Fact Check: ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ವೀಡಿಯೋ ನಿಜವೇ?

ನೈರೋಬಿ ಕೀನ್ಯಾ ಪ್ರವಾಹ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ

Fact
ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾದ ವೀಡಿಯೋಗಳು ನೈಜವಾಗಿ ಅಲ್ಲಿನದ್ದಲ್ಲ, ವಿಶ್ವದ ವಿವಿಧೆಡೆಗಳಲ್ಲಿ ಸಂಭವಿಸಿದ ಪ್ರವಾಹ, ಪಾಕೃತಿಕ ವಿಕೋಪಗಳ ವೀಡಿಯೋಗಳನ್ನು ಎಡಿಟ್ ಮಾಡಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.

ಈ ಕುರಿತು ಸತ್ಯಶೋಧನೆ ನಡೆಸುವಂತೆ ನ್ಯೂಸ್‌ಚೆಕರ್ ಟಿಪ್‌ ಲೈನ್ ಗೆ ಬಳಕೆದಾರರೊಬ್ಬರು ಮನವಿ ಮಾಡಿದ್ದು, ಅದನ್ನು ಸತ್ಯಶೋಧನೆಗೆ ಅಂಗೀಕರಿಸಲಾಗಿದೆ.

Also Read: ಕೇರಳ ಪೊಲೀಸರು ಅಬಕಾರಿ ಮಂತ್ರಿಯನ್ನು ಬಲಾತ್ಕಾರವಾಗಿ ಬಂಧಿಸಿದ್ದಾರೆ ಎನ್ನುವ ವೀಡಿಯೋ ಹಿಂದಿನ ಸತ್ಯವೇನು?

Fact Check: ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ವೀಡಿಯೋ ನಿಜವೇ?

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್‌ ವೀಡಿಯೋವನ್ನು ಪರಿಶೀಲಿಸಿದ್ದು, ಇದು ವಿಶ್ವದ ವಿವಿಧೆಡೆ ಸಂಭವಿಸಿದ ಪ್ರವಾಹದ ವೀಡಿಯೋಗಳನ್ನು ಬಳಸಿ ನೈರೋಬಿ ಎಂದು ಹೇಳಲಾಗಿದೆ ಎಂಬುದನ್ನು ಕಂಡುಕೊಂಡಿದ್ದೇವೆ. ಸತ್ಯಶೋಧನೆಗಾಗಿ ನಾವು ವೈರಲ್‌ ವೀಡಿಯೋದ ಕೀಫ್ರೇಂಗಳನ್ನು ತೆಗೆದಿದ್ದು, ಈ ವೇಳೆ ವೀಡಿಯೋ ಕೀಫ್ರೇಂಗಳಲ್ಲಿ ಒಂದಕ್ಕೊಂದು ವ್ಯತ್ಯಾಸಗಳು ಕಂಡುಬಂದಿದೆ.

ವೀಡಿಯೋ 1

ವೈರಲ್ ಹೇಳಿಕೆಯೊಂದಿಗೆ ಕಂಡುಬಂದಿರುವ ದೃಶ್ಯದ ಮೊದಲ ಕೀಫ್ರೇಂ ನ ರಿವರ್ಸ್ ಇಮೇಜ್‌ ಸರ್ಚ್ ಮಾಡಿದ್ದು, ಈ ವೇಳೆ ಫಲಿತಾಂಶಗಳು ಕಂಡುಬಂದಿವೆ.

ಸೆಪ್ಟೆಂಬರ್ 19, 2022ರ ಇಂಡಿಪೆಂಡೆಂಟ್ ವರದಿಯ ಪ್ರಕಾರ, ಪೋರ್ಟೊ ರಿಕೊದಲ್ಲಿ ಫಿಯೋನಾ ಚಂಡಮಾರುತವು ಪ್ರವಾಹ ಮತ್ತು 85 ಮೈಲಿ ವೇಗದ  ಗಾಳಿಯನ್ನು ತರುವ ವೀಡಿಯೋ ಎಂದಿದೆ. 2017 ರ ವಿನಾಶಕಾರಿ ಮಾರಿಯಾ ಚಂಡಮಾರುತದ ನಂತರ ಪೋರ್ಟೊ ರಿಕೊದಲ್ಲಿ ನಿರ್ಮಿಸಲಾದ ಲೋಹದ ಸೇತುವೆಯನ್ನು ಫಿಯೋನಾ ಚಂಡಮಾರುತವು ಮತ್ತೆ ಕಿತ್ತುಹಾಕಿದೆ. ವರದಿಗಾರರು, ವೀಕ್ಷಕರು ಮತ್ತು ಸ್ಥಳೀಯ ರಾಜಕಾರಣಿಗಳು ಹಂಚಿಕೊಂಡ ವೀಡಿಯೋಗಳಲ್ಲಿ ಉಟುವಾಡೊ ಪಟ್ಟಣದ ಹೆದ್ದಾರಿ 123 ರ ಸೇತುವೆ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದಿದೆ. 

Fact Check: ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ವೀಡಿಯೋ ನಿಜವೇ?
ಇಂಡಿಪೆಡೆಂಟ್ ವರದಿ

ಇದೇ ವೇಳೆ ನಮಗೆ ಸೆಪ್ಟೆಂಬರ್ 19, 2022ರಂದು ಎಬಿಸಿ ನ್ಯೂಸ್‌ ಮಾಡಿರುವ ಎಕ್ಸ್ ಪೋಸ್ಟ್ ಲಭ್ಯವಾಗಿದ್ದು, ಅದರಲ್ಲಿ ಫಿಯೋನಾ ಚಂಡಮಾರುತವು ಪೋರ್ಟೊ ರಿಕೊಕ್ಕೆ ಭಾನುವಾರ ಅಪ್ಪಳಿಸಿದ್ದು, ದೊಡ್ಡ ಹಾನಿಯನ್ನುಂಟು ಮಾಡಿದೆ. 2017 ರಲ್ಲಿ ಮಾರಿಯಾ ಚಂಡಮಾರುತ ಅಪ್ಪಳಿಸಿದ ನಂತರ ಉಟುವಾಡೋ ಪಟ್ಟಣದಲ್ಲಿ ನ್ಯಾಷನಲ್‌ ಗಾರ್ಡ್ ನಿಂದ ಸ್ಥಾಪಿಸಲಾಗಿರುವ ಸೇತುವೆ ಕೊಚ್ಚಿ ಹೋಗಿರುವ ದೃಶ್ಯ ಎಂದಿದೆ.  

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಈ ಪ್ರಕಾರ, ವೈರಲ್ ವೀಡಿಯೋ ಮತ್ತು ಮೂಲ ವೀಡಿಯೋಕ್ಕೆ ಸಾಮ್ಯತೆಗಳು ಕಂಡುಬಂದಿವೆ.

ವೀಡಿಯೋ 2

ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದಾಗ, ಫಲಿತಾಂಶ ಲಭ್ಯವಾಗಿದೆ.

ಆನದೋಲು ಇಂಗ್ಲಿಷ್‌ ಆಗಸ್ಟ್ 13, 2021ರ ಎಕ್ಸ್ ಪೋಸ್ಟ್ ನಲ್ಲಿ ಟರ್ಕಿ ಪ್ರವಾಹದ ಬಗ್ಗೆ ಹಾಕಿದ್ದು, ಟರ್ಕಿ ಭದ್ರತಾ ಪಡೆಗಳು ಹೆಲಿಕಾಪ್ಟರ್ ಗಳ ಮೂಲಕ 353 ಮಂದಿಯನ್ನು ಕಪ್ಪು ಸಮುದ್ರ ಪ್ರದೇಶದಿಂದ ರಕ್ಷಿಸಿದೆ ಎಂದಿದೆ.

Also Read: ವಯನಾಡಿನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಲಾಗಿದೆಯೇ, ಸತ್ಯ ಏನು?

ಇದನ್ನು ಸಾಕ್ಷ್ಯವಾಗಿರಿಸಿ ನಾವು ಇನ್ನಷ್ಟು ಶೋಧ ನಡೆಸಿದಾಗ, ಎನ್‌ಟಿವಿ ಯೂಟ್ಯೂಬ್‌ ವೀಡಿಯೋ ಲಭ್ಯವಾಗಿದೆ. ಆಗಸ್ಟ್ 14, 2021ರಂದು ಈ ವೀಡಿಯೋ ಅಪ್ ಲೋಡ್ ಮಾಡಲಾಗಿದ್ದು, ಶೀರ್ಷಿಕೆಯಲ್ಲಿ “ಈಜಿನ್ ಸ್ಟ್ರೀಮ್‌ನ ಉಕ್ಕಿ ಹರಿಯುವ ಕ್ಷಣಗಳು: ಅದರ ಮೇಲಿನ ಸೇತುವೆ ಕುಸಿದುಬಿದ್ದಿದ್ದು ಹೀಗೆ” ಎಂದಿದೆ.

ವೈರಲ್‌ ವೀಡಿಯೋ ಮತ್ತು ಮೂಲ ವೀಡಿಯೋಗಳಿಗೆ ಇದರಲ್ಲಿ ಸಾಮ್ಯತೆಯೂ ಕಂಡುಬಂದಿದೆ.

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು

ವೀಡಿಯೋ 3

ವೈರಲ್ ವೀಡಿಯೋದ ರಿವರ್ಸ್ ಇಮೇಜ್‌ ಸರ್ಚ್ ವೇಳೆ ಫಲಿತಾಂಶ ಕಂಡುಬಂದಿದ್ದು, 2011ರಲ್ಲಿ  ಜಪಾನ್‌ನ ಇವಾಕಿ ನಗರದ ಸಮೆಗಾವಾ ನದಿ ದಂಡೆಯಲ್ಲಿ ಸುನಾಮಿ ಮೇಳೆ ಅಪ್ಪಳಿಸಿದ ಪ್ರವಾಹ ಎಂದು ಕಂಡುಬಂದಿದೆ. ಈ ಬಗ್ಗೆ ಮಾರ್ಚ್ 9, 2022ರ 2011 ಜಪಾನ್‌ ಸುನಾಮಿ ಆರ್ಕೈ ವ್ ಯೂಟ್ಯೂಬ್‌ ನಲ್ಲಿ ವೀಡಿಯೋ ಲಭ್ಯವಾಗಿದೆ.

ವೀಡಿಯೋ 4

ಈ ವೀಡಿಯೋದ ಕ್ಲಿಪ್‌ ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಚೀನಿ ಭಾಷೆಯ ಅಕ್ಷರಗಳು ಪತ್ತೆಯಾಗಿವೆ. ಆ ಬಳಿಕ ನಾವು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದು, ಇದು ಚೀನಾದ್ದೇ ಎಂಬುದು ಖಚಿತವಾಗಿದೆ.

Fact Check: ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ವೀಡಿಯೋ ನಿಜವೇ?
ವೈರಲ್‌ ವೀಡಿಯೋದಲ್ಲಿ ಕಂಡುಬಂದ ಚೀನಿ ಭಾಷೆ ಅಕ್ಷರಗಳು

 ಜುಲೈ 31, 2023ರ ಗ್ಲೋಬಲ್‌ ಟೈಮ್ಸ್ ಎಕ್ಸ್ ಪೋಸ್ಟ್ ಪ್ರಕಾರ, ಸೋಮವಾರ ಆನ್‌ಲೈನ್‌ನಲ್ಲಿ ಪ್ರಸಾರವಾದ ವೀಡಿಯೋ ತುಣುಕುಗಳು ಪಶ್ಚಿಮ ಬೀಜಿಂಗ್ ಉಪನಗರಗಳಲ್ಲಿ ಹಠಾತ್ ಪ್ರವಾಹಕ್ಕೆ ಕಾರಣವಾದ ಭಾರೀ ಮಳೆಯನ್ನು ತೋರಿಸಿವೆ. ಕೆಲವು ನಿವಾಸಿಗಳು ರಕ್ಷಣೆಗಾಗಿ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ, ಹಲವಾರು ಕಾರುಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ. ಎಂದಿದೆ.

ಇದೇ ರೀತಿಯ ವರದಿಯನ್ನು ಇಲ್ಲಿ ನೋಡಬಹುದು.

ವೀಡಿಯೋ 5

ಹಲವಾರು ಕಾರುಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಸ್ಥಿತಿಯಲ್ಲಿರುವ ಈ ವೀಡಿಯೋ ತುಣುಕನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಈ ವೇಳೆ, ಕಾರೊಂದರಲ್ಲಿ ಅಮೆರಿಕದ ಧ್ವಜ ರೀತಿ ಇರುವುದು ಕಂಡುಬಂದಿದೆ.

Fact Check: ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ವೀಡಿಯೋ ನಿಜವೇ?
ವೈರಲ್ ವೀಡಿಯೋದಲ್ಲಿ ಕಂಡುಬಂದ ಅಮೆರಿಕ ಧ್ವಜ

ಬಳಿಕ ನಾವು ಕೀಫ್ರೇಂ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದು, ಇದು ಅಮೆರಿಕದ ವಿದ್ಯಮಾನದ್ದು ಎಂದು ಗೊತ್ತಾಗಿದೆ.

ಆಗಸ್ಟ್ 12, 2018ರ ಎಬಿಸಿ ನ್ಯೂಸ್‌ ವರದಿಯ ಪ್ರಕಾರ ಅಮೆರಿಕದ ಈಶಾನ್ಯ ಭಾಗದಲ್ಲಿ ಸಂಭವಿಸಿದ ಪ್ರವಾಹದ್ದು ಎಂದು ತಿಳಿದುಬಂದಿದೆ. ವರದಿಯಲ್ಲಿರುವ ವೀಡಿಯೋದಲ್ಲೂ ವೈರಲ್‌ ವೀಡಿಯೋದ ಸಾಮ್ಯತೆಗಳು ಕಂಡುಬಂದಿವೆ.

Fact Check: ಕೀನ್ಯಾದ ರಾಜಧಾನಿ ನೈರೋಬಿಯಲ್ಲಿ ಅಣೆಕಟ್ಟು ಸ್ಫೋಟ ಎಂಬ ವೀಡಿಯೋ ನಿಜವೇ?

ಅದೇ ರೀತಿ, ಆಗಸ್ಟ್ 13, 2018ರಂದು ಸಿಎನ್‌ಎನ್‌ ಎಕ್ಸ್ ಪೋಸ್ಟ್ ನಲ್ಲಿ ನ್ಯೂಜೆರ್ಸಿಯ ಲಿಟ್ಲ್‌ ಫಾಲ್ಸ್‌ ನಲ್ಲಿನ ಡೀಲರ್ ಶಿಪ್‌ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಮಳೆ-ಪ್ರವಾಹದಿಂದಾಗಿ ಕೊಚ್ಚಿ ಹೋಗಿವೆ ಎಂದಿದೆ.

Also Read: ಉಡುಪಿ ಗ್ಯಾಂಗ್‌ ವಾರ್ ನಲ್ಲಿ ವ್ಯಕ್ತಿಯ ಕೊಲೆಯಾಗಿದೆಯೇ?

Conclusion

ಈ ಪುರಾವೆಗಳ ಪ್ರಕಾರ, ಕೀನ್ಯಾದ ನೈರೋಬಿಯಲ್ಲಿ ಪ್ರವಾಹ ಎನ್ನುವುದು ತಪ್ಪಾಗಿದೆ. ವಿವಿಧ ದೇಶಗಳ ಪ್ರವಾದ ವೀಡಿಯೋಗಳನ್ನು ಎಡಿಟ್ ಮಾಡಿ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Result: False

Our Sources
Report By, Independent, Dated: September 19, 2022

Tweet By ABC News, Dated: September 19, 2022

Tweet By Anadolu English, Dated: August 13, 2021

YouTube Video By NTV, Dated: August 14, 2021

YouTube Video By 2011 Japan Tsunami Archive, Dated: March 9, 2022

Tweet By Global times, Dated: July 31, 2023

Report By ABC News, Dated: August 12, 2018

Tweet By CNN, Dated: August 13, 2018


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.