Fact Check: ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದ ವೀಡಿಯೋ ನಿಜವೇ?

ರೈತರ ಪ್ರತಿಭಟನೆ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದ ವೀಡಿಯೋ

Fact
ರೈತರು ಬ್ಯಾರಿಕೇಡ್ ಗಳ ಮೇಲೆ ಟ್ರಾಕ್ಟರ್ ಹಾಯಿಸಿ ತೆರಳುತ್ತಿರುವುದು ದಿಲ್ಲಿ ಕಡೆಗಲ್ಲ. ಬದಲಾಗಿ ಇದು ಬ್ಲಾಗರ್ ಭಾನಾ ಸಿಧು ಅವರ ಬಿಡುಗಡೆಗೆ ಒತ್ತಾಯಿಸಿ ಫೆಬ್ರವರಿ 3, 2024 ರಂದು ನಡೆದ ಪ್ರತಿಭಟನೆಯ ವೀಡಿಯೋ ಇದಾಗಿದೆ.

ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆಯಲ್ಲಿಮಣ್ಣಿನ ಮಕ್ಕಳನ್ನು ತಡೆಯುವುದು ಇಷ್ಟು ಸರಳ ಇಲ್ಲ” ಎಂದಿದೆ. ಈ ವೀಡಿಯೋದಲ್ಲಿ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಮುರಿದು ಟ್ರಾಕ್ಟರ್ ಗಳನ್ನು ಓಡಿಸುವ ದೃಶ್ಯವಿದೆ.

Also Read: ಪಾಕಿಸ್ಥಾನದ ಬಾವುಟ ಬೆಂಗಳೂರಿನ ಶಿವಾಜಿನಗರದಲ್ಲಿ ಹಾರಾಡಿದೆ ಎನ್ನುವುದು ನಿಜವೇ?

Fact Check: ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದ ವೀಡಿಯೋ ನಿಜವೇ?
ಫೇಸ್‌ಬುಕ್‌ ನಲ್ಲಿ ಕಂಡುಬಂದ ಹೇಳಿಕೆ

ಇದೇ ರೀತಿಯ ಹೇಳಿಕೆಯನ್ನು ನಾವು ಇಲ್ಲಿ, ಇಲ್ಲಿ ಕಂಡಿದ್ದೇವೆ.

12 ಪ್ರಮುಖ ಬೇಡಿಕೆಗಳೊಂದಿಗೆ 2024 ರ ಫೆಬ್ರವರಿ 13 ರಂದು ಪಂಜಾಬ್ನಿಂದ ದೆಹಲಿಗೆ ಮೆರವಣಿಗೆ ನಡೆಸುವುದಾಗಿ ರೈತರು ಘೋಷಿಸಿದ್ದಾರೆ. ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿಪಡಿಸಲು ಸರ್ಕಾರ ಕಾನೂನು ರೂಪಿಸಬೇಕು ಎಂಬುದು ರೈತರ ಅತಿದೊಡ್ಡ ಬೇಡಿಕೆಯಾಗಿದೆ. ಒಂದೆಡೆ, ರೈತರು ಅಮೃತಸರ-ದೆಹಲಿ-ರಾಷ್ಟ್ರೀಯ ಹೆದ್ದಾರಿಯ ಮೂಲಕ ಹರಿಯಾಣವನ್ನು ಪ್ರವೇಶಿಸಲು ತಯಾರಿ ನಡೆಸುತ್ತಿದ್ದರೆ, ಅಂಬಾಲಾದ ಶಭುನ್ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.

ಈ ವೀಡಿಯೋ ಬಗ್ಗೆ ನಾವು ಸತ್ಯಶೋಧನೆಯನ್ನು ನಡೆಸಿದ್ದು, ಇದು ಸುಳ್ಳು, ಇದು ರೈತರ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ಕಂಡುಬಂದಿದೆ.

Fact Check/ Verification

ಈ ವೈರಲ್ ಹೇಳಿಕೆಯನ್ನು ಪರಿಶೀಲಿಸಲು, ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ. ಈ ವೇಳೆ, ಫೆಬ್ರವರಿ 4, 2024 ರಂದು ಇನ್ಸ್ಟಾಗ್ರಾಮ್ ಖಾತೆಯೊಂದರಿಂದ ಹಂಚಿಕೊಳ್ಳಲಾದ ವೀಡಿಯೋವನ್ನು ನಾವು ಗಮನಿಸಿದ್ದೇವೆ. ಅದೂ ವೈರಲ್‌ ಆಗುತ್ತಿರುವ ವೀಡಿಯೋವನ್ನು ಒಳಗೊಂಡಿದೆ. ತನಿಖೆಯ ಸಮಯದಲ್ಲಿ, ಫೆಬ್ರವರಿ 3, 2024 ರಂದು ಗೆಮ್ ಟಿವಿ ಎಂಬ ಫೇಸ್ಬುಕ್ ಖಾತೆಯಿಂದ ಹಂಚಿಕೊಳ್ಳಲಾದ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಇದರಲ್ಲೂ ವೈರಲ್ ವೀಡಿಯೋ ಕೂಡ ಇದೆ. ಪಂಜಾಬಿ ಭಾಷೆಯಲ್ಲಿ ಬರೆಯಲಾದ ಪೋಸ್ಟ್ ನ ಶೀರ್ಷಿಕೆಯಲ್ಲಿ, ಇದು ಭಾನಾ ಸಿಧು ಅವರ ರೈತ ಮತ್ತು ಯುವ ಬೆಂಬಲಿಗರು ಟ್ರಾಕ್ಟರ್ನಿಂದ ಬ್ಯಾರಿಕೇಡ್ ತೆಗೆದು ಮುಂದೆ ಸಾಗುವ ವೀಡಿಯೊ ಎಂದು ಹೇಳಲಾಗಿದೆ.

ಪೋಸ್ಟ್ ಗಳಲ್ಲಿರುವ ವೀಡಿಯೋ ಮತ್ತು ವೈರಲ್ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಎರಡೂ ವೀಡಿಯೋಗಳನ್ನು ಒಂದೇ ಸ್ಥಳದಲ್ಲಿ ಎರಡು ವಿಭಿನ್ನ ಕೋನಗಳಿಂದ ಚಿತ್ರೀಕರಿಸಲಾಗಿದೆ ಎಂದು ತೋರಿಸುತ್ತದೆ. ಹೊಂದಾಣಿಕೆ ಮಾಡಿದಾಗ ಟ್ರ್ಯಾಕ್ಟರ್, ಅದರ ಮೇಲೆ ಕುಳಿತಿರುವ ಜನರು, ಅವರ ಸನ್ನೆಗಳು, ಬಟ್ಟೆಗಳ ಬಣ್ಣ ಎಲ್ಲವೂ ಒಂದೇ ರೀತಿ ಕಾಣುತ್ತದೆ. ವೀಡಿಯೋದಲ್ಲಿ ಕೇಳಿಬರುವ ಧ್ವನಿಗಳು ಸಹ ಒಂದೇ ಆಗಿವೆ.

Also Read: ತುಮಕೂರು ಗುಬ್ಬಿ ತಾಲೂಕಿನಲ್ಲಿ ವಿಚಿತ್ರ ಪ್ರಾಣಿಯೊಂದು ಕಾಣಿಸಿಕೊಂಡಿದೆ ಎನ್ನುವುದು ನಿಜವೇ?

Fact Check: ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದ ವೀಡಿಯೋ ನಿಜವೇ?
1. ವೈರಲ್ ವೀಡಿಯೋ, 2. ಭಾನಾ ಸಿಧು ಸಮರ್ಥಕರ ವೀಡಿಯೋ (ಎಡದಿಂದ ಬಲಕ್ಕೆ)
Fact Check: ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದ ವೀಡಿಯೋ ನಿಜವೇ?
1. ವೈರಲ್ ವೀಡಿಯೋ, 2. ಭಾನಾ ಸಿಧು ಸಮರ್ಥಕರ ವೀಡಿಯೋ (ಎಡದಿಂದ ಬಲಕ್ಕೆ)

ಫೆಬ್ರವರಿ 3 ರಂದು ಬಿಬಿಸಿ ಪಂಜಾಬಿ ಪ್ರಕಟಿಸಿದ ವರದಿಯಲ್ಲಿ ಈ ಪ್ರತಿಭಟನಾ ರಾಲಿಯ ಚಿತ್ರವನ್ನು ತೋರಿಸುತ್ತದೆ. ಫೆಬ್ರವರಿ 3 ರಂದು ರೈತರು ಮತ್ತು ಯುವ ಬೆಂಬಲಿಗರು ಭಾನಾ ಸಿಧು ಪರವಾಗಿ ಜಮಾಯಿಸಿ ಭಗವಂತ್ ಮನ್ ಅವರ ಕೋಠಿಯನ್ನು ಸುತ್ತುವರೆದರು ಎಂದು ಈ ವರದಿಯಲ್ಲಿದೆ.

Fact Check: ಪ್ರತಿಭಟನೆಗಾಗಿ ದೆಹಲಿಯತ್ತ ಮುನ್ನುಗ್ಗುತ್ತಿರುವ ರೈತರು ಎಂದ ವೀಡಿಯೋ ನಿಜವೇ?
ಬಿಬಿಸಿ ಪಂಜಾಬಿ ವರದಿ

ಭಾನಾ ಸಿಧು ಯಾರು ಮತ್ತು ಪ್ರಕರಣ ಏನು?

30ರ ಹರೆಯದ ಭಾನಾ ಸಿಧು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಮೊಹಾಲಿ ಮೂಲದ ವಲಸೆ ಕಂಪನಿಯ ಮಾಲೀಕ ಕಿಂಡರ್ಬೀರ್ ಸಿಂಗ್ ಬಿದೇಶಾ ಅವರನ್ನು ಬೆದರಿಸಿ ಸುಲಿಗೆ ಮಾಡಿದ ಆರೋಪದ ಮೇಲೆ ಬಲ್ವಂತ್ ಸಿಂಗ್ ಅಲಿಯಾಸ್ ಭಾನಾ ಸಿಧು ಅವರನ್ನು ಜನವರಿ 29 ರಂದು ಬಂಧಿಸಲಾಗಿತ್ತು. ಸಿಧು ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡ ನಂತರ, ಅವರ ಸಾವಿರಾರು ಬೆಂಬಲಿಗರು ಫೆಬ್ರವರಿ 3 ರಂದು ಸಂಗ್ರೂರ್ ನಲ್ಲಿ ಪ್ರತಿಭಟನಾ ರಾಲಿ ನಡೆಸಲು ಬರ್ನಾಲಾದ ಅವರ ಹುಟ್ಟೂರಾದ ಕೊಟ್ಡುನಾದಲ್ಲಿ ಒಟ್ಟುಗೂಡುವುದಾಗಿ ಘೋಷಿಸಿದ್ದರು.

ಟ್ರಿಬ್ಯೂನ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಫೆಬ್ರವರಿ 3 ರಂದು, ಭಾನಾ ಸಿಧು ಅವರ ಬಿಡುಗಡೆಗೆ ಒತ್ತಾಯಿಸಿ ಸಿಎಂ ಭಗವಂತ್ ಮಾನ್ ಅವರ ನಿವಾಸದ ಬಳಿ ಪ್ರತಿಭಟನೆ ನಡೆಯಿತು, ನಂತರ ಹಲವಾರು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಭಾರಿ ಭದ್ರತಾ ವ್ಯವಸ್ಥೆಗಳ ಹೊರತಾಗಿಯೂ, ವ್ಲಾಗರ್ ಭಾನಾ ಸಿಧು ಅವರ ಸಾವಿರಾರು ಬೆಂಬಲಿಗರು ಬಟಿಂಡಾ-ಸಂಗ್ರೂರ್-ಪಟಿಯಾಲ ರಾಷ್ಟ್ರೀಯ ಹೆದ್ದಾರಿಯನ್ನು ತಡೆದರು ಮತ್ತು ಸಂಗ್ರೂರ್ನಲ್ಲಿರುವ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದಿಂದ ಒಂದು ಕಿಲೋಮೀಟರ್ ದೂರದಲ್ಲಿ ಧರಣಿ ನಡೆಸಿದರು ಎಂದು ವರದಿ ತಿಳಿಸಿದೆ.

ಅಮರ್ ಉಜಾಲಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ವ್ಲಾಗರ್ ಭಾನಾ ಸಿಧು ಅವರಿಗೆ ಮೊಹಾಲಿ ನ್ಯಾಯಾಲಯವು ಫೆಬ್ರವರಿ 12 ರಂದು ಜಾಮೀನು ನೀಡಿದೆ.

Conclusion

ನಮ್ಮ ತನಿಖೆಯ ಪ್ರಕಾರ, ರೈತರು ಬ್ಯಾರಿಕೇಡ್ ಗಳ ಮೇಲೆ ಟ್ರಾಕ್ಟರ್ ಹಾಯಿಸಿ ತೆರಳುತ್ತಿರುವುದು ದಿಲ್ಲಿ ಕಡೆಗಲ್ಲ. ಬದಲಾಗಿ ಇದು ಬ್ಲಾಗರ್ ಭಾನಾ ಸಿಧು ಅವರ ಬಿಡುಗಡೆಗೆ ಒತ್ತಾಯಿಸಿ ಫೆಬ್ರವರಿ 3, 2024 ರಂದು ನಡೆದ ಪ್ರತಿಭಟನೆಯ ವೀಡಿಯೋ ಎಂದು ತಿಳಿದುಬಂದಿದೆ. 

Also Read: ಬಾಂಗ್ಲಾ ವಲಸಿಗ ಮುಸ್ಲಿಮರಿಗೆ ತಲಾ 5 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನುವುದು ನಿಜವೇ?

Result: Missing Context

Our Sources:
Report published by BBC Punjabi, Dated: 3rd and 4th February 2024

Report published by Tribune Dated: 3rd February 2024

Post by Facebook page Gemm TV Dated: 3rd February 2024

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.