Fact Check: ಯಾದಗಿರಿಯಲ್ಲಿ ದರ್ಗಾ ನಿರ್ಮಿಸಲು ರೈತನ ಜಮೀನನ್ನು ವಕ್ಫ್ ಬೋರ್ಡ್ ಕಿತ್ತುಕೊಂಡಿದೆ ಎಂಬ ಸುಳ್ಳು ಪೋಸ್ಟ್ ವೈರಲ್

ಯಾದಗಿರಿ, ವಕ್ಫ್‌ ಬೋರ್ಡ್ ರೈತನ ಜಮೀನು ಹಕ್ಕು ಸ್ಥಾಪನೆ

Authors

Ruby leads editorial, operations and initiatives at Newschecker. In her former avatar at New Delhi Television (NDTV), India’s leading national news network, she was a news anchor, supervising producer and senior output editor. Her over a decade-long career encompasses ground-breaking reportage from conflict zones and reporting on terror incidents, election campaigns, and gender issues. Ruby is an Emmy-nominated producer and has handled both local and international assignments, including the coverage of Arab Spring in 2011, the US Presidential elections in 2016, and ground reportage on the Kashmir issue since 2009.

Claim
ಯಾದಗಿರಿ ಶಾಬಾದ್‌ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತನ ಭೂಮಿಯನ್ನು ಕಸಿದುಕೊಂಡಿದೆ

Fact
ಯಾದಗಿರಿ ಶಾಬಾದ್‌ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತನ ಭೂಮಿಯನ್ನು ಕಸಿದುಕೊಂಡಿದೆ ಎನ್ನುವುದು ಸುಳ್ಳು. ಯಾದಗಿರಿಯಲ್ಲಿ ಶಾಬಾದ್‌ ಹೆಸರಿನ ಗ್ರಾಮವಿಲ್ಲ.

ಯಾದಗಿರಿ ಜಿಲ್ಲೆಯ ಶಾಬಾದ್‌ ಗ್ರಾಮದಲ್ಲಿ ವಕ್ಫ್‌ ಬೋರ್ಡ್ ರೈತರೊಬ್ಬರ ಭೂಮಿಯನ್ನು ಕಸಿದುಕೊಂಡಿದೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಎಕ್ಸ್ ನಲ್ಲಿ ಈ ಹೇಳಿಕೆ ವೈರಲ್‌ ಆಗಿದ್ದು, “ರೈತನ ಜಮೀನಿನಲ್ಲಿ ದರ್ಗಾ ಒಂದನ್ನು ಕಟ್ಟಲಾಗಿದ್ದು, ಮಗಳ ಮದುವೆಗೆ ಆತ ಅದನ್ನು ಮಾರಾಟಕ್ಕೆ ಹೊರಟಾಗ ಅಧಿಕಾರಿಗಳು ಇದು ವಕ್ಫ್‌ ಬೋರ್ಡ್ ಗೆ ಸೇರಿದ್ದು ಮಾರಾಟ ಮಾಡುವಂತಿಲ್ಲ, ಜಾಗದ ಮೇಲೆ ಯಾವುದೇ ಹಕ್ಕು ಇಲ್ಲ” ಎಂದು ಹೇಳಿದ್ದಾಗಿ ಇದೆ.

Also Read:  ಮಹಾವಿಕಾಸ್ ಅಘಾಡಿ ವಿಜಯದ ವೇಳೆ ಶ್ರೀರಾಂಪುರದಲ್ಲಿ ಪಾಕಿಸ್ತಾನ ಧ್ವಜ ಹಾರಿಸಲಾಗಿದೆಯೇ?

Fact Check: ಯಾದಗಿರಿ ಶಾಬಾದ್‌ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತನ ಭೂಮಿಯನ್ನು ಕಸಿದುಕೊಂಡಿದೆಯೇ?
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆ

ಇದೇ ರೀತಿಯ ಹೇಳಿಕೆ ಇಲ್ಲಿ ಕಂಡುಬಂದಿದೆ.

Fact Check: ಯಾದಗಿರಿ ಶಾಬಾದ್‌ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತನ ಭೂಮಿಯನ್ನು ಕಸಿದುಕೊಂಡಿದೆಯೇ?

ಈ ಹೇಳಿಕೆಯ ಕುರಿತು ನಾವು ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ವಕ್ಫ್ ಬೋರ್ಡ್ ಇತ್ತೀಚಿಗೆ ಯಾದಗಿರಿಯಲ್ಲಿ ಎಲ್ಲಿಯಾದರೂ ತನ್ನ ಜಾಗದ ಹಕ್ಕನ್ನು ಸ್ಥಾಪಿಸಿದ್ದರ ಕುರಿತಾದ ಸುದ್ದಿ ಇದೆಯೇ ಎಂಬ ಕುರಿತು ಸುದ್ದಿಗಳನ್ನು ಹುಡುಕಾಡಿದ್ದೇವೆ. ಆದರೆ ಅಂತಹ ಯಾವುದೇ ಸುಳಿವುಗಳು ಕಂಡುಬಂದಿಲ್ಲ.

ಯಾದಗಿರಿ ಜಿಲ್ಲೆಯಲ್ಲಿ ಶಾಬಾದ್‌ ಎಂಬ ಗ್ರಾಮ ಇದೆಯೇ ಎಂಬ ಬಗ್ಗೆ ಶೋಧ ನಡೆಸಿದ್ದೇವೆ. ಇದಕ್ಕಾಗಿ ಯಾದಗಿರಿ ಜಿಲ್ಲಾ ವೆಬ್‌ ಸೈಟ್ ಪರಿಶೀಲಿಸಿದ್ದೇವೆ. ಇದರಲ್ಲಿ “ಶಾಬಾದ್‌” ಹೆಸರಿನ ಗ್ರಾಮ ಯಾವುದೂ ಇಲ್ಲ ಎಂದು ತಿಳಿದುಬಂದಿದೆ.

ಆ ಬಳಿಕ ನಾವು ವೈರಲ್ ಹೇಳಿಕೆಯೊಂದಿಗೆ ಇರುವ ಮುಸ್ಲಿಂ ಧಾರ್ಮಿಕ ಕೇಂದ್ರದ ಫೋಟೋದ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದು, ಈ ವೇಳೆ ಈ ಧಾರ್ಮಿಕ ಕೇಂದ್ರ, ನಾಗ್ಪುರದಲ್ಲಿರುವ ದರ್ಗಾ ಬಾಬಾ ಆಶಿಕ್‌ ಶಾಲ ಮಶೂಕ್‌ ಶಾ ರಹ್ಮತುಲ್ಲಾ ಅಲಾಹ್ ಇಸಾಸನಿ ತೆಕ್ಡಿ ಹೆಸರಿನ ಒಂದು ದರ್ಗಾ ಎಂದು ಕಂಡುಬಂದಿದೆ. ಈ ಕುರಿತು ನಾವು ಫೇಸ್‌ಬುಕ್‌ ಪೇಜನ್ನೂ ಕಂಡುಕೊಂಡಿದ್ದೇವೆ.

Also Read: ಹಿಂದೂ ವಿಭಜನೆ, ಮುಸ್ಲಿಂ ಸಂಘಟನೆ ಮಾಡುವುದಾಗಿ ಸೋನಿಯಾ ಗಾಂಧಿಗೆ ಎಂ.ಬಿ. ಪಾಟೀಲ್‌ ಬರೆದ ಪತ್ರ ಸತ್ಯವೇ?

Fact Check: ಯಾದಗಿರಿ ಶಾಬಾದ್‌ ಗ್ರಾಮದಲ್ಲಿ ವಕ್ಫ್ ಬೋರ್ಡ್ ರೈತನ ಭೂಮಿಯನ್ನು ಕಸಿದುಕೊಂಡಿದೆಯೇ?

ಗೂಗಲ್ ನಲ್ಲಿಯೂ ಸರ್ಚ್ ನಡೆಸಿದಾಗ, ನಾಗ್ಪುರದ, ಇಸಸಾನಿಯಲ್ಲಿ ಈ ದರ್ಗಾ ಇದೆ ಎಂದು ಕಂಡುಕೊಂಡಿದ್ದೇವೆ.

ವೈರಲ್‌ ಚಿತ್ರ ಮತ್ತು ಫೇಸ್‌ಬುಕ್‌ ಪೇಜ್‌ ಹಾಗೂ ಗೂಗಲ್‌ ಮ್ಯಾಪ್‌ ಎರಡನ್ನೂ ಪರಿಶೀಲಿಸಿದ ವೇಳೆ ವೈರಲ್ ಚಿತ್ರಕ್ಕೂ, ಅದರಲ್ಲಿ ಹಾಕಲಾದ ಚಿತ್ರಗಳಿಗೂ ಸಾಮ್ಯತೆ ಇರುವುದು ಕಂಡುಬಂದಿದೆ.

ತನಿಖೆಯ ಭಾಗವಾಗಿ ನಾವು ಯಾದಗಿರಿ ಟಿವಿ9 ಜಿಲ್ಲಾ ವರದಿಗಾರ ಅಮೀನ್‌ ಹೊಸೂರ್ ಅವರನ್ನು ಸಂಪರ್ಕಿಸಿದ್ದೇವೆ. ಅವರು ನ್ಯೂಸ್‌ಚೆಕರ್ ನೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ವಕ್ಫ್ ಕುರಿತಾಗಿ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಮತ್ತು ಶಾಬಾದ್‌ ಎಂಬ ಗ್ರಾಮದ ಹೆಸರೂ ಇಲ್ಲ ಎಂದು ಹೇಳಿದ್ದಾರೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಯಾದಗಿರಿಯ ಶಾಬಾದ್‌ ಗ್ರಾಮದಲ್ಲಿ ವಕ್ಫ್‌ ಬೋರ್ಡ್ ರೈತರೊಬ್ಬರ ಭೂಮಿಯನ್ನು ಕಸಿದುಕೊಂಡಿದೆ ಎನ್ನುವ ಹೇಳಿಕೆ ಸುಳ್ಳಾಗಿದೆ. ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಚಿತ್ರ ನಾಗ್ಪುರದ್ದಾಗಿದೆ ಮತ್ತು ಅಂತಹ ಘಟನೆಗಳು ವರದಿಯಾಗಿಲ್ಲ ಎಂದು

Also Read: ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎನ್ನುವ ವೀಡಿಯೋ ಹಿಂದಿನ ಸತ್ಯವೇನು?

Result: False

Our Sources

Yadagir District portal

Facebook Page of Darga Baba Ashique Shah Mashooque Shah Rahmatullh Alaih Isasani Tekdi

Google Map

Conversation with Ameen Hosoor, Tv9 Kannada reporter, Yadagir

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.