Authors
Claim
ಕಾಂಗ್ರೆಸ್ ಕಥೆ ಮುಗಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ
Fact
ಕಾಂಗ್ರೆಸ್ ಕಥೆ ಮುಗಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ ಎನ್ನುವುದು ಕ್ಲಿಪ್ಡ್ ವೀಡಿಯೋ ಆಗಿದೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಕಥೆ ಮುಗಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳುತ್ತಿದ್ದಾರೆ ಎಂದು ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ.
17 ಸೆಕೆಂಡುಗಳ ಈ ವೀಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು “ಕಾಂಗ್ರೆಸ್ ಕಥೆ ಮುಗಿದಿದೆ, ಕಾಂಗ್ರೆಸ್ ಸತ್ತಿದೆ ಮತ್ತು ಕಾಂಗ್ರೆಸ್ ಈಗ ಎಲ್ಲಿಯೂ ಕಾಣಿಸುವುದಿಲ್ಲ” ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಎಕ್ಸ್ ಪೋಸ್ಟ್ನಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿರುವ ಶೀರ್ಷಿಕೆಯಲ್ಲಿ, “ಖರ್ಗೆ ಜೀ ನೀವು ಸಹ ಕಾಂಗ್ರೆಸ್ ಅನ್ನು ಆನಂದಿಸುತ್ತಿದ್ದೀರಿ, ಕಾಂಗ್ರೆಸ್ ಮುಗಿದಿದೆ, ಕಾಂಗ್ರೆಸ್ ಸತ್ತಿದೆ” ಎಂದು ಶೀರ್ಷಿಕೆ ನೀಡಲಾಗಿದೆ. ಎಕ್ಸ್ ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ನೋಡಿ.
ಅಂತಹ ಇತರ ವೈರಲ್ ಪೋಸ್ಟ್ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಪರಿಶೀಲಿಸಿ.
Also Read: ಪ್ರಧಾನಿ ನರೇಂದ್ರ ಮೋದಿ ರಾಲಿಯಲ್ಲಿ ಖಾಲಿ ಕುರ್ಚಿಗಳು ಎಂದ ವೀಡಿಯೋ ನಿಜಕ್ಕೂ ಎಲ್ಲಿಯದ್ದು?
ಆದಾಗ್ಯೂ, ನಮ್ಮ ತನಿಖೆಯಲ್ಲಿ ವೈರಲ್ ವೀಡಿಯೋ ಅಪೂರ್ಣವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.
Fact Check/Verification
‘ಕಾಂಗ್ರೆಸ್ ಕಥೆ ಮುಗಿದಿದೆ’ ಎಂಬ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಪರಿಶೀಲಿಸಲು, ನಾವು ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಪರಿಣಾಮವಾಗಿ, ನಾವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ವೀಡಿಯೋ ಲಭ್ಯವಾಗಿದೆ. ಮೇ 3 2024 ರಂದು ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಚುನಾವಣಾ ಪ್ರಚಾರ ರಾಲಿಯ ಲೈವ್ ಸ್ಟ್ರೀಮ್ ವೀಡಿಯೋವನ್ನು ವೀಕ್ಷಿಸುವಾಗ ವೈರಲ್ ಕ್ಲಿಪ್ ಕಾಣಿಸಿಕೊಂಡಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಭಾಷಣದ 14:00 ನಿಮಿಷದ ಹೇಳಿಕೆಯಲ್ಲಿ “ಅಹಮದಾಬಾದ್ ನಲ್ಲಿ ಕಾಂಗ್ರೆಸ್ ಪಕ್ಷದ ಅಡಿಪಾಯವು ತುಂಬಾ ಬಲವಾಗಿದೆ, ಅದನ್ನು ಯಾರೂ ಅಳಿಸಲು ಸಾಧ್ಯವಿಲ್ಲ” ಎನ್ದುನುವುದು ವೀಡಿಯೋದಲ್ಲಿ ಕಂಡುಬರುತ್ತದೆ. ನಂತರ ಮಾತನಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ, “ಇದು ಕಾಂಗ್ರೆಸ್ ಪಕ್ಷದ ಅಡಿಪಾಯ. ಅಹ್ಮದಾಬಾದ್ ನಗರದಲ್ಲಿ ಆ ಅಡಿಪಾಯವು ತುಂಬಾ ಬಲವಾಗಿದೆ, ಅದನ್ನು ಯಾರೂ ತೆಗೆದುಹಾಕಲು ಸಾಧ್ಯವಿಲ್ಲ ಮತ್ತು ಕಾಂಗ್ರೆಸ್ ಅನ್ನು ನಾಶಪಡಿಸಲು ಯಾರೂ ಧೈರ್ಯ ಮಾಡುವುದಿಲ್ಲ. ಕಾಂಗ್ರೆಸ್ ಕಥೆ ಮುಗಿದಿದೆ, ಕಾಂಗ್ರೆಸ್ ಸತ್ತಿದೆ ಮತ್ತು ನೀವು ಈಗ ಎಲ್ಲಿಯೂ ಕಾಂಗ್ರೆಸ್ ಅನ್ನು ನೋಡುವುದಿಲ್ಲ ಎಂದು ಕೆಲವರು ಮಾತನಾಡುತ್ತಾರೆ. ಇಲ್ಲಿನ ನಾಯಕರು ಮಾತನಾಡುತ್ತಾರೆ. ಅದರ ನಂತರ ಅವರು ಹೇಳುತ್ತಾರೆ, “ನಾನು ಅವರನ್ನು ಕೇಳುತ್ತೇನೆ, ಈ ಅಹಮದಾಬಾದ್ ಮಹಾತ್ಮ ಗಾಂಧಿಯವರ ಪವಿತ್ರ ಸ್ಥಳವಾಗಿದೆ, ಆದರೆ ಗಾಂಧೀಜಿಯವರ ಸಿದ್ಧಾಂತವನ್ನು ಕೊನೆಗೊಳಿಸಲು ಯೋಚಿಸುತ್ತಿರುವ ಇಂತಹ ಸಿದ್ಧಾಂತದ ಜನರು ಈ ಭೂಮಿಯಲ್ಲಿ ಹುಟ್ಟಿಕೊಂಡಿರುವುದು ಆಶ್ಚರ್ಯಕರವಾಗಿದೆ. “ ಎಂದು ಹೇಳುತ್ತಾರೆ.
Also Read: ವಯನಾಡಿನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆಯೇ, ಸತ್ಯ ಏನು?
ಕಾಂಗ್ರೆಸ್ ಅಧ್ಯಕ್ಷರು, ಕಾಂಗ್ರೆಸ್ ಬಗ್ಗೆ ಅಹಮದಾಬಾದ್ ನ ವಿರೋಧ ಪಕ್ಷದ ನಾಯಕರ ಅಭಿಪ್ರಾಯಗಳನ್ನು ಹೇಳುವಾಗ, ‘ಕಾಂಗ್ರೆಸ್ ಮುಗಿದಿದೆ’ ಎಂದು ಹೇಳಿರುವುದನ್ನು ಇದು ಸ್ಪಷ್ಟಪಡಿಸುತ್ತದೆ. ಭಾಷಣದ ಸಮಯದಲ್ಲಿ, ಅಹಮದಾಬಾದ್ನಲ್ಲಿ ಕಾಂಗ್ರೆಸ್ ಪಕ್ಷದ ಅಡಿಪಾಯವು ತುಂಬಾ ಬಲವಾಗಿದೆ, ಅದನ್ನು ಯಾರೂ ಅಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಿದ್ದರು ಎಂದ ಹೇಳುವುದು ಸ್ಪಷ್ಟವಾಗಿ ಇದೆ.
Conclusion
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಥೆ ಮುಗಿದಿದೆ ಎಂದು ಹೇಳಿದ್ದಾರೆ ಎಂದಿರುವ ವೀಡಿಯೋ ಕ್ಲಿಪ್ ಮಾಡಿದ ವೀಡಿಯೋ ಆಗಿದೆ. ಇದನ್ನು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ.
Also Read: ದಾವಣಗೆರೆಯಲ್ಲಿ ಬಾಲಕ ತಿನಿಸೊಂದನ್ನು ತಿಂದು ಮೃಪಟ್ಟಿದ್ದಾನೆಯೇ, ನಿಜಾಂಶವೇನು?
Result: Missing Context
Our Sources
YouTube Video By The Indian National Congress on 3rd May 2024
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.