Sunday, March 30, 2025

Fact Check

Fact Check: ಫೋರ್ಬ್ಸ್ ನ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ 7ನೇ ಸ್ಥಾನದಲ್ಲಿದ್ದಾರೆಯೇ?

Written By Saurabh Pandey, Translated By Ishwarachandra B G, Edited By Pankaj Menon
Mar 26, 2024
banner_image

Claim

ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ 7ನೇ ಸ್ಥಾನದಲ್ಲಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗದಲ್ಲಿ ಹೇಳಿಕೆ ಹರಿದಾಡುತ್ತಿದೆ.

Also Read: ಏಷ್ಯಾದ ಮೊದಲ ಮಸೀದಿ ಹಿಂದೆ ದೇಗುಲವಾಗಿತ್ತು ಎಂದ ವೈರಲ್‌ ವೀಡಿಯೋ ಹಿಂದಿನ ಸತ್ಯ ಇಲ್ಲಿದೆ

Fact Check: ಫೋರ್ಬ್ಸ್ ನ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ 7ನೇ ಸ್ಥಾನದಲ್ಲಿದ್ದಾರೆಯೇ?
ಎಕ್ಸ್ ನಲ್ಲಿ ಕಂಡುಬಂದಿರುವ ಕ್ಲೇಮ್‌

Fact

ಫೋರ್ಬ್ಸ್ ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ ಏಳನೇ ಸ್ಥಾನದಲ್ಲಿದ್ದಾರೆ ಎಂಬ ಹೇಳಿಕೆಯನ್ನು ನ್ಯೂಸ್ಚೆಕರ್ 2020 ರ ಅಕ್ಟೋಬರ್ 15 ರಂದು ತನಿಖೆ ನಡೆಸಿದೆ. ನಮ್ಮ ತನಿಖೆಯ ಪ್ರಕಾರ, ವಾಸ್ತವವಾಗಿ ಫೋರ್ಬ್ಸ್ ನಿಯತಕಾಲಿಕವು ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯನ್ನು ಪ್ರಕಟಿಸುವುದಿಲ್ಲ. ಇದಲ್ಲದೆ, ನಾವು ಫೋರ್ಬ್ಸ್ ವೆಬ್ಸೈಟ್ನಲ್ಲಿ ‘ರಾಹುಲ್ ಗಾಂಧಿ‘, ‘ರಾಹುಲ್ ಗಾಂಧಿ ವಿದ್ಯಾವಂತ‘, ‘ಅತ್ಯಂತ ವಿದ್ಯಾವಂತ‘ ಮುಂತಾದ ಅನೇಕ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆದರೆ ಈ ಸಂದರ್ಭದಲ್ಲಿ ಎಲ್ಲಿಯೂ ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ ಬಗ್ಗೆ ಮಾಹಿತಿಯನ್ನು ನೀಡುವ ಯಾವುದೇ ಪಟ್ಟಿ ಅಥವಾ ಅದರ ಕುರಿತಾದ ಲೇಖನ ನಮಗೆ ಲಭ್ಯವಾಗಿಲ್ಲ.

Fact Check: ಫೋರ್ಬ್ಸ್ ನ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ 7ನೇ ಸ್ಥಾನದಲ್ಲಿದ್ದಾರೆಯೇ?
ಫೋರ್ಬ್ಸ್ ಪಟ್ಟಿ

2009ರ ಡಿಸೆಂಬರ್ 21ರಂದು ಫೋರ್ಬ್ಸ್ ಇಂಡಿಯಾ ಪ್ರಕಟಿಸಿದ ಲೇಖನವೊಂದರಲ್ಲಿ ರಾಹುಲ್ ಗಾಂಧಿಯನ್ನು ‘ವರ್ಷದ ವ್ಯಕ್ತಿ’ ಎಂದು ಹೆಸರಿಸಲಾಗಿತ್ತು.

ಭಾರತದ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ 2019 ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅವರು 1995 ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿ ಪಡೆದಿದ್ದಾರೆ.

ಹೀಗಾಗಿ, ನಮ್ಮ ತನಿಖೆಯಲ್ಲಿ ಕಂಡುಬಂದಂತೆ,, ಫೋರ್ಬ್ಸ್ ವಿಶ್ವದ ಅತ್ಯಂತ ವಿದ್ಯಾವಂತ ನಾಯಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ ಏಳನೇ ಸ್ಥಾನದಲ್ಲಿದ್ದಾರೆ ಎಂಬ ಹೇಳಿಕೆ ಸುಳ್ಳು ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ, ಫೋರ್ಬ್ಸ್ ನಿಯತಕಾಲಿಕವು ವಿಶ್ವದ ಅತ್ಯಂತ ವಿದ್ಯಾವಂತ ನಾಯಕರು ಎಂದು ಯಾವುದೇ ಪಟ್ಟಿಯನ್ನು ಪ್ರಕಟಿಸುವುದಿಲ್ಲ ಎಂದು ತಿಳಿದುಬಂದಿದೆ.

Also Read: ರಾಹುಲ್ ಗಾಂಧಿ ರಾಲಿಯಲ್ಲಿ ಮೋದಿ-ಮೋದಿ ಘೋಷಣೆ? ವೈರಲ್ ವೀಡಿಯೋದ ಸತ್ಯ ಇಲ್ಲಿದೆ

Result: False

Our Sources
Forbes website

Election affidavit filed by Congress leader Rahul Gandhi in 2019

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

image
ನೀವು ಯಾವುದೇ ದಾವೆಯ ಸತ್ಯಾಸತ್ಯತೆ ಪರಿಶೀಲಿಸ ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಲು ಅಥವಾ ದೂರು ಸಲ್ಲಿಸಲು ಬಯಸಿದರೆ, ನಮಗೆ ವಾಟ್ಸಾಪ್ ಮಾಡಿರಿ +91-9999499044 ಅಥವಾ ನಮಗೆ ಇಮೇಲ್ ಮಾಡಿರಿ checkthis@newschecker.in​. ನೀವು ನಮ್ಮನೊಂದಿಗೆ ಸಂಪರ್ಕ ಮಾಡಬಹುದು ಮತ್ತು ಫಾರ್ಮ್ ಅನ್ನು ನೀಡಬಹುದು.
Newchecker footer logo
Newchecker footer logo
Newchecker footer logo
Newchecker footer logo
About Us

Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check

Contact Us: checkthis@newschecker.in

17,571

Fact checks done

FOLLOW US
imageimageimageimageimageimageimage