Fact Check: ಕಾಂಗ್ರೆಸ್ ಸಂಸದರ ಬಳಿ ಸಿಕ್ಕಿದ ಹಣ ಎಂದು ಕೋಲ್ಕತಾ ಇಡಿ ದಾಳಿ ಪ್ರಕರಣದ ವೀಡಿಯೋ ವೈರಲ್

ಕಾಂಗ್ರೆಸ್‌ ಸಂಸದ, ಹಣ ಎಣಿಕೆ, ಇಡಿ ದಾಳಿ, ಕೋಲ್ಕತಾ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

ಕಾಂಗ್ರೆಸ್‌ ಸಂಸದರೊಬ್ಬರು ಅಪಾರ ಪ್ರಮಾಣದ ಹಣ ಸಂಗ್ರಹಿಸಿದ್ದಾರೆ ಎಂದು ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಎಕ್ಸ್ ನಲ್ಲಿ ಕಂಡುಬಂದಿರುವ ಪೋಸ್ಟ್ ನಲ್ಲಿ “ಒಬ್ಬ ಕಾಂಗ್ರೆಸ್ ಪಕ್ಷದ ಸಂಸದ ಇಷ್ಟು ಹಣ ಸಂಗ್ರಹಿಸಿದ್ದಾನೆ ಅಂದರೆ ಇನ್ನ ದೊಡ್ಡ ಹುದ್ದೆಯಲ್ಲಿ ಇರುವಂತ ರಾಜಕಾರಣಿಗಳು ಇನ್ನೆಷ್ಟು ಹಣ ಸಂಗ್ರಹ ಮಾಡಿರುತ್ತಾರೆ ಅನ್ನುವುದನ್ನು ಸಾಮಾನ್ಯ ಜನರು ಯೋಚಿಸಬೇಕು.” ಎಂದಿದೆ.

Also read: ವೇದಮಂತ್ರ ಘೋಷದೊಂದಿಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಪ್ರಮಾಣವಚನ ಸ್ವೀಕರಿಸಿದ್ದಾರೆಯೇ?

Fact Check: ಕಾಂಗ್ರೆಸ್ ಸಂಸದರ ಬಳಿ ಸಿಕ್ಕಿದ ಹಣ ಎಂದು ಕೋಲ್ಕತಾ ಪ್ರಕರಣದ ವೀಡಿಯೋ ವೈರಲ್
ಎಕ್ಸ್ ನಲ್ಲಿ ಕಂಡುಬಂದ ಕ್ಲೇಮ್

ಝಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ  ಆಸ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಕೆಲವು ದಿನದಿಂದ ನೋಟು ಎಣಿಕೆ, ಆಸ್ತಿ ಮೌಲ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಕ್ಸ್ ಪೋಸ್ಟ್ ನಲ್ಲಿ ವೀಡಿಯೋವೊಂದನ್ನು ಲಗತ್ತಿಸಿ ಹೇಳಿಕೆ ನೀಡಲಾಗಿತ್ತು.  

Fact

ಈ ಕುರಿತು ಸತ್ಯಶೋಧನೆಗೆ ನ್ಯೂಸ್‌ಚೆಕರ್ ಮುಂದಾಗಿದ್ದು, ಹೇಳಿಕೆಯೊಂದಿಗೆ ನೀಡಲಾಗಿರುವ ವೀಡಿಯೋ ಸಂಸದ ಧೀರಜ್‌ ಸಾಹು ಅವರಿಗೆ ಸೇರಿರುವ ಆಸ್ತಿಗಳಲ್ಲಿ ಸಿಕ್ಕಿದ್ದ ನಗದಲ್ಲ, ಇದು ಕೋಲ್ಕತಾದ ಜಾರಿ ನಿರ್ದೇಶನಾಲಯದ ದಾಳಿಯೊಂದಕ್ಕೆ ಸಂಬಂಧಿಸಿದ್ದು ಎಂದು ತಿಳಿದುಬಂದಿದೆ.

ಸತ್ಯಶೋಧನೆಗಾಗಿ ನಾವು ವೈರಲ್‌ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ.

ಈ ವೇಳೆ ನಮಗೆ ಸೆಪ್ಟೆಂಬರ್ 11, 2022ರ ದೈನಿಕ್‌ ಭಾಸ್ಕರ್ ವರದಿ ಲಭ್ಯವಾಗಿದೆ. ಇದರ ಪ್ರಕಾರ, “ ಬಹುಮಾನದ ಆಮಿಷವೊಡ್ಡಿ ವಂಚಿಸಿದ ಪ್ರಕರಣದಲ್ಲಿ ಕೋಲ್ಕತಾದ ಮೊಬೈಲ್‌ ಗೇಮಿಂಗ್‌ ನಿರ್ವಾಹಕನ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ₹17 ಕೋಟಿಗಳನ್ನು ವಶಪಡಿಸಿಕೊಂಡಿದೆ” ಎಂದಿದೆ.

ಸೆಪ್ಟೆಂಬರ್ 11, 2022ರಂದು ಟೈಮ್ಸ್‌ ನೌ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೋದಲ್ಲಿ “Kolkata: ED Seized 17 Crore Cash In Raid On Businessman Linked To Gaming App Scam” ಶೀರ್ಷಿಕೆ ಕೊಡಲಾಗಿದೆ. ಇದರಲ್ಲಿ “ಕೋಲ್ಕತಾದಲ್ಲಿ ಗೇಮಿಂಗ್‌ ಕಂಪೆನಿಯೊಂದರ ವಿರುದ್ಧ ಜಾರಿ ನಿರ್ದೇಶನಾಲಯ ಆರು ಕಡೆಗಳಲ್ಲಿ ದಾಳಿ ನಡೆಸಿದ್ದು, ₹17 ಕೋಟಿಗಳಿಗೂ ಮಿಕ್ಕಿ ಹವಾಲಾ ಹಣ ವಶಪಡಿಸಿದೆ, “ಇ-ನಗ್ಗೆಟ್ಸ್” ಆಪ್‌ನ ಪ್ರವರ್ತಕ ಅಮೀಕ್‌ ಖಾನ್‌ ಮತ್ತಿತರರ ವಿರುದ್ಧ ಈ ದಾಳಿ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ” ಎಂದಿದೆ.

ಈ ಸುದ್ದಿಗಳಲ್ಲಿ ವೈರಲ್‌ ವೀಡಿಯೋದ ಕೀಫ್ರೇಂಗಳಿಗೆ ಸಾಮ್ಯತೆ ಇರುವುದನ್ನು ನಾವು ಕಂಡುಕೊಂಡಿದ್ದೇವೆ.

Also Read: ಕರ್ನಾಟಕ ಸರ್ಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕುರಾನ್‌ ಬೋಧನೆ ಕಡ್ಡಾಯಗೊಳಿಸಿದೆಯೇ, ಸತ್ಯ ಏನು?

ಈ ಸತ್ಯಶೋಧನೆಯ ಪ್ರಕಾರ, ಇದು ಸಂಸದ ಧೀರಜ್‌ ಸಾಹು ಅವರ ಬಳಿ ಸಿಕ್ಕಿದ ಹಣದ ಕುರಿತಾದ್ದಲ್ಲ. ಕೋಲ್ಕತಾದಲ್ಲಿ ಗೇಮಿಂಗ್‌ ಆಪ್ ಪ್ರವರ್ತಕರೊಬ್ಬರ ವಿರುದ್ಧ ಜಾರಿ ನಿರ್ದೇಶನಾಲಯ ದಾಳಿ ಮಾಡಿ ₹17 ಕೋಟಿ ವಶಪಡಿಸಿದ ಸಂದರ್ಭದ್ದಾಗಿದೆ.

Result: Missing Context

Our Sources

Report By Dainik Bhaskar, Dated: September 11, 2023

YouTube Video By Times Now, Dated: September 11, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.