Fact Check: ವಯನಾಡ್‌ ದುರಂತ ಎಂದು ಎಐ ಫೋಟೋ ಹಂಚಿಕೆ

ವಯನಾಡ್ ದುರಂತ ಎಐ ಫೋಟೋ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim

ವಯನಾಡ್ ನಲ್ಲಿ ನಡೆದ ದುರಂತದಲ್ಲಿ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಇದೇ ವೇಳೆ ಮೃತಪಟ್ಟವರು ಎಂಬಂತೆ ತಾಯಿ-ಮಗುವಿನ ಫೋಟೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ, ನ್ಯೂಸ್‌ ಡೆಸ್ಕ್ ಎಂಬ ಸುದ್ದಿ ವೆಬ್ಸೈಟ್ ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ವಾಟ್ಸಾಪ್‌ ನಲ್ಲಿ ಕಂಡುಬಂದ ಸಂದೇಶದಲ್ಲಿ, “ವಯನಾಡು : ದುರಂತದ ಮುಖ. ಮರಣದ ಸಮಯದಲ್ಲೂ ತನ್ನ ಮಗುವನ್ನು ಒಂಟಿಯಾಗಲು ಬಿಡದೇ ಅಪ್ಪಿಕೊಂಡ ಅಮ್ಮ! ಮತ್ತೆ ಈಭಾರತ ಭೂಮಿಯಲ್ಲಿ ಹುಟ್ಟಿ ಬನ್ನಿ ಎಂದು ಹಾರೈಸಲು ಮಾತ್ರ ನಮಗೆ ಸಾಧ್ಯ” ಎಂದಿದೆ.

Also Read: ನೇತ್ರಾವತಿ ನದಿಯಲ್ಲಿ ಪ್ರವಾಹ ಎಂದು ಕೇರಳದ ಪಟ್ಟಾಂಬಿ ಸೇತುವೆ ವೀಡಿಯೋ ವೈರಲ್

Fact Check: ವಯನಾಡ್‌ ದುರಂತ ಎಂದು ಎಐ ಫೋಟೋ ಹಂಚಿಕೆ
ವಾಟ್ಸಾಪ್‌ ನಲ್ಲಿ ಕಂಡುಬಂದ ಹೇಳಿಕೆ
Fact Check: ವಯನಾಡ್‌ ದುರಂತ ಎಂದು ಎಐ ಫೋಟೋ ಹಂಚಿಕೆ
ನ್ಯೂಸ್‌ ಡೆಸ್ಕ್ ಫೋಟೋ

ಈ ಬಗ್ಗೆ ನ್ಯೂಸ್‌ಚೆಕರ್‍‌ ಸತ್ಯಶೋಧನೆ ನಡೆಸಿದ್ದು, ಇದು ತಪ್ಪು ಫೊಟೋ, ಇದು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ನಿಂದ ತಯಾರಿಸಲಾದ ಚಿತ್ರ ಎಂದು ಕಂಡುಕೊಂಡಿದೆ.

Fact

ಸತ್ಯಶೋಧನೆಗಾಗಿ ನಾವು ಗೂಗಲ್‌ ಮೂಲಕ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಕೆಲವು ಬಳಕೆದಾರರು ಇದನ್ನು ವಯನಾಡಿನ ದುರಂತಕ್ಕೂ ಮೊದಲೇ ಹಂಚಿಕೊಂಡಿರುವುದನ್ನು ಗಮನಿಸಿದ್ದೇವೆ. ರಿಯಾ 119 ಎಂಬ ಇನ್‌ ಸ್ಟಾ ಗ್ರಾಂ ಬಳಕೆದಾರರು ಜುಲೈ 1, 2024ರಂದು ಇದನ್ನು ಹಂಚಿಕೊಳ್ಳಲಾಗಿದೆ.

Fact Check: ವಯನಾಡ್‌ ದುರಂತ ಎಂದು ಎಐ ಫೋಟೋ ಹಂಚಿಕೆ

ಎರ್ಮಿಲಿನ್‌ 229 ಎಂಬ ಫೇಸ್‌ಬುಕ್‌ ಬಳಕೆದಾರರು ಏಪ್ರಿಲ್‌ 26, 2024ರಂದು ಹಂಚಿಕೊಂಡಿದ್ದಾರೆ. “ನೀವು ಯಶಸ್ವಿಯಾಗುವ ದಿನದವರೆಗೆ ದೇವರು ನಿಮ್ಮ ತಾಯಿಯನ್ನು ರಕ್ಷಿಸಲಿ” ಎಂಬ ಶೀರ್ಷಿಕೆಯೊಂದಿಗೆ ಇದನ್ನು ಹಂಚಿಕೊಂಡಿದ್ದಾರೆ.

Fact Check: ವಯನಾಡ್‌ ದುರಂತ ಎಂದು ಎಐ ಫೋಟೋ ಹಂಚಿಕೆ

ಇದರೊಂದಿಗೆ ನಾವು ಫೋಟೋವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ, ಮಗುವಿನ ಮುಖ ಚಹರೆಯು ಆಫ್ರಿಕನ್ನರ ರೀತಿ ಇರುವುದನ್ನು ಗಮನಿಸಿದ್ದೇವೆ ಮತ್ತು ಚಿತ್ರದ ಮಾದರಿಯು ಒಂದು ರೀತಿ ಕಂಪ್ಯೂಟರೀಕೃತದ ರೀತಿ ಇರುವುದು ಸಂಶಯಕ್ಕೆಡೆಮಾಡಿದೆ.

ಅದರಂತೆ ಚಿತ್ರವನ್ನು ನಾವು ಎಐ ಇಮೇಜ್‌ ಪರಿಶೀಲಕ ವೆಬ್‌ ಸೈಟ್ ಗಳಲ್ಲಿ ಪರೀಕ್ಷಿಸಲು ನಿರ್ಧರಿಸಿದ್ದೇವೆ. ಈ ವೇಳೆ ಈಸ್‌ ಇಟ್ ಎಐ ವೆಬ್‌ ಇದು ಶೇ.69.94ರಷ್ಟು ಕೃತಕ ಚಿತ್ರ ಎಂದು ಹೇಳಿದೆ.

Fact Check: ವಯನಾಡ್‌ ದುರಂತ ಎಂದು ಎಐ ಫೋಟೋ ಹಂಚಿಕೆ
ಈಸ್ ಇಟ್ ಎಐ ಫಲಿತಾಂಶ

ಹೈವ್ ಮಾಡರೇಶನ್‌ ನ ಮೂಲಕವೂ ಫೋಟೋವನ್ನು ಪರಿಶೀಲಿಸಿದ್ದು, ಇದು ಶೇ.99ರಷ್ಟು ಎಐ ಮೂಲಕ ಮಾಡಲಾದ ಕೃತಕ ಫೊಟೋ ಎಂದು ಹೇಳಿದೆ.

Fact Check: ವಯನಾಡ್‌ ದುರಂತ ಎಂದು ಎಐ ಫೋಟೋ ಹಂಚಿಕೆ
ಹೈವ್ ಮಾಡರೇಶನ್‌ ಫಲಿತಾಂಶ

ಬಳಿಕ ಸ್ಪೇಸಸ್‌ ನ ಮೇ ಬೀಸ್‌ ಆರ್ಟ್ ಡಿಟೆಕ್ಷರ್ ನಲ್ಲೂ ಪರೀಕ್ಷೆ ನಡೆಸಿದ್ದು, ಶೇ.76ರಷ್ಟು ಈ ಚಿತ್ರವು ಕೃತಕ ಚಿತ್ರ ಎಂಬುದನ್ನು ಹೇಳಿದೆ.

Fact Check: ವಯನಾಡ್‌ ದುರಂತ ಎಂದು ಎಐ ಫೋಟೋ ಹಂಚಿಕೆ
ಸ್ಪೇಸಸ್‌ ಫಲಿತಾಂಶ

ಹೆಚ್ಚಿನ ಮಾಹಿತಿಗೆ ನಾವು ಫೇಸ್‌ಬುಕ್‌ ಬಳಕೆದಾರರಾದ ಎರ್ಮಿಲಿನ್‌ 229 ಅವರನ್ನು ಸಂಪರ್ಕಿಸಿದ್ದು, ಅವರ ಪ್ರತಿಕ್ರಿಯೆ ಲಭ್ಯವಾದ ಬಳಿಕ ಲೇಖನವನ್ನು ನವೀಕರಿಸಲಾಗುವುದು.

ಈ ಸಾಕ್ಷ್ಯಗಳ ಪ್ರಕಾರ, ವಯನಾಡಿನಲ್ಲಿ ಮರಣದ ಸಮಯದಲ್ಲೂ ತನ್ನ ಮಗುವನ್ನು ಒಂಟಿಯಾಗಲು ಬಿಡದೇ ಅಪ್ಪಿಕೊಂಡ ಅಮ್ಮ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಈ ಫೋಟೋ ಇದು ಎಐ ಮೂಲಕ ಮಾಡಿದ್ದು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ.

Also Read: ಗೋವಾ-ಮಂಗಳೂರು ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್ ಸ್ಫೋಟ ಎಂದ ವೀಡಿಯೋ ಬ್ರೆಜಿಲ್‌ನದ್ದು!

Result: Altered Photo

Our Sources
Instagram post By Ria 119, Dated: July 1, 2024

Facebook post By Ermilin, Dated: April 26, 2024

Is it AI Image detector

HIVE Moderation

Hugging Space Image detector

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.