನ್ನಡ

Fact Check

Fact Check: 3000 ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?

Written By Vijayalakshmi Balasubramaniyan, Translated By Ishwarachandra B G, Edited By JP Tripathi
Jan 6, 2025
banner_image

Claim
3000 ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿ ವಿಗ್ರಹ

Fact
ಇದು 3000 ವರ್ಷಗಳಷ್ಟು ಹಳೆಯ ವಿಗ್ರಹವಲ್ಲ, ಹೈದರಾಬಾದ್‌ನ ಶಿವನಾರಾಯಣ ಜ್ಯುವೆಲ್ಲರಿಯವರು ತಯಾರಿಸಿದ್ದಾಗಿದೆ


7,800 ಕೆಜಿ ಶುದ್ಧ ಚಿನ್ನ ಮತ್ತು 7,80,000 ವಜ್ರದಿಂದ 780 ಕ್ಯಾರೆಟ್‌ನ 3 ಸಾವಿರ ವರ್ಷಗಳಷ್ಟು ಹಳೆಯದಾದ ಅನಂತ ಪದ್ಮನಾಭಸ್ವಾಮಿಯ ಪ್ರತಿಮೆ ಇದೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. 

“7800 ಕೆಜಿ ಶುದ್ಧ ಚಿನ್ನ, 7,80,000 ವಜ್ರಗಳು ಮತ್ತು 780 ಕ್ಯಾರೆಟ್ ವಜ್ರದಿಂದ ಮಾಡಲಾದ 3000 ವರ್ಷಗಳಷ್ಟು ಹಳೆಯದಾದ ಅನಂತಪದ್ಮನಾಭಸ್ವಾಮಿ ಪ್ರತಿಮೆ ಇದು ಎಂದು ಹೇಳಲಾಗುತ್ತಿದೆ. ಇದರ ಪ್ರಸ್ತುತ ಮೌಲ್ಯ ಹಲವು ಸಾವಿರ ಲಕ್ಷ ಕೋಟಿ ಎಂದು ಹೇಳಲಾಗಿದೆ ಮತ್ತು ಅದರ ಬೆಲೆಯನ್ನು ಅಂದಾಜಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ” ಎಂದು ವೀಡಿಯೋದ ವಿವರಣೆ ಹೇಳುತ್ತದೆ.

“ಫ್ರಾನ್ಸ್‌ನಿಂದ ಆಹ್ವಾನಿಸಲಾದ ತಜ್ಞರ ತಂಡವು ಇದನ್ನು ನೋಡಿ ಆಶ್ಚರ್ಯ ಚಕಿತರಾದರು. ಇದನ್ನು ನಮ್ಮ ಕಣ್ಣಾರೆ ನೋಡುವುದೇ ಒಂದು ದೊಡ್ಡ ಸೌಭಾಗ್ಯ. ಖುದ್ದಾಗಿ ಹೋಗಲಾಗದವರು ಈ ವೀಡಿಯೋ ಮೂಲಕ ನೋಡಿ. ನಂದಲ ಸ್ವಾಮಿಯನ್ನು ಕಾಣದಿದ್ದಾಗ ಚಿತ್ರ, ಮೂರ್ತಿ ಇಟ್ಟು ಪೂಜಿಸುವುದು ಹೇಗೆ? ಈ ದೇವಾಲಯದ ಸ್ಥಳ ತಿರುವನಂತರಪುರ, ಕೇರಳ, ಭಾರತ,” ಎಂದು ವೀಡಿಯೋದ ವಿವರಣೆಯಲ್ಲಿದೆ.

Also Read: ತಿರುಪತಿ ದೇಗುಲದ ಪುರೋಹಿತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಎಂದ ವೀಡಿಯೋ ಸತ್ಯವೇ?

Fact Check: 3000 ವರ್ಷಗಳಷ್ಟು ಹಳೆಯದಾದ ಅನಂತಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದ್ದೇವೆ. ವೈರಲ್ ವೀಡಿಯೋವನ್ನು ಹೋಲುವ ವೀಡಿಯೋವನ್ನು ಆಗಸ್ಟ್ 6, 2023 ರ ದಿನಾಂಕದಂದು ಕಾರ್ತಿಕ್ ನಾಗರಾಜ್ ಎಂಬವರ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ನಾವು ಕಂಡುಕೊಂಡಿದ್ದೇವೆ. ಇದರ ವಿವರಣೆಯಲ್ಲಿ, “ಶ್ರೀ ಅನಂತ ಪದ್ಮನಾಭಸ್ವಾಮಿ ರತ್ನ ಖಚಿತ ವಿಗ್ರಹವು 8 ಇಂಚು ಎತ್ತರ ಮತ್ತು 18 ಇಂಚು ಉದ್ದವಿದೆ. 2 ತಿಂಗಳು ಪ್ರತಿ ದಿನ 16 ಗಂಟೆ 32 ಮಂದಿ ಈ ವಿಗ್ರಹದ ನಿರ್ಮಾಣವನ್ನು ಮಾಡಿದ್ದು, 2.8 ಕೆಜಿ ತೂಕ ಹೊಂದಿದೆ.”

“ಸುಮಾರು 75,000 ಉತ್ತಮ ಗುಣಮಟ್ಟದ ವಜ್ರಗಳಿಂದ ಅಲಂಕರಿಸಲ್ಪಟ್ಟಿದ್ದು, ಇದು ಒಟ್ಟು 500 ಕ್ಯಾರೆಟ್ ನದ್ದಾಗಿದೆ. ಶ್ರೀ ಅನಂತಪದ್ಮನಾಭ ಸ್ವಾಮಿಯ ಈ ವಿಗ್ರಹ ಕಣ್ಸೆಳೆಯುತ್ತದೆ. ಪ್ರತಿಯೊಂದು ವಜ್ರವು ಚಿಂತನಶೀಲವಾಗಿ ಇರಲಿಸಲಾಗಿದ್ದು, ಇದನ್ನು ಅದ್ಭುತವಾಗಿ ಪಾಲಿಶ್ ಮಾಡಿ ಕೌಶಲ್ಯಪೂರ್ಣವಾಗಿ ಹೊಂದಿಸಲಾಗಿದೆ. ಇದು ಅತ್ಯುತ್ತಮವಾದ ಜಾಂಬಿಯನ್ ಪಚ್ಚೆಗಳು ಮತ್ತು ನೈಸರ್ಗಿಕ ಬರ್ಮೀಸ್ ಮಾಣಿಕ್ಯಗಳನ್ನು ಹೊಂದಿದೆ, ಅದು ಅದ್ಭುತವಾದ, ಸಮ್ಮೋಹನಗೊಳಿಸುವ ನೋಟವನ್ನು ದೈವಿಕ ಸೊಬಗನ್ನು ಶಾಶ್ವತಗೊಳಿಸುತ್ತದೆ” ಎಂದು ಪೋಸ್ಟ್ ನಲ್ಲಿದೆ.

“ಈ ಅದ್ಭುತ ಸೃಷ್ಟಿಯ ಶ್ರೀ ಅನಂತ ಪದ್ಮನಾಭಸ್ವಾಮಿ ವಿಗ್ರಹ 9 ಗಿನ್ನಿಸ್ ವಿಶ್ವ ದಾಖಲೆಗಳ ಸಾಧಿಸಲು ಸಿದ್ಧವಾಗಿದೆ” ಎಂದೂ ವಿವರಣೆಯಲ್ಲಿದೆ.

Fact Check: 3000 ವರ್ಷಗಳಷ್ಟು ಹಳೆಯದಾದ ಅನಂತಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?

ಈ ಬಗ್ಗೆ ನ್ಯೂಸ್‌ಚೆಕರ್ ಇನ್ನಷ್ಟು ಕೀವರ್ಡ್ ಸರ್ಚ್ ನಡೆಸಿದೆ. ಈ ವೇಳೆ ಕಂಡುಬಂದ ಅಂಶವೆಂದರೆ, ಹೈದರಾಬಾದ್‌ನ ಶಿವ ನಾರಾಯಣ್ ಜ್ಯುವೆಲ್ಲರಿ, ಕೇರಳ ಭೀಮಾ ಜ್ಯುವೆಲರಿಯ ಅಧ್ಯಕ್ಷ ಬಿ ಗೋವಿಂದನ್ ಅವರ ಗೌರವಾರ್ಥ ಪ್ರತಿಮೆಯನ್ನು ತಯಾರಿಸಿದೆ ಎಂದ ವರದಿಗಳು ಲಭ್ಯವಾಗಿದೆ.

ಈ ವಿಗ್ರಹವನ್ನು 2023 ರಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಜ್ಯುವೆಲ್ಲರಿ ಶೋನಲ್ಲಿ ಪ್ರದರ್ಶಿಸಿದ ಸಂದರ್ಭ ವೀಡಿಯೋವನ್ನು ಚಿತ್ರೀಕರಿಸಲಾಗಿದೆ. ಇದೇ ವೀಡಿಯೋ ಶಿವನಾರಾಯಣ ಜ್ಯುವೆಲರಿಯ ಸಾಮಾಜಿಕ ಮಾಧ್ಯಮ ಪುಟದಲ್ಲಿ ಪೋಸ್ಟ್ ಮಾಡಲಾಗಿದೆ.

Fact Check: 3000 ವರ್ಷಗಳಷ್ಟು ಹಳೆಯದಾದ ಅನಂತಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?


ಶಿವನಾರಾಯಣ ಜ್ಯುವೆಲರಿಯ ವ್ಯವಸ್ಥಾಪಕ ನಿರ್ದೇಶಕ ತುಷಾರ್ ಅಗರ್ವಾಲ್ ನೀಡಿದ ಸಂದರ್ಶನದಲ್ಲಿ ಈ ವೀಡಿಯೋ ಕೂಡ ಇದೆ . ಅದೇ ವಿನ್ಯಾಸದ ವಿಗ್ರಹವನ್ನು IIJS 2023 ರಲ್ಲಿ ಅನಾವರಣಗೊಳಿಸಲಾಗಿದೆ ಎಂದೂ ಸಂದರ್ಶನದಲ್ಲಿದೆ.

Fact Check: 3000 ವರ್ಷಗಳಷ್ಟು ಹಳೆಯದಾದ ಅನಂತಪದ್ಮನಾಭಸ್ವಾಮಿ ವಿಗ್ರಹ ಎಂದ ವೀಡಿಯೋದ ಅಸಲಿಯತ್ತೇನು?

ವಿಗ್ರಹದ ಕುರಿತ ವಿವಿಧ ವರದಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು.  

Conclusion

ವೈರಲ್ ವೀಡಿಯೋದಲ್ಲಿ ತೋರಿಸಿರುವ ಅನಂತ ಪದ್ಮನಾಭಸ್ವಾಮಿಯ ಪ್ರತಿಮೆಯು 3000 ವರ್ಷಗಳಷ್ಟು ಹಳೆಯದಲ್ಲ. ಮತ್ತು ಕೇರಳದ ಭೀಮಾ ಜ್ಯುವೆಲ್ಲರಿಯ ಅಧ್ಯಕ್ಷ ಬಿ ಗೋವಿಂದನ್ ಅವರ ಗೌರವಾರ್ಥವಾಗಿ ಹೈದರಾಬಾದ್‌ನ ಶಿವನಾರಾಯಣ ಜ್ಯುವೆಲ್ಲರಿಯವರು ಇದನ್ನು ತಯಾರಿಸಿದ್ದಾರೆ ಎಂದು ಸತ್ಯಶೋಧನೆಯಲ್ಲಿ ತಿಳಿದುಬಂದಿದೆ.

Also Read: ಮನಮೋಹನ್ ಸಿಂಗ್ ಅವರು ಆಸ್ಪತ್ರೆಯಲ್ಲಿದ್ದ ದೃಶ್ಯ ಎಂದು ಹಳೇ ಫೋಟೋ ಹಂಚಿಕೆ

Result: False

Our Sources:
Instagram post By Karthik Nagraj, Dated: August 06, 2023

YouTube Video By The Diamond Talk by Renu Choudhary, Dated: August 10, 2023

Instagram post By shivnarayanjewellers, Dated: August 04, 2023

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
No related articles found
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,924

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.