Fact Check: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?

ಕರ್ನಾಟಕ ಗೋಹತ್ಯೆ, ಮುಸ್ಲಿಂ, ವಯನಾಡ್‌,

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ

Fact
ವನ್ಯಪ್ರಾಣಿ-ಮಾನವ ಸಂಘರ್ಷದ ವಿರುದ್ಧ ವಯನಾಡಿನ ಪುಲ್ಪಲ್ಲಿಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಉದ್ರಿಕ್ತರ ಗುಂಪು ಹುಲಿದಾಲಿಗೊಳಗಾದ ಹಸುವನ್ನು ಅರಣ್ಯ ಇಲಾಖೆ ಜೀಪಿನ ಮೇಲೆ ಕಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು

ಮುಸ್ಲಿಂ ಸಮುದಾಯದವರು ರಸ್ತೆಯಲ್ಲೇ ಗೋಹತ್ಯೆ ಮಾಡುತ್ತಿದ್ದಾರೆ ಎಂಬ ಹೇಳಿಕೆಯನ್ನು ವೀಡಿಯೋದೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ ಗೋಹತ್ಯೆ ಕುರಿತ ಹೇಳಿಕೆಯೊಂದಿಗೆ ಜೀಪ್‌ ಒಂದರ ಮೇಲೆ ಹಸುವನ್ನು ಕಟ್ಟಿರುವುದು ಕಂಡುಬಂದಿದೆ.

Also Read: ರಾಹುಲ್‌ ಗಾಂಧಿ ಹೊಗಳಿದ ಎಲ್.ಕೆ.ಅಡ್ವಾಣಿ? ಇಲ್ಲ, ವೈರಲ್ ಹೇಳಿಕೆ ಸುಳ್ಳು

Fact Check: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?

ಒಟ್ಟು 17ಸೆಕೆಂಡಿನ ಈ ವೀಡಿಯೋ ಬಗ್ಗೆ ಸತ್ಯಶೋಧನೆ ನಡೆಸಲಾಗಿದ್ದು ಇದು ಸುಳ್ಳು ಎಂದು ಕಂಡುಬಂದಿದೆ.

Fact check/Verification

ಸತ್ಯಶೋಧನೆಗಾಗಿ ನ್ಯೂಸ್‌ಚೆಕರ್‌ ವೀಡಿಯೋವನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಈ ವೇಳೆ ಹಸುವನ್ನು ಕಟ್ಟಿದ ಜೀಪಿನಲ್ಲಿ ಫಾರೆಸ್ಟ್ ಎಂದು ಬರೆದಿರುವುದು, ಅದರ ಹಿಂಭಾಗದಲ್ಲಿ ಮಲಯಾಳ ಭಾಷೆಯ ಬೋರ್ಡ್ ಗಳು ಕಂಡುಬಂದಿವೆ. ಇದರೊಂದಿಗೆ ಹಸುವಿಗೆ ಶ್ರದ್ಧಾಂಜಲಿ ಸಮರ್ಪಣೆಯ ರೀತಿ ಹಾಕಿರುವ ವೃತ್ತಾಕಾರದ ಮಾಲೆಯನ್ನೂ ಕಂಡಿರುವುದು, ಪೊಲೀಸರ ಉಪಸ್ಥಿತಿ ಇತ್ಯಾದಿಗಳು ಸಂಶಯಕ್ಕೆ ಕಾರಣವಾಗಿದೆ.

ಆ ಬಳಿಕ ನಾವು ವೈರಲ್‌ ವೀಡಿಯೋದ ಕೀಫ್ರೇಂ ಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಫೆಬ್ರವರಿ 17, 2024ರ ಫ್ರೀ ಪ್ರೆಸ್‌ ಜರ್ನಲ್‌ ವರದಿಯ ಪ್ರಕಾರ, ವಯನಾಡಿನಲ್ಲಿ ನಡೆಯುತ್ತಿರುವ ಮಾನವ-ಪ್ರಾಣಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ನೀಡುವಂತೆ ಆಗ್ರಹಿಸಿ ಆಡಳಿತಾರೂಢ ಎಲ್‌ಡಿಎಫ್, ಪ್ರತಿಪಕ್ಷ ಯುಡಿಎಫ್ ಮತ್ತು ಬಿಜೆಪಿ ಜಿಲ್ಲಾದ್ಯಂತ ಕರೆ ನೀಡಿರುವ ಹರತಾಳ ಶನಿವಾರ ಪುಲ್ಪಲ್ಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾಕಾರರು ಅರಣ್ಯ ಇಲಾಖೆಯ ವಾಹನಕ್ಕೆ ಹಾನಿ ಮಾಡಿ ಹಸುವನ್ನು ಅದರ ಮೇಲೆ ಕಟ್ಟಿಹಾಕಿದ್ದಾರೆ. ಹಿಂದಿನ ದಿನದಲ್ಲಿ ಶಂಕಿತ ಹುಲಿ ದಾಳಿಯಲ್ಲಿ ಹಸು ಮೃತಪಟ್ಟಿದೆ ಎಂದು ಹೇಳಲಾಗಿದೆ ಎಂದಿದೆ.  

Fact Check: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?

ಫೆಬ್ರವರಿ 17, 2024ರ ಆನ್‌ ಮನೋರಮಾ ವರದಿಯಲ್ಲಿ, ಮಾನವ- ವನ್ಯ ಪ್ರಾಣಿ ಸಂಘರ್ಷ: ತೀವ್ರ ಪ್ರತಿಭಟನೆ ಮಧ್ಯೆ 2 ದಿನ ನಿಷೇಧಾಜ್ಞೆ ಘೋಷಣೆ ಶೀರ್ಷಿಕೆಯಡಿ ಪ್ರತಿಭಟನಕಾರರು ಅರಣ್ಯ ಇಲಾಖೆ ವಾಹನದ ಮೇಲೆ ದಾಳಿ ನಡೆಸಿದ್ದು, ಅದರ ಚಕ್ರದ ಗಾಳಿಯನ್ನು ತೆಗೆದು ಟಾಪ್ ಗಳನ್ನು ಹರಿದಿದರು. ಬಳಿಕ ಜೀಪಿನ ಮೇಲೆ ನಿನ್ನೆ ರಾತ್ರಿ ಹುಲಿಯೊಂದು ಹತ್ಯೆಗೈದ ಹಸುವನ್ನು ಕಟ್ಟಿದ್ದಾರೆ. ಪೋಲಿಸರು ಎರಡು ಬಾರಿ ಲಾಠಿ ಚಾರ್ಜ್ ನಡೆಸಿದ್ದು, ಉದ್ರಿಕ್ತರ ಗುಂಪು ಅಂಗಡಿಗಳನ್ನು ಪುಡಿಗಟ್ಟಿ ಪುಲಪಲ್ಲಿ ನಗರದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದೆ ಎಂದಿದೆ.

Also Read: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?

Fact Check: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?

ಫೆಬ್ರವರಿ 18, 2024ರ ದಿ ನ್ಯೂ ಇಂಡಿಯನ್‌ ಎಕ್ಸ್‌ ಪ್ರೆಸ್‌ ವರದಿಯಲ್ಲಿ ಶುಕ್ರವಾರ ಕಾಡಾನೆ ದಾಳಿಯಲ್ಲಿ ಅರಣ್ಯ ಇಲಾಖೆ ವೀಕ್ಷಕ ವಿ ಪಿ ಪೌಲ್ ಸಾವನ್ನಪ್ಪಿದ್ದನ್ನು ಖಂಡಿಸಿ ರಾಜಕೀಯ ಬೇಧವಿಲ್ಲದೆ ನೂರಾರು ಜನರು ಶನಿವಾರ ಪುಲ್ಪಲ್ಲಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ನಡೆಯುತ್ತಿರುವ ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಆಕ್ರೋಶಗೊಂಡ ಗುಂಪೊಂದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ದೃಶ್ಯಗಳಿಗೆ ಪುಲ್ಪಲ್ಲಿ ಪಟ್ಟಣ ಸಾಕ್ಷಿಯಾಯಿತು. ಜನಸಂದಣಿಯು ಅರಣ್ಯ ಇಲಾಖೆಯ ಜೀಪ್ ಅನ್ನು ಅಡ್ಡಗಟ್ಟಿ ಹಾನಿಗೊಳಿಸಿದಾಗ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಯಿತು. ಮೂಡನಕೊಲ್ಲಿಯಲ್ಲಿ ಹುಲಿಯಿಂದ ಕೊಂದ ಹಸುವಿನ ಮೃತದೇಹವನ್ನು ತಂದು ಜೀಪಿನ ಬಾನೆಟ್ ಮೇಲೆ ಹಾಕಿದರು ಎಂದಿದೆ.

Fact Check: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ರಸ್ತೆಯಲ್ಲೇ ಗೋಹತ್ಯೆ ಎನ್ನುವುದು ನಿಜವೇ?

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ, ನೋಡಬಹುದು.

ಹೆಚ್ಚಿನ ಮಾಹಿತಿಗಾಗಿ ನಾವು ಶೋಧ ನಡೆಸಿದ್ದು, ಇನ್‌ಸ್ಟಾಗ್ರಾಂನಲ್ಲಿ @wayanadview ಹೆಸರಿನ ಖಾತೆಯೊಂದನ್ನು ಶೋಧಿಸಿದ್ದು, ಇದರಲ್ಲಿ ವೀಡಿಯೋ ಒಂದನ್ನು ಕಂಡುಕೊಂಡಿದ್ದೇವೆ. ಜೀಪಿನ ಬಾನೆಟ್ ಮೇಲೆ ಹಸುವನ್ನು ಕಟ್ಟಿದ ದೃಶ್ಯ ಇದರಲ್ಲಿದ್ದು, ವೀಡಿಯೋ ವೈರಲ್‌ ಕ್ಲೇಮಿಗೆ ಹೋಲಿಕೆಯಾಗುತ್ತಿರುವುದನ್ನು ಮನಗಂಡಿದ್ದೇವೆ.

Conclusion

ಈ ಸಾಕ್ಷ್ಯಾಧಾರಗಳ ಪ್ರಕಾರ, ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆಯಲ್ಲೇ ಗೋಹತ್ಯೆ ಮಾಡುತ್ತಿದ್ದಾರೆ ಎನ್ನುವ ಹೇಳಿಕೆ ತಪ್ಪಾಗಿದೆ. ವೈರಲ್‌ ದೃಶ್ಯ ವಯನಾಡಿನ ಪುಲ್ಪಲ್ಲಿಯಾಗಿದ್ದು ಮಾನವ-ವನ್ಯಪ್ರಾಣಿ ಸಂಘರ್ಷ ವಿರುದ್ಧ ನಡೆಸಿದ ಪ್ರತಿಭಟೆಯ ಸಂದರ್ಭದ್ದಾಗಿದೆ ಎಂದು ತಿಳಿದುಬಂದಿದೆ.

Also Read: ತಮಿಳುನಾಡಿನ ತೆಂಕಾಸಿಯಲ್ಲಿ ಹಿಂದೂ ದೇಗುಲವನ್ನು ಮಸೀದಿಯಾಗಿ ಪರಿವರ್ತಿಸಲಾಗಿದೆಯೇ?

Result: False

Report By Free press journal, Dated: February 17, 2024

Report By On Manorama, Dated: February 17, 2024

Report By The New Indian Express, Dated: February 18, 2024

Instagram post By wayanadview, Dated: February 17, 2024


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.