ಪರೀಕ್ಷೆಗೆ ಓದುವಾಗ ಡಾರ್ಕ್‌ ಚಾಕಲೆಟ್‌ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತಾ?

ಡಾರ್ಕ್‌ ಚಾಕಲೆಟ್‌, ನೆನಪಿನ ಶಕ್ತಿ, ಪರೀಕ್ಷೆ

Claim

ಪರೀಕ್ಷೆಗೆ ಓದುವಾಗ ಡಾರ್ಕ್‌ ಚಾಕಲೆಟ್‌ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ ಎನ್ನುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತ ಕ್ಲೇಮ್‌ ಹೀಗಿದೆ “ಪರೀಕ್ಷೆಗೆ ಓದುವಾಗ ಡಾರ್ಕ್ ಚಾಕಲೆಟ್‌ ತಿನ್ನುವುದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಮೆಮೊರಿ ಪವರ್‌ ಹೆಚ್ಚಿಸಲು ಸಹಾಯ ಮಾಡುತ್ತದೆ” ಎಂದಿದೆ.

ಪರೀಕ್ಷೆ, ಡಾರ್ಕ್ ಚಾಕಲೆಟ್, ನೆನಪಿನ ಶಕ್ತಿ, ಓದು
ಫೇಸ್‌ಬುಕ್‌ನಲ್ಲಿ ಕಂಡುಬಂದ ಕ್ಲೇಮ್‌

ಈ ಬಗ್ಗೆ ನ್ಯೂಸ್‌ಚೆಕರ್‌ ಸತ್ಯ ಪರಿಶೀಲನೆ ನಡೆಸಿದ್ದು ಇದೊಂದು ತಪ್ಪಾದ ಸಂದರ್ಭ ಎಂದು ಪತ್ತೆಹಚ್ಚಿದೆ.

Fact Check/ Verification

ಲಭ್ಯವಿರುವ ವೈಜ್ಞಾನಿಕ ದಾಖಲೆಗಳು ಹೇಳುವ ಪ್ರಕಾರ ಡಾರ್ಕ್‌ ಚಾಕಲೆಟ್‌ಗಳನ್ನು ತಿಂದರೆ ನೆನಪಿನ ಶಕ್ತಿ ಹೆಚ್ಚಬಹುದು. ಆದರೆ ಇದನ್ನು ಜನರು ನಿಯಮಿತವಾಗಿ ಸ್ವಲ್ಪ ಪ್ರಮಾಣದಲ್ಲಿ ತಿನ್ನುತ್ತಲೇ ಇರಬೇಕು ಅಂದರೆ ಮಾತ್ರ ಯಾವುದೇ ಪರಿಣಾಮ ಕಾಣಹುದು.

ಸಂಶೋಧನೆ ಪ್ರಕಾರ ಹೆಚ್ಚಿನ ಫ್ಲೇವನಾಲ್‌ ಕೋಕಾ ರಕ್ತಸಂಚಾರವನ್ನು ಮೆದುಳಿಗೆ ಹೆಚ್ಚು ಮಾಡುತ್ತದೆ. ಆದ್ದರಿಂದ ಕೋಕಾ ತಿನ್ನುವುದರಿಂದ ಗಮನ ಕೊಡುವಿಕೆ, ಮೌಖಿಕ ಕಲಿಕೆ ಮತ್ತು ಸ್ಮರಣ ಶಕ್ತಿ ಹಚ್ಚಬಹುದು. ಕೋಕಾದಲ್ಲಿರುವ ಫ್ಲೇವೊನಾಯ್ಡ್ಸ್ಗಳು, ವಯಸ್ಕರಲ್ಲಿರುವ ಸೌಮ್ಯವಾದ ಅರಿವಿನ ದುರ್ಬಲತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಬುದ್ಧಿಮಾಂದ್ಯತೆಯ ಪ್ರಗತಿಯ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಕೋಕಾದಲ್ಲಿ ಕೆಫೀನ್‌ ಮತ್ತು ಧಿಯೋಬ್ರೊಮೈನ್‌ ಅಂಶಗಳಿರುವುದರಿಂದ ಇದು ಮೆದುಳಿನ ಕಾರ್ಯಚಟುವಟಿಕೆ ಉತ್ತಮ ಮಾಡಲು ನೆರವು ನೀಡಬಹುದು. ಆದಗ್ಯೂ ಲಭ್ಯವಿರುವ ಸಂಶೋಧನೆಗಳ ಪ್ರಕಾರ, ಡಾರ್ಕ್‌ ಚಾಕಲೇಟ್‌ ತಿಂದರೆ ಮೆದುಳಿನ ಕಾರ್ಯಚಟುವಟಿಕೆ ಉತ್ತಮವಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ಇನ್ನಷ್ಟು ಸಂಶೋಧನೆಗಳ ಅಗತ್ಯವಿದೆ.

Also Read: ಚಹಾ ಕುಡಿದರೆ ಆರೋಗ್ಯಕ್ಕೆ ಹಾಳು; ಚಹಾ ಕುಡಿಯುವವರು ಹೆಚ್ಚು ವರ್ಷ ಬದುಕುತ್ತಾರೆ, ಯಾವುದು ಸತ್ಯ?

ಇದರೊಂದಿಗೆ ಪರೀಕ್ಷೆಗೆ ಹತ್ತಿರವಾಗುವ ವೇಳೆ ಓದಿನ ಸಂದರ್ಭದಲ್ಲಿ ಚಾಕಲೆಟ್‌ ತಿಂದರೆ, ಮೆದುಳಿಗೆ ರಕ್ತಸಂಚಾರ ಹೆಚ್ಚಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ ಎಂದು ಹೇಳಲು ಯಾವುದೇ ಸಾಕ್ಷ್ಯವಿಲ್ಲ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಡಾ.ಕಶ್ಯಪ್‌ ದಕ್ಷಿಣಿ ಅವರ ಪ್ರಕಾರ, “ಡಾರ್ಕ್‌ ಚಾಕಲೆಟ್ ಗಳಲ್ಲಿ ಫ್ಲೇವನಾಯ್ಸ್ಡ್ ಗಳಿವೆ. ಇದು ಸಾಮಾನ್ಯವಾಗಿ ಹಣ್ಣು ಮತ್ತು ತರಕಾರಿಗಳಲ್ಲಿ ಕಂಡುಬರುತ್ತವೆ. ಕೆಲವೊಂದು ಪ್ರಯೋಗಗಳು, ನಿತ್ಯವೂ ಫ್ಲೇವನಾಆಯ್ಡ್ಸ್‌ ಮತ್ತು ಫ್ಲೇವನಾಯ್ಸ್ಡ್‌ ಹೆಚ್ಚಿರುವ ಆಹಾರಗಳನ್ನು, ಫ್ಲೇವನಾಯ್ಸ್ಡ್ ಗಳು ಹೆಚ್ಚಿರುವ ಕೋಕಾಗಳನ್ನು ಸೇವಿಸುವುದರಿಂದ ನೆನಪಿನ ಶಕ್ತಿ ಮೇಲೆ ಧನಾತ್ಮಕ ಪರಿಣಾಮ ಉಂಟು ಮಾಡುತ್ತವೆ ಮತ್ತು ಆರೋಗ್ಯವಂತ ವಯಸ್ಕರಲ್ಲಿ ಕಾರ್ಯಕಾರಿ ಚಟುವಟಿಕೆಗಳನ್ನು ಉಂಟುಮಾಡುತ್ತದೆ ಎಂದು ಹೇಳಿವೆ. ಆದಾಗ್ಯೂ ಗಮನಿಸಬೇಕಾದ ಅಂಶವೆಂದರೆ, ಪ್ರಯೋಗಾಲಯಗಳಲ್ಲಿ ಬಳಸುವ ಫ್ಲೇವನಾಯ್ಡ್ ಗಳ ಸಾಂದ್ರತೆಯು ವಾಣಿಜ್ಯಿಕವಾಗಿ ಲಭ್ಯವಿರುವ ಡಾರ್ಕ್‌ ಚಾಕಲೆಟ್‌ಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚು ಇವೆ”. ಎಂದು ಹೇಳಿದ್ದಾರೆ.

Conclusion

ಈ ಸತ್ಯ ಶೋಧನೆಯ ಪ್ರಕಾರ ಪರೀಕ್ಷೆಗೆ ಓದುವಾಗ ಡಾರ್ಕ್ ಚಾಕಲೆಟ್‌ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ ಎನ್ನುವುದು ತಪ್ಪಾದ ಸಂದರ್ಭವಾಗಿದೆ.

Results: Missing Context

(This article has been published in collaboration with THIP Media)

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.