Authors
Claim
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸಂಸತ್ತಿಗೆ ಒಟ್ಟು ಸದಸ್ಯ ಬಲದಲ್ಲಿ ಶೇ.20ರಷ್ಟು ಅಂದರೆ 110 ಮಂದಿ ಮುಸ್ಲಿಮರು ಆಯ್ಕೆಯಾಗಿದ್ದಾರೆ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ಈ ಕ್ಲೇಮಿನ ಆರ್ಕೈವ್ ಆವೃತ್ತಿ ಇಲ್ಲಿದೆ.
Also Read: ವಿಮಾನದಲ್ಲಿ ಸಂಸ್ಕೃತದಲ್ಲಿ ಸೂಚನೆಗಳನ್ನು ನೀಡಲಾಗಿದೆಯೇ, ನಿಜಾಂಶ ಏನು?
Fact
ಈ ಹೇಳಿಕೆಯ ಕುರಿತಾಗಿ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದೆ. “Muslim MPs Lok Sabha” ಎಂಬ ಕೀವರ್ಡ್ ನೊಂದಿಗೆ ಗೂಗಲ್ ಸರ್ಚ್ ನಡೆಸಿದ್ದು, ಈ ವರ್ಷ ಕೇವಲ 24 ಮುಸ್ಲಿಮರು ಲೋಕಸಭೆಗೆ ಚುನಾಯಿತರಾಗಿದ್ದಾರೆ ಎಂದು ಹೇಳುವ ವರದಿಗಳು ಲಭ್ಯವಾಗಿವೆ. ವರದಿಗಳ ಪ್ರಕಾರ, ಈ ಬಾರಿ 2019 ಕ್ಕಿಂತ ಇಬ್ಬರು ಕಡಿಮೆ ಸದಸ್ಯರು ಆಯ್ಕೆಯಾಗಿದ್ದಾರೆ. 2019 ರಲ್ಲಿ ಸ್ಪರ್ಧಿಸಿದ್ದ 115 ಮುಸ್ಲಿಂ ಅಭ್ಯರ್ಥಿಗಳಿಗೆ ಹೋಲಿಸಿದರೆ ಈ ಚುನಾವಣೆಯಲ್ಲಿ ಸ್ವತಂತ್ರರು ಸೇರಿದಂತೆ 78 ಮುಸ್ಲಿಮರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಎಂದಿದೆ. ಆದರೆ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತದಾದ್ಯಂತ 110 ಮುಸ್ಲಿಂ ಸಂಸದರು ಚುನಾಯಿತರಾಗಿದ್ದರು ಎಂದು ಹೇಳುವ ಯಾವುದೇ ವರದಿ ಕಂಡು ಬಂದಿಲ್ಲ.
“ಮುಸ್ಲಿಮರು ಈಗ ಲೋಕಸಭೆಯ ಒಟ್ಟು ಬಲದ ಶೇ.4.42 ರಷ್ಟಿದ್ದಾರೆ, ಇದು ಇದುವರೆಗಿನ ಎರಡನೇ ಅತ್ಯಂತ ಕಡಿಮೆ ಸಂಖ್ಯೆಯಾಗಿದೆ. 1980 ರಲ್ಲಿ 49 ಮುಸ್ಲಿಂ ಸಂಸದರು (ಸದನದ ಶೇ.9.04) ಮತ್ತು 1984 ರಲ್ಲಿ 45 ಮುಸ್ಲಿಂ ಸಂಸದರು ( ಸದನದ ಶೇ. 8.3%) ಇದ್ದರು. ಆ ಬಳಿಕ ಲೋಕಸಭೆಯಲ್ಲಿ ಮುಸ್ಲಿಮರ ಸಂಖ್ಯೆ ಎಂದಿಗೂ 40 ದಾಟಿಲ್ಲ. ಎಂದು ಇಂಡಿಯನ್ ಎಕ್ಸ್ಪ್ರೆಸ್ , ದಿನಾಂಕ ಜೂನ್ 8, 2024 ರಂದು ವರದಿ ಮಾಡಿದೆ. ಎಬಿಪಿ ನ್ಯೂಸ್ನಿಂದ ಇದೇ ರೀತಿಯ ವರದಿಯನ್ನು ಇಲ್ಲಿ ನೋಡಬಹುದು.
“ಎನ್ಡಿಎ ಪಕ್ಷಗಳಲ್ಲಿ ಯಾವುದೇ ಮುಸ್ಲಿಂ ಸಂಸದರು ಇಲ್ಲದಿದ್ದರೂ, ಇಂಡಿ ಒಕ್ಕೂಟ ಶೇ. 7.9 ಪ್ರತಿಶತ ಮುಸ್ಲಿಂ ಸಂಸದರನ್ನು ಹೊಂದಿದೆ. ಅದೇ ರೀತಿ, ಎನ್ಡಿಎ ಯಾವುದೇ ಕ್ರಿಶ್ಚಿಯನ್ ಸಂಸದರನ್ನು ಹೊಂದಿಲ್ಲ, ಆದರೆ ಇಂಡಿ ಬ್ಲಾಕ್ ಶೇ. 3.5 ಪ್ರತಿಶತದಷ್ಟು ಕ್ರಿಶ್ಚಿಯನ್ ಸಂಸದರನ್ನು ಹೊಂದಿದೆ. ಎನ್ಡಿಎಯಲ್ಲಿ ಒಬ್ಬನೇ ಒಬ್ಬ ಸಿಖ್ ಸಂಸದರೂ ಇಲ್ಲ, ಆದರೆ ಇಂಡಿ ಬಣವು ಸಿಖ್ ಸಮುದಾಯದಿಂದ ಶೇಕಡಾ 5 ರಷ್ಟು ಸಂಸದರನ್ನು ಹೊಂದಿದೆ. ಒಟ್ಟಾರೆಯಾಗಿ, 24 ಮುಸ್ಲಿಂ ಸಂಸದರು ಈ ಬಾರಿ ಲೋಕಸಭೆಗೆ ಚುನಾಯಿತರಾಗಿದ್ದಾರೆ,” ಎಂದು ಜೂನ್ 7, 2024 ರ ಮಿಂಟ್ ವರದಿಯಲ್ಲಿದೆ. ಇದೇ ರೀತಿ ಪ್ರಿಂಟ್ ವರದಿಯನ್ನೂ ಇಲ್ಲಿ ನೋಡಬಹುದು. ಆ ಪ್ರಕಾರ 24 ಮುಸ್ಲಿಂ ಸಂಸದರು ಲೋಕಸಭೆಗೆ ಚುನಾಯಿತರಾಗಿದ್ದಾರೆ ಮತ್ತು ಹೇಳಿಕೆಯಲ್ಲಿರುವಂತೆ ಅದು 110 ಅಲ್ಲ ಎಂದು ವರದಿಗಳು ದೃಢೀಕರಿಸಿವೆ.
Also Read: ಕಂಗನಾ ರಾಣಾವತ್ ಕೆನ್ನೆಯಲ್ಲಿ ಏಟಿನ ಗುರುತು ಇದೆ ಎಂದು ವೈರಲ್ ಆಗಿರುವ ಫೋಟೋದ ಸತ್ಯಾಂಶ ಏನು?
Our Sources
Report By Indian Express, Dated: June 8, 2024
Report By ABP News report, Dated: June 5, 2024
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.