Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಭಟ್ಪಾರಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ 26 ಸ್ಥಾನಗಳನ್ನು ಗೆದ್ದು ಬಿಜೆಪಿ ಜಯಭೇರಿ ಬಾರಿಸಿದೆ
Fact
ಭಟ್ಪಾರಾ ಮಹಾನಗರ ಪಾಲಿಕೆ ಚುನಾವಣೆ 2022ರಲ್ಲಿ ನಡೆದಿದ್ದು ತೃಣಮೂಲ ಕಾಂಗ್ರೆಸ್ ಜಯಗಳಿಸಿತ್ತು
ಭಟ್ಪಾರಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲ 26 ಸ್ಥಾನಗಳನ್ನು ಗೆದ್ದು ಬಿಜೆಪಿ ಜಯಭೇರಿ ಬಾರಿಸಿದೆ ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಾಟ್ಸಾಪ್‌ನಲ್ಲಿ ಹರಿದಾಡುತ್ತಿರುವ ಈ ಕ್ಲೇಮಿನಲ್ಲಿ “ಪಶ್ಚಿಮ ಬಂಗಾಳದ ಭಾಟಪಾರಾ ಮಹಾನಗರಪಾಲಿಕೆಗೆ ನಡೆದ ಚುನಾವಣೆಯಲ್ಲಿ 26 ರಲ್ಲಿ 26 ಸ್ಥಾನಗಳಲ್ಲೂ ಜಯಭೇರಿ ಬಾರಿಸಿದ ಬಿಜೆಪಿ…! ಖಾತೆ ತೆರೆಯದ ಮಮತಾ ಬ್ಯಾನರ್ಜಿಯ ತೃಣಮೂಲ್ ಕಾಂಗ್ರೆಸ್..!” ಎಂದು ಹೇಳಲಾಗಿದೆ.
Also Read: ಮಾರುಕಟ್ಟೆಗೆ ಹೊಸ ₹1000 ಮುಖಬೆಲೆಯ ನೋಟುಗಳು ಎಂಟ್ರಿ ಎನ್ನುವುದು ಸುಳ್ಳು!
ಈ ಹೇಳಿಕೆ ಕುರಿತ ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ಟಿಪ್ ಲೈನ್‌ಗೆ ಬಳಕೆದಾರರೊಬ್ಬರು ದೂರು ನೀಡಿದ್ದು, ಈ ಕ್ಲೇಮ್ ತಪ್ಪು ಎಂದು ಸಾಬೀತಾಗಿದೆ.
ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್ ಗೂಗಲ್ ಕೀವರ್ಡ್ ಸರ್ಚ್ ನಡೆಸಿದೆ. ಈ ವೇಳೆ ಸದ್ಯ ಪಶ್ಚಿಮ ಬಂಗಾಳದಲ್ಲಿ ಸ್ಥಳೀಯಾಡಳಿತ ಚುನಾವಣೆ ನಡೆದಿಲ್ಲ ಬದಲಾಗಿ 2022ರಲ್ಲಿ ನಡೆದಿದೆ. ಈ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದ್ದು, 108 ಸ್ಥಾನಗಳಲ್ಲಿ 102ರಲ್ಲಿ ಗೆದ್ದುಕೊಂಡಿತ್ತು.
ಈ ಕುರಿತ ವರದಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ಸಾಕ್ಷ್ಯವನ್ನು ಪರಿಗಣಿಸಿ ನಾವು ಭಟ್ಪಾರಾ ಪಾಲಿಕೆಯ ಚುನಾವಣೆ ಫಲಿತಾಂಶದ ಬಗ್ಗೆ ಇನ್ನಷ್ಟು ಸಂಶೋಧನೆಯನ್ನು ನಡೆಸಿದ್ದು, ಅಲ್ಲಿ ತೃಣಮೂಲ ಕಾಂಗ್ರೆಸ್ 35 ವಾರ್ಡ್‌ಗಳಲ್ಲಿ 34ನ್ನು ಗೆದ್ದುಕೊಂಡಿದೆ ಎಂದು ಗೊತ್ತಾಗಿದೆ.
Also Read: ಬೈಕಿನ ಹಿಂಬದಿ ಗೊಂಬೆ ಸಾಗಿಸಿದ ವ್ಯಕ್ತಿಯ ಫೋಟೋದೊಂದಿಗೆ ‘ಲವ್ ಜಿಹಾದ್’ ಹೇಳಿಕೆ ವೈರಲ್!
ಈ ಬಗ್ಗೆ ಮಾರ್ಚ್ 2, 2022ರಂದು ಬಾಂಗ್ಲಾ ಎಬಿಪಿ ಲೈವ್ ವರದಿ ಮಾಡಿದ್ದು, “ಭಟ್ಪಾರಾ ಪಾಲಿಕೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 34 ವಾರ್ಡ್‌ಗಳಲ್ಲಿ ಜಯಶಾಲಿಯಾಗಿದೆ ಎಂದು ಹೇಳಿದೆ” (ಭಾಷಾಂತರಿಸಲಾಗಿದೆ)
ಮಾರ್ಚ್ 2, 2022 ರ ಬಾಂಗ್ಲಾ ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, “ ಮಹಾನಗರ ಪಾಲಿಕೆ ಚುನಾವಣೆಯಲ್ಲಿ 24 ಪರಗಣ ಜಿಲ್ಲಯ ಭಟ್ಪಾರಾ ದಿಂದ ಬರಾಕ್ ಪೊರೆವರೆಗೆ ಬಿಜೆಪಿ ಪಾಳಯಕ್ಕೆ ಸೋಲಾಗಿದೆ. ಭಟ್ಪಾರಾ ಪಾಲಿಕೆಯಲ್ಲಿ 35ರಲ್ಲಿ 35 ವಾರ್ಡ್ ಗಳನ್ನು ತೃಣಮೂಲ ಕಾಂಗ್ರೆಸ್ ಗೆದ್ದುಕೊಂಡಿದೆ.” ಎಂದಿದೆ.
ಇನ್ನು ಸಂಶೋಧನೆ ವೇಳೆ 2019ರಲ್ಲಿ ಬಿಜೆಪಿ ಭಟ್ ಪಾರಾದಲ್ಲಿ ಅಧಿಕಾರ ಹಿಡಿದಿರುವುದು ಗೊತ್ತಾಗಿದೆ.
ಜೂನ್ 5, 2019ರ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, “2019ರ ಲೋಕಸಭೆ ಚುನಾವಣೆ ಸಂದರ್ಭ ಬಾರಕ್‌ಪೋರ್ ಲೋಕಸಭೆ ಸ್ಥಾನದಲ್ಲಿ ಬಿಜೆಪಿಯ ಅರ್ಜುನ್ ಸಿಂಗ್ ಅವರು ಟಿಎಂಸಿಯ ಸಂಸದ ದಿನೇಶ್ ತ್ರಿವೇದಿ ಅವರನ್ನು ಸೋಲಿಸಿದ್ದರು. ಆ ಬಳಿಕ ಭಟ್ಪಾರಾದ ಆಡಳಿತದಲ್ಲಿ ರಾಜಕೀಯ ಮೇಲಾಟ ನಡೆದಿದ್ದು, ಅವಿಶ್ವಾಸ ನಿರ್ಣಯ ಗೊತ್ತುವಳಿ ಮೂಲಕ ಟಿಎಂಸಿ ಅಧಿಕಾರ ಕಳೆದುಕೊಂಡಿದ್ದು, ಬಿಜೆಪಿಯ ಅರ್ಜುನ್ ಸಿಂಗ್ ಅವರ ಸೋದರಳಿಯ ಸೌರಭ್ ಸಿಂಗ್ ನೂತನ ಅಧ್ಯಕ್ಷರಾಗಿ 26 ಮತಗಳ ಮೂಲಕ ಅಧಿಕಾರಕ್ಕೇರಿದ್ದರು. ಇದೇ ಪಾಲಿಕೆಯಲ್ಲಿ ಅರ್ಜುನ್ ಸಿಂಗ್ 2010ರಿಂದ ತೃಣಮೂಲ ಕಾಂಗ್ರೆಸ್ ನಿಂದಲೇ ಅಧ್ಯಕ್ಷರಾಗಿದ್ದು, ತಾನು ಬಿಜೆಪಿಗೆ ಸೇರಿ ಲೋಕಸಭೆಯಲ್ಲಿ ಗೆಲ್ಲುತ್ತಲೇ, ಅವಿಶ್ವಾಸ ನಿರ್ಣಯ ಮಂಡಿಸಿದ್ದರು” ಇದು ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಕಾರಣವಾಗಿತ್ತು ಎಂದು ಹೇಳಲಾಗಿದೆ.
Also Read: ಒಡಿಶಾ ರೈಲು ದುರಂತ ಬಳಿಕ ಸ್ಟೇಷನ್ ಮಾಸ್ಟರ್ ಶರೀಫ್ ತಲೆಮರೆಸಿಕೊಂಡಿದ್ದಾರೆಯೇ, ಇಲ್ಲ ಈ ವೈರಲ್ ಹೇಳಿಕೆ ಸುಳ್ಳು!
ಈ ಸತ್ಯಶೋಧನೆಯ ಪ್ರಕಾರ, ಭಟ್ ಭಟ್ಪಾರಾ ಚುನಾವಣೆಯಲ್ಲಿ ಬಿಜೆಪಿ 26ರಲ್ಲಿ 26 ಸ್ಥಾನ ಗೆದ್ದಿದೆ ಎನ್ನುವುದು ಸುಳ್ಳಾಗಿದೆ.
Our Sources
Report By Bangla ABP live, Dated: March 2, 2022
Report By Bangla Hindustan Times, Dated: March 2, 2022
Report By Indian Express, Dated: June 5, 2019
(With Inputs from Paromita Das)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
November 8, 2024
Kushel Madhusoodan
June 12, 2024
Prasad S Prabhu
May 15, 2024