Authors
Claim
ಮಹಾ ಕುಂಭಮೇಳದಲ್ಲಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ವಾಟ್ಸಾಪ್ ನಲ್ಲಿ ಕಂಡುಬಂದ ಈ ಹೇಳಿಕೆಯಲ್ಲಿ, ತೇಜಸ್ವಿ ಮಾತನಾಡಿದ್ದಾರೆ ಎನ್ನಲಾಗಿದೆ.

ಇದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆ ಎಂದು ಕಂಡುಬಂದಿದೆ.
Fact
ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ಲೆನ್ಸ್ ಮೂಲಕ ಹುಡುಕಾಟ ನಡೆಸಿದ್ದೇವೆ.
ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿದ್ದು, ಇದರಲ್ಲಿ ಪರಮಾರ್ಥ ನಿಕೇತನ್ ಯೂಟ್ಯೂಬ್ ಚಾನೆಲ್ ಪ್ರಕಟಿಸಿರುವ, ವೈರಲ್ ವೀಡಿಯೋದ ದೃಶ್ಯಾವಳಿಯನ್ನು ಹೋಲುವ ವೀಡಿಯೋ ಪತ್ತೆಯಾಗಿದೆ. ಈ ವೀಡಿಯೋದಲ್ಲಿ ಗಂಗಾ ಆರತಿ ಬುದ್ಧ ಪೂರ್ಣಿಮೆ 18 ಮೇ 2019 ಎಂಬ ಶೀರ್ಷಿಕೆ ಇದೆ. ಇದರಲ್ಲಿರುವ ಸಂತ ಮತ್ತು ತೇಜಸ್ವಿ ಸೂರ್ಯ ಅವರು ಮಾತನಾಡುತ್ತಿರುವಾಗ ಕುಳಿತಿರುವ ಸಂತರು (ಸ್ವಾಮಿ ಚಿದಾನಂದ ಸರಸ್ವತಿ) ಒಬ್ಬರೇ ಆಗಿದ್ದಾರೆ ಎನ್ನುವುದನ್ನು ನಾವು ನೋಡಿದ್ದೇವೆ.
ಇದರನ್ವಯ ನಾವು ಯೂಟ್ಯೂಬ್ ನಲ್ಲಿ ಇನ್ನಷ್ಟು ಶೋಧ ನಡೆಸಿದ್ದೇವೆ. ಈ ವೇಳೆ ಪರಮಾರ್ಥ ನಿಕೇತನದ ಚಾನೆಲ್ ಪ್ರಕಟಿಸಿದ, ಜುಲೈ 3, 2019ರ ತೇಜಸ್ವಿ ಸೂರ್ಯ ಅವರು ಮಾತನಾಡುತ್ತಿರುವ ವೀಡಿಯೋ ಲಭ್ಯವಾಗಿದೆ. 3.46 ಸೆಕೆಂಡ್ ಗಳ ಇದೇ ವೀಡಿಯೋವನ್ನು ಕುಂಭಮೇಳದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂಬುದು ಖಚಿತವಾಗಿದೆ.
ನಾವು ಇನ್ನಷ್ಟು ಶೋಧ ನಡೆಸಿದಾಗ ತೇಜಸ್ವಿ ಸೂರ್ಯ ಅವರೂ ಜುಲೈ 8, 2019ರಂದು ಎಕ್ಸ್ ನಲ್ಲಿ ಮಾಡಿರುವ ಪೋಸ್ಟ್ ಕಂಡುಬಂದಿದೆ. ಇದರಲ್ಲಿ ಅವರು “ತಾಯಿ ಗಂಗಾ ಅನೇಕ ವಿಧಗಳಲ್ಲಿ ಹಿಂದೂ ನಾಗರಿಕತೆಯ ಆದರ್ಶ ಸಂಕೇತವಾಗಿದೆ – ದೀರ್ಘಕಾಲಿಕ ಮತ್ತು ಯಾವಾಗಲೂ ಯೌವನಿಕೆಯದ್ದಾಗಿದೆ. ಪರಮಾರ್ಥ ನಿಕೇತನ, ಹೃಷಿಕೇಶಕ್ಕೆ ಭೇಟಿ ನೀಡಲು ಮತ್ತು ಸ್ವಾಮಿ ಜಿಯವರ ನೇತೃತ್ವದಲ್ಲಿ ಅವರು ಮಾಡುತ್ತಿರುವ ಸ್ಫೂರ್ತಿದಾಯಕ ಕೆಲಸವನ್ನು ನೋಡಲು ನನಗೆ ಅವಕಾಶವೊಂದು ಸಿಕ್ಕಿತು. ಈ ಸಂದರ್ಭದಲ್ಲಿ ನನ್ನ ಭಾಷಣ” ಎಂದು ಪರಮಾರ್ಥ ನಿಕೇತನದ ಯೂಟ್ಯೂಬ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಅನ್ನು ಇಲ್ಲಿ ನೋಡಬಹುದು.
ಆ ನಂತರ ನಾವು ಋಷಿಕೇಶದಲ್ಲಿರುವ ಪರಮಾರ್ಥ ನಿಕೇತನ ಆಶ್ರಮದ ವೆಬ್‌ಸೈಟ್ ಅನ್ನು ನೋಡಿದ್ದೇವೆ. ಇದರಲ್ಲಿ ಪವಿತ್ರ ಗಂಗಾ ಆರತಿ ಮತ್ತು ಯಜ್ಞ ಧಾರ್ಮಿಕ ಕಾರ್‍ಯಕ್ರಮದ ಬಗ್ಗೆ ವಿವರಗಳಿದ್ದು ಗಂಗಾ ಆರತಿಯು ಪ್ರತಿದಿನ ಸೂರ್ಯಾಸ್ತದ ಸಮಯದಲ್ಲಿ ಮಾಡಲಾಗುತ್ತದೆ ಎಂಬುದನ್ನು ಗಮನಿಸಿದ್ದೇವೆ.
ಈ ಸಾಕ್ಷ್ಯಾಧಾರಗಳ ಪ್ರಕಾರ, ಮಹಾಕುಂಭಮೇಳದಲ್ಲಿ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ ಎಂಬ ಹೇಳಿಕೆ ತಪ್ಪಾಗಿದೆ ಎಂದು ಕಂಡುಕೊಂಡಿದ್ದೇವೆ. 2019ರಲ್ಲಿ ಋಷಿಕೇಶಷ ಪರಮಾರ್ಥ ನಿಕೇತನದಲ್ಲಿ ನಡೆದ ಗಂಗಾರತಿ ಸಮಯದಲ್ಲಿ ತೇಜಸ್ವಿ ಅವರು ಮಾತನಾಡಿದ ವೀಡಿಯೋವನ್ನು ಈಗ ನಡೆಯುತ್ತಿರುವ ಪ್ರಯಾಗ್ ರಾಜ್ ಮಹಾಕುಂಭ ಮೇಳದ್ದೆಂದು ಹಂಚಿಕೊಳ್ಳಲಾಗುತ್ತಿದೆ.
Also Read: ಕಾಡ್ಗಿಚ್ಚಿಗೆ ಅಮೆರಿಕದ ಲಾಸ್ ಏಂಜಲೀಸ್ ನಗರ ಸಂಪೂರ್ಣ ಸುಟ್ಟು ಕರಕಲಾಗಿದೆ ಎನ್ನುವುದು ನಿಜವಲ್ಲ!
Result: False
Our Sources
YouTube video by Paramarth Niketan, Dated: July 3, 2019
X post By Tejasvi Surya, Dated: July 8, 2019
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.