Authors
Claim
ಹಮಾಸ್-ಇಸ್ರೇಲ್ ಸಂಘರ್ಷದ ಮಧ್ಯೆ, ಹಮಾಸ್ನಿಂದ ಅಂತಿಮ ಯಾತ್ರೆಯ ನಾಟಕ ಮಾಡುತ್ತಿದ್ದಾರೆ ಎಂಬಂತೆ ವೀಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ನಲ್ಲಿ ಕಂಡುಬಂದ ಕ್ಲೇಮಿನಲ್ಲಿ, “ಹಮಾಸ್ ಮುಸ್ಲಿಮರ ಡ್ರಾಮಾ, ಪ್ಯಾಲಸ್ತೀನ್ ನಲ್ಲಿ ನಡೀತಿರೋದು” ಎಂದು ಹೇಳಲಾಗಿದೆ.
ಈ ಕುರಿತ ಸತ್ಯಶೋಧನೆಯನ್ನು ನ್ಯೂಸ್ಚೆಕರ್ ನಡೆಸಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.
Fact
ನ್ಯೂಸ್ಚೆಕರ್ ವೀಡಿಯೊದ ಕೀಫ್ರೇಮ್ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿತು, ಇದು ಯುಎಇ ಮೂಲದ ಮಾಧ್ಯಮ ಸಂಸ್ಥೆ ಅಲ್ ರೋಯಾ ಮಾರ್ಚ್ 24, 2020 ರಂದು ಮಾಡಿದ ಈ ಅರೇಬಿಕ್ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ದಿದೆ. ಜೋರ್ಡಾನ್ನಲ್ಲಿ ಯುವಕರ ಗುಂಪು ಕೋವಿಡ್ -19 ನಿರ್ಬಂಧಗಳಿಂದ ಹೊರಬರಲು ನಕಲಿ ಅಂತಿಮೆಯಾತ್ರೆ ನಡೆಸಿದೆ ಎಂದು ಹೇಳಿದೆ.
ನಂತರ ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಇದು ಯುಎಇ ಮೂಲದ ಇನ್ನೊಂದು ಮಾಧ್ಯಮ ಸಂಸ್ಥೆ 24.ae ಮಾರ್ಚ್ 24, 2020 ರಂದು ಮಾಡಿದ ಟ್ವೀಟ್ ಪತ್ತೆಯಾಗಿದೆ. ಮತ್ತು ಅದರಲ್ಲಿ ನಕಲಿ ಅಂತಿಮಯಾತ್ರೆಯ ವೀಡಿಯೋವನ್ನು ಹಂಚಿಕೊಂಡಿದೆ.
ಜೋರ್ಡಾನ್ ಮೂಲದ ಪತ್ರಿಕೆ ರೋಯಾ ನ್ಯೂಸ್ ಇಂಗ್ಲಿಷ್ ಕೂಡ ಮಾರ್ಚ್ 23, 2020 ರಂದು ಫೇಸ್ಬುಕ್ನಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿ, “ನಕಲಿ ಅಂತ್ಯಕ್ರಿಯೆ! ಎಚ್ಚರಿಕೆಗಳ ಹೊರತಾಗಿಯೂ ಜನರು ಇನ್ನೂ ಕಾನೂನನ್ನು ಉಲ್ಲಂಘಿಸುತ್ತಿದ್ದಾರೆ “, ಇದು ವೈರಲ್ ವೀಡಿಯೊ ಇಸ್ರೇಲ್ ಮತ್ತು ಪ್ಯಾಲಸ್ತೀನ್ ನಡುವೆ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿಲ್ಲ ಎಂದು ದೃಢಪಡಿಸಿದೆ.
ಈ ಸತ್ಯಶೋಧನೆಯ ಪ್ರಕಾರ, ನಕಲಿ ಅಂತಿಮಯಾತ್ರೆಯ ಈ ವೀಡಿಯೋ, ಪ್ಯಾಲೆಸ್ತೀನ್ನದ್ದಲ್ಲ. ಇದು ಜೋರ್ಡಾನ್ ನದ್ದು ಮತ್ತು ಕೋವಿಡ್ ಸಾಂಕ್ರಾಮಿಕ ರೋಗ ಹಬ್ಬಿದ ಸಂದರ್ಭದ್ದು ಎಂದು ತಿಳಿದುಬಂದಿದೆ.
Result: False
Our Sources
Report By Al Roeya , Dated: March 24, 2020
Tweet By 24.ar tweet, Dated: March 24, 2020
Facebook post By Roya News English post, Facebook, March 23, 2020
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ಇಂಗ್ಲಿಷ್ನಲ್ಲಿ ಪ್ರಕಟಿಸಲಾಗಿದ್ದು, ಇದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.