Fact Check: ಸುವರ್ಣಗಡ್ಡೆ ತಿನ್ನುವುದರಿಂದ ಅಲರ್ಜಿ ದೂರವಾಗುತ್ತದೆ ಎನ್ನುವ ಹೇಳಿಕೆ ಸತ್ಯವೇ?

ಸುವರ್ಣಗಡ್ಡೆ, ಅಲರ್ಜಿ

Claim
ಸುವರ್ಣಗಡ್ಡೆ ತಿನ್ನುವುದರಿಂದ ಅಲರ್ಜಿ ದೂರವಾಗುತ್ತದೆ

Fact
ಸುವರ್ಣಗಡ್ಡೆ ತಿನ್ನುವುದರಿಂದ ಅಲರ್ಜಿ ದೂರವಾಗುತ್ತದೆ ಎನ್ನುವುದಕ್ಕೆ ಪೂರಕ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ

ಸುವರ್ಣಗಡ್ಡೆ ತಿನ್ನುವುದರಿಂದ ಅಲರ್ಜಿ ದೂರ ಮಾಡಬಹುದು ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.  ಇನ್‌ಸ್ಟಾ ಗ್ರಾಂನಲ್ಲಿರುವ ಹೇಳಿಕೆಯಲ್ಲಿ “ಸುವರ್ಣಗಡ್ಡೆ (60% ಹಸಿನಾರು)ತಿಂದಲೆ ಅಲರ್ಜಿ ದೂರವಾಗುತ್ತದೆ” ಎಂದಿದೆ. 

Fact Check: ಸುವರ್ಣಗಡ್ಡೆ ತಿನ್ನುವುದರಿಂದ ಅಲರ್ಜಿ ದೂರವಾಗುತ್ತದೆ ಎನ್ನುವುದು ನಿಜವೇ?
ಇನ್‌ಸ್ಟಾಗ್ರಾಂನಲ್ಲಿ ಕಂಡುಬಂದ ಹೇಳಿಕೆ

ಇದರ ಬಗ್ಗೆ ನಾವು ಸತ್ಯಶೋಧನೆಯನ್ನು ನಡೆಸಿದ್ದು, ಇದು ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ. 

Also Read: ಒಣದ್ರಾಕ್ಷಿ ನೀರು ಕುಡಿಯುವುದರಿಂದ ರಕ್ತ ಶುದ್ಧವಾಗುತ್ತದೆಯೇ?

Fact Check/ Verification

ಅಲರ್ಜಿ ಎಂದರೇನು?

ಅಲರ್ಜಿಗಳು ಪರಾಗ ಅಥವಾ ಕೆಲವು ಆಹಾರಗಳಂತಹ ನಿರುಪದ್ರವ ಪದಾರ್ಥಗಳಿಗೆ ಉತ್ಪ್ರೇಕ್ಷಿತ ರಕ್ಷಣಾ ಪ್ರತಿಕ್ರಿಯೆಗಳಾಗಿವೆ. ಅಲರ್ಜಿ ಇರುವವರಿಗೆ ಇದರಿಂದ ದೇಹದ ವಿವಿಧ ಭಾಗಗಳಲ್ಲಿ ಉರಿಯೂತ ಆಗಬಹುದು. ಇದು ಅತಿ ಕಡಿಮೆ ಅಥವಾ ಅತಿ ಹೆಚ್ಚೂ ಇರಬಹುದು. ಅಲರ್ಜಿಗಳಿಗೆ ಸಾಮಾನ್ಯವಾಗಿ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ಔಷಧಗಳು ಮತ್ತು ಅಲರ್ಜಿ ತಪ್ಪಿಸುವಿಕೆಯಂತಹ ಚಿಕಿತ್ಸೆಗಳು ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

ಸುವರ್ಣ ಗಡ್ಡೆ ಪ್ರಯೋಜನಕಾರಿಯೇ?

ಅಮಾರ್ಫೋಫಾಲಸ್ ಪಯೋನಿಫೋಲಿಯಸ್ ಎನ್ನುವುದು ಸುವರ್ಣ ಗಡ್ಡೆಯ ವೈಜ್ಞಾನಿಕ ಹೆಸರು. ಆಗ್ನೇಯ ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿನ ತರಕಾರಿ ಬೆಳೆ ಇದಾಗಿದೆ. ಇದು ಅರೇಸಿ ಕುಟುಂಬಕ್ಕೆ ಸೇರಿದ್ದು, ಇದು ಟ್ಯಾರೋ ಮತ್ತು ಪೀಸ್ ಲಿಲ್ಲಿಗಳಂತಹ ಇತರ ಪರಿಚಿತ ಸಸ್ಯಗಳನ್ನು ಒಳಗೊಂಡಿದೆ. ಸುವರ್ಣ ಗಡ್ಡೆಗೆ ಇಂಗ್ಲಿಷ್‌ನಲ್ಲಿ ಎಲಿಫೆಂಟ್ ಫೂಟ್ ಯಾಮ್‌ ಎಂಬ ಹೆಸರಿದ್ದು, ಅದರ ಆಕಾರ ಮತ್ತು ಪಾದದ ರೀತಿ ಇರುವುದರಿಂದ ಈ ಹೆಸರು ಬಂದಿದೆ.

ಸುವರ್ಣಗಡ್ಡೆ ಒಂದು ಖಾದ್ಯದ ತರಕಾರಿಯಾಗಿದ್ದು, ಅನೇಕ ಉಷ್ಣವಲಯದ ಪ್ರದೇಶಗಳಲ್ಲಿ ಪ್ರಧಾನ ಆಹಾರ. ಇದು ಕಾರ್ಬೋಹೈಡ್ರೇಟ್‌ಗಳು ಮತ್ತು ಇತರ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದನ್ನು ಅಡುಗೆಯೊಂದಿಗೆ ಸಾಂಪ್ರದಾಯಿಕ ಔಷಧಗಳಲ್ಲಿ ವಿಶೇಷವಾಗಿ ಜೀರ್ಣ ಸಂಬಂಧಿ ಚಿಕಿತ್ಸೆ ನೀಡಲು ಮತ್ತು ಆಹಾರದಲ್ಲಿ ನಾರಿನಂಶದ ಮೂಲವಾಗಿ ವಿವಿಧ ಉದ್ದೇಶದಲ್ಲಿ ಬಳಸಲಾಗುತ್ತದೆ.

ಸುವರ್ಣಗಡ್ಡೆ ತಿನ್ನುವುದು ಅಲರ್ಜಿಯನ್ನು ದೂರ ಮಾಡುತ್ತದೆಯೇ?

ಸುವರ್ಣಗಡ್ಡೆ ತಿನ್ನುವುದು ಅಲರ್ಜಿಯನ್ನು ತೊಡೆದುಹಾಕಲು ನೇರವಾಗಿ ಸಹಾಯ ಮಾಡುತ್ತದೆ ಎಂಬುದಕ್ಕೆ ಸೀಮಿತ ವೈಜ್ಞಾನಿಕ ಪುರಾವೆಗಳಷ್ಟೇ ಇದೆ.  ಸುವರ್ಣ ಗಡ್ಡೆ ನಾರಿನಂಶ ಮತ್ತು ಉತ್ಕರ್ಷಣ ನಿರೋಧಕಗಳಂತಹ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ವಿವಿಧ ಪೋಷಕಾಂಶಗಳು ಮತ್ತು ಸಂಯುಕ್ತಗಳನ್ನು ಹೊಂದಿದ್ದರೂ, ಅಲರ್ಜಿಯ ಚಿಕಿತ್ಸೆಯಲ್ಲಿ ಅದರ ಪರಿಣಾಮಕಾರಿತ್ವವನ್ನು ಸೂಚಿಸುವ ಯಾವುದೇ ನಿರ್ದಿಷ್ಟ ಸಂಶೋಧನೆಗಳಿಲ್ಲ.

ಪೆಥಾಲಜಿಸ್ಟ್ ಮತ್ತು ಕೈಗಾರಿಕಾ ಆರೋಗ್ಯ ಸಲಹೆಗಾರರಾಗಿರುವ ಡಾ. ಶಾಲಿನ್ ನಾಗೋರಿ ಅವರು ಹೇಳುವ ಪ್ರಕಾರ, ಸುರನ್‌ ಎಂದು ಕರೆಯಲಾಗುವ ಸುವರ್ಣಗಡ್ಡೆ ಔಷಧೀಯ ಗುಣಗಳನ್ನು ಹೊಂದಿದೆ ಎಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ. ಆದರೆ ಅಲರ್ಜಿ ನಿರ್ವಹಣೆಯಲ್ಲಿ ಅದರ ಪರಿಣಾಮಕಾರಿತ್ವವನ್ನು ಬೆಂಬಲಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಅಲರ್ಜಿಗಳಲ್ಲಿ ಹಲವು ವಿಧಗಳಿದ್ದು ವೈದ್ಯರು ಅವನ/ಅವಳ ರೋಗಿಗೆ ಶಿಫಾರಸು ಮಾಡುಲು ವಿವಿಧ ಔಷಧಗಳಿವೆ. ಆದ್ದರಿಂದ ಅಲರ್ಜಿ ಚಿಕಿತ್ಸೆಗಾಗಿ ಸುವರ್ಣಗಡ್ಡೆಯನ್ನು ಮಾತ್ರ ಅವಲಂಬಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

Also Read: ತಲೆದಿಂಬು ಇಲ್ಲದೆ ಮಲಗುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆಯೇ?

Conclusion

ಈ ಸತ್ಯಶೋಧನೆಯ ಪ್ರಕಾರ,  ಸುವರ್ಣಗಡ್ಡೆ ತಿನ್ನುವುದರಿಂದ ಅಲರ್ಜಿ ದೂರ ಮಾಡಬಹುದು ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಆದ್ದರಿಂದ ಈ ಹೇಳಿಕೆ ತಪ್ಪಾಗಿದೆ.

Result: False

Our Sources
Clinical research for food allergy treatment

CROP:ELEPHANT FOOT YAM

Identification of a thermal stable allergen in yam (Dioscorea opposita) to cause anaphylaxis

(This article has been published in collaboration with THIP Media)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.