Saturday, March 15, 2025
ಕನ್ನಡ

Fact Check

Fact Check: ದ್ವಾರಕೆ ಬಳಿ ಬಿಪರ್ ಜಾಯ್ ಚಂಡಮಾರುತ ಎಂದು 2022ರಲ್ಲಿ ಡಿಜಿಟಲ್‌ ಆಗಿ ಮಾರ್ಪಡಿಸಿದ ವೀಡಿಯೋ ಹಂಚಿಕೆ

Written By Pankaj Menon, Translated By Ishwarachandra B G, Edited By Ruby Dhingra
Jun 14, 2023
banner_image

Claim

ಗುಜರಾತ್‌ ಕರಾವಳಿಯಲ್ಲಿ ದ್ವಾರಕೆ ಬಳಿ ಬಿಪರ್ ಜಾಯ್‌ ಚಂಡಮಾರುತದ ವೀಡಿಯೋ

ಇದನ್ನು ಸತ್ಯಶೋಧನೆಗಾಗಿ ಬಳಕೆದಾರರೊಬ್ಬರು ನ್ಯೂಸ್‌ಚೆಕರ್‌ ವಾಟ್ಸಾಪ್‌ ಟಿಪ್‌ಲೈನ್‌ (+91-9999499044) ಜೊತೆಗೆ ಹಂಚಿಕೊಂಡಿದ್ದಾರೆ.

ನ್ಯೂಸ್‌ಚೆಕರ್‌ ವಾಟ್ಸಾಪ್‌ ಟಿಪ್‌ ಲೈನ್‌ಗೆ ಬಂದ ದೂರು

Fact

ದ್ವಾರಕಾ ಬಳಿ ಗುಜರಾತ್ ಕರಾವಳಿಯಲ್ಲಿ ಬಿಪರ್ ಜೋಯ್‌ ಚಂಡಮಾರುತ ಎಂದು ಹೇಳುವ ತುಣುಕನ್ನು ನ್ಯೂಸ್‌ಚೆಕರ್‌ ಎಚ್ಚರಿಕೆಯಿಂದ ವೀಕ್ಷಿಸಿದೆ. ಇದರೊಂದಿಗೆ ಈ ಸುಂಟರಗಾಳಿಯ ವೀಡಿಯೋ ಎಡಿಟ್‌ ಮಾಡಲಾಗಿದೆ ಎಂಬುದನ್ನು ಗಮನಿಸಲಾಗಿದೆ.

Also Read: ದಾಂಡೇಲಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು, ಈ ಘಟನೆ ನಿಜವೇ?

ವೈರಲ್ ವೀಡಿಯೊದಲ್ಲಿ ಸಮುದ್ರವು ಶಾಂತವಾಗಿ ಕಾಣುತ್ತದೆ, ಆದರೆ ಸುಂಟರಗಾಳಿ, ತೀವ್ರವಾದ ಗಾಳಿಯೊಂದಿಗೆ ನಿಜವಾಗಿ ಹತ್ತಿರದಲ್ಲಿದೆ ಎಂದು ಭಾಸವಾಗುತ್ತದೆ. ಇದಲ್ಲದೆ ಇಷ್ಟು ಪ್ರಮಾಣದಲ್ಲಿ ಸುಳಿಗಾಳಿ ಇದ್ದಿದ್ದೇ ಆದಲ್ಲಿ ಸಮುದ್ರದಲ್ಲಿ ಇದು ದೊಡ್ಡ ಮಟ್ಟದ ಅಲೆ, ಉಬ್ಬರ ಇಳಿತಕ್ಕೆ ಕಾರಣವಾಗುತ್ತಿತ್ತು.
ನಂತರ ನಾವು ವೀಡಿಯೋದ ಕೀಫ್ರೇಮ್ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದು, ಇದು ಹವಾಮಾನ ಘಟನೆಗಳ ನೈಜ ಮತ್ತು ಎಡಿಟ್‌ ಮಾಡಿದ ತುಣುಕುಗಳನ್ನು ಪೋಸ್ಟ್ ಮಾಡುವ ಚಾನೆಲ್ @rtsarovvideo ಯೂಟ್ಯೂಬ್ ಪೋಸ್ಟ್‌ ನತ್ತ ನಮ್ಮನ್ನು ಕರೆದೊಯ್ಯಿತು.



ಈ ವೀಡಿಯೋವನ್ನು ಆಗಸ್ಟ್ 2022ರ ವೇಳೆ ಪೋಸ್ಟ್‌ ಮಾಡಲಾಗಿದ್ದು, ವಿಡಿಯೋ ಇತ್ತೀಚಿನದ್ದಲ್ಲ ಮತ್ತು ಇದು ಎಡಿಟ್‌ ಮಾಡಲಾದ ವೀಡಿಯೋ ಎಂಬುದು ಖಚಿತಗೊಂಡಿದೆ ಮತ್ತು ಕ್ಲೇಮ್‌ ಸುಳ್ಳು ಎಂಬುದು ಗೊತ್ತಾಗಿದೆ.

ತೀವ್ರ ಹವಾಮಾನ ಘಟನೆಗಳ ನೈಜ ಮತ್ತು ಎಡಿಟ್ ಮಾಡಿದ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ ಎಂದು ಹೇಳುವ YouTube ಪುಟದ ವಿವರಣೆಯ ಸ್ಕ್ರೀನ್‌ಗ್ರಾಬ್

ಇದರೊಂದಿಗೆ ನಾವು, ಆ ವೀಡಿಯೋಗಳನ್ನು ಪೋಸ್ಟ್ ಮಾಡುವ ಕ್ರಿಯೇಟರ್‌ ಅವರನ್ನೂ ಸಂಪರ್ಕಿಸಿದ್ದೇವೆ. ಈ ವೇಳೆ ಪುಟದ ಸೃಷ್ಟಿಕರ್ತ ರೋಸ್ಟಿಸ್ಲಾವ್ ತ್ಸರೋವ್ ಈ ವೀಡಿಯೊ ಬಿಪರ್ಜಾಯ್ ಚಂಡಮಾರುತದದ್ದಲ್ಲ ಎಂದು ದೃಢಪಡಿಸಿದ್ದಾರೆ. “ಈ ವೀಡಿಯೋವನ್ನು ನಾನು ಸಿಜಿಐ ಬಳಸಿ ರಚಿಸಿದ್ದೇನೆ ಮತ್ತು ನಾನು ಈ ವೀಡಿಯೋದ ಮಾಲೀಕನಾಗಿದ್ದೇನೆ. ಇದನ್ನು ಎಡಿಟ್ ಮಾಡಲಾಗಿದೆ ಮತ್ತು ಇದು ಬಿಪರ್ ಜೋಯ್‌ ಚಂಡಮಾರುತವಲ್ಲ” ಎಂದು ಅವರು ನ್ಯೂಸ್‌ಚೆಕರ್‌ಗೆ ಸ್ಪಷ್ಟಪಡಿಸಿದ್ದಾರೆ.

Also Read: ಭಟ್ಪಾರಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ, ಸತ್ಯ ಏನು?

Result: Altered Media

Our Sources
Video posted by @rtsarovvideo on August 2022

Self analysis

Email correspondence with Rostyslav Tsarov, creator of the video

(ಈ ಮೂಲ ಲೇಖನವನ್ನು ನ್ಯೂಸ್‌ ಚೆಕರ್‌ ಇಂಗ್ಲಿಷ್‌ನಲ್ಲಿ ಪ್ರಕಟಿಸಲಾಗಿದ್ದು, ಅದನ್ನು ಇಲ್ಲಿ ಓದಬಹುದು)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
No related articles found
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,450

Fact checks done

FOLLOW US
imageimageimageimageimageimageimage
cookie

ನಮ್ಮ ವೆಬ್‌ಸೈಟ್ ಕುಕೀಗಳನ್ನು ಬಳಸುತ್ತದೆ

ನಾವು ಕುಕೀಗಳನ್ನು ಮತ್ತು ಸಮಾನ ತಂತ್ರಗಳನ್ನು ವ್ಯಕ್ತಿಗೆ ತಕ್ಕಂತೆ ಮಾಡಿಕೊಳ್ಳಲು, ವಿಜ್ಞಾಪನಗಳನ್ನು ರೂಪಿಸಲು ಮತ್ತು ಅಳತೆಗೆ ಸಹಾಯ ಮಾಡಲು, ಹೆಚ್ಚು ಉತ್ತಮ ಅನುಭವ ಒದಗಿಸಲು ಸಹಾಯ ಮಾಡುತ್ತದೆ. 'ಸರಿ' ಅಥವಾ ಕುಕೀ ಆದರಿದ ಆಯ್ಕೆಯಲ್ಲಿ ಒಂದು ಆಯ್ಕೆಯನ್ನು ಮಾಡಿ, ನೀವು ಇದನ್ನು ಒಪ್ಪಿಕೊಳ್ಳುತ್ತೀರಿ, ನಮ್ಮ ಕುಕೀ ನಿಯಮಗಳಲ್ಲಿ ವಿವರಿಸಿದ ಪ್ರಕಾರ.