Fact Check: ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್‌ ಚಾರ್ಜಿಂಗ್‌ ಅಳವಡಿಸಲಾಗಿದೆಯೇ, ನಿಜಾಂಶ ಏನು?

ಸ್ವೀಡನ್ ರಸ್ತೆ, ಚಾರ್ಜಿಂಗ್‌

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್‌ ಅಳವಡಿಸಲಾಗಿದೆ ಎಂದು ಫೇಸ್‌ಬುಕ್‌ ನಲ್ಲಿ ಹೇಳಿಕೆಯೊಂದು ಹರಿದಾಡಿದೆ.

ಫೇಸ್‌ಬುಕ್‌ನಲ್ಲಿ ಕಂಡುಬಂದ ಹೇಳಿಕೆಯಲ್ಲಿ “ಗಾಡಿ ಓಡಿಸುವಾಗಲೇ ನಿಮ್ಮ ವಾಹನ ಚಾರ್ಜ್ ಆಗುತ್ತೆ, ಸ್ವೀಡನ್‌ನಲ್ಲಿ ರಸ್ತೆ ಮೇಲೆ ಎಲೆಕ್ಟ್ರಿಕ್ ಚಾರ್ಜಿಂಗ್‌ ಲೇನ್‌ ಅನ್ನು ಅಳವಡಿಸಲಾಗಿದೆ. ವಾಹನಗಳು ಇದರ ಚಲಿಸುವಾಗಲೇ ವಿದ್ಯುತ್‌ ಪಾಸ್‌ ಆಗಿ ಚಾರ್ಜ್ ಆಗುತ್ತೆ”, ಎಂದಿದೆ.

ಸ್ವೀಡನ್‌ನಲ್ಲಿ ವಾಹನ ಓಡಿಸುವಾಗಲೇ ಚಾರ್ಜ್ ಆಗುವ ತಂತ್ರಜ್ಞಾನ ಈಗಾಗಲೇ ಬಂದಿದೆ ಎಂಬಂತೆ ನೀಡಿದ ಈ ಹೇಳಿಕೆ ನಿಜವೇ, ಇಂಥದ್ದೊಂದು ಜಾರಿಯಲ್ಲಿದೆಯೇ ಎಂಬುದರ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆಗೆ ಉದ್ದೇಶಿಸಿದ್ದು, ಈ ವೇಳೆ ಇದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ತಿಳಿದುಬಂದಿದೆ.

Also Read: ರೈಲಿನ ಶಿಳ್ಳೆಯಿಂದ ನಮಾಜ್‌ಗೆ ಭಂಗ ಎಂಬ ಕಾರಣಕ್ಕೆ ಮುಸ್ಲಿಮರು ರೈಲು ನಿಲ್ದಾಣ ಪುಡಿಗಟ್ಟಿದರೇ, ನಿಜ ಏನು?

Fact

ಸತ್ಯಶೋಧನೆಗಾಗಿ ನಾವು ಗೂಗಲ್‌ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಹಲವು ವರದಿಗಳು ಕಂಡುಬಂದಿವೆ.

ಮೇ 16 2023 ರ ಟಾಪ್‌ ಗಿಯರ್ ವರದಿ ಪ್ರಕಾರ, ಸ್ವೀಡನ್‌, ವಿಶ್ವದ ಮೊದಲ ಇವಿ ಚಾರ್ಜಿಂಗ್‌ ರಸ್ತೆ ಮಾಡಲಿದೆ ಎಂದಿದೆ. ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡುವ ಇ ಮೋಟಾರು ವೇ ಇದಾಗಿದ್ದು, ಚಾರ್ಜ್ ಗಾಗಿ ದೀರ್ಘ ವಿರಾಮದ ಅಗತ್ಯವನ್ನು ತಗ್ಗಿಸುತ್ತದೆ. ವಿವಿಧ ಪ್ರಾಯೋಗಿಕ ಯೋಜನೆಗಳ ನಂತರ, ರಸ್ತೆಯ ತಾತ್ಕಾಲಿಕ ಆವೃತ್ತಿಗಳು ಮತ್ತು ಇತರ ಪರಿಹಾರಗಳನ್ನು ಪ್ರಯೋಗಿಸಿ, ರಸ್ತೆಯನ್ನು 2025 ರ ವೇಳೆಗೆ ನಿರ್ಮಿಸಲು ನಿರ್ಧರಿಸಲಾಗಿದೆ. ಆದಾಗ್ಯೂ, ಇದರ ಇಂಜಿನಿಯರ್‌ಗಳು ಯಾವ ತಂತ್ರಜ್ಞಾನ ಹೆಚ್ಚು ಸೂಕ್ತವಾಗಿರುತ್ತದೆ ಎಂಬುದರ ಕುರಿತ ಇನ್ನೂ ಕೆಲಸ ಮಾಡುತ್ತಿದ್ದಾರೆ ಎಂದಿದೆ.

Sweden will build the world’s first EV charging road | Top Gear

ಮೇ 8, 2023ರ ಆಟೋ ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಸ್ವೀಡನ್‌ 2025ರವೇಳೆಗೆ ವಿಶ್ವದ ಮೊದಲ ಇಲೆಕ್ಟ್ರಿಫೈಡ್ ರಸ್ತೆಯನ್ನು ತೆರೆಯಲಿದೆ. ಇದು ವಾಹನಗಳು ಸಂಚರಿಸುವಾಗಲೇ ಚಾರ್ಜ್ ಆಗಲು ಸಹಾಯ ಮಾಡಲಿದೆ. ಈ ಯುರೋಪಿಯನ್‌ ದೇಶವು 3 ಸಾವಿರ ಕಿ.ಮೀ.ಗಳಿಗೂ ಹೆಚ್ಚಿನ ರಸ್ತೆಯನ್ನು ಎಲೆಕ್ಟ್ರಿಫೈ ಮಾಡಲು ಉದ್ದೇಶಿಸಿದೆ ಎಂದಿದೆ.

Also Read: ಕೇರಳ ಕೋಚಿಂಗ್‌ ಸೆಂಟರ್ ನ ನೀಟ್ ಫಲಿತಾಂಶದ ಪತ್ರಿಕಾ ಜಾಹೀರಾತಿಗೆ ಕೋಮು ಬಣ್ಣ – Newschecker

ಮೇ 9, 2023ರ ಯೂರೋ ನ್ಯೂಸ್‌ ಪ್ರಕಾರ ಸ್ವೀಡನ್‌ ವಾಹನ ಚಾಲನೆ ವೇಳೆ ಚಾರ್ಜ್ ಆಗುವ ವಿಶ್ವದ ಮೊದಲ ಎಲೆಕ್ಟ್ರಿಫೈಡ್‌ ರಸ್ತೆಯನ್ನು ನಿರ್ಮಿಸುತ್ತಿದೆ ಎಂದಿದೆ. ಈ ವರದಿಯಲ್ಲೂ ಮೊದಲ ಹಂತ 2025ರ ವೇಳೆಗೆ ತೆರೆದುಕೊಳ್ಳಲಿದ್ದು ಸದ್ಯ ಸ್ವಾಧೀನ ಪ್ರಕ್ರಿಯೆಯಲ್ಲಿ ಜಾರಿಯಲ್ಲಿದೆ ಎಂದಿದೆ.

ಈ ವರದಿಗಳ ಪ್ರಕಾರ, ಸ್ವೀಡನ್‌ ನಲ್ಲಿ ವಿಶ್ವದ ಮೊದಲ ಚಾರ್ಜಿಂಗ್‌ ರಸ್ತೆಗೆ ಸಿದ್ಧತೆಗಳು, ನಿರ್ಮಾಣ ಕಾರ್ಯ ಆರಂಭವಾಗಿವೆ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. 2025ರ ಹೊತ್ತಿಗೆ ಅದು ಲೋಕಾರ್ಪಣೆಯಾಗಲಿದೆ ಎಂದು ತಿಳಿದುಬಂದಿದೆ.

Result: Missing Context

Our Sources
Report By Top Gear, Dated: May 16, 2023

Report By HT Auto, Dated: May 08, 2023

Report By Euronews, Dated: May 09, 2023


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.