Authors
ಯೋಗ ದಿನಾಚರಣೆ ಅಭ್ಯಾಸ ಬಳಿಕ ಇಟಲಿಯಲ್ಲಿ ಆರೆಸ್ಸೆಸ್ ಗೀತೆ, ಜೈನ ಮುನಿಗೆ ಮುಸ್ಲಿಮರ ಥಳಿತ, ನೆಹರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ, ನೀಟ್ ಪರೀಕ್ಷೆ ಅಕ್ರಮ ಆರೋಪಿಗಳು ದಿಯೋಘರ್ ನ ಕಾಂಗ್ರೆಸ್ ಕಚೇರಿಯಲ್ಲೇ ತಲೆಮರೆಸಿಕೊಂಡಿದ್ದರು, ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ ನಲ್ಲಿ ವಿರಾಟ್ ಕೊಹ್ಲಿ ಪ್ರತಿಮೆ ಎಂಬ ಹೇಳಿಕೆಗಳು ಈ ವಾರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಇದರೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿ ಹಸಿಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಪ್ರತಿದಿನ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ ಎನ್ನುವ ಹೇಳಿಕೆಯೂ ಇತ್ತು. ಈ ಕುರಿತಾಗಿ ನ್ಯೂಸ್ಚೆಕರ್ ಸತ್ಯಶೋಧನೆಗಳನ್ನು ನಡೆಸಿದ್ದು, ಇವುಗಳು ಸುಳ್ಳು ಎಂದು ನಿರೂಪಿಸಿದೆ.
ಯೋಗ ದಿನಾಚರಣೆ ಅಭ್ಯಾಸ ಬಳಿಕ ಇಟಲಿಯಲ್ಲಿ ಆರೆಸ್ಸೆಸ್ ಗೀತೆ ಹಾಡಲಾಗಿದೆ ಎಂದು 2 ವರ್ಷ ಹಳೆ ವೀಡಿಯೋ ಹಂಚಿಕೆ
ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಭ್ಯಾಸ ಬಳಿಕ, ಇಟಲಿಯ ಟ್ಯುರಿನ್ ನಗರದಲ್ಲಿ ಆರೆಸ್ಸೆಸ್ ಗೀತೆ “ನಮಸ್ತೇ ಸದಾ ವತ್ಸಲೆ”ಯನ್ನು ಹಾಡಲಾಗಿದೆ ಎಂದು ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ ಸತ್ಯಶೋಧನೆಯ ಪ್ರಕಾರ, ಸಂಘದ ಗೀತೆಯನ್ನು ಇಟಲಿಯಲ್ಲಿ ಹಾಡಿರುವ ವೀಡಿಯೋ ಇತ್ತೀಚಿನದ್ದಲ್ಲ, ಅದು ಎರಡು ವರ್ಷಗಳ ಹಿಂದಿನದ್ದು ಮತ್ತು ಯೋಗ ದಿನಾಚರಣೆಗೆ ಮುನ್ನ ನಡೆಸಿದ ಅಭ್ಯಾಸದ ಸಂದರ್ಭದ್ದಾಗಿದೆ. ಈ ಕುರಿತ ವರದಿ ಇಲ್ಲಿ ಓದಿ
ನೆಹರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಒಪ್ಪಿಕೊಂಡ ವಿಡಿಯೋ ವೈರಲ್
ಜವಾಹರಲಾಲ್ ನೆಹರೂ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ಜವಾಹರಲಾಲ್ ನೆಹರು ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ಹೇಳುವ ವೈರಲ್ ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿ ಓದಿ
ಕರ್ನಾಟಕದಲ್ಲಿ ಜೈನ ಸನ್ಯಾಸಿಗೆ ಮುಸ್ಲಿಮರು ಥಳಿಸಿ ಕಾಂಗ್ರೆಸ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆಯೇ, ಸತ್ಯ ಏನು?
ಕರ್ನಾಟಕದಲ್ಲಿ ಜೈನ ಸನ್ಯಾಸಿಗೆ ಮುಸ್ಲಿಮರು ಥಳಿಸಿ ಕಾಂಗ್ರೆಸ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದತೆ, 2018ರಲ್ಲಿ ಜೈನ ಮುನಿ ಉಪಾಧ್ಯಾಯ ಮಯಾಂಕ್ ಸಾಗರ್ ಜಿ ಮಹಾರಾಜ್ ಅವರಿಗೆ ದ್ವಿಚಕ್ರವಾಹನವೊಂದು ಡಿಕ್ಕಿಯಾಗಿ ಅಪಘಾತವಾಗಿದ್ದು, ಆ ಸಂದರ್ಭದ ಫೋಟೋ ಬಳಸಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಈ ಕುರಿತ ವರದಿ ಇಲ್ಲಿ ಓದಿ
ನೀಟ್ ಪರೀಕ್ಷೆ ಅಕ್ರಮ ಆರೋಪಿಗಳು ದಿಯೋಘರ್ ಕಾಂಗ್ರೆಸ್ ಕಚೇರಿಯಲ್ಲೇ ತಲೆಮರೆಸಿದ್ದರು ಎನ್ನುವ ಹೇಳಿಕೆ ಸುಳ್ಳು
ನೀಟ್ ಪರೀಕ್ಷೆ ಅಕ್ರಮದ ಆರೋಪಿಗಳು ಕಾಂಗ್ರೆಸ್ ಕಚೇರಿಯಲ್ಲೇ ತಲೆ ಮರೆಸಿದ್ದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳು ಹರಿದಾಡುತ್ತಿವೆ. ಈ ಕುರಿತು ನ್ಯೂಸ್ಚೆಕರ್ ತನಿಖೆ ನಡೆಸಿದಾಗ, ನೀಟ್ ಪರೀಕ್ಷೆ ಅಕ್ರಮ ಆರೋಪಿಗಳು ದಿಯೋಘರ್ ಕಾಂಗ್ರೆಸ್ ಕಚೇರಿಯಲ್ಲಿ ತಲೆಮರೆಸಿದ್ದು, ಅವರನ್ನು ಬಂಧಿಸಲಾಗಿದೆ ಎನ್ನುವುದು ಸುಳ್ಳು. ಆರೋಪಿಗಳನ್ನು ದೇವಿಪುರದ ಏಮ್ಸ್ ಬಳಿಯ ಮನೆಯೊಂದರಿಂದ ಬಂಧಿಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತ ವರದಿ ಇಲ್ಲಿ ಓದಿ
ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್ನಲ್ಲಿ ವಿರಾಟ್ ಕೊಹ್ಲಿಯವರ ಪ್ರತಿಮೆ ಅನಾವರಣ ಮಾಡಿದ್ದು ನಿಜವೇ?
ಅಮೆರಿಕದ ಪ್ರಸಿದ್ಧ ಟೈಮ್ಸ್ ಸ್ಕ್ವೇರ್ ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಪ್ರತಿಮೆ ಅನಾವರಣ ಮಾಡಲಾಗಿದೆ ಎಂಬಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಸತ್ಯಶೋಧನೆ ವೇಳೆ ಟೈಮ್ಸ್ ಸ್ಕ್ವೇರ್ನಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯವರ ಪ್ರತಿಮನೆ ಅನಾವರಣ ಮಾಡಿಲ್ಲ. ವೀಡಿಯೋ ಕಂಪ್ಯೂಟರೀಕೃತ ದೃಶ್ಯಗಳಾಗಿವೆ. ಈ ಕುರಿತ ವರದಿ ಇಲ್ಲಿ ಓದಿ
ಹಸಿಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಪ್ರತಿದಿನ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ ಎನ್ನುವುದು ನಿಜವೇ?
ಹಸಿ ಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಸೇವಿಸುವುದರಿಂದ ಮೂಲವ್ಯಾಧಿ ಗುಣವಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯೊಂದು ಹರಿದಾಡುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದಂತೆ, ಹಸಿಮೂಲಂಗಿಯನ್ನು ಮಜ್ಜಿಗೆಯೊಂದಿಗೆ ಪ್ರತಿದಿನ ಸೇವಿಸಿದರೆ ಮೂಲವ್ಯಾಧಿ ಗುಣವಾಗುತ್ತದೆ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಾಧಾರಗಳಿಲ್ಲ, ಮಜ್ಜಿಗೆ, ಮೂಲಂಗಿಯನ್ನು ಉತ್ತಮ ಆಹಾರದ ಅಭ್ಯಾಸವಾಗಿ ಸೇವಿಸಬಹುದು ಈ ಕುರಿತ ವರದಿ ಇಲ್ಲಿ ಓದಿ
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.