Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಕಾಂತಾರ ಚಲನ ಚಿತ್ರದ ನಿರ್ದೇಶಕ ರಿಷಭ್ ಶೆಟ್ಟಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ ಎಂಬ ವಾಟ್ಸ್ ಆಪ್ ಫಾರ್ವರ್ಡ್ ಚಿತ್ರವೊಂದು ವೈರಲ್ ಆಗಿದೆ. ಆ ವಾಟ್ಸ್ ಆಪ್ ಫಾರ್ವರ್ಡ್ ಚಿತ್ರದ ಪ್ರಕಾರ, ರಿಷಭ್ ಅವರೊಂದಿಗೆ ಪ್ರಧಾನಿ ಸಂಭಾಷಣೆ ನಡೆಸುವ ರೀತಿ ಇದೆ. ಇದರೊಂದಿಗೆ ಚಿತ್ರದಲ್ಲಿ ಕೆರಾಡಿಯಿಂದ ದಿಲ್ಲಿಗೆ ಎಂದು ಬರೆಯಲಾಗಿದೆ.
ಈ ಚಿತ್ರದ ಕುರಿತು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ನಮಗೆ ಯಾವುದೇ ಮಾಹಿತಿಗಳು ತಿಳಿದು ಬಂದಿಲ್ಲ. ಅಲ್ಲದೇ ನಿರ್ದೇಶಕ ರಿಷಭ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಬಗ್ಗೆ ಯಾವುದೇ ಸುದ್ದಿಗಳೂ ಪ್ರಕಟವಾಗಿರುವುದು ಕಂಡು ಬಂದಿಲ್ಲ.
ವಾಟ್ಸ್ ಆಪ್ನಲ್ಲಿರುವ ಈ ಚಿತ್ರವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗಿದ್ದು, ಇದರಲ್ಲಿ ರಿಷಭ್ ಅವರ ಕಾಲಿನ ಭಾಗವು ಒಬ್ಬರು ಮಹಿಳೆಯ ಕಾಲಿನಂತೆ ಮತ್ತು ಹೈಹೀಲ್ಡ್ ಚಪ್ಪಲಿ ಧರಿಸಿದ್ದನ್ನು ಫೋಟೋ ಎಡಿಟಿಂಗ್ ಮೂಲಕ ತಿರುಚಿದ ರೀತಿ ಇದೆ.
ಅದೇ ರೀತಿ ರಿಷಭ್ ಮತ್ತು ಪ್ರಧಾನಿ ಮೋದಿ ಅವರು ಕುಳಿತ ಹಿಂಭಾಗದ ಗೋಡೆಯಲ್ಲಿ ಕಾಂತಾರದ ಸಿನೆಮಾ ಪೋಸ್ಟರ್ ಕೂಡ ಇದೆ. ಪ್ರಧಾನಿ ಕಚೇರಿಯಲ್ಲಿ ಕಾಂತಾರದ ಪೋಸ್ಟರನ್ನು ಹಾಕಿರುವುದು ಸಂಶಯಾಸ್ಪದವಾಗಿ ಇದೆ.
ಜೊತೆಗೆ ಈ ಬಗ್ಗೆ ಚಿತ್ರತಂಡದ ಬಳಿ ಫೋನ್ ಮುಖಾಂತರ ಸಂಭಾಷಣೆ ನಡೆಸಿದ ವೇಳೆ, ಪ್ರಧಾನಿ ನರೇಂದ್ರ ಮೋದಿಯವರನ್ನು ರಿಷಭ್ ಶೆಟ್ಟಿ ಅವರು ಭೇಟಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಈ ಭೇಟಿಯ ಬಗ್ಗೆ ಯಾವುದೇ ಮಾಧ್ಯಮ ವರದಿಗಳೂ ಲಭ್ಯ ಇರುವುದಿಲ್ಲ.
ನಾವು ಚಿತ್ರದ ಬಗ್ಗೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಇದು ವಿಶ್ವಸಂಸ್ಥೆ ಮುಖ್ಯಸ್ಥ ಆಂಟಾನಿಯೋ ಗುಟೆರಸ್ ಅವರೊಂದಿಗೆ ಪ್ರಧಾನಿ ಮೋದಿ ಅವರು ಕುಳಿತಿರುವ ಚಿತ್ರವನ್ನು ಹೊಂದಿರುವ ಹಲವಾರು ಸುದ್ದಿಗಳತ್ತ ಕರೆದೊಯ್ಯಿತು. ಇದನ್ನು ಇಲ್ಲಿ ನೋಡಬಹುದು.
ಈ ಚಿತ್ರವನ್ನು ಪ್ರಧಾನಿಯವರು ತಮ್ಮ ಟ್ವಿಟರ್ ಪ್ರೊಫೈಲ್ನಲ್ಲಿ ಹಂಚಿಕೊಂಡಿದ್ದಾರೆ.
ಈ ಎರಡೂ ಚಿತ್ರಗಳ ಹಿನ್ನೆಲೆ ಮತ್ತು ಇತರ ಅಂಶಗಳು ಒಂದೇ ಆಗಿವೆ. ಆದ್ದರಿಂದ ವಿಶ್ವಸಂಸ್ಥೆ ಮುಖ್ಯಸ್ಥರ ಚಿತ್ರದ ಮೇಲೆ ರಿಷಭ್ ಶೆಟ್ಟಿಯವರ ಚಿತ್ರವನ್ನು ತಿರುಚಲಾಗಿದೆ ಎನ್ನುವುದು ತಿಳಿದುಬಂದಿದೆ.
Also read: ಗೋಮಾಂಸ ರಫ್ತಿನಲ್ಲಿ ಭಾರತ ನಂ.1 ಆಗಿದೆಯೇ?
ಶೋಧನೆಗಳ ಪ್ರಕಾರ, ಕಾಂತಾರ ಚಿತ್ರ ನಿರ್ದೇಶಕ ರಿಷಭ್ ಶೆಟ್ಟಿಯವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ಸುಳ್ಳಾಗಿದೆ.
Our Sources
Telephonic conversation with Kantara Movie team
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Vasudha Beri
May 6, 2025
Vasudha Beri
May 6, 2025
Ishwarachandra B G
November 30, 2024