Weekly wrap: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಸ್ಥಿತಿ, ಹಿಂದೂಗಳ ಕೊಲೆ, ವಾರದ ನೋಟ

weekly wrap

ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ್ ಹಸೀನಾ ಪದಚ್ಯುತರಾದ ಬಳಿಕ ಅಲ್ಲಿನ ವಿದ್ಯಮಾನಕ್ಕೆ ಸಂಬಂಧಿಸಿದಂತೆ ತಪ್ಪು ಹೇಳಿಕೆಗಳು ವ್ಯಾಪಕವಾಗಿವೆ. ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಸ್ಥಿತಿ ಎಂದು ಬೀದಿ ನಾಟಕ ಒಂದರ ದೃಶ್ಯ ವೈರಲ್‌ ಆಗಿದೆ. ಹಿಂದೂಗಳ ಕೊಲೆ ನಡೆಯುತ್ತಿದೆ ಎಂದು ರಥಯಾತ್ರೆಯೊಂದರ ವೇಳೆ ಸಂಭವಿಸಿದ ವಿದ್ಯುತ್‌ ಶಾಕ್‌ ತಗುಲಿದ ವಿದ್ಯಮಾನ ವೈರಲ್‌ ಆಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಂದು ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಿಂಸಾಚಾರದ ಚಿತ್ರ ಕೂಡ ವೈರಲ್ ಆಗಿದ. ಇದರೊಂದಿಗೆ ಗೋಡಂಬಿ ತಿಂದರೆ ಕೂದಲು ಉದುರುವಿಕೆ ತಡೆಗಟ್ಟಲು ಉತ್ತಮ ಎಂಬ ಹೇಳಿಕೆಯೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ತಪ್ಪಾದ ಹೇಳಿಕೆಗಳು ಎಂದು ಸಾಬೀತು ಪಡಿಸಿದೆ.

Weekly wrap: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಸ್ಥಿತಿ, ಹಿಂದೂಗಳ ಕೊಲೆ, ವಾರದ ಕ್ಲೇಮ್‌ ನೋಟ

ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ ಎಂದು ಬೀದಿ ನಾಟಕದ ವೀಡಿಯೋ ವೈರಲ್

ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಪರಿಸ್ಥಿತಿ ಎಂದು ವೀಡಿಯೋ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಹಿಂದೂ ಮಹಿಳೆಯರ ದುಃಸ್ಥಿತಿ ಎಂದು ತೋರಿಸಲು ಹುಡುಗಿಯೊಬ್ಬಳು ತನ್ನ ಕೈ ಮತ್ತು ಕಾಲುಗಳನ್ನು ಕಟ್ಟಿ, ಬಾಯಿ ಮುಚ್ಚಿರುವುದನ್ನು ತೋರಿಸುವ ವೀಡಿಯೋ ಇದರಲ್ಲಿದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಢಾಕಾದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರ ಆತ್ಮಹತ್ಯೆ ಪ್ರಕರಣದ ವಿರುದ್ಧ ನಡೆದ ಪ್ರತಿಭಟನೆಯ ಬೀದಿ ನಾಟಕದ ವೀಡಿಯೋ ಇದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿ ಓದಿ

Weekly wrap: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಸ್ಥಿತಿ, ಹಿಂದೂಗಳ ಕೊಲೆ, ವಾರದ ಕ್ಲೇಮ್‌ ನೋಟ

ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆ ನಡೆಯುತ್ತಿದೆ ಎಂದ ವೀಡಿಯೋ ಅಸಲಿಯತ್ತೇನು?

ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆ ನಡೆಯುತ್ತಿದೆ ಎಂದು ವೀಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ ಹಲವು ರಸ್ತೆಯಲ್ಲಿ ಪ್ರಜ್ಷೆ ತಪ್ಪಿದವರ ರೀತಿ/ಮೃತಪಟ್ಟವರ ರೀತಿ ಕಾಣಿಸುತ್ತದೆ. ಇದರ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಬಾಂಗ್ಲಾದೇಶದ ಬೋಗ್ರಾದಲ್ಲಿ ರಥಯಾತ್ರೆ ವೇಳೆ ವಿದ್ಯುತ್ ಶಾಕ್‌ ಬಡಿದು 6 ಮಂದಿ ಮೃತಪಟ್ಟ ಘಟನೆ ಇದಾಗಿದೆ. ಈ ವೀಡಿಯೋ ಇತ್ತೀಚಿನ ಬಾಂಗ್ಲಾದೇಶದ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎಂದು ಗೊತ್ತಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿ ಓದಿ

Weekly wrap: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಸ್ಥಿತಿ, ಹಿಂದೂಗಳ ಕೊಲೆ, ವಾರದ ಕ್ಲೇಮ್‌ ನೋಟ

ಬಾಂಗ್ಲಾದೇಶದಲ್ಲಿ ಹಿಂದೂ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಂದು ಬೆಂಗಳೂರಿನಲ್ಲಿ ಮಹಿಳೆ ಮೇಲೆ ಹಿಂಸಾಚಾರದ ಚಿತ್ರ ವೈರಲ್

ಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಹಿಂದೂ ಮಹಿಳೆಯ ಚಿತ್ರ ಎಂದು ಫೊಟೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಸತ್ಯಶೋಧನೆಯಲ್ಲಿ ಕಂಡುಬಂದತೆ, ಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಹಿಂದೂ ಮಹಿಳೆಯ ಚಿತ್ರ ಎನ್ನುವುದು ನಿಜವಲ್ಲ. ಇದು 2021ರಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆಯಾಗಿದ್ದು ಬಾಂಗ್ಲಾ ಮಹಿಳೆಯೊಬ್ಬರ ಮೇಲೆ ಬಾಂಗ್ಲಾದೇಶೀಯರೇ ಅತ್ಯಾಚಾರ ನಡೆಸಿದ ಪ್ರಕರಣವಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿ ಓದಿ

Weekly wrap: ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣುಮಕ್ಕಳ ಸ್ಥಿತಿ, ಹಿಂದೂಗಳ ಕೊಲೆ, ವಾರದ ಕ್ಲೇಮ್‌ ನೋಟ

ಗೋಡಂಬಿ ತಿಂದರೆ ಕೂದಲು ಬಲಗೊಳ್ಳುತ್ತದೆ ಮತ್ತು ಕೂದಲು ಉದುರುವುದಕ್ಕೆ ಪರಿಹಾರ ಎನ್ನವುದು ನಿಜವೇ?

ಗೋಡಂಬಿ ತಿಂದರೆ ಕೂದಲು ಬಲಗೊಳ್ಳುತ್ತದೆ ಮತ್ತು ಕೂದಲು ಉದುರುವುದಕ್ಕೆ ಪರಿಹಾರ ಎಂದು ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ಸತ್ಯಶೋಧನೆಯಲ್ಲಿ ಕಂಡುಬಂದತೆ, ಗೋಡಂಬಿ ಒಂದರಿಂದಲೇ ಕೂದಲು ಬಲಗೊಳ್ಳುತ್ತದೆ ಮತ್ತು ಕೂದಲು ಉದುರುವುದಕ್ಕೆ ಪರಿಹಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿ ಓದಿ


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.