Fact Check: ರಾಹುಲ್ ಗಾಂಧಿ ರಾಲಿಯಲ್ಲಿ ಮೋದಿ-ಮೋದಿ ಘೋಷಣೆ? ವೈರಲ್ ವೀಡಿಯೋದ ಸತ್ಯ ಇಲ್ಲಿದೆ

ರಾಹುಲ್ ರಾಲಿ, ಮೋದಿ ಮೋದಿ ಘೋಷಣೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ರಾಹುಲ್ ಗಾಂಧಿ ರಾಲಿಯಲ್ಲಿ ಮೋದಿ-ಮೋದಿ ಘೋಷಣೆ

Fact
7 ವರ್ಷದ ಹಳೆಯ ವೀಡಿಯೋವನ್ನು ಎಡಿಟ್ ಮಾಡಿ, ಮೋದಿ-ಮೋದಿ ಘೋಷಣೆ ಕೂಗಲಾಗಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ

ಮಾರ್ಚ್ 19, 2024 ರಂದು, ಎಕ್ಸ್ ಪೋಸ್ಟ್ ಒಂದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರಾಲಿಯ 41 ಸೆಕೆಂಡುಗಳ ಉದ್ದದ ವೀಡಿಯೋವನ್ನು ಹಂಚಕೊಳ್ಳಲಾಗಿದೆ. ಅದರಲ್ಲಿ ಗುಜರಾತ್ ನ ಅಹಮದ್‌ ನಗರದಲ್ಲಿ ನಡೆದ ರಾಹುಲ್‌ ಗಾಂಧಿಯವರ ರಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗಲಾಗಿದೆ ಎಂದು ಹೇಳಲಾಗಿದೆ.  ಅಲ್ಪೇಶ್ ಠಾಕೂರ್ ಅವರು ರಾಹುಲ್ ಗಾಂಧಿ ಜಿಂದಾಬಾದ್ ಎಂದು ಹೇಳುವಂತೆ ಸಾರ್ವಜನಿಕರನ್ನು ಕೇಳಿಕೊಂಡಾಗ, ಸಾರ್ವಜನಿಕರು ಮೋದಿ-ಮೋದಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು ಎನ್ನಲಾಗಿದೆ.

Also Read: ಉತ್ತರ ಪ್ರದೇಶದಲ್ಲಿ ಚಾಕು ಹಿಡಿದು ಅಂಗಡಿಯವರನ್ನು ಬೆದರಿಸಿದ ವ್ಯಕ್ತಿಗೆ ಗುಂಡೇಟು ಎಂದ ವೀಡಿಯೋ ಕಲಬುರಗಿಯದ್ದು!

ಈ ವೀಡಿಯೋದಲ್ಲಿ ವೇದಿಕೆಯಲ್ಲಿ ಹೀಗೆ ಮಾತನಾಡುವುದು ಹೇಳಿಸುತ್ತದೆ ನಾನು ರಾಹುಲ್‌ ಗಾಂಧಿ ಎಂದು ಹೇಳುತ್ತೇನೆ. ಈ ವೇಳೆ ನೀವು ಜಿಂದಾಬಾದ್‌ ಎಂದು ಹೇಳಬೇಕು. ರಾಹುಲ್‌ ಗಾಂಧಿ ಎಂದು ಹೇಳಿದ ಬಳಿಕ ಮೂರು ಬಾರಿಯೂ ಮೋದಿ ಮೋದಿ ಎಂದು ಹೇಳುವುದು ಕೇಳಿಸುತ್ತದೆ.  

Fact Check/ Verification

ಈ ಹೇಳಿಕೆ ಬಗ್ಗೆ ತನಿಖೆ ನಡೆಸಲು ನಾವು ಮೊದಲು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಆದರೆ ಇದರಿಂದ ಯಾವುದೇ ನಿರೀಕ್ಷಿತ ಫಲಿತಾಂಶಗಳು ಲಭ್ಯವಾಗಲಿಲ್ಲ.

ಬಳಿಕ ನಾವು ಗೂಗಲ್‌ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಆ ಪ್ರಕಾರ, ಅಕ್ಟೋಬರ್ 24, 2017 ರಂದು ಗುಜರಾತ್ ಕಾಂಗ್ರೆಸ್‌ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೋ ವನ್ನು ನಾವು ಕಂಡುಕೊಂಡಿದ್ದೇವೆ. “ಗಾಂಧಿನಗರದಲ್ಲಿ ನವಸರ್ಜನ್ ಜನಾದೇಶ ಮಹಾಸಮ್ಮೇಳನ” ಎಂಬ ಶೀರ್ಷಿಕೆಯೊಂದಿಗೆ ಸುಮಾರು ಒಂದೂವರೆ ಗಂಟೆಯ ವೀಡಿಯೋ ಇದ್ದು ಇದರಲ್ಲಿ ವೈರಲ್ ಆದ 33 ನಿಮಿಷಗಳ ಕ್ಲಿಪ್ಪಿಂಗ್‌ ಕೂಡ ಕಂಡುಬಂದಿದೆ. ಇದು ಈ ವೀಡಿಯೋ ಹಳೆಯದು ಎಂದು ಸ್ಪಷ್ಟಪಡಿಸುತ್ತದೆ.

Also Read: ವಿಠಲನ ವಿಗ್ರಹವನ್ನು ಸ್ವೀಕರಿಸಲು ರಾಹುಲ್ ಗಾಂಧಿ ನಿರಾಕರಿಸಿದರು ಎಂಬ ಹೇಳಿಕೆ ಸುಳ್ಳು

ಮೂಲ ವೀಡಿಯೊದಲ್ಲಿರುವ ಕ್ಲಿಪ್ಪಿಂಗ್‌ ಅನ್ನು ಪರಿಶೀಲಿಸಿದಾಗ, ವೈರಲ್‌ ವೀಡಿಯೋಕ್ಕೆ ಮೋದಿ ಮೋದಿ ಎಂಬ ಘೋಷಣೆಯನ್ನು ಎಡಿಟಿಂಗ್‌ ಮೂಲಕ ಸೇರಿಸಲಾಗಿದೆ ಎಂದು ಕಂಡುಬಂದಿದೆ. ಮೂಲ ವೀಡಿಯೋದಲ್ಲಿ ಅಲ್ಪೇಶ್ ಠಾಕೂರ್ ಅವರು ರಾಹುಲ್‌ ಗಾಂಧಿ ಜಿಂದಾಬಾದ್‌ ಎಂದು ಘೋಷಣೆ ಕೂಗಲು ಹೇಳಿದಾಗ, ಅಲ್ಲಿದ್ದ ಜನರು ರಾಹುಲ್‌ ಗಾಂಧಿ ಜಿಂದಾಬಾದ್‌ ಎಂದೇ ಘೋಷಣೆಯನ್ನು ಕೂಗುತ್ತಿರುವುದನ್ನು ಕಾಣಬಹುದು.

ತನಿಖೆಯ ವೇಳೆ ನಾವು “ನವಸರ್ಜನ್ ಜನದೇಶ ಮಹಾಸಮ್ಮೇಳನ ಗಾಂಧಿನಗರ”ಕ್ಕೆ ಸಂಬಂಧಿಸಿದ ಮಾಹಿತಿಯನ್ನು ಶೋಧಿಸಿದ್ದೇವೆ. ಅದರಂತೆ  ಸಮಾವೇಶದ ಬಗ್ಗೆ ಪ್ರಕಟವಾದ ಹಲವಾರು ವರದಿಗಳು ಲಭ್ಯವಾಗಿವೆ. ಅಕ್ಟೋಬರ್ 23, 2017 ರಂದು ಪ್ರಕಟವಾದ ಬಿಬಿಸಿ ವರದಿಯಲ್ಲಿ ವೈರಲ್ ಕ್ಲಿಪ್‌ ನಲ್ಲಿ ಕಂಡುಬಂದ ವೇದಿಕೆಯ ಚಿತ್ರವನ್ನು ಗುರುತಿಸಬಹುದು.  

ಈ ವರದಿಯ ಪ್ರಕಾರ, ಗುಜರಾತ್ ಚುನಾವಣೆಗೆ ಮೊದಲು ಗಾಂಧಿನಗರದಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ನವಸರ್ಜನ್ ಜನದೇಶ ಮಹಾಸಮ್ಮೇಳನದಲ್ಲಿ ಅಲ್ಪೇಶ್ ಠಾಕೂರ್ ಔಪಚಾರಿಕವಾಗಿ ಕಾಂಗ್ರೆಸ್ ಸೇರಿದರು. ಅಲ್ಪೇಶ್ ಠಾಕೂರ್ ಅನಂತರ ಜುಲೈ 4, 2019 ರಂದು ಬಿಜೆಪಿಗೆ ಸೇರಿದ್ದರು.

ಅಕ್ಟೋಬರ್ 23, 2017 ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ವರದಿಯು ರಾಲಿಯ ಮಾಹಿತಿಯನ್ನು ನೀಡಿದೆ. ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ಅವರೊಂದಿಗೆ ರಾಹುಲ್ ಗಾಂಧಿ ಅವರು ರಾಲಿಗೆ ಆಗಮಿಸಿದಾಗ ಅವರನ್ನು ದೊಡ್ಡ ಚಪ್ಪಾಳೆಯೊಂದಿಗೆ ಸ್ವಾಗತಿಸಲಾಯಿತು ಎಂದು ರಾಲಿಯ ದೃಶ್ಯಾವಳಿಗಳೊಂದಿಗೆ ವರದಿ ಮಾಡಲಾಗಿದೆ. ಆದರೆ ವರದಿಯಲ್ಲಿ ಎಲ್ಲಿಯೂ ಜನರು ಮೋದಿ ಮೋದಿ ಎಂದು ಘೋಷಣೆ ಕೂಗಿದ ಬಗ್ಗೆ ವಿವರಗಳನ್ನು ನೀಡಲಾಗಿಲ್ಲ. 

Conclusion

ಪುರಾವೆಗಳ ಪ್ರಕಾರ ರಾಹುಲ್ ಗಾಂಧಿ ಅವರ ರಾಲಿಯಲ್ಲಿ “ಮೋದಿ-ಮೋದಿ” ಘೋಷಣೆಗಳನ್ನು ಕೂಗಲಾಗಿದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. 7 ವರ್ಷ ದಷ್ಟು ಹಳೆಯ ವೀಡಿಯೋವನ್ನು ತಿರುಚಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವುದನ್ನು ನಾವು ತನಿಖೆಯಲ್ಲಿ ಕಂಡುಕೊಂಡಿದ್ದೇವೆ. 

Also Read: ಬೆಂಗಳೂರು-ಮೈಸೂರು ಹೈವೇಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದ ವೀಡಿಯೋ ಗದಗಿನದ್ದು!

Result: Altered photo/ video

Our Sources
Video shared by Gujrat Congress, Dated: 24th October 2017.

Report published by BBC, Dated: 23rd October 2017.

Report published by Times of India, Dated: 23rd October 2017.

(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.