Authors
Claim
ಅಂಬಾನಿ ಮನೆ ಆಂಟಿಲಿಯಾ ಮೇಲೆ ಮೂಡಿದ ಅನಂತ್ ಅಂಬಾನಿ ವಿವಾಹದ ದೃಶ್ಯ ಎಂದು ಸಾಮಾಜಿಕ ಮಾಧ್ಯಮಗಳಲ್ಲಿಹಂಚಿಕೊಳ್ಳಲಾಗುತ್ತಿದೆ.
ಫೇಸ್ಬುಕ್ ನಲ್ಲಿ ಉದಯವಾಣಿ ಮಾಡಿದ ಪೋಸ್ಟ್ ನಲ್ಲಿ ಅಂಬಾನಿ ನಿವಾಸ ಆಂಟಿಲಿಯಾ ರೀತಿ ಕಾಣುವ ಕಟ್ಟಡ ಒಂದರ ಮೇಲೆ ಅನಂತ್ ಅಂಬಾನಿ-ರಾಧಿಕಾ ಮರ್ಚಂಡ್ ಅವರ ವಿವಾಹದ ವೀಡಿಯೋವನ್ನು ಪ್ರದರ್ಶಿಸಿರುವುದು ಕಾಣುತ್ತದೆ.
Also Read: ಅನಂತ್ ಅಂಬಾನಿ ಮದುವೆಗೆ ಹೋಗದ ಬಗ್ಗೆ ನಟ ಸುದೀಪ್ ಸ್ಪಷ್ಟನೆಯ ವೀಡಿಯೋ ಹಳೇದು
ಇದೇ ರೀತಿಯ ಸುದ್ದಿಯನ್ನು ಎಬಿಪಿ ಲೈವ್ ಕೂಡ ವರದಿ ಮಾಡಿದೆ. ಇದರಲ್ಲೂ ಅಂಬಾನಿ ವಿವಾಹ ಆಂಟಿಲಿಯಾದ ಮೇಲೆ ಪ್ರದರ್ಶಿಸಲಾಗಿದೆ ಎಂದು ಹೇಳಲಾಗಿದೆ.
ಈ ವೀಡಿಯೋ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು, ಇದೊಂದು ಕೃತಕ ವೀಡಿಯೋ, ವಿಎಫ್ಎಕ್ಸ್ (ವಿಶುವಲ್ ಎಫೆಕ್ಟ್ ) ತಂತ್ರಜ್ಞಾನದ ಮೂಲಕ ಮಾಡಲಾಗಿದ್ದು ನಿಜವಾದ್ದಲ್ಲ ಎಂದು ಕಂಡುಕೊಂಡಿದೆ.
Fact
ಸತ್ಯಶೋಧನೆಗಾಗಿ ನಾವು ಆಂಟಿಲಿಯಾ ಮೇಲೆ ಅನಂತ್ ಅಂಬಾನಿ ಮದುವೆಯ ವೀಡಿಯೋ ಪ್ರದಶರ್ಶಿಸಲಾಗಿದೆಯೇ ಎಂದು ಸುದ್ದಿಗಳನ್ನು ಹುಡುಕಿದ್ದೇವೆ. ಈ ವೇಳೆ ಅಂತಹ ಯಾವುದೇ ಸುದ್ದಿಗಳು ಕಂಡುಬಂದಿಲ್ಲ.
ಆ ಬಳಿಕ ವೈರಲ್ ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಯೂಟ್ಯೂಬ್ ವೀಡಿಯೋ ಒಂದು ಲಭ್ಯವಾಗಿದೆ. ಜುಲೈ 18, 2024ರಂದು ಟ್ರೆಂಡ್ಸಿ ಮಯೂರಿ ಹೆಸರಿನ ಈ ಚಾನೆಲ್ ನಲ್ಲಿ ವೀಡಿಯೋ ಅಪ್ ಲೋಡ್ ಮಾಡಲಾಗಿದ್ದು, ಇಲ್ಲಿಯೂ ಆಂಟಿಲಿಯಾ ರೀತಿ ಕಟ್ಟಡದಲ್ಲಿ ಅಂಬಾನಿ ವಿವಾಹವನ್ನುತೋರಿಸುವುದನ್ನು ನೋಡಿದ್ದೇವೆ. ಈ ವೀಡಿಯೋದಲ್ಲಿ KEYUR_CGI ಹೆಸರಿನ ಇನ್ ಸ್ಟಾಗ್ರಾಂ ವಾಟರ್ ಮಾರ್ಕ್ ಅನ್ನು ನಾವು ಕಂಡಿದ್ದೇವೆ.
ಈ ಸುಳಿವಿನ ಆಧಾರದಲ್ಲಿ ನಾವು ಇನ್ಸ್ಟಾಗ್ರಾಂನಲ್ಲಿ Kkeyur_cgi ಖಾತೆಯನ್ನು ಹುಡುಕಿದ್ದೇವೆ. ವೈರಲ್ ವೀಡಿಯೋವನ್ನು ಹೋಲುವ ವೀಡಿಯೋ ಇಲ್ಲೂ ಕಂಡುಬಂದಿದ್ದು ಅದನ್ನು ಜುಲೈ 18, 2024 ರಂದು ಅಪ್ ಲೋಡ್ ಮಾಡಲಾಗಿದೆ. ಇದರೊಂದಿಗೆ ನಾವು KEYUR_CGI ಖಾತೆಯನ್ನು ಶೋಧಿಸಿದ್ದೇವೆ. ಇದರಲ್ಲಿ ಹಲವು ಇದೇ ರೀತಿಯ ವೀಡಿಯೋ ಗಳನ್ನು ಕಂಡುಕೊಂಡಿದ್ದೇವೆ. ಜೊತೆಗೆ ಖಾತೆದಾರರು ತಮ್ಮ ವಿವರದಲ್ಲಿ ಹಾಲಿವುಡ್ ಮಾಜಿ ವಿಎಫ್ ಎಕ್ಸ್ ಆರ್ಟಿಸ್ಟ್ ಎಂದು ಬರೆದುಕೊಂಡಿದ್ದಾರೆ.
ಆ ಬಳಿಕ ನ್ಯೂಸ್ಚೆಕರ್ ಅವರನ್ನು ಸಂಪರ್ಕಿಸಿದ್ದು, ನಮಗೆ ನೀಡಿದ ಪ್ರತಿಕ್ರಿಯೆಯಲ್ಲಿ ವೀಡಿಯೋ ನಿಜವಾದ್ದಲ್ಲ, ಅದು ವಿಎಫ್ ಎಕ್ಸ್ ಮೂಲಕ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.
ವಿಚಾರಕ್ಕೆ ಸಂಬಂಧಿಸಿ ನಾವು ಉದಯವಾಣಿಯನ್ನು ಸಂಪರ್ಕಿಸಲು ಯತ್ನಿಸಿದ್ದು, ಅವರ ಪ್ರತಿಕ್ರಿಯೆ ಬಂದ ಬಳಿಕ ಈ ಲೇಖನವನ್ನು ನವೀಕರಿಸಲಾಗುವುದು. ಈ ಸಾಕ್ಷ್ಯಾಧಾರಗಳ ಪ್ರಕಾರ ಅಂಬಾನಿ ನಿವಾಸದ ಮೇಲೆ ಮೂಡಿದ ಅನಂತ್ ಅಂಬಾನಿ ವಿವಾಹದ ದೃಶ್ಯ ಎಂದಿರುವುದು ತಪ್ಪಾಗಿದೆ. ಇದು ವಿಎಫ್ ಎಕ್ಸ್ ಮೂಲಕ ಮಾಡಿದ್ದಾಗಿದೆ.
Also Read: ಸೋನಿಯಾ ಗಾಂಧಿ ಕೈಯಲ್ಲಿ ಸಿಗರೇಟ್ ಹಿಡಿದಿರುವ ಎಐ ಫೋಟೋ ವೈರಲ್
Result: Altered Video
Our Sources
Instagram Post By Keyur_cgi, Dated: July 18, 2024
Conversation with Keyur_cgi/Debabrata bairagy
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.