Authors
Claim
ಅಖಿಲೇಶ್ ಯಾದವ್ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡಿದ್ದಾರೆ
Fact
ಅಖಿಲೇಶ್ ಯಾದವ್ ಅವರು ಪವಿತ್ರ ಸ್ನಾನ ಮಾಡುತ್ತಿರುವ ವೈರಲ್ ಚಿತ್ರಗಳು ಮಹಾ ಕುಂಭಮೇಳದ್ದಲ್ಲ. ಹರಿದ್ವಾರದ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದರು
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಗಂಗಾ ನದಿಯಲ್ಲಿ ಸ್ನಾನ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಅಖಿಲೇಶ್ ಯಾದವ್ ಸ್ನಾನ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಈ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ.

ಈ ಫೋಟೋಗಳಲ್ಲಿ ಅಖಿಲೇಶ್ ಯಾದವ್ ನದಿಯಲ್ಲಿ ಸ್ನಾನ ಮಾಡುತ್ತಿರುವುದನ್ನು ಕಾಣಬಹುದು. ” ಎಂಥ ಅವಸ್ಥೆ ಮಾರಾಯ ನಿನ್ನದು. ಅಲ್ಪಸಖ್ಯಾತರು ಸಿಟ್ಟಾಗ್ರಾರೆ ಅಂತಾ ಯಾರೂ ಇಲ್ಲದಿರುವಾಗ ಈ ತರ ಕಳ್ಳನ ಹಾಗೆ ಕುಂಭಮೇಳದ ಶಾಹೀ ಸ್ನಾನಕ್ಕೆ ಬಂದ್ರೆ ಯಾರಿಗೂ ಗೊತ್ತಾಗಲ್ಲ ಅಂತ ಅನ್ಕೊಂಡಿದಿಯಾ ಅಖಿಲಾ” ಎಂದು ಹೇಳಿಕೆಯಲ್ಲಿ ಬರೆಯಲಾಗಿದೆ.
Also Read ಮಲ್ಲಿಕಾರ್ಜುನ ಖರ್ಗೆಯವರನ್ನು ರಾಹುಲ್ ಗಾಂಧಿ ಕುರ್ಚಿಯಿಂದ ಎಬ್ಬಿಸಿ ಅವಮಾನ ಮಾಡಿದ್ದಾರೆಯೇ?
ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ, ಇಲ್ಲಿ ನೋಡಬಹುದು


Fact Check/Verification
ವೈರಲ್ ಚಿತ್ರಗಳನ್ನು ತನಿಖೆ ಮಾಡಲು ನ್ಯೂಸ್ಚೆಕರ್ ಮೊದಲು ಅಖಿಲೇಶ್ ಯಾದವ್ ಅವರ ಅಧಿಕೃತ ಎಕ್ಸ್ ಖಾತೆಯನ್ನು ಪರಿಶೀಲನೆ ಮಾಡಿದೆ. ಈ ವೇಳೆ ಈ ಫೋಟೋಗಳನ್ನು ಅವರ ಖಾತೆಯಲ್ಲಿ ನೋಡಿದ್ದೇವೆ, ಅವುಗಳನ್ನು 14 ಜನವರಿ 2025 ರಂದು ಪೋಸ್ಟ್ ಮಾಡಲಾಗಿದೆ. ಮಕರ ಸಂಕ್ರಾಂತಿಯ ಹಬ್ಬದಂದು ಗಂಗಾ ಮಾತೆಯ ಆಶೀರ್ವಾದವನ್ನು ಪಡೆದಿದ್ದೇನೆ ಎಂದು ಅವರು ಪೋಸ್ಟ್ ನಲ್ಲಿ ಬರೆದಿದ್ದಾರೆ.
ಮರುದಿನ, ಜನವರಿ 15 ರಂದು, ಅವರು ತಮ್ಮ ಚಿಕ್ಕಪ್ಪ ರಾಜ್ಪಾಲ್ ಯಾದವ್ ಅವರ ಚಿತಾಭಸ್ಮವನ್ನು ಹರಿದ್ವಾರದಲ್ಲಿ ವಿಸರ್ಜಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಜನವರಿ 14, 2025 ರಂದು ದೈನಿಕ್ ಭಾಸ್ಕರ್ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ನಾವು ನೋಡಿದ್ದೇವೆ. ಇಲ್ಲೂ ವರದಿಯಲ್ಲಿ ವೈರಲ್ ಚಿತ್ರಗಳನ್ನು ಕಾಣಬಹುದು. ವರದಿಯ ಪ್ರಕಾರ, ಅಖಿಲೇಶ್ ಯಾದವ್ ಜನವರಿ 14, 2025ರ ಸಂಜೆ ಇಂಡಿಗೊ ವಿಮಾನದಲ್ಲಿ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ನಂತರ, ಅವರು ಹರಿದ್ವಾರಕ್ಕೆ ಹೋದರು ಮತ್ತು ಅದೇ ದಿನ ಗಂಗಾ ಸ್ನಾನ ಮಾಡಿದರು. ಮರುದಿನ, ಅವರ ಚಿಕ್ಕಪ್ಪ ರಾಜ್ಪಾಲ್ ಯಾದವ್ ಅವರ ಚಿತಾಭಸ್ಮವನ್ನು ನಮಾಮಿ ಗಂಗೆ ಘಾಟ್ ನಲ್ಲಿ ವಿಸರ್ಜಿಸಲಾಯಿತು.

ತನಿಖೆಯಲ್ಲಿ, ಜನವರಿ 15, 2025ರಂದು ಅಮರ್ ಉಜಾಲಾ ವೆಬ್ಸೈಟ್ನಲ್ಲಿ ಪ್ರಕಟವಾದ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ, ಅದರಲ್ಲಿ ಅಖಿಲೇಶ್ ಜನವರಿ 14ರ ರಾತ್ರಿ ಉತ್ತರಾಖಂಡವನ್ನು ತಲುಪಿದ್ದಾರೆ ಎಂದು ತಿಳಿಸಲಾಗಿದೆ. ಸಂಜೆ ತಡವಾಗಿ ಜಾಲಿ ಗ್ರಾಂಟ್ ವಿಮಾನ ನಿಲ್ದಾಣವನ್ನು ತಲುಪಿದ ನಂತರ, ಅವರು ನೇರವಾಗಿ ಹರಿದ್ವಾರಕ್ಕೆ ಹೋಗಿ ಅಲ್ಲಿ ಗಂಗಾದಲ್ಲಿ ಸ್ನಾನ ಮಾಡಿದರು. ಮರುದಿನ, ಅವರು ತಮ್ಮ ಕುಟುಂಬದೊಂದಿಗೆ ನಮಾಮಿ ಗಂಗೆ ಘಾಟ್ನಲ್ಲಿ ತಮ್ಮ ಚಿಕ್ಕಪ್ಪನಿಗೆ ಗೌರವ ಸಲ್ಲಿಸಿದರು ಮತ್ತು ಅವರ ಚಿತಾಭಸ್ಮವನ್ನು ಗಂಗಾದಲ್ಲಿ ವಿಸರ್ಜಿಸಿದರು ಎಂದಿದೆ.

ಈ ಲೇಖನವನ್ನು ಸಿದ್ಧಪಡಿಸುವಲ್ಲಿವರೆಗೆ, ಅಖಿಲೇಶ್ ಯಾದವ್ ಮಹಾಕುಂಭಮೇಳದಲ್ಲಿ ಸ್ನಾನ ಮಾಡಿದ್ದಾರೆ ಎನ್ನಲಾದ ಯಾವುದೇ ವರದಿ ನಮಗೆ ಲಭ್ಯವಾಗಿಲ್ಲ.
Conclusion
ಅಖಿಲೇಶ್ ಯಾದವ್ ಅವರು ಪವಿತ್ರ ಸ್ನಾನ ಮಾಡುತ್ತಿರುವ ವೈರಲ್ ಚಿತ್ರಗಳು ಮಹಾ ಕುಂಭಮೇಳದ್ದಲ್ಲ. ಹರಿದ್ವಾರದ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದರು ಎಂದು ತನಿಖೆ ವೇಳೆ ದೊರೆತ ಸಾಕ್ಷ್ಯಗಳಿಂದ ಸ್ಪಷ್ಟವಾಗಿದೆ.
Also Read: ಲಾಸ್ ಏಂಜಲೀಸ್ ನಲ್ಲಿ ಜನರು ಮೈದಾನದಲ್ಲೇ ಮಲಗಿದ್ದಾರೆಯೇ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?
Result: False
Our Sources
X post By Akhilesh Yadav, Dated 14th Jan 2025
X post By Akhilesh Yadav, Dated 15th Jan 2025
Article Published by Dainik Bhaskar Dated: January 14th, 2025
Article Published by Amar Ujala Dated: January 15th, 2025
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.