Authors
Claim
ಉತ್ತರಾಖಂಡ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸಿದ ದೃಶ್ಯ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್‌ಬುಕ್‌ನಲ್ಲಿ ಕಂಡುಬಂದ ಈ ಕ್ಲೇಮಿನಲ್ಲಿ “ದೇವಭೂಮಿ ಉತ್ತರಾಖಂಡ ದ ಉತ್ತರ ಕಾಶಿಯಲ್ಲಿ ಹಿಂದೂ ಭಕ್ತರು ಸುಗಮವಾಗಿ ಚಾರ್ ಧಾಮ್ ಯಾತ್ರೆಯನ್ನು ಯಶಸ್ವಿಗೊಳಿಸಲು ಸರ್ಕಾರ ಕೆಲವು ಕಡೆ ಸುರಂಗ ಮಾರ್ಗವನ್ನು ಮಾಡಲು ಮುಂದಾದಾಗ, ದುರಾದೃಷ್ಟ ವಶಾತ್ ಒಂದು ಸುರಂಗದಲ್ಲಿ ಮಣ್ಣು ಕುಸಿತದಿಂದಾಗಿ 41 ಜನ ಕಾರ್ಮಿಕರು ಸಿಕ್ಕಿಹಾಕಿಕೊಂಡು ತೊಂದರೆ ಅನುಭವಿಸುತ್ತಿದ್ದರು. ದೇವರ ದಯೆಯಿಂದ ಎಲ್ಲಾ 4೧ ಕಾರ್ಮಿಕರು ಯಾವುದೇ ತೊಂದರೆಯಾಗದಂತೆ ಸುರಕ್ಷಿತವಾಗಿ ಹೊರಗೆ ಬಂದರು….” ಎಂದಿದೆ.
Also Read: ಉತ್ತರಾಖಂಡದ ಸುರಂಗದಲ್ಲಿ 41 ಕಾರ್ಮಿಕರನ್ನು ರಕ್ಷಿಸಿದ ತಂಡವೆಂದು ಎಐ ಚಿತ್ರ ವೈರಲ್
ಈ ಕ್ಲೇಮಿನಲ್ಲಿ ಹೇಳಲಾದ ವೀಡಿಯೋ ಬಗ್ಗೆ ನ್ಯೂಸ್‌ಚೆಕರ್ ಸತ್ಯ ಶೋಧನೆಗೆ ಮುಂದಾಗಿದ್ದು ಇದು ತಪ್ಪಾದ ಸಂದರ್ಭದ್ದು ಎಂದು ತಿಳಿದುಬಂದಿದೆ.
Fact
ಉತ್ತರಾಖಂಡದ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುತ್ತಿರುವುದು ಎನ್ನಲಾದ ಈ ವೀಡಿಯೋದ ಸತ್ಯಶೋಧನೆಗೆ ಅದನ್ನು ಕೀಫ್ರೇಂಗಳನ್ನಾಗಿ ವಿಂಗಡಿಸಿ ರಿವರ್ಸ್ ಇಮೇಜ್ ಸರ್ಚ್ ನಡೆಸಲಾಗಿದೆ.
ಈ ವೇಳೆ ಕಂಡುಬಂದತೆ, ನವೆಂಬರ್ 24, 2018 ರಂದು ಎನ್ ಡಿಟಿವಿ ಯೂಟ್ಯೂಬ್ ಚಾನೆಲ್ ಈ ವೀಡಿಯೋ ಪ್ರಸಾರ ಮಾಡಿದೆ. “Uttarakhand Tunnel Rescue: How Trapped Workers Will Be Pulled Out On Stretchers From Tunnel” ಎಂದು ಶೀರ್ಷಿಕೆ ನೀಡಿದ್ದು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಈ ರೀತಿ ರಕ್ಷಿಸಲಾಗುತ್ತದೆ ಎಂದು ವೀಡಿಯೋದಲ್ಲಿ ಹೇಳಲಾಗಿದೆ.
ನವೆಂಬರ್ 24, 2023ರಂದು ಇಂಡಿಯನ್ ಎಕ್ಸ್ಪ್ರೆಸ್ ಯೂಟ್ಯೂಬ್ ಪುಟದಲ್ಲಿಯೂ ಇದೇ ರೀತಿಯ ವೀಡಿಯೋವನ್ನು ಪ್ರಸಾರ ಮಾಡಲಾಗಿದ್ದು, “Uttarkashi Tunnel Rescue: NDRF Demonstrates Pipeline Stretcher Rescue for Trapped Workers” ಶೀರ್ಷಿಕೆ ನೀಡಲಾಗಿದೆ.
ಆದ್ದರಿಂದ ಸತ್ಯಶೋಧನೆ ಪ್ರಕಾರ, ಇದು ಸುರಂಗದಿಂದ ಕಾರ್ಮಿಕರನ್ನು ಹೊರತೆಗೆಯುವ ಮೊದಲಿನ ವೀಡಿಯೋ ಆಗಿದೆ. ಸುರಂಗದಲ್ಲಿ ಸಿಲುಕಿದ ಕಾರ್ಮಿಕರನ್ನು ಹೇಗೆ ರಕ್ಷಿಸಲಾಗುತ್ತದೆ ಎಂದು ವಿವರಿಸಿದ ವೀಡಿಯೋ ಎಂದು ತಿಳಿದುಬಂದಿದೆ.
Also Read: ಮುಸ್ಲಿಂ ಮಹಿಳೆ ಭಗವದ್ಗೀತೆ ಓದಿ ಹಿಂದೂ ಧರ್ಮ ಒಪ್ಪಿ ರಾಧೆ ಆದಳು ಎನ್ನುವುದು ಹೌದೇ?
Result: False
Our Sources
YouTube video by, NDTV, Dated: November 24, 2023
YouTube video by, The Indian Express, Dated: November 24, 2023
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.