Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್‌ಶೋದಲ್ಲಿ ಸುಖೋಯ್ ವಿಮಾನದ ಪ್ರದರ್ಶನ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೇಸ್‌ಬುಕ್‌ನಲ್ಲಿ ಬಿಟಿವಿ ನ್ಯೂಸ್ ಪೋಸ್ಟ್ ಮಾಡಿದ ಆ ಕ್ಲೇಮ್ ಪ್ರಕಾರ, “AirShow2023 : ಸುಖೋಯ್ ಅದ್ಭುತ ಪ್ರದರ್ಶನ..ನೋಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಸುಖೋಯ್..!” ಎಂದು ಹೇಳಲಾಗಿದೆ.

ಈ ವೀಡಿಯೋದಲ್ಲಿ ಸುಖೋಯ್ ಯುದ್ಧ ವಿಮಾನ ನೆಲದಿಂದ ಕೆಲವೇ ಕೆಲವು ಅಡಿ ಅಂತರದಲ್ಲಿ ನೇರವಾಗಿ ನಿಂತಿರುವಂತೆ ಇದ್ದು, ಅದ್ಭುತ ಚಾಕಚಕ್ಯತೆಯನ್ನು ತೋರಿಸುತ್ತದೆ.
ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಈ ವೈರಲ್ ವೀಡಿಯೋ ಸುಳ್ಳು ಎಂದು ತಿಳಿದುಬಂದಿದೆ.
ವೈರಲ್ ವೀಡಿಯೋದ ಸತ್ಯ ಶೋಧನೆಗಾಗಿ, ನ್ಯೂಸ್‌ಚೆಕರ್ ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದೆ. ಈ ವೇಳೆ ಇದು ಸುಖೋಯ್ 35 ಯುದ್ಧ ವಿಮಾನ ಎಂದು ತಿಳಿದು ಬಂದಿದೆ. ಇದೇ ಇಮೇಜ್ ಸರ್ಚ್‌ನ ಫಲಿತಾಂಶದಲ್ಲಿ ವಿವಿಧ ಟ್ವಿಟರ್ ಬಳಕೆದಾರರು ವೈರಲ್ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅದರ ವಿವರಗಳು ಇಲ್ಲಿ ಮತ್ತು ಇಲ್ಲಿದೆ.
ಇದನ್ನು ಸಾಕ್ಷ್ಯವಾಗಿ ಪರಿಗಣಿಸಿ, ಈ ಬಗ್ಗೆ ಇನ್ನಷ್ಟು ಪರಿಶೀಲನೆಗಾಗಿ ವರ್ಡ್ ಸರ್ಚ್ ನಡೆಸಲಾಗಿದ್ದು, ಈ ವೇಳೆ ಯೂಟ್ಯೂಬ್ ವೀಡಿಯೋ ಒಂದು ಕಂಡು ಬಂದಿದೆ.
ಸೂಪರ್ ಕಾರ್ ಬ್ಲಂಡೀ ಹೆಸರಿನ ಈ ಯೂಟ್ಯೂಬ್ ಚಾನೆಲ್‌ನಲ್ಲಿ ಮೇ 18, 2021ರಂದು ಪೋಸ್ಟ್ ಮಾಡಲಾದ ವೀಡಿಯೋದಲ್ಲಿ ಆಟಿಕೆ ಜೆಟ್ ಫೈಟರ್ ಗಂಟೆಗೆ 500 ಕಿ.ಮೀ. ವೇಗದಲ್ಲಿ ಹಾರಾಟ ಎಂಬ ಶೀರ್ಷಿಕೆಯನ್ನು ಕೊಡಲಾಗಿದ್ದು ಆ ವೀಡಿಯೋ ಇಲ್ಲಿದೆ.
ಈ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ, ಇದು ವೈರಲ್ ವೀಡಿಯೋದ ರೀತಿಯೇ ಸಾಮ್ಯತೆ ಹೊಂದಿರುವುದು ಕಂಡು ಬಂದಿದೆ.
ಜೊತೆಗೆ ಆಟಿಕೆ ವಿಮಾನದ ಅವಯವಗಳು, ವಿಮಾನ ಹಾರಾಟ ನಡೆಸಿದ ಸ್ಥಳಗಳು, ರನ್ ವೇ ರೀತಿಯ ಸಂರಚನೆ, ಪಕ್ಕದಲ್ಲಿರುವ ಪುಟ್ಟ ತಡೆಬೇಲಿ, ಹಸಿರು ಪ್ರದೇಶ ಎಲ್ಲವೂ ಒಂದೇ ರೀತಿ ಇದೆ.




ಈ ವೀಡಿಯೋದಲ್ಲಿ ಸೂಪರ್ ಕಾರ್ ಬ್ಲಂಡೀ ಯೂಟ್ಯೂಬರ್ ಆ ಆಟಿಕೆ ವಿಮಾನದ ಸಂರಚನೆ, ವಿವರಗಳನ್ನೂ ಒದಗಿಸುತ್ತಾರೆ. ಜೊತೆಗೆ ಈ ಆಟಿಕೆ ವಿಮಾನದ ಹಾರಾಟ ನಡೆಸುವ ಪ್ರದೇಶ ವೈರಲ್ ವೀಡಿಯೋದಲ್ಲಿ ಕಂಡುಬರುವ ಪ್ರದೇಶದ ರೀತಿಯೇ ಇದೆ.
ಈ ವೀಡಿಯೋದ ವಿವರಣೆಯಲ್ಲಿ RC Fighter Jet club ಎಂಬ ವಿಶೇಷ ಆಟಿಕೆ ವಿಮಾನ ಹಾರಾಟದ ಕ್ಲಬ್ ವಿರಣೆಯನ್ನು ನೀಡಲಾಗಿದೆ. ಇದರ ಕುರಿತು ಸರ್ಚ್ ನಡೆಸಿದಾಗ ಆರ್ ಸಿ ಫ್ಲೈಯಿಂಗ್ ದುಬೈ ಕ್ಲಬ್ ವಿವರಗಳು ವೆಬ್‌ಸೈಟ್ ನಲ್ಲಿ ಲಭ್ಯವಾಗಿವೆ.
Also Read: ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲ ಕುಟುಂಬಗಳಿಗೆ 500 ರೂ.ಗೆ ಎಲ್‌ಪಿಜಿ ಸಿಲಿಂಡರ್ ಕೊಡುವುದು ಸತ್ಯವೇ?
ಯೂಟ್ಯೂಬ್ ಚಾನೆಲ್ ಖುದಾಯಿ ನಝರ್ ಎಂಬುದರಲ್ಲಿ ಅಕ್ಟೋಬರ್ 8, 2017 ರಲ್ಲಿ ಪೋಸ್ಟ್ ಮಾಡಿದ ಆರ್ ಸಿ ಫ್ಲೈಯಿಂಗ್ ಕ್ಲಬ್ ದುಬೈ ಪಾರ್ಟ್ 1 ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ ವೀಡಿಯೋ ಒಂದು ಕಂಡುಬಂದಿದೆ. ಇದರಲ್ಲಿ ಆಟಿಕೆ ವಿಮಾನ ಹಾರಾಟ ನಡೆಸುವ ಸ್ಥಳ ವೈರಲ್ ವೀಡಿಯೋದ ಸ್ಥಳಕ್ಕೆ ಹೆಚ್ಚಿನ ಸಾಮ್ಯತೆಯನ್ನು ಹೊಂದಿರುವುದು ಕಂಡುಬಂದಿದೆ.
ಇನ್ನು ವೈರಲ್ ವೀಡಿಯೋದ ಕುರಿತಾಗಿ ಹೆಚ್ಚಿನ ಪರಿಶೀಲನೆಗೆ ಭಾರತದ ರಕ್ಷಣಾ ಸಚಿವಾಲಯದ ವಕ್ತಾರರಾದ ಪುನೀತಾ ಎಸ್. ಅವರನ್ನು ಸಂಪರ್ಕಿಸಲಾಗಿದ್ದು, ಈ ವೇಳೆ ಅವರು ವೀಡಿಯೋವನ್ನು ವೀಕ್ಷಿಸಿ ಇಂತಹ ಯಾವುದೇ ಫೈಟರ್ ಜೆಟ್ ಏರೋ ಇಂಡಿಯಾ ಶೋದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ವೀಡಿಯೋದಲ್ಲಿ ಕಂಡುಬರುತ್ತಿರುವ ಪ್ರದೇಶವು ಬೆಂಗಳೂರಿನಂತೆ ಇಲ್ಲ ಎಂದು ಹೇಳಿದ್ದಾರೆ.
ಈ ಸತ್ಯಶೋಧನೆಯಲ್ಲಿ ಕಂಡುಬಂದ ಪ್ರಕಾರ “AirShow2023 : ಸುಖೋಯ್ ಅದ್ಭುತ ಪ್ರದರ್ಶನ..ನೋಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡ ಸುಖೋಯ್..!” ಎನ್ನುವ ವೈರಲ್ ವೀಡಿಯೋ ಆಟಿಕೆ ಸುಖೋಯ್ ವಿಮಾನದ್ದಾಗಿದೆ. ಮತ್ತು ಆ ಆಟಿಕೆ ವಿಮಾನ ಹಾರಾಟದ ದೃಶ್ಯ ದುಬೈನದ್ದಾಗಿದೆ. ಆದ್ದರಿಂದ ಈ ಕ್ಲೇಮ್ ತಪ್ಪು ಎಂದು ತಿಳಿದುಬಂದಿದೆ.
Our Sources:
Conversation with Puneetha.S, Defence PRO, Bangalore
Youtube Video by Supercar Blondie, Dated: May 18, 2021
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
September 26, 2025
Ishwarachandra B G
December 2, 2022
Ishwarachandra B G
June 7, 2025