Fact Check: ಮೈಸೂರಿನಲ್ಲಿ ಶತಮಾನಗಳ ಹಳೆಯ ನಂದಿ ವಿಗ್ರಹ ಪತ್ತೆ ಎಂದು ಹಳೆಯ ಫೊಟೋ ಹಂಚಿಕೆ

ನಂದಿ ಶಿಲ್ಪ ಮೈಸೂರು

Claim

ಮೈಸೂರಿನಲ್ಲಿ ಶತಮಾನಗಳ ಹಳೆಯ ನಂದಿ ವಿಗ್ರಹ ಪತ್ತೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡಿದೆ.

2200 ವರ್ಷಗಳ ಹಳೆಯ ನಂದಿ ವಿಗ್ರಹ ಇದಾಗಿದ್ದು, ಉತ್ಖನನ ವೇಳೆ ಪತ್ತೆಯಾಗಿದೆ ಎಂದು ಹಲವು ಬಳಕೆದಾರರು ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Also Read: ಸೋಲುವ ಹತಾಶೆಯಿಂದ ಐಎನ್‌ಡಿ ಒಕ್ಕೂಟದವರು ಇವಿಎಂ ಒಡೆದು ಹಾಕಲೂ ತಯಾರು ಎಂದು ಹಳೆ ವೀಡಿಯೋ ಹಂಚಿಕೆ

ಈ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು ಇದು ತಪ್ಪಾದ ಸಂದರ್ಭ ಎಂದು ಕಂಡುಬಂದಿದೆ.

Fact

ಸತ್ಯಶೋಧನೆ ಭಾಗವಾಗಿ ನಾವು ಗೂಗಲ್‌ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ

ಜುಲೈ 15, 2019ರ ದಿ ಹಿಂದೂ ವರದಿಯ ಪ್ರಕಾರ ಮೈಸೂರಿನಿಂಧ 20 ಕಿ.ಮೀ. ದೂರದ ಅರಸಿನಕೆರೆ ಎಂಬಲ್ಲಿ ಬತ್ತಿದ ಕೆರೆಯೊಂದರಲ್ಲಿ ಎರಡು ಜೋಡಿ ಏಕ ಶಿಲಾ ನಂದಿ ವಿಗ್ರಹಗಳು ಪತ್ತೆಯಾಗಿವೆ. ವಿಶೇಷವಾಗಿ ಕೆರೆಯಲ್ಲಿ ನೀರಿನ ಮಟ್ಟ ಇಳಿಕೆಯಾದಾಗಲೆಲ್ಲ ಈ ವಿಗ್ರಹಗಳು ಇಣುಕಿ ನೋಡಿದಂತೆ ಭಾಸವಾಗುತ್ತಿತ್ತು. ಬೇಸಗೆಯಲ್ಲಿ ಇಲ್ಲಿನ ಜಲಮೂಲ ಸಂಪೂರ್ಣವಾಗಿ ಬತ್ತುವುದರಿಂದ ಸ್ಥಳೀಯರು ಇಲ್ಲಿ ಆಳವಾಗಿ ಅಗೆಯಲು ಅವಕಾಶ ನೀಡಿತು ಎಂದಿದೆ.

Fact Check: ಮೈಸೂರಿನಲ್ಲಿ ಶತಮಾನಗಳ ಹಳೆಯ ನಂದಿ ವಿಗ್ರಹ ಪತ್ತೆ ಎಂದು ಹಳೆಯ ಫೊಟೋ ಹಂಚಿಕೆ

ಜುಲೈ 15, 2019ರ ಪ್ರಜಾವಾಣಿ ವರದಿ ಪ್ರಕಾರ, ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ಬೃಹತ್‌ ಗಾತ್ರದ ಎರಡು ನಂದಿ ವಿಗ್ರಹಗಳು ಪತ್ತೆಯಾಗಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇವುಗಳಲ್ಲಿ ಒಂದು ನಂದಿ ವಿಗ್ರಹವು ಸುಮಾರು 15 ಅಡಿ ಉದ್ದ ಹಾಗೂ 12 ಅಡಿ ಎತ್ತರ ಇದೆ. ಇದಕ್ಕೆ ಎದುರಾಗಿ ಗಾತ್ರದಲ್ಲಿ ಚಿಕ್ಕದಾದ ಮತ್ತೊಂದು ನಂದಿ ವಿಗ್ರಹ ದೊರೆತಿದೆ. ಇಲ್ಲಿಯವರೆಗೆ ಈ ನಂದಿ ವಿಗ್ರಹದ ಕೊಂಬುಗಳಷ್ಟೇ ಕಾಣುತ್ತಿದ್ದವು. ಇವುಗಳನ್ನು ಜನರು ಜೋಡಿ ಬಸವಣ್ಣ ಎಂದು ಕರೆದು ಪೂಜೆ ಸಲ್ಲಿಸುತ್ತಿದ್ದರು. ಈಗ ಗ್ರಾಮಸ್ಥರೇ ಹಣ ಸಂಗ್ರಹಿಸಿ ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನು ತೆಗೆಸಿದಾಗ ಬೃಹತ್ ನಂದಿ ವಿಗ್ರಹಗಳು ಗೋಚರಿಸಿವೆ ಎಂದಿದೆ.

Fact Check: ಮೈಸೂರಿನಲ್ಲಿ ಶತಮಾನಗಳ ಹಳೆಯ ನಂದಿ ವಿಗ್ರಹ ಪತ್ತೆ ಎಂದು ಹಳೆಯ ಫೊಟೋ ಹಂಚಿಕೆ

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಈ ಪುರಾವೆಗಳ ಪ್ರಕಾರ, ಮೈಸೂರಿನ ಸನಿಹ ಜೋಡಿ ನಂದಿ ವಿಗ್ರಹ ಸಿಕ್ಕಿದ ವಿದ್ಯಮಾನ 2019ರ ಲ್ಲಿ ನಡೆದಿದ್ದು, ಇದು ಈಗಿನದ್ದಲ್ಲ ಎಂದು ತಿಳಿದುಬಂದಿದೆ.

Also Read: ಸಂವಿಧಾನ ಬದಲಾವಣೆ ಮೌನವಾಗೇ ಮಾಡೋಣ ಎಂದು ಸರಸಂಘ ಚಾಲಕ ಮೋಹನ್‌ ಭಾಗವತ್ ಹೇಳಿದ್ದಾರೆಯೇ?

Result: Missing Context

Our Sources
Report By The Hindu, Dated: July 15, 2019
Report By Prajavani, Dated: July 15, 2019


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.