Fact Check: ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಂದು ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಿಂಸಾಚಾರದ ಚಿತ್ರ ವೈರಲ್

ಬಾಂಗ್ಲಾದೇಶ, ಹಿಂದೂ ಮಹಿಳೆ, ಲೈಂಗಿಕ ದೌರ್ಜನ್ಯ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಹಿಂದೂ ಮಹಿಳೆಯ ಚಿತ್ರ

Fact
ಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಹಿಂದೂ ಮಹಿಳೆಯ ಚಿತ್ರ ಎನ್ನುವುದು ನಿಜವಲ್ಲ. ಇದು 2021ರಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆಯಾಗಿದ್ದು ಬಾಂಗ್ಲಾ ಮಹಿಳೆಯೊಬ್ಬರ ಮೇಲೆ ಬಾಂಗ್ಲಾದೇಶೀಯರೇ ಅತ್ಯಾಚಾರ ನಡೆಸಿದ ಪ್ರಕರಣವಾಗಿದೆ.

ಬಾಂಗ್ಲಾದೇಶದಲ್ಲಿ ಪ್ರಜಾಸತ್ತಾತ್ಮಕ ಸರ್ಕಾರ ಪತನಗೊಂಡಿದೆ. ಜನರ ಒತ್ತಡಕ್ಕೆ ಮಣಿದು ದೇಶದ ಮಿಲಿಟರಿ ಸರ್ಕಾರವನ್ನು ಪತನಗೊಳಿಸಿದೆ. ಇದೇ ವೇಳೆ ದೇಶದ ಹಲವು ಭಾಗಗಳಲ್ಲಿ ಹಿಂಸೆ, ಲೂಟಿ ಪ್ರಕರಣಗಳು ವರದಿಯಾಗಿವೆ. ಅಲ್ಪಸಂಖ್ಯಾತರ ಮೇಲೆ ದಾಳಿಗಳು, ದೇಗುಲಗಳ ಮೇಲೆ ದಾಳಿಗಳ ಬಗ್ಗೆಯೂ ವರದಿಯಾಗುತ್ತಿದೆ.

ಏತನ್ಮಧ್ಯೆ ಮಹಿಳೆಯೊಬ್ಬಳ ಮೇಲೆ ಹಿಂಸಾಚಾರದ ದೃಶ್ಯವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದರೊಂದಿಗೆ “ಬಾಂಗ್ಲಾದೇಶದಿಂದ ಬಹಳ ಭಯಾನಕ ಸುದ್ದಿ ಬರುತ್ತಿದೆ. ಬಾಂಗ್ಲಾದೇಶದಲ್ಲಿ, ಜಿಹಾದಿ ಮುಸ್ಲಿಮರು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಮತ್ತು ಅವರ ಅತ್ಯಾಚಾರದ ದೃಶ್ಯಗಳನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಪೋಸ್ಟ್ ಮಾಡುವ ಮೂಲಕ, ಬೇರೆ ಪ್ರದೇಶಗಳಲ್ಲಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಇತರ ಮುಸ್ಲಿಮರನ್ನು ಪ್ರೇರೇಪಿಸುತ್ತಿದ್ದಾರೆ.” ಎಂಬ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ.

Also Read: ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆ ನಡೆಯುತ್ತಿದೆ ಎಂದ ವೀಡಿಯೋ ಅಸಲಿಯತ್ತೇನು?

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಂದು ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಿಂಸಾಚಾರದ ಚಿತ್ರ ವೈರಲ್

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್ ಚಿತ್ರದ ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಅಕ್ಟೋಬರ್ 8 2023 ರಂದು ಎಕ್ಸ್ ನಲ್ಲಿ ಮಾಡಲಾದ ಪೋಸ್ಟ್‌ನಲ್ಲಿ ಇರುವ ವೀಡಿಯೋ ಒಂದನ್ನು ಕಂಡುಕೊಂಡಿದ್ದೇವೆ. ಇದರಲ್ಲಿ ವೈರಲ್ ಚಿತ್ರವನ್ನು ಹೋಲುವ ದೃಶ್ಯವಿರುವುದು ಕಂಡುಬಂದಿದೆ. ವೀಡಿಯೋದ ಶೀರ್ಷಿಕೆಯಲ್ಲಿ ಅದು ಮಣಿಪುರದಿಂದ ಬಂದಿದೆ ಎಂದು ಹೇಳಲಾಗಿದೆ.

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಂದು ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಿಂಸಾಚಾರದ ಚಿತ್ರ ವೈರಲ್

ಜೂನ್ 8, 2021 ರಂದು ಪ್ರಕಟವಾದ ವರದಿಯು, newsbangla24.com ನ ವೆಬ್‌ಸೈಟ್‌ನಲ್ಲಿ ವೀಡಿಯೋದಲ್ಲಿ ಕಂಡುಬರುವ ದೃಶ್ಯಗಳೊಂದಿಗೆ , ಭಾರತದಲ್ಲಿ ಮಹಿಳೆಯರ ಕಳ್ಳಸಾಗಣೆ ಮತ್ತು ಬೆಂಗಳೂರಿನಲ್ಲಿ ಬಾಂಗ್ಲಾದೇಶಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ ಅಂತರರಾಷ್ಟ್ರೀಯ ಮಹಿಳಾ ಕಳ್ಳಸಾಗಣೆ ಗ್ಯಾಂಗ್‌ನ ಸದಸ್ಯರನ್ನು ಬಂಧಿಸಲಾಗಿದೆ ಎಂಬ ವರದಿಯಿದೆ.

Also Read: ಬಾಂಗ್ಲಾ ಕ್ರಿಕೆಟಿಗ ಲಿಟನ್ ಕುಮಾರ್ ದಾಸ್ ಮನೆಗೆ ಬೆಂಕಿ ಹಚ್ಚಲಾಗಿದೆಯೇ?

Fact Check: ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಂದು ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಿಂಸಾಚಾರದ ಚಿತ್ರ ವೈರಲ್

ಈಗ ನಾವು ಕೀವರ್ಡ್ ಗಳೊಂದಿಗೆ ಹೆಚ್ಚಿನ ಶೋಧ ನಡೆಸಿದ್ದೇವೆ. ಆ ಪ್ರಕಾರ, 2021 ರಲ್ಲಿ ದಿ ಇಂಡಿಯನ್ ಎಕ್ಸ್‌ಪ್ರೆಸ್  ,  ಕ್ವಿಂಟ್ , ಹಿಂದೂಸ್ತಾನ್ ಟೈಮ್ಸ್ , ಇಂಡಿಯಾ ಟುಡೆ ಮತ್ತು  ಎನ್‌ಡಿಟಿವಿ ಸೇರಿದಂತೆ ಹಲವಾರು ಮಾಧ್ಯಮದ ವರದಿಗಳು  ಬೆಂಗಳೂರಿನಲ್ಲಿ 22 ವರ್ಷದ ಬಾಂಗ್ಲಾದೇಶಿ ಮಹಿಳೆಯ ಮೇಲೆ ಅತ್ಯಾಚಾರದ ಬಗ್ಗೆ ವರದಿ ಮಾಡಿವೆ ಎಂದು ಕಂಡುಕೊಂಡಿದ್ದೇವೆ. ಈ ವರದಿಗಳ ಪ್ರಕಾರ, ಬೆಂಗಳೂರು ಪೊಲೀಸರು ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 12 ಜನರನ್ನು ಬಂಧಿಸಿದ್ದಾರೆ. ಅದರಲ್ಲಿ 11 ಆರೋಪಿಗಳು ಮತ್ತು ಸಂತ್ರಸ್ತ ಮಹಿಳೆಯರು ಬಾಂಗ್ಲಾದೇಶದ ಪ್ರಜೆಗಳು. ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿತ್ತು. ಮೇ 21, 2022 ರ ಟೈಮ್ಸ್ ಆಫ್ ಇಂಡಿಯಾ  ವರದಿಯ ಪ್ರಕಾರ  , ನ್ಯಾಯಾಲಯವು 11 ಆರೋಪಿಗಳನ್ನು ತಪ್ಪಿತಸ್ಥರೆಂದು ಹೇಳಿದೆ ಮತ್ತು ಅವರಿಗೆ ಜೀವಾವಧಿಯಿಂದ ಒಂಬತ್ತು ತಿಂಗಳವರೆಗೆ ಜೈಲು ಶಿಕ್ಷೆಗಳನ್ನು ವಿಧಿಸಿದೆ.

ತನಿಖೆಯ ಸಮಯದಲ್ಲಿ, ಬೆಂಗಳೂರು ಪೊಲೀಸರ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಜುಲೈ 8, 2021 ರಂದು ಈ ಘಟನೆ ಮತ್ತು ಪೊಲೀಸರು ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ನೀಡುವ ಪೋಸ್ಟ್ ಕೂಡ ನಾವು ಕಂಡುಕೊಂಡಿದ್ದೇವೆ .

Conclusion

ಈ ತನಿಖೆಯ ಪ್ರಕಾರ, 2021 ರಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆಯ ಚಿತ್ರಗಳನ್ನು ಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಎಂಬ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ತೀರ್ಮಾನಿಸಲಾಗಿದೆ.

Also Read: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಎಂದು ಗಾಝಾದ ವೀಡಿಯೋ ವೈರಲ್

Result: False

X Post By CP Bengaluru, Dated: July 8, 2021

Report By The Quint, Dated: 28 May, 2021

YouTube Video By India Today, Dated May 28, 2024

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.