Fact Check: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮನೆ ಮನೆ ಪ್ರಚಾರದ ವೇಳೆ ಡಿಕೆಶಿ ತೂರಾಡಿದ್ದರೇ?

ಡಿಕೆಶಿ ತೂರಾಟ, ಪಾದಯಾತ್ರೆ, ಮತಯಾಚನೆ

Authors

Vasudha noticed the growing problem of mis/disinformation online after studying New Media at ACJ in Chennai and became interested in separating facts from fiction. She is interested in learning how global issues affect individuals on a micro level. Before joining Newschecker’s English team, she was working with Latestly.

Pankaj Menon

Claim
ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮನೆ ಮನೆ ಪ್ರಚಾರದ ವೇಳೆ ತೂರಾಡಿದ ಡಿ.ಕೆ. ಶಿವಕುಮಾರ್‌

Fact
ಈ ವೀಡಿಯೋ 1 ವರ್ಷ ಹಳೆಯದಾಗಿದ್ದು, ಕಾಂಗ್ರೆಸ್‌ ಆಯೋಜಿಸಿದ್ದ ಮೇಕೆದಾಟು ಪಾದಯಾತ್ರೆ ಸಂದರ್ಭದ್ದಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಮತದಾನಕ್ಕೆ ಮುಂಚಿತವಾಗಿ, ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ತೂರಾಡಿಕೊಂಡು ನಡೆಯುತ್ತಿರುವ  ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದೆ. 

ಚುನಾವಣೆ ಸಂದರ್ಭ “ಮನೆ ಮನೆ ಪ್ರಚಾರ” ಮಾಡುವಾಗ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರು ಪಾನಮತ್ತರಾದ ಸ್ಥಿತಿಯಲ್ಲಿರುವುದನ್ನು ಇದು ತೋರಿಸುತ್ತದೆ ಎಂದು ವೀಡಿಯೋ ಹಂಚಿಕೊಂಡವರು ಆರೋಪಿಸಿದ್ದಾರೆ.  

ಸತ್ಯಶೋಧನೆ ವೇಳೆ ನ್ಯೂಸ್‌ಚೆಕರ್‌, ಈ ವೀಡಿಯೋ 1 ವರ್ಷಕ್ಕೂ ಹಳೆಯದು ಮತ್ತು ಕರ್ನಾಟಕ ಚುನಾವಣೆಗೆ ಸಂಬಂಧಿಸಿದ್ದಲ್ಲ ಎಂದು ಕಂಡುಕೊಂಡಿದೆ.  

ಹಲವಾರು ಫೇಸ್ ಬುಕ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, “ಕಾಂಗ್ರೆಸ್ ಕರ್ನಾಟಕ ಮುಖ್ಯಮಂತ್ರಿ ಅಭ್ಯರ್ಥಿ.. ಡಿ.ಕೆ.ಶಿವಕುಮಾರ್ ಅವರು ಮನೆ ಮನೆ ಪ್ರಚಾರದಲ್ಲಿ ನಿರತರಾಗಿದ್ದರು. ಕಾಂಗ್ರೆಸ್ ಬಹುಮತ ಗಳಿಸಿದರೆ ಅವರು ಕರ್ನಾಟಕದ  ಮುಖ್ಯಮಂತ್ರಿಯಾಗಲಿದ್ದಾರೆ. ಕರ್ನಾಟಕವು ಶಾಂತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತದೆ ಮತ್ತು ಪಂಜಾಬ್ ಸಿಎಂನಂತಹ ಇನ್ನೊಬ್ಬ ಕುಡುಕನನ್ನು ಆಯ್ಕೆ ಮಾಡುವುದಿಲ್ಲ ಎಂದು ಭಾವಿಸುತ್ತೇನೆ.” ಎಂದು ಬರೆದುಕೊಂಡಿದ್ದಾರೆ. 

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮನೆ ಮನೆ ಪ್ರಚಾರದ ವೇಳೆ ಡಿಕೆಶಿ ತೂರಾಡಿದ್ದರೇ?
 G.S. Upadhyay ಇವರ ಪೋಸ್ಟ್‌ ನ ಫೇಸ್‌ಬುಕ್‌ ಸ್ಕ್ರೀನ್‌ಗ್ರ್ಯಾಬ್‌

ಈ ವೀಡಿಯೋದ ಸತ್ಯಪರಿಶೀಲನೆಗೆ ವಾಟ್ಸಾಪ್‌ ಟಿಪ್‌ ಲೈನ್‌ (+91-9999499044) ಮೂಲಕವೂ ಬಳಕೆದಾರರು ದೂರು ನೀಡಿದ್ದು ಅದನ್ನು ಅಂಗೀಕರಿಸಲಾಗಿತ್ತು.

ಅಂತಹ ಪೋಸ್ಟ್ ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

Fact Check/ Verification

ಈ ದೃಶ್ಯವನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ನ್ಯೂಸ್ ಫಸ್ಟ್ ಕನ್ನಡದ ಯೂಟ್ಯೂಬ್ ಚಾನೆಲ್ ಹೆಸರು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳನ್ನು ಡಿ.ಕೆ.ಶಿವಕುಮಾರ್ ಅವರ ವೈರಲ್ ವೀಡಿಯೊದ ಕೆಳಭಾಗದಲ್ಲಿ ಉಲ್ಲೇಖಿಸಿರುವುದನ್ನು ನಾವು ಗಮನಿಸಿದ್ದೇವೆ.

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮನೆ ಮನೆ ಪ್ರಚಾರದ ವೇಳೆ ಡಿಕೆಶಿ ತೂರಾಡಿದ್ದರೇ?
ವೈರಲ್‌ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್‌

ನ್ಯೂಸ್ ಫಸ್ಟ್ ಕನ್ನಡದ ಯೂಟ್ಯೂಬ್ ಚಾನೆಲ್ನಲ್ಲಿ ಡಿ.ಕೆ.ಶಿವಕುಮಾರ್ ಎಂದು ಹುಡುಕಿದ್ದು,  ಜನವರಿ 9, 2022 ರಂದು ಚಾನೆಲ್ನಲ್ಲಿ ಅಪ್ಲೋಡ್ ಮಾಡಲಾದ ವೈರಲ್ ವೀಡಿಯೋದ ದೀರ್ಘ ಆವೃತ್ತಿ ಲಭ್ಯವಾಗಿದೆ. ಇದರಲ್ಲಿ  “ಡಿ.ಕೆ.ಶಿವಕುಮಾರ್: ದಣಿದ ಡಿ.ಕೆ.ಶಿವಕುಮಾರ್ | ಮೇಕೆದಾಟು ಪಾದಯಾತ್ರೆ” ಎಂದು ಶೀರ್ಷಿಕೆಯನ್ನು ನೀಡಲಾಗಿದೆ. 

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮನೆ ಮನೆ ಪ್ರಚಾರದ ವೇಳೆ ಡಿಕೆಶಿ ತೂರಾಡಿದ್ದರೇ?
@news1kannada ಯೂಟ್ಯೂಬ್‌ ವೀಡಿಯೋದ ಸ್ಕ್ರೀನ್‌ ಗ್ರ್ಯಾಬ್‌

ಜನವರಿ 9, 2022ರಂದು @news2022kannada ಫೇಸ್ಬುಕ್ ಪುಟದಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮನೆ ಮನೆ ಪ್ರಚಾರದ ವೇಳೆ ಡಿಕೆಶಿ ತೂರಾಡಿದ್ದರೇ?
@news1kannada ಫೇಸ್‌ಬುಕ್‌ ಪೋಸ್ಟ್‌ ನ ಸ್ಕ್ರೀನ್‌ ಗ್ರ್ಯಾಬ್‌

ಮೇಕೆದಾಟು ಯೋಜನೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಕಾಂಗ್ರೆಸ್ 2022 ರ ಜನವರಿಯಲ್ಲಿ ಕರ್ನಾಟಕದಲ್ಲಿ ಪಾದಯಾತ್ರೆ ಕೈಗೊಂಡಿತ್ತು. ಈ ಮೆರವಣಿಗೆಯನ್ನು ಜನವರಿ 9 ರಂದು ಪ್ರಾರಂಭಿಸಲಾಯಿತು, ಆದರೆ ರಾಜ್ಯದಲ್ಲಿ ಕೋವಿಡ್ -13 ಪ್ರಕರಣಗಳು ಹೆಚ್ಚಾದ ಕಾರಣ ಜನವರಿ 19 ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಪಾದಯಾತ್ರೆಯು ಒಂದು ತಿಂಗಳ ನಂತರ ಫೆಬ್ರವರಿ ಕೊನೆಯಲ್ಲಿ ಪುನರಾರಂಭಗೊಂಡಿತು ಮತ್ತು ಮಾರ್ಚ್ 3, 2022 ರಂದು ಕೊನೆಗೊಂಡಿತ್ತು.

ಇದನ್ನೂ ಓದಿ: ಕರ್ನಾಟಕ ಚುನಾವಣೆ: ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಲಿದೆ ಎಂದ ‘ಎನ್ಡಿಟಿವಿ ಗ್ರಾಫಿಕ್’

ಆದ್ದರಿಂದ, ವೈರಲ್ ಆಗಿರುವ ವೀಡಿಯೋವು 1 ವರ್ಷಕ್ಕಿಂತ ಹಳೆಯದು ಮತ್ತು ವಿಧಾನಸಭಾ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥರು ಮನೆ ಮನೆಗೆ ಪ್ರಚಾರ ಮಾಡುತ್ತಿರುವುದನ್ನು ತೋರಿಸುವುದಿಲ್ಲ.

ಆದಾಗ್ಯೂ, ಡಿ.ಕೆ.ಶಿವಕುಮಾರ್ ಅವರು ಕುಡಿದ ಸ್ಥಿತಿಯಲ್ಲಿದ್ದಾರೆಯೇ ಅಥವಾ ಮೆರವಣಿಗೆಯಿಂದ ದಣಿದಿದ್ದಾರೆಯೇ ಎಂಬುದನ್ನು ವೀಡಿಯೊ ತೋರಿಸುತ್ತದೆಯೇ ಎಂದು ನ್ಯೂಸ್ ಚೆಕ್ಕರ್ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ.

Conclusion

ಮೇ 1 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧವಿಲ್ಲದ ಡಿ.ಕೆ.ಶಿವಕುಮಾರ್ ಅಸ್ಥಿರವಾಗಿ ನಡೆಯುತ್ತಿರುವ ವೀಡಿಯೊ ವೈರಲ್ ಆಗಿದೆ.

Result: False

Our Sources
YouTube Video By NewsFirst Kannada, Dated January 9, 2022
Facebook Post By News1kannada , Dated January 9, 2022


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Vasudha noticed the growing problem of mis/disinformation online after studying New Media at ACJ in Chennai and became interested in separating facts from fiction. She is interested in learning how global issues affect individuals on a micro level. Before joining Newschecker’s English team, she was working with Latestly.

Pankaj Menon