Monday, April 7, 2025

Fact Check

ಇಂದಿರಾ ಗಾಂಧಿ, ರಾಜ್‌ ಕುಮಾರ್‌ ಜೊತೆಗೆ ಫೋಟೋದಲ್ಲಿ ಮೋದಿಯೂ ಇದ್ದರೇ?

Written By Ishwarachandra B G
Feb 17, 2023
banner_image

ನಟ ರಾಜ್‌ಕುಮಾರ್‌ ಮತ್ತು ಮಾಜಿ ಪ್ರಧಾನಿ ಇಂದಿರಾಗಾಂಧಿಯವರೊಂದಿಗೆ ಪ್ರಧಾನಿ ಮೋದಿಯವರಿದ್ದ ಹಳೆಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. 

ವಾಟ್ಸಾಪ್‌ ನಲ್ಲಿರುವ ಕ್ಲೇಮಿನಲ್ಲಿ, “ಡಾ.ರಾಜ್‌ಕುಮಾರ್‌, ಪಾರ್ವತಮ್ಮ ರಾಜ್‌ ಕುಮಾರ್, ಇಂದಿರಾ ಗಾಂಧಿ ಹಾಗೂ ನರೇಂದ್ರ ಮೋದಿಯವರಿರುವ ಅಪರೂಪದ ಚಿತ್ರ” ಎಂದು ಹೇಳಲಾಗಿದೆ. 

ಇಂದಿರಾ ಗಾಂಧಿ, ರಾಜ್‌ ಕುಮಾರ್‌, ನರೇಂದ್ರ ಮೋದಿ, ಫೋಟೋ, ತಿರುಚಿದ ಚಿತ್ರ
ವಾಟ್ಸಾಪ್‌ನಲ್ಲಿ ಕಂಡು ಬಂದ ಕ್ಲೇಮ್‌

ಸತ್ಯಶೋಧನೆಗಾಗಿ ಈ ಕ್ಲೇಮ್‌ ಅನ್ನು ನ್ಯೂಸ್‌ಚೆಕರ್‌ ವಾಟ್ಸಾಪ್‌ ಟಿಪ್‌ಲೈನ್‌ಗೆ ಬಳಕೆದಾರರೊಬ್ಬರು ಕಳುಹಿಸಿದ್ದು, ಈ ಕ್ಲೇಮ್‌ ತಿರುಚಲಾದ ಚಿತ್ರ ಎಂದು ಕಂಡುಬಂದಿದೆ. 

Fact Check/ Verification

ಈ ಫೋಟೋದ ಬಗ್ಗೆ ಸತ್ಯಶೋಧನೆಗಾಗಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್ ನಡೆಸಲಾಗಿದೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ. 

ಎಪ್ರಿಲ್‌ 24, 2019ರಂದು ದಿ ಕ್ವಿಂಟ್‌ ಪ್ರಕಟಿಸಿದ ದಿ.ಡಾ.ರಾಜ್‌ಕುಮಾರ್‌ ಅವರ ಕುರಿತ ಲೇಖನ “Karnataka’s Reluctant Politician: The Life and Times of Annavaru” ದಲ್ಲಿ ರಾಜ್‌ ಕುಮಾರ್‌ ಅವರ ಬದುಕು, ರಾಜಕೀಯದ ಬಗ್ಗೆ ಅವರ ಧೋರಣೆಯನ್ನು ಹೇಳಲಾಗಿದೆ. ಇದರಲ್ಲಿ ಸಂಗೀತಾ ಮ್ಯೂಸಿಕ್‌ನ ಕಾರ್ಯಕ್ರಮವೊಂದರಲ್ಲಿ ಡಾ.ರಾಜ್‌ಕುಮಾರ್‌, ಅವರ ಪತ್ನಿ ಪಾರ್ವತಮ್ಮ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ತೆಗೆಸಿಕೊಂಡ ಗ್ರೂಪ್‌ ಫೋಟೋವನ್ನು ಪ್ರಕಟಿಸಲಾಗಿದೆ. 

ದಿ ಕ್ವಿಂಟ್‌ ವರದಿ

ಎಪ್ರಿಲ್‌ 18, 2018ರಂದು ಮೆಟ್ರೋ ಸಾಗಾ ಪ್ರಕಟಿಸಿದ “16 Life Incidents of Dr. RajKumar Proves that there is no one Like Him and Will Ever Be” ಎಂಬ ಲೇಖನದಲ್ಲಿ ರಾಜ್‌ ಕುಮಾರ್‌ ಅವರ ಜೀವನದ ಮಹತ್ವದ ಘಟ್ಟಗಳ ಕುರಿತ ಫೋಟೋಗಳನ್ನು ಪ್ರಕಟಿಸಲಾಗಿದೆ.  ಡಾ.ರಾಜ್‌ಕುಮಾರ್‌ ಅವರು ತಮ್ಮ ಪತ್ನಿ ಪಾರ್ವತಮ್ಮ ಜೊತೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ತೆಗೆಸಿಕೊಂಡ ಗ್ರೂಪ್‌ ಪೋಟೋ ಇದಾಗಿದೆ. 

ಮೆಟ್ರೋ ಸಾಗ ವರದಿ

ಈ ಎರಡೂ ಫೋಟೋಗಳನ್ನು ಮತ್ತು ವೈರಲ್‌ ಆಗಿರುವ ಫೋಟೋವನ್ನು ತುಲನೆ ಮಾಡಿದಾಗ, ಮೋದಿ ಫೋಟೋವನ್ನು ಇನ್ನೊಬ್ಬರ ಮುಖಕ್ಕೆ ಎಡಿಟ್‌ ಮಾಡಲಾಗಿರುವುದು ಕಂಡು ಬಂದಿದೆ. 

Also Read: ಏರ್‌ಶೋದಲ್ಲಿ ಸುಖೋಯ್‌ ವಿಮಾನದ ಈ ಪ್ರದರ್ಶನ ನಿಜವೇ; ವೈರಲ್‌ ವೀಡಿಯೋ ಹಿಂದಿನ ಸತ್ಯ ಏನು?

ಇನ್ನು ತಿರುಚಿದ ಚಿತ್ರವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಲಾಗಿದೆ. ಜೊತೆಗೆ ಇದನ್ನು ರಿವರ್ಸ್‌ ಇಮೇಜ್ ಸರ್ಚ್‌ ನಡೆಸಿದಾಗ ಇದು ಕೂಡ ತಿರುಚಿದ ಚಿತ್ರದ ಭಾಗ ಎಂದು ಕಂಡುಬಂದಿದೆ. 

ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಪಕ್ಷದ ಕಚೇರಿಯಲ್ಲಿ, ಆರೆಸ್ಸೆಸ್‌ ಕಚೇರಿಯಲ್ಲಿ ಕಸಗುಡಿಸುವ ಕೆಲಸವನ್ನೂ ಮಾಡಿದ್ದರು ಎಂದು ಹೇಳಲಾದ ನಕಲಿ ಚಿತ್ರದಲ್ಲಿ ಕಸ ಗುಡಿಸುತ್ತಿದ್ದ ಬೇರೊಬ್ಬ ವ್ಯಕ್ತಿಯ ಶಿರಕ್ಕೆ ಎಡಿಟ್‌ ಮಾಡಲಾದ ಮೋದಿ ತಲೆಯ ಚಿತ್ರವನ್ನೇ ಡಾ.ರಾಜ್‌ ಕುಮಾರ್‌-ಇಂದಿರಾ ಗಾಂಧಿ ಗ್ರೂಪ್‌ ಫೋಟೋಕ್ಕೂ ಎಡಿಟ್‌ ಮಾಡಿರುವುದು ಗೊತ್ತಾಗಿದೆ. 

ಪ್ರಧಾನಿ ಮೋದಿ ಅವರ ಕಸ ಗುಡಿಸುವ ಚಿತ್ರ ಎನ್ನಲಾದ ಚಿತ್ರದ ಕುರಿತ ವರದಿಗಳು ಇಲ್ಲಿ ಮತ್ತು ಇಲ್ಲಿವೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಡಾ.ರಾಜ್‌ಕುಮಾರ್‌ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ನರೇಂದ್ರ ಮೋದಿಯವರು ಇರುವ ಚಿತ್ರ ತಿರುಚಿದ ಚಿತ್ರ ಎಂದು ಕಂಡುಬಂದಿದೆ.

Result: Altered Image/Video

Our Sources:
Article by The Quint, Dated: April 24, 2019
Article by Metro Saga, Dated: April 18, 2018 


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,698

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.