ಗುರುವಾರ, ಜೂನ್ 20, 2024
ಗುರುವಾರ, ಜೂನ್ 20, 2024

ನಮ್ಮ ವಿಧಾನ

1. ಕ್ಲೈಮ್‌ಗಳ ಆಯ್ಕೆ

ನಾವು ನಿರಂತರವಾಗಿ ಸರ್ಕಾರಗಳು, ರಾಜಕಾರಣಿಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕ ರಂಗದ ವ್ಯಕ್ತಿಗಳು, ಸಂಸ್ಥೆಗಳು, ಸುದ್ದಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಇರಬಹುದಾದ ಅನುಮಾನಾಸ್ಪದ ಕ್ಲೈಮ್‌ಗಳು, ತಪ್ಪು ಮಾಹಿತಿಗಳು, ಸುಳ್ಳು ಸುದ್ದಿಗಳಿಗಾಗಿ ನಾವು ಹಿಂಬಾಲಿಸುತ್ತೇವೆ. ನಮ್ಮ ಆಯ್ಕೆ ಪ್ರಕ್ರಿಯೆಯು ವರದಿ ಮಾಡುವಿಕೆಯಲ್ಲಿ ಹಕ್ಕು ಸಾಧಿಸಿದ ಸಾಕ್ಷ್ಯದ ಸ್ಥಾನ, ಅಥವಾ ಪ್ರಮಾಣ, ಸಾರ್ವಜನಿಕ ಚರ್ಚೆಯನ್ನು ರೂಪಿಸುವಲ್ಲಿ ಕ್ಲೈಮ್‌ನ ಸಂಭಾವ್ಯ ಪ್ರಸ್ತುತತೆ ಮತ್ತು ಕ್ಲೈಮ್ ಮಾಡುವವರ ಪ್ರಸ್ತುತ ವ್ಯಾಪ್ತಿಯ ಗಾತ್ರವನ್ನು ಅನುಸರಿಸಿರುತ್ತದೆ

ನಾವು ನಿರ್ದಿಷ್ಟವಾಗಿ ಆರೋಗ್ಯ, ಸಾರ್ವಜನಿಕ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ, ಸುಳ್ಳು ಪ್ರಚಾರ ಮತ್ತು ವಿಭಜನಕಾರಿ ವಿಷಯಗಳ ರೀತಿ ಪರಿಣಾಮ ಬೀರುವ ಕ್ಲೈಮ್‌ಗಳ ಬಗ್ಗೆ ಆದ್ಯತೆ ನೀಡುತ್ತೇವೆ.

2. ತನಿಖೆ

ವಿವಿಧ ಮಾಧ್ಯಮಗಳಲ್ಲಿ ವಿವಿಧ ಸುದ್ದಿಗಳು ಮತ್ತು ಕ್ಲೈಮ್‌ಗಳನ್ನು ನಾವು ನಿರ್ಲಿಪ್ತವಾಗಿ ಪರಿಶೀಲಿಸುತ್ತೇವೆ. ಸಾಧ್ಯವಾದ ಸಂದರ್ಭಗಳಲ್ಲಿ ನಾವು ಕ್ಲೈಮ್‌ ಮಾಡಿದ ವ್ಯಕ್ತಿಗಳನ್ನು/ಸಂಸ್ಥೆಗಳನ್ನು ಸಂಪರ್ಕಿಸಿ, ಹೇಳಿಕೆಯ ನಿಖರತೆಯನ್ನ ಖಚಿತಪಡಿಸಿಕೊಳ್ಳುತ್ತೇವೆ. ಕ್ಲೈಮ್‌ ದಾರರು ಒದಗಿಸುವ ಯಾವುದೇ ಮೂಲಗಳನ್ನು ನಾವು ತನಿಖೆ ಮಾಡುತ್ತೇವೆ. ವೈರಲ್‌ ಚಿತ್ರ ಅಥವಾ ವೀಡಿಯೋದ ಮೂಲವನ್ನು ಪರಿಶೀಲಿಸಲು ನಾವು ಇಂಟರ್ನೆಟ್‌ ಸಲಕರಣೆಗಳಾದ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌, ರೆವ್‌ಐ, ಟಿನ್ಐ, ಬಿಂಗ್‌, ಎಕ್ಸಿಫ್‌ ಇತ್ಯಾದಿಗಳನ್ನು ಬಳಸುತ್ತೇವೆ.

ನಾವು ಕ್ಲೈಮ್‌ಗಳಿಗೆ ಕಾರಣರಾದವರನ್ನೂ ಸಂಪರ್ಕಿಸುತ್ತೇವೆ. ಸಾಧ್ಯವಾದರೆ, ಅವರ ಆಯಾಮವನ್ನು ಕೇಳಲು ಅಥವಾ ಅವನು/ಅವಳು/ಅವರು/ಅದರಿಂದ ಸಾಕ್ಷ್ಯ ಸಂಗ್ರಹಿಸಲು ಪ್ರಯತ್ನಿಸುತ್ತೇವೆ.

ನಮ್ಮ ಸತ್ಯ ಶೋಧನೆಗಳು ಕೇವಲ ಮಾಡಿದ ಕ್ಲೈಮ್‌ಗಳಿಗೆ ಸೀಮಿತವಾಗಿಲ್ಲ ಆದರೆ ಕಾಲಾಂತರದಲ್ಲಿ ಪ್ರವೃತ್ತಿಗಳನ್ನು ವೀಕ್ಷಿಸಲು ಐತಿಹಾಸಿಕ ಡಾಟಾಗಳನ್ನು ನೀಡುತ್ತವೆ.

3. ಗುಣಮಟ್ಟ ಪರಿಶೀಲನೆ

ಒಂದು ಬಾರಿ ಸತ್ಯ ಶೋಧಿಸಿದ್ದನ್ನು ಬರೆದ ನಂತರ ಅದನ್ನು ಪ್ರಕಟಿಸುವ ಮೊದಲು ನಮ್ಮ ಸಂಪಾದಕರು ಪರಿಶೀಲಿಸುತ್ತಾರೆ. ಹೆಚ್ಚುವರಿಯಾಗಿ ನಾವು ಸುದ್ದಿಯನ್ನು ವಿಮರ್ಶಿಸುವ ಗುಣಮಟ್ಟದ ವಿಮರ್ಶಕರನ್ನು ಹೊಂದಿದ್ದೇವೆ. ಅವರು ಸತ್ಯ ಪರೀಕ್ಷಕರು ಎಲ್ಲ ಹಂತಗಳನ್ನು ಅನುಸರಿಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಇದು ಸತ್ಯ ಪರೀಕ್ಷಕರು ಮತ್ತು ಸಂಪಾದಕ ಮೇಲೆ ಪರಿಶೀಲನೆಯ ಇನ್ನೊಂದು ಪದರವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ನಾವು ಪ್ರಕಟಿಸುವ ಎಲ್ಲ ಭಾಷೆಗಳಲ್ಲಿ ಸಾಮ್ಯತೆಯನ್ನು ತರುತ್ತದೆ.

4. ಪ್ರಕಟಣೆ/ತೀರ್ಪು

ಸತ್ಯ ಪರಿಶೀಲನೆಯ ಪ್ರಕ್ರಿಯೆ ಮತ್ತು ಶೋಧನೆಗಳ ವಿವರಗಳೊಂದಿಗೆ ಪರಿಶೀಲಿಸಲ್ಪಟ್ಟ ಸುದ್ದಿಯು ಅನಂತರ ನಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಗೊಳ್ಳುತ್ತದೆ.

ಪ್ರತಿಯೊಂದು ಸತ್ಯ ಶೋಧನೆಗಳಲ್ಲಿ ನಾವು ಹೇಗೆ ತೀರ್ಮಾನಿಸಿದೆವು ಎಂಬುದರ ಬಗ್ಗೆ ನಾವು ವಿಸ್ತೃತವಾದ ವಿವರಣೆಯನ್ನು ನೀಡುತ್ತೇವೆ ಮತ್ತು ಪ್ರತಿ ಸುದ್ದಿಗೆ ಬಳಸಿದ ಮೂಲಗಳನ್ನು ಪ್ರತ್ಯೇಕವಾಗಿ ಹೆಸರಿಸುತ್ತೇವೆ. ಓದುಗರು ಆ ಹಂತಗಳನ್ನು ಪುನರಾವರ್ತಿಸಬಹುದು ಮತ್ತು ನಾವು ಹೊಂದಿದ ಅದೇ ತೀರ್ಮಾನಕ್ಕೆ ಬರಬಹುದು.