Fact Check: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಓಟು ಹಾಕಲು ಪಾಕ್‌ ಪ್ರಧಾನಿ ಮನವಿ, ಟ್ವೀಟ್‌ ಸತ್ಯವೇ?

ಕಾಂಗ್ರೆಸ್‌ಗೆ ಮತ ಹಾಕುವಂತೆ ಪಾಕ್‌ ಪ್ರಧಾನಿ ಶೆಹಬಾಜ್‌ ಶರೀಫ್‌ ಮನವಿ

Claim

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆದಿದ್ದು, ಇದಕ್ಕೆ ಮುಂಚಿತವಾಗಿ ಮತವನ್ನು ಕಾಂಗ್ರೆಸ್‌ಗೆ ಹಾಕುವಂತೆ ಪಾಕಿಸ್ಥಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಹೇಳಿದ್ದಾರೆ ಎಂದು ಆರೋಪಿಸಲಾದ ಟ್ವೀಟ್‌ ಒಂದು ವೈರಲ್‌ ಆಗಿದೆ.

ಈ ಕುರಿತ ಕ್ಲೇಮ್‌ ಫೇಸ್‌ಬುಕ್‌ನಲ್ಲಿ ಕಂಡುಬಂದಿದ್ದು, ಅದು ಹೀಗಿದೆ “2047 ರೊಳಗೆ ಭಾರತವನ್ನ ಇಸ್ಲಾಂ ರಾಷ್ಟ್ರ ಮಾಡಬೇಕು. ಅದಕ್ಕಾಗಿ ನಿಷೇಧವಾಗಿರುವ PFI ಸಂಘಟನೆಯ ಮರು ಸ್ಥಾಪಿಸಬೇಕು. ಕಾಂಗ್ರೆಸ್ ಮಾತ್ರ PFI ಸಂಘಟನೆ ಮೇಲಿರುವ ನಿಷೇಧವನ್ನ ವಾಪಸ್ ಪಡೆಯುತ್ತದೆ. ಹಾಗಾಗಿ ಎಲ್ಲಾರೂ ಕಾಂಗ್ರೆಸ್ ಗೆ ಓಟು ಹಾಕಲು ನಾನು ಕೇಳಿಕೊಳ್ಳುತ್ತೇನೆ – ಶೆಹಬಾಜ್ ಶರೀಫ್, ಪಾಕಿಸ್ತಾನದ PM” ಎಂದಿದೆ. ಕ್ಲೇಮಿನಲ್ಲಿ ಈ ಕುರಿತ ಟ್ವೀಟ್‌ ಲಗತ್ತಿಸಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಓಟು ಹಾಕಲು ಪಾಕ್‌ ಪ್ರಧಾನಿ ಮನವಿ, ಟ್ವೀಟ್‌ ಸತ್ಯವೇ?

ನ್ಯೂಸ್‌ಚೆಕರ್‌ ಈ ಕ್ಲೇಮ್‌ ಅನ್ನು ಪರಿಶೀಲಿಸಿದ್ದು, ಇದು ನಕಲಿ ಟ್ವೀಟ್‌ ಎಂದು ಕಂಡುಬಂದಿದೆ.

Fact

ಸತ್ಯಶೋಧನೆಗಾಗಿ ಮೊದಲು ಟ್ವೀಟ್‌ ಅನ್ನು ಪರಿಶೀಲಿಸಲು ಉದ್ದೇಶಿಸಿದ್ದು, ಉರ್ದು ಭಾಷಿಕರ ಬಳಿ ಕೇಳಲಾಗಿದೆ. ಈ ವೇಳೆ ಟ್ವೀಟ್ ನ ಕೊನೆ ವಾಕ್ಯದಲ್ಲಿ ಕೆಲವು ಶಬ್ದಗಳು ಇಲ್ಲ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಪಾಕಿಸ್ಥಾನ ಪ್ರಧಾನಿ ಕರ್ನಾಟಕ ಚುನಾವಣೆ ಬಗ್ಗೆ ಏನಾದರೂ ಹೇಳಿದ್ದಾರೆಯೇ ಎಂದು ಪರೀಕ್ಷಿಸಲು ಗೂಗಲ್‌ನಲ್ಲಿ ಕೀವರ್ಡ್ ಸರ್ಚ್‌ ನಡೆಸಿದ್ದು ಈ ವೇಳೆ ಯಾವುದೇ ಫಲಿತಾಂಶ ಲಭ್ಯವಾಗಿಲ್ಲ.

Also Read: ಕಾಂಗ್ರೆಸ್‌ಗೆ ಮತ ನೀಡದಂತೆ ನಟ ಪ್ರಕಾಶ್ ರಾಜ್‌ ಮನವಿ, ವೀಡಿಯೋ ಹಿಂದಿನ ಸತ್ಯಾಸತ್ಯತೆ ಏನು?

ಆ ಬಳಿಕ ಟ್ವಿಟರ್ನಲ್ಲಿ ಶೆಹಬಾಜ್‌ ಶರೀಫ್‌ ಅವರ ಟ್ವಿಟರ್‌ ಖಾತೆಯನ್ನು ಪರಿಶೀಲಿಸಲಾಗಿದೆ. ಕ್ಲೇಮ್ನಲ್ಲಿ ಹೇಳಿರುವ ದಿನಾಂಕದಂದು ಶೆಹಬಾಜ್‌ ಅವರು ಒಟ್ಟು ಮೂರು ಟ್ವೀಟ್‌ಗಳನ್ನು ಮಾಡಿದ್ದು, ಕರ್ನಾಟಕ ವಿಧಾನಸಭೆಗೆ ಸಂಬಂಧಿಸಿದಂತೆ ಅವರು ಯಾವುದೇ ಟ್ವೀಟ್‌ಗಳನ್ನು ಮಾಡಿರುವುದು ಕಂಡು ಬಂದಿರುವುದಿಲ್ಲ.

ಇದರೊಂದಿಗೆ ಹೆಚ್ಚಿನ ಮಾಹಿತಿಗೆ ಸೋಷ್ಯಲ್‌ ಬ್ಲೇಡ್‌ ಅನ್ನು ಪರಿಶೀಲಿಸಲಾಗಿದ್ದು, ಅಲ್ಲೂ ವೈರಲ್‌ ಟ್ವೀಟ್‌ನಲ್ಲಿ ಇರುವಂತೆ ಮೇ.7ರಂದು ಯಾವುದೇ ಕರ್ನಾಟಕ ಚುನಾವಣೆಗೆ ಸಂಬಂಧಿಸಿ ಟ್ವೀಟ್‌ ಮಾಡಿರುವುದು ಖಚಿತ ಪಟ್ಟಿಲ್ಲ.

ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಓಟು ಹಾಕಲು ಪಾಕ್‌ ಪ್ರಧಾನಿ ಮನವಿ, ಟ್ವೀಟ್‌ ಸತ್ಯವೇ?
ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್‌ಗೆ ಓಟು ಹಾಕಲು ಪಾಕ್‌ ಪ್ರಧಾನಿ ಮನವಿ, ಟ್ವೀಟ್‌ ಸತ್ಯವೇ?

ಈ ಸತ್ಯಶೋಧನೆಯ ಪ್ರಕಾರ, ಪಾಕಿಸ್ಥಾನ ಪ್ರಧಾನಿ ಶೆಹಬಾಜ್‌ ಶರೀಫ್‌ ಅವರು ಕಾಂಗ್ರೆಸ್‌ ಪರವಾಗಿ ಮತದಾನ ಮಾಡಿ ಎಂದು ಕರ್ನಾಟಕದ ಜನತೆಗೆ ಮನವಿ ಮಾಡಿದ್ದಾರೆ ಎನ್ನುವುದು ತಪ್ಪಾಗಿದೆ.

Result: False

Our Sources:

Twitter Account of Pakistan PM Shehabaz Sharif

Social Blade/cmshebaz


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.