Authors
Claim
ಭಕ್ತನೊಬ್ಬ ಕೈಗಳಲ್ಲಿ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿದ್ದಾನೆ
Fact
ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ನಿಹಾಲ್ ಸಿಂಗ್ ಎಂಬವರು ಕೈಗಳ ಮೇಲೆ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿಲ್ಲ, ಬದಲಾಗಿ ಜಾರ್ಖಂಡ್ ನ ಬಸುಕಿನಾಥಕ್ಕೆ ಹೋಗುತ್ತಿದ್ದಾರೆ
ಭಕ್ತನೊಬ್ಬ ತನ್ನ ಕೈಗಳ ಮೇಲೆ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿದ್ದಾರೆ ಎಂದು ಹೇಳುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ರಾಮಭಕ್ತಿ ರಾಷ್ಟ್ರಶಕ್ತಿ, ಇದುವೇ ವಿಶ್ವಕ್ಕೆ ಪ್ರಚಂಡ ದಿವ್ಯಶಕ್ತಿ ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಎಂಬ ಹೇಳಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಈ ವೀಡಿಯೋದ ಬಗ್ಗೆ ಸತ್ಯಶೋಧನೆ ನಡೆಸುವಂತೆ ಬಳಕೆದಾರರೊಬ್ಬರು ನ್ಯೂಸ್ ಚೆಕರ್ ವಾಟ್ಸಾಪ್ ಟಿಪ್ ಲೈನ್ (+91-9999499044) ಮೂಲಕ ವಿನಂತಿಸಿಕೊಂಡಿದ್ದು ನಾವದನ್ನು ತನಿಖೆಗೆ ಸ್ವೀಕರಿಸಿದ್ದೇವೆ.
Also Read: ಬುರ್ಜ್ ಖಲೀಫಾ ಕಟ್ಟದ ಮೇಲೆ ರಾಮನ ಚಿತ್ರ ಪ್ರದರ್ಶಿಸಲಾಗಿದೆಯೇ?
ಇದರೊಂದಿಗೆ ಜನವರಿ 17, 2024 ರಂದು ಇಂಡಿಯಾ ಟಿವಿ ಯೂಟ್ಯೂಬ್ ನಲ್ಲಿ ಹಂಚಿಕೊಂಡ 45 ಸೆಕೆಂಡುಗಳ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಕೈಗಳ ಮೇಲೆ ನಡೆಯುತ್ತಿರುವುದನ್ನು ತೋರಿಸುತ್ತದೆ. ಈ ಪೋಸ್ಟ್ನ ಶೀರ್ಷಿಕೆ ಹೀಗಿದೆ, – श्री राम के लिए गज़ब की दीवानगी, अयोध्या के लिए हाथों के बल चला भक्त। (ಶ್ರೀ ರಾಮನ ಬಗ್ಗೆ ಅದ್ಭುತ ಉತ್ಸಾಹ, ಭಕ್ತ ತನ್ನ ಕೈಗಳಿಂದ ಅಯೋಧ್ಯೆಗೆ ನಡೆದನು.)
ಇತರ ಅನೇಕ ಬಳಕೆದಾರರು ಇದೇ ರೀತಿಯ ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಪ್ರಮುಖ ಮಾಧ್ಯಮ ಸಂಸ್ಥೆ ಟಿವಿ 9 ಕೂಡ ಇದೇ ಹೇಳಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದೆ. ಪೋಸ್ಟ್ ಅನ್ನು ನೋಡಬಹುದು
Fact Check/ Verification
ಮೊದಲಿಗೆ, ನಾವು ಗೂಗಲ್ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಇದು ಪ್ರಭಾತ್ ಖಬರ್ ಮತ್ತು ಅಮರ್ ಉಜಾಲಾ ಪ್ರಕಟಿಸಿದ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಈ ವರದಿಗಳ ಪ್ರಕಾರ, ವೀಡಿಯೋದಲ್ಲಿ ಕಂಡುಬರುವ ವ್ಯಕ್ತಿ ಬಿಹಾರದ ಸಹರ್ಸಾ ಜಿಲ್ಲೆಯ ನಿವಾಸಿ ನಿಹಾಲ್ ಸಿಂಗ್. ನಿಹಾಲ್ ಸಿಂಗ್ ಅವರು ಆರು ವರ್ಷಗಳ ಹಿಂದೆ ಮೊದಲ ಬಾರಿಗೆ ಬಾಬಾಧಾಮ್ ಗೆ ಭೇಟಿ ನೀಡಿದ್ದರು ಮತ್ತು ದೇವರಿಗೆ ನಮಸ್ಕರಿಸುವ ಆಚರಣೆಯಾದ ದಂಡ ಪ್ರಣಾಮ್ ಮಾಡಿದ್ದರು ಎಂದು ಅವರು ವರದಿಗಾರರಿಗೆ ತಿಳಿಸಿದ್ದಾರೆ. ಈಗ, ಬಾಬಾನಿಂದ ಪ್ರೇರಿತರಾಗಿ, ಅವರು ತಲೆಕೆಳಗಾಗಿ, ಕೈಗಳ ಮೇಲೆ ನಡೆದುಕೊಂಡು ಬಾಬಾಧಾಮಕ್ಕೆ ಹೋಗುತ್ತಿದ್ದಾರೆ.
ಈ ತನಿಖೆಯ ಸಮಯದಲ್ಲಿ, ನ್ಯೂಸ್ಚೆಕರ್ ಹಿಂದಿ ತಂಡವು ನಿಹಾಲ್ ಸಿಂಗ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿತು. ಅವರು ಸುಲ್ತಾನ್ ಗಂಜ್ನಿಂದ 160 ಕಿಲೋಮೀಟರು ದೂರದ ಜಾರ್ಖಂಡ್ ನ ಬಸುಕಿನಾಥ್ ಗೆ ಹೋಗುತ್ತಿದ್ದಾರೆ. ಅಯೋಧ್ಯೆಗಲ್ಲ ದೃಢಪಡಿಸಿದರು. ಅವರು ಜುಲೈ 4 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದು, ಇನ್ನೂ ದಾರಿಯಲ್ಲಿದ್ದಾರೆ.
ಸುಮಾರು 10 ದಿನಗಳ ಹಿಂದೆ ತೆಗೆದ ತನ್ನದೇ ವೀಡಿಯೋ ಸುಳ್ಳು ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ ಎಂದು ನಿಹಾಲ್ ಸಿಂಗ್ ಹೇಳಿದ್ದಾರೆ. ಅವರು ಬಸುಕಿನಾಥಕ್ಕೆ ಹೋಗುತ್ತಿದ್ದು ಇನ್ನೂ 20-25 ದಿನದ ಪ್ರಯಾಣ ಇದೆ. ಭವಿಷ್ಯದಲ್ಲಿ ಅಯೋಧ್ಯೆಗೆ ಭೇಟಿ ನೀಡುವ ಯಾವುದೇ ಯೋಜನೆ ಇದೆಯೇ ಎಂದು ಕೇಳಿದಾಗ, ಸದ್ಯಕ್ಕೆ ಅಂತಹ ಯಾವುದೇ ಯೋಜನೆಯಿಲ್ಲ ಎಂದವರು ಹೇಳಿದ್ದಾರೆ.
Conclusion
ವರದಿಗಳು ಮತ್ತು ನಮ್ಮ ಸಂದರ್ಶನದ ಆಧಾರದ ಮೇಲೆ, ವೈರಲ್ ವೀಡಿಯೊದಲ್ಲಿ ಕಂಡುಬರುವ ವ್ಯಕ್ತಿ ತನ್ನ ಕೈಗಳ ಮೇಲೆ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿಲ್ಲ, ಬದಲಾಗಿ ಜಾರ್ಖಂಡ್ ನ ಬಸುಕಿನಾಥಕ್ಕೆ ಹೋಗುತ್ತಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.
Result: False
Our Sources:
Phonic Conversation with Nihal Singh
Report published by Amar Ujala Dated: 15 July 2023
Report published by Prabhat khabar Dated: 9th July 2023
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.