Fact check: ಜೈನ ಸಮುದಾಯದ ಹುಡುಗಿ ಅಪಹರಿಸಿದ ಮುಸ್ಲಿಂ ಯುವಕ, ಆಂಧ್ರದ ನೆಲ್ಲೂರಿನ ಕಥೆ ನಿಜವೇ?

ಆಂಧ್ರ, ನೆಲ್ಲೂರು, ಜೈನ ಹುಡುಗಿ, ಮುಸ್ಲಿಂ ಯುವಕ,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಜೈನ ಸಮುದಾಯದ ಹುಡುಗಿ ಅಪಹರಿಸಿದ ಮುಸ್ಲಿಂ ಯುವಕ, ಆಂಧ್ರದ ನೆಲ್ಲೂರಿನ ಕಥೆ

Fact
ಈ ಕಥೆ ಕಾಲ್ಪನಿಕ. ನೆಲ್ಲೂರಿನಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ, ಇದು ಸುಳ್ಳು ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರಿನ ಮಾರ್ವಾಡಿ ಜೈನ ಸಮುದಾಯದ ಹುಡುಗಿಯನ್ನು ಮುಸ್ಲಿಂ ಹುಡುಗನೊಬ್ಬ ಅಪಹರಿಸಿದ್ದು, ಬಳಿಕ ಆ ಸಮುದಾಯ ಮುಸ್ಲಿಂ ಸಮುದಾಯವನ್ನು ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಹುಡುಗಿ ವಾಪಾಸ್‌ ಕುಟುಂಬವನ್ನು ಸೇರಿಕೊಂಡಿದ್ದು, ಈ ಒಗ್ಗಟ್ಟು ಪ್ರಶಂಸನೀಯ ಎಂಬಂತೆ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ “ಆಂದ್ರ ಪ್ರದೇಶದ ನೆಲ್ಲೂರು ಪಟ್ಟಣದ ಮಾರ್ವಾಡಿ ಜೈನ ಸಮುದಾಯದ ಹುಡುಗಿಯೊಬ್ಬಳನ್ನು ಜಿಹಾದಿ ಮುಸ್ಲಿಂ ಹುಡುಗನೊಬ್ಬ ಅಪಹರಿಸಿದ್ದ. ನೆಲ್ಲೂರಿನಲ್ಲಿ ಸುಮಾರು 800 ಕ್ಕೂ ಹೆಚ್ಚು ಜೈನ ಮತ್ತು ಇತರ ಮಾರ್ವಾಡಿ ಕುಟುಂಬಗಳ ಕಾರ್ಖಾನೆಗಳು, ಶೋ ರೂಂಗಳು ಮತ್ತು ಅಂಗಡಿಗಳಿವೆ, ಅವುಗಳಲ್ಲಿ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಮುಸ್ಲಿಂಮರು ಕೆಲಸ ಮಾಡುತ್ತಾರೆ. ಜೈನ ಮತ್ತು ಹಿಂದೂ ಸಮುದಾಯಗಳ ಹಿರಿಯರು ಸಭೆ ನಡೆಸಿ ತಮ್ಮಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ಮುಸ್ಲಿಂಮರನ್ನು ಕೂಡಲೇ ಕೆಲದಿಂದ ತೆಗೆದು ಹಾಕಿದರು. ಮುಸಲ್ಮಾನರಲ್ಲಿ ಎಷ್ಟು ಹಾಹಾಕಾರ ಎದ್ದಿತು ಎಂದರೆ, ಕೇವಲ ನಾಲ್ಕು ಗಂಟೆಯೊಳಗೆ ಸ್ವತಃ ಆ ಮುಸ್ಲಿಂ ಹುಡುಗ ತನ್ನ ನೂರಾರು ಮುಸಲ್ಮಾನರ ಜೊತೆಯಲ್ಲಿ ಬಂದು ತನ್ನ ತಪ್ಪನ್ನು ಒಪ್ಪಿಕೊಂಡು ಮುಂದೆ ಜೈನ ಅಥವಾ ಹಿಂದೂ ಸಮುದಾಯದ ಕುಟುಂಬಗಳ ಯಾವ ಹುಡುಗಿಯ ಬಳಿಯೂ ಇಂತಹ ಕೃತ್ಯ ಎಸಗುವುದಿಲ್ಲ ಎಂದು ಆಣೆ – ಪ್ರಮಾಣ – ವಾಗ್ದಾನ ಮಾಡಿ ಅಲ್ಲಿಂದ ಹೊರಟು ಹೋದರು. ಹುಡುಗಿ ಸುರಕ್ಷಿತವಾಗಿ ಮನೆ ಸೇರಿದಳು..! ಮಾರ್ವಾಡಿ ಸಮುದಾಯದ ಒಗ್ಗಟ್ಟಿನ ಬಗ್ಗೆ ನಮಗೆ ಹೆಮ್ಮೆ ಇದೆ.” ಎಂದು ಹೇಳಲಾಗಿದೆ.

Also Read: ಜಿಹಾದಿಗಳಿಂದ ಏಡ್ಸ್ ಇಂಜೆಕ್ಷನ್‌ ಎನ್ನುವ ಈ ವೈರಲ್‌ ಮೆಸೇಜ್ ಸತ್ಯವೇ?

Fact check: ಜೈನ ಸಮುದಾಯದ ಹುಡುಗಿ ಅಪಹರಿಸಿದ ಮುಸ್ಲಿಂ ಯುವಕ, ಆಂಧ್ರದ ನೆಲ್ಲೂರಿನ ಈ ಕಥೆ ನಿಜವೇ?

ಈ ಕುರಿತು ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಸುಳ್ಳು ಎಂದು ಕಂಡುಬಂದಿದೆ.

Fact check/Verification

ನೆಲ್ಲೂರಿನ ಪ್ರಕರಣದ ಕುರಿತು ಸತ್ಯಶೋಧನೆಗಾಗಿ ನಾವು ಸಾಕಷ್ಟು ಹುಟುಕಾಟ ನಡೆಸಿದ್ದು, ಅಂತಹ ಘಟನೆಯ ಬಗ್ಗೆ ಯಾವುದೇ ವರದಿಗಳು ಕಂಡುಬಂದಿಲ್ಲ.

ಈ ಘಟನೆಯ ಬಗ್ಗೆ ಹೆಚ್ಚಿನ ಶೋಧದ ಭಾಗವಾಗಿ ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಹುಡುಕಾಟವನ್ನು ನಡೆಸಿದೆ. ಈ ವೇಳೆ  ಡಿಸೆಂಬರ್ 28, 2019 ರಂದು ನೆಲ್ಲೂರು ಪೊಲೀಸ್ ಫೇಸ್ಬುಕ್ ಖಾತೆಯಲ್ಲಿ ಮಾಡಿದ ಪೋಸ್ಟ್ ನಮಗೆ ಲಭ್ಯವಾಗಿದೆ.

Fact check: ಜೈನ ಸಮುದಾಯದ ಹುಡುಗಿ ಅಪಹರಿಸಿದ ಮುಸ್ಲಿಂ ಯುವಕ, ಆಂಧ್ರದ ನೆಲ್ಲೂರಿನ ಈ ಕಥೆ ನಿಜವೇ?

 “ವಾಟ್ಸ್ ಆ್ಯಪ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವಂತೆ ಯಾವುದೇ ಗ್ರೂಪ್ ಗೆ ನಕಲಿ ಸಂದೇಶ ರವಾನೆ, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಎಸ್ಪಿ ಶ್ರೀ ಭಾಸ್ಕರ ಭೂಷಣ್ ಐಪಿಎಸ್ ತಿಳಿಸಿದ್ದಾರೆ. ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದಲ್ಲಿ, ಸರ್ ನಿಮಗೆ ಎಚ್ಚರಿಕೆ ನೀಡಿದ್ದಾರೆ.” ಎಂದಿದೆ. ಈ ಪೋಸ್ಟ್‌ ನೊಂದಿಗೆ ಸದ್ಯ ವೈರಲ್‌ ಆಗಿರುವ ಘಟನೆಯಬಗ್ಗೆ ಬರೆಯಲಾಗಿದ್ದು  “ವೈರಲ್ ಸಂದೇಶವು ಸಂಪೂರ್ಣವಾಗಿ ತಪ್ಪು ಮತ್ತು ಸುಳ್ಳು. ಈ ರೀತಿಯ ಯಾವುದೇ ಘಟನೆ ನಡೆದಿಲ್ಲ ಮತ್ತು ಅಂತಹ ಸಂದೇಶಗಳನ್ನು ಕಳುಹಿಸುವ ಪ್ರವೃತ್ತಿಯನ್ನು ನಾವು ಖಂಡಿಸುತ್ತೇವೆ. ಹಾಗೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ನಾವು ಪತ್ರಿಕಾ ಟಿಪ್ಪಣಿಯಲ್ಲಿ ಓದಿದ್ದೇವೆ.

Also Read: ಹಮಾಸ್‌ನಿಂದ ಅಂತಿಮ ಯಾತ್ರೆಯ ನಾಟಕ ಎನ್ನುವ ವೀಡಿಯೋ ನಿಜವೇ?

Fact check: ಜೈನ ಸಮುದಾಯದ ಹುಡುಗಿ ಅಪಹರಿಸಿದ ಮುಸ್ಲಿಂ ಯುವಕ, ಆಂಧ್ರದ ನೆಲ್ಲೂರಿನ ಈ ಕಥೆ ನಿಜವೇ?

ಏತನ್ಮಧ್ಯೆ, ಇದೇ ರೀತಿಯ ಘಟನೆ ನಡೆದಿದೆ ಎಂದು ಅಧಿಕೃತವಾಗಿ ಹೇಳುವ ಯಾವುದೇ ಮಾಧ್ಯಮ ವರದಿಗಳಿಲ್ಲದ ಕಾರಣ, ಕಾಲ್ಪನಿಕ ಘಟನೆಗಳನ್ನು ಚಿತ್ರಿಸುವ ಮೂಲಕ ಧಾರ್ಮಿಕ ದ್ವೇಷವನ್ನು ಸೃಷ್ಟಿಸುವ ಪ್ರಯತ್ನಗಳು ನಡೆದಿರುವುದನ್ನು ನಾವು ಗಮನಿಸಿದ್ದೇವೆ.

Conclusion

ಹೀಗಾಗಿ, ವೈರಲ್ ಹೇಳಿಕೆಯು ನೈಜ ಘಟನೆಯನ್ನು ಆಧರಿಸಿಲ್ಲ ಮತ್ತು ಕಾಲ್ಪನಿಕವಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಜೊತೆಗೆ ನೆಲ್ಲೂರು ಪೊಲೀಸರು ಸಹ ಘಟನೆಯನ್ನು ನಿರಾಕರಿಸಿದ್ದಾರೆ.

Also Read: ವಿಧಾನಸೌಧದಿಂದ ಪರಪ್ಪನ ಅಗ್ರಹಾರಕ್ಕೆ 420 ಸಂಖ್ಯೆಯ ಬಸ್‌ ಇದೆ ಎನ್ನುವುದು ಸುಳ್ಳು!

Result:False

Our Sources
Facebook post Nellore Police, Dated: December 28, 2019

Press release by Nellore Police

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್‌ ಮರಾಠಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.