Authors
Claim
ರಕ್ಷಾಬಂಧನದ ದಿನ ಹಿಂದೂ ಹುಡುಗಿಗೆ ಕಿರುಕುಳ ನೀಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಥಳಿಸಿದ ಗುಜರಾತ್ ಪೊಲೀಸರು
Fact
ಈ ಘಟನೆ 2015ರ ವೇಳೆ ನಡೆದಿದ್ದು, ಇತ್ತೀಚಿನದ್ದಲ್ಲ. ಸಂಜೆ ವೇಳೆ ಯುವತಿಯರನ್ನು ಚುಡಾಯಿಸುತ್ತಿದ್ದ ಆರೋಪದ ಮೇರೆಗೆ ಇಬ್ಬರು ಇವಕರನ್ನು ಪೊಲೀಸರು ಥಳಿಸಿದ ಪ್ರಕರಣವಾಗಿದೆ
ಹಿಂದೂ ಹುಡುಗಿಗೆ ಕಿರುಕುಳ ನೀಡುತ್ತಿದ್ದ ಮುಸ್ಲಿಂ ಯುವಕನಿಗೆ ಪೊಲೀಸರು ಥಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದೆ.
ಫೇಸ್ಬುಕ್ನಲ್ಲಿ ಕಂಡುಬಂದ ಈ ವೀಡಿಯೋದಲ್ಲಿ “ಗುಜರಾತ್ನಲ್ಲಿ ರಕ್ಷಾಬಂಧನದಂದು ಮುಸ್ಲಿಂ ಜಿಹಾದಿಯೊಬ್ಬ ಹಿಂದೂ ಹುಡುಗಿಗೆ ಕಿರುಕುಳ ನೀಡುತ್ತಿದ್ದ, ಗುಜರಾತ್ ಪೊಲೀಸರು ಜಿಹಾದಿಗೆ ಸ್ಥಳದಲ್ಲೇ ಸರಿಯಾಗಿಯೇ ಚಿಕಿತ್ಸೆ ನೀಡಿದ್ದಾರೆ.” ಎಂದಿದೆ.
Also Read: ಬೆಂಗಳೂರು ವಿಧಾನಸೌಧ ಎದುರು ರಾಜಹಂಸ ಬಸ್-ಕಾರು ಡಿಕ್ಕಿ ಎಂದ ವೈರಲ್ ವೀಡಿಯೋ ಸತ್ಯವೇ?
ಈ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಈ ವೀಡಿಯೋ ಹಳೆಯದಾಗಿದ್ದು, ತಪ್ಪಾದ ಸಂದರ್ಭ ಎಂದು ತಿಳಿದುಬಂದಿದೆ.
Fact Check/ Verification
ಸತ್ಯಶೋಧನೆಗಾಗಿ ನಾವು ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ನಮಗೆ ಫಲಿತಾಂಶಗಳು ಲಭ್ಯವಾಗಿವೆ.
ಡಿಸೆಂಬರ್ 10, 2015ರಂದು ನ್ಯೂಸ್ಎಕ್ಸ್ ಯೂಟ್ಯೂಬ್ ವೀಡಿಯೋ ವರದಿಯಲ್ಲಿ “Eve Teaser tied to a car and beaten up in Surat, Gujarat” ಶೀರ್ಷಿಕೆಯಡಿ ವೀಡಿಯೋವನ್ನು ಅಪ್ ಲೋಡ್ ಮಾಡಿದ್ದು ಇದರಲ್ಲಿ ಸಂಜೆ ವೇಳೆ ಹುಡುಗಿಯರನ್ನು ಚುಡಾಯಿಸುತ್ತಿದ್ದವರನ್ನು ಗುಜರಾತ್ ಸೂರತ್ ಪೊಲೀಸರು ಥಳಿಸಿದರು ಎಂದಿದೆ.
ಇದನ್ನು ಸಾಕ್ಷ್ಯವಾಗಿರಿಸಿ ನಾವು ಇನ್ನಷ್ಟು ಶೋಧ ನಡೆಸಿದ್ದೇವೆ.
ಈ ವೇಳೆ ಡಿಸೆಂಬರ್ 9, 2015ರಂದು ಇಂಡಿಯಾ ಟುಡೇ ಯೂಟ್ಯೂಬ್ ವೀಡಿಯೋ ಲಭ್ಯವಾಗಿದೆ. “Cops Beat Up Alleged Eve-Teasers In Surat” ಶೀರ್ಷಿಕೆಯ ವರದಿಯಲ್ಲಿ ಚುಡಾಯಿಸಿದ ಆರೋಪದ ಮೇಲೆ ಯುವಕರನ್ನು ಗುಜರಾತ್ ನ ಸೂರತ್ ಪೊಲೀಸರು ತೀವ್ರವಾಗಿ ಥಳಿಸಿದರು ಎಂದಿದೆ.
Cops Beat Up Alleged Eve-Teasers In Surat – YouTube
ಇದರೊಂದಿಗೆ ನಮಗೆ ಎಬಿಪಿ ನ್ಯೂಸ್ ಯೂಟ್ಯೂಬ್ ಚಾನೆಲ್ ಡಿಸೆಂಬರ್ 9, 2015ರಂದು ಅಪ್ಲೋಡ್ ಮಾಡಿದ ವೀಡಿಯೋ ಲಭ್ಯವಾಗಿದೆ. ‘Surat police beat up two alleged eve teasers publicly’ ಶೀರ್ಷಿಕೆಯಲ್ಲಿ ‘ಸೂರತ್ ಪೊಲೀಸರು ಚುಡಾಯಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಸಾರ್ವಜನಿಕವಾಗಿ ಥಳಿಸಿದ್ದಾರೆ. ನಡುರಸ್ತೆಯಲ್ಲೇ ಇಬ್ಬರಿಗೂ ಲಾಠಿ ಪ್ರಹಾರ ನಡೆದಿದೆ. ಪೊಲೀಸರು ಕಾನೂನನ್ನು ಏಕೆ ಕೈಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗಳು ಎದ್ದಿವೆ.’ ಎಂದು ವಿವರಣೆಯಲ್ಲಿದೆ.
Also Read: ಮ್ಯಾನ್ಮಾರ್ ನಿಂದ ಮಣಿಪುರಕ್ಕೆ ಕಳ್ಳದಾರಿಯಲ್ಲಿ ರೊಹಿಂಗ್ಯಾಗಳು ಬರುತ್ತಿದ್ದಾರೆಯೇ, ಸತ್ಯವೇನು?
Conclusion
ಈ ಸತ್ಯಶೋಧನೆಯ ಪ್ರಕಾರ, ಇದು ಇತ್ತೀಚಿನ ರಕ್ಷಾಬಂಧನದ ಸಂದರ್ಭದಲ್ಲಿ ನಡೆದಿದ್ದಲ್ಲ, 2015ರಲ್ಲಿ ನಡೆದಿದೆ, ಸಂಜೆ ವೇಳೆ ಯುವತಿಯರನ್ನು ಚುಡಾಯಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಯುವಕರಿಗೆ ಪೊಲೀಸರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
Result: Missing Context
Our Sources
Youtube Video By NewsX, December 10, 2015
Youtube Video By IndiaToday, December 09, 2015
Youtube Video by ABP News, December 09, 2015
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.