Authors
Claim
ಮಲ್ಲಿಕಾರ್ಜುನ ಖರ್ಗೆಯವರನ್ನು ರಾಹುಲ್ ಗಾಂಧಿ ಕುರ್ಚಿಯಿಂದ ಎಬ್ಬಿಸಿ ಅವಮಾನ ಮಾಡಿದ್ದಾರೆ
Fact
ಕ್ಲಿಪ್ಡ್ ವೀಡಿಯೋ ಬಳಸಿ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಹುಲ್ ಗಾಂಧಿ ಕುರ್ಚಿಯಿಂದ ಎಬ್ಬಿಸಿ ಅವಮಾನ ಮಾಡಿದ್ದಾರೆ ಎಂದು ಹೇಳಲಾಗಿದೆ. ಇದು ತಪ್ಪಾದ ಸಂದರ್ಭವಾಗಿದೆ
ಮಲ್ಲಿಕಾರ್ಜುನ ಖರ್ಗೆಯವರನ್ನು ರಾಹುಲ್ ಗಾಂಧಿ ಕುರ್ಚಿಯಿಂದ ಎಬ್ಬಿಸಿ ಅವಮಾನ ಮಾಡಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಖರ್ಗೆ ಸಾಹೇಬರನ್ನು ರಾಹುಲ್ ಸಾಹೇಬರು ಖುರ್ಚಿಯಿಂದ ಎಬ್ಬಿಸುವಾಗ, ಡಿಸಿ ಸಾಹೇಬರನ್ನು ಸಿದ್ಧರಾಮಯ್ಯ ಸಾಹೇಬರು ಖುರ್ಚಿಯಿಂದ ಎಬ್ಬಿಸಿದ ಘಟನೆ ನೆನಪಾಯಿತು.” ಎಂದಿದೆ.
Also Read: ಲಾಸ್ ಏಂಜಲೀಸ್ ನಲ್ಲಿ ಜನರು ಮೈದಾನದಲ್ಲೇ ಮಲಗಿದ್ದಾರೆಯೇ, ವೈರಲ್ ವೀಡಿಯೋ ಹಿಂದಿನ ಸತ್ಯ ಏನು?

ಇದರ ಸತ್ಯಶೋಧನೆ ನಡೆಸಿದಾಗ ತಪ್ಪು ಹೇಳಿಕೆಯೊಂದಿಗೆ ಕ್ಲಿಪ್ಡ್ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಗೊತ್ತಾಗಿದೆ.
Fact Check/Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.
ಈ ವೇಳೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ಒಂದು ಲಭ್ಯವಾಗಿದೆ. ಜನವರಿ 17, 2025ರಂದು ಇಂಡಿಯನ್ ಯೂತ್ ಕಾಂಗ್ರೆಸ್ ಈ ಪೋಸ್ಟ್ ಮಾಡಿದ್ದು, “ಇದು ಕಾಂಗ್ರೆಸ್ ಸಂಸ್ಕೃತಿ!! ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಮತ್ತು ವಿರೋಧ ಪಕ್ಷದ ನಾಯಕ ಶ್ರೀ @ rahulgandhi ಜೀ ನಡುವಿನ ಸಂಬಂಧವು ಪದಗಳಿಗೆ ಮೀರಿದೆ! ಇಂದಿರಾ ಭವನ ಹೊಸದಿಲ್ಲಿ” ಎಂದು ಬರೆಯಲಾಗಿದೆ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಹಾಯ ಮಾಡುವ ಮೂಲಕ ಗೌರವ ಪೂರ್ವಕವಾಗಿ ನಡೆದುಕೊಂಡಿದ್ದಾರೆ ಎನ್ನುವ ಅರ್ಥದಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.

ಹೊಸದಿಲ್ಲಿಯಲ್ಲಿ ಇತ್ತೀಚೆಗೆ ನಡೆದ ಇಂದಿರಾ ಭವನದ ಉದ್ಘಾಟನೆಯ ಸಂದರ್ಭದ ಈ ವೀಡಿಯೋವನ್ನು ನಾವು ಬಳಿಕ ಯೂಟ್ಯೂಬ್ ನಲ್ಲಿ ಹುಡುಕಿದ್ದೇವೆ.
ಜನವರಿ 15, 2025ರಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಯೂಟ್ಯೂಬ್ ಚಾನೆಲ್ ನಲ್ಲಿ LIVE: Inauguration of Indira Bhawan, the new AICC HQ | Delhi ಶೀರ್ಷಿಕೆಯಡಿ ಹಂಚಿಕೊಂಡ ವೀಡಿಯೋಲ್ಲಿ ಇಂದಿರಾ ಭವನ ಉದ್ಘಾಟನೆ ವೇಳೆ ರಾಹುಲ್ ಗಾಂಧಿಯವರು ಸಭೆಯನ್ನುದ್ದೇಶಿಸಿ ಮಾತನಾಡಿದ ಬಳಿಕ ಖರ್ಗೆಯವರನ್ನು ಮಾತನಾಡಲು ಆಹ್ವಾನಿಸಲಾಗುತ್ತದೆ. ಈ ವೇಳೆ (46.45ನೇ ನಿಮಿಷದಲ್ಲಿ) ರಾಹುಲ್ ಗಾಂಧಿಯವರು ಖರ್ಗೆಯವರು ಕುರ್ಚಿಯಿಂದ ಏಳಲು ಸಹಾಯ ಮಾಡುತ್ತಿರುವ ದೃಶ್ಯವನ್ನು ನೋಡಿದ್ದೇವೆ.

ರಾಹುಲ್ ಅವರು ಕುರ್ಚಿಯನ್ನು ತುಸು ಹಿಂದಕ್ಕೆ ಎಳೆದ ನಂತರ (46.48 ನಿಮಿಷ)ದಲ್ಲಿ ಖರ್ಗೆಯವರು ಎದ್ದು ಮಾತನಾಡಲು ತೆರಳುತ್ತಾರೆ. ಆ ಬಳಿಕ ರಾಹುಲ್ ಅವರು ಖರ್ಗೆಯವರು ಕುಳಿತಿದ್ದ ಪಕ್ಕದ ಚೇರಿನಲ್ಲಿ ಆಸೀನರಾಗಿರುವುದು (47.32 ನಿಮಿಷ) ಕಂಡುಬಂದಿದೆ.

ಮೂಲ ವೀಡಿಯೋದಲ್ಲಿ ರಾಹುಲ್ ಅವರು ಗೌರವ ಪೂರ್ವಕವಾಗಿ ನಡೆದುಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಪೂರ್ಣ ವೀಡಿಯೋವನ್ನು ಇಲ್ಲಿ ನೋಡಬಹುದು.
Conclusion
ಸತ್ಯಶೋಧನೆಯ ಪ್ರಕಾರ, ಇಂದಿರಾ ಭವನ ಉದ್ಘಾಟನೆ ವೇಳೆ ರಾಹುಲ್ ಗಾಂಧಿಯವರು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಗೌರವ ಪೂರ್ವಕವಾಗಿ ನಡೆದುಕೊಂಡಿದ್ದಾರೆ ಎಂದು ಕಂಡುಕೊಂಡಿದ್ದೇವೆ. ಕ್ಲಿಪ್ಡ್ ವೀಡಿಯೋ ಬಳಸಿ ಖರ್ಗೆ ಸಾಹೇಬರನ್ನು ರಾಹುಲ್ ಸಾಹೇಬರು ಖುರ್ಚಿಯಿಂದ ಎಬ್ಬಿಸಿದ್ದಾರೆ ಎಂದು ಹೇಳುವುದು ತಪ್ಪಾದ ಸಂದರ್ಭವಾಗಿದೆ.
Result: Missing Context
Our Sources
Instagram Post By Indian Youth Congress, Dated: January 17, 2025
YouTube Post By Indian National Congress, Dated: January 15, 2025
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.