Authors
Claim
ಒತ್ತೆಯಾಳುಗಳಾಗಿದ್ದ ಹಿಂದೂ ಯುವತಿಯರನ್ನು ವ್ಯಕ್ತಿಯೊಬ್ಬ ರಕ್ಷಿಸುತ್ತಿರುವ ವೀಡಿಯೋ
Fact
ಅನ್ಯ ಸಮುದಾಯದವರು ವಂಚಿಸಿ ಒತ್ತೆಯಾಳಾಗಿರಿಸಿದ ಹಿಂದೂ ಹುಡುಗಿಯರನ್ನು ವ್ಯಕ್ತಿಯೊಬ್ಬ ರಕ್ಷಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೋ ಸ್ಕ್ರಿಪ್ಟೆಡ್ ಆಗಿದೆ
ಮನೆಯೊಂದರಲ್ಲಿ ಒತ್ತೆಯಾಳುಗಳಾಗಿದ್ದ ಹಿಂದೂ ಯುವತಿಯರನ್ನು ವ್ಯಕ್ತಿಯೊಬ್ಬ ರಕ್ಷಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೇಸ್‌ಬುಕ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ,“ದೆಹಲಿಯಲ್ಲಿ, ವಿದೇಶಿ ಕಾಲ್ ಸೆಂಟರ್‌ನಲ್ಲಿ ಉದ್ಯೋಗ ನಿಯೋಜನೆಯ ಹೆಸರಿನಲ್ಲಿ, ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕೆಲವರು ಉದ್ಯೋಗ ಸಲಹಾ ಸಂಸ್ಥೆಯನ್ನು ನಡೆಸುತ್ತಾರೆ, ಅವರು ಉದ್ಯೋಗದ ನೆಪದಲ್ಲಿ ಹಿಂದೂ ಹುಡುಗಿಯರು ಮತ್ತು ಮಹಿಳೆಯರನ್ನು ಮಾತ್ರ ಕರೆದು ಅವರೆಲ್ಲರನ್ನೂ ಅರಬ್ ದೇಶಗಳಿಗೆ ಮಾರಾಟ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಹಿಂದೂ ಸಮಾಜದ ಹೆಣ್ಣುಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯ ಅಮಲಿನಲ್ಲಿದ್ದಾರೆ, ಅದರಿಂದಾಗಿ ಇಂದು ದೆಹಲಿಯ ಯುವಕನೊಬ್ಬ 3 ಹುಡುಗಿಯರನ್ನು ಮಾರಾಟ ಮಾಡಲು ತಯಾರಿ ಮಾಡಿದ್ದ!! ಈ ಹುಡುಗಿಯರು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ನೋಡಿ. ಈ ವಿಡಿಯೋವನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಹುಚ್ಚು ಹೊಂದಿರುವ ಎಲ್ಲಾ ಹಿಂದೂ ಹುಡುಗಿಯರೊಂದಿಗೆ ಹಂಚಿಕೊಳ್ಳಿ ಮತ್ತು ಈ ರೀತಿಯ ಎಷ್ಟೋ ತೋಳಗಳು ಜಾಲದಲ್ಲಿ ಸಿಕ್ಕಿಹಾಕಿಕೊಳ್ಳಬಹುದು.” ಎಂದಿದೆ.

ಈ ವೀಡಿಯೋ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ವೀಡಿಯೋ ಸ್ಕ್ರಿಪ್ಟೆಡ್ ಆಗಿದೆ, ನಿಜವಾದ ಘಟನೆಯದ್ದಲ್ಲ ಎಂದು ಕಂಡುಕೊಂಡಿದ್ದೇವೆ.
Fact Check/Verification
ವೈರಲ್ ತುಣುಕನ್ನು ಎಚ್ಚರಿಕೆಯಿಂದ ವಿಶ್ಲೇಷಿಸಿದಾಗ, ವೀಡಿಯೋ ಮನರಂಜನೆಯ ಉದ್ದೇಶಕ್ಕಾಗಿ ಮಾತ್ರ ಎಂದು ಸ್ಪಷ್ಟಪಡಿಸುವ ಸುಮಾರು 22 ಸೆಕೆಂಡುಗಳ ಹಕ್ಕು ನಿರಾಕರಣೆಯನ್ನು ನಾವು ಕಂಡುಕೊಂಡಿದ್ದೇವೆ, ಇದರಲ್ಲಿ “ಈ ವೀಡಿಯೋ ಮನರಂಜನೆಯ ಉದ್ದೇಶದ್ದು” ಎಂಬ ವಾಕ್ಯವನ್ನೂ ಗಮನಿಸಿದ್ದೇವೆ.

ಅನಂತರ ನಾವು ಗೂಗಲ್ ಲೆನ್ಸ್ನಲ್ಲಿ ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಸರ್ಚ್ ಮಾಡಿದ್ದೇವೆ. ಹುಡುಕಿದೆವು, ಅದು ಫೆಬ್ರವರಿ 12, 2023 ರ @NaveenJangra ರ ಯೂಟ್ಯೂಬ್ ಪೋಸ್ಟ್ಗೆ ನಮ್ಮನ್ನು ಕರೆದೊಯ್ದಿದೆ. ‘ಲವ್ ಜಿಹಾದ್’ ಪಿತೂರಿ ಎಂದು ಆರೋಪಿಸಿ ಹಂಚಿಕೊಳ್ಳಲಾದ ಅದೇ ವೀಡಿಯೋಕ್ಕೆ ವೈರಲ್ ವೀಡಿಯೋ ಸಾಮ್ಯತೆ ಹೊಂದಿರುವುದನ್ನು ನಾವು ಗಮನಿಸಿದ್ದೇವೆ.
ವೈರಲ್ ವೀಡಿಯೋದಲ್ಲಿ ಇರುವಂತೆ ಮೂಲ ವೀಡಿಯೋದಲ್ಲಿಯೂ ಹಕ್ಕು ನಿರಾಕರಣೆ ಇದ್ದು ಅಲ್ಲೂ “ಮನರಂಜನೆ ಉದ್ದೇಶಕ್ಕಾಗಿ ಮಾತ್ರ” ಎಂದು ಬರೆದಿರುವುದನ್ನು ನೋಡಿದ್ದೇವೆ.

ಬಳಿಕ ನಾವು ಆ ಚಾನೆಲ್ ಅನ್ನು ವಿವರವಾಗಿ ನೋಡಿದ್ದು, ಅನೇಕ ಸ್ಕ್ರಿಪ್ಟ್ ಮಾಡಲಾದ ವೀಡಿಯೋಗಳನ್ನು ನೋಡಿದ್ದೇವೆ. ಈ ಯೂಟ್ಯೂಬ್ ಚಾನೆಲ್ 768 ಸಾವಿರ ಚಂದಾದಾರರನ್ನು ಹೊಂದಿದೆ ಮತ್ತು ಇಲ್ಲಿಯವರೆಗೆ 571 ವೀಡಿಯೊಗಳನ್ನು ಪಟ್ಟಿ ಮಾಡಿದೆ.

ಆ ಬಳಿಕ ನವೀನ್ ಜಂಗ್ರಾ ಇನ್ಸ್ಟಾಗ್ರಾಮ್ನಲ್ಲಿ “ವೀಡಿಯೋ ಕ್ರಿಯೇಟರ್” ಎಂದು ಗುರುತಿಸಿಕೊಂಡಿದ್ದಾರೆ. ಸುಮಾರು 235 ಸಾವಿರ ಅನುಯಾಯಿಗಳನ್ನು ಹೊಂದಿದ್ದಾರೆ. ಅವರ ಪ್ರೊಫೈಲ್ ಯೂಟ್ಯೂಬ್ ಚಾನೆಲ್ ಗೆ 5 ಲಕ್ಷ ಚಂದಾದಾರರಾದ್ದನ್ನು ಆಚರಿಸುವ ರೀಲ್ ಅನ್ನು ಸಹ ಒಳಗೊಂಡಿದೆ.

Conclusion
ಅನ್ಯ ಸಮುದಾಯದವರು ವಂಚಿಸಿ ಒತ್ತೆಯಾಳಾಗಿರಿಸಿದ ಹಿಂದೂ ಹುಡುಗಿಯರನ್ನು ವ್ಯಕ್ತಿಯೊಬ್ಬ ರಕ್ಷಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೋ ಸ್ಕ್ರಿಪ್ಟೆಡ್ ಆಗಿದೆ ಎಂದು ಕಂಡುಬಂದಿದೆ.
Results: False
Our Sources
YouTube Channel Of @NaveenJangra
Instagram Profile Of @officialnaveenjangra
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.