Fact Check: ಆಸ್ಟ್ರೇಲಿಯನ್‌ ಖಗೋಳ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿದರು ಎನ್ನುವ ಹೇಳಿಕೆ ಹಿಂದಿನ ನಿಜಾಂಶ ಏನು?

ಬಾಹ್ಯಾಕಾಶದಿಂದ ನೆಗೆತ, ಆಸ್ಟ್ರೇಲಿಯನ್

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಆಸ್ಟ್ರೇಲಿಯನ್‌ ಖಗೋಳ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿದರು

Fact
ಬಾಹ್ಯಾಕಾಶದಿಂದ ಆಸ್ಟ್ರಿಯಾ ಮೂಲದ ಫೆಲಿಕ್ಸ್ ಬಾಮ್‌ಗಾರ್ಟ್ನರ್ ಎಂಬವರು 2012ರಲ್ಲಿ ಜಿಗಿದು ದಾಖಲೆ ಮಾಡಿದ್ದರು

ಆಸ್ಟ್ರೇಲಿಯಾದ ಖಗೋಳ ವಿಜ್ಞಾನಿಯೊಬ್ಬರು ಬಾಹ್ಯಾಕಾಶದಿಂದ ಜಿಗಿದು ಭೂಮಿಯನ್ನು ತಲುಪಿದ್ದಾರೆ ಎಂಬಂತೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಎಕ್ಸ್ ನಲ್ಲಿ ಕಂಡುಬಂದಿರುವ ಈ ಪೋಸ್ಟ್ ನಲ್ಲಿಆಸ್ಟ್ರೇಲಿಯಾದ ಖಗೋಳಶಾಸ್ತ್ರಜ್ಞ 1,28,000 ಅಡಿಗಳಷ್ಟು ಬಾಹ್ಯಾಕಾಶದಿಂದ ಜಿಗಿದು ಭೂಮಿಯನ್ನು ತಲುಪುತ್ತಾನೆ … 1236 ಕಿ.ಮೀ. 4 ನಿಮಿಷ 5 ಸೆಕೆಂಡ್‌ಗಳಲ್ಲಿ ಪ್ರಯಾಣ ಮುಗಿಸಿದೆ… ಭೂಮಿ ಚಲಿಸುತ್ತಿರುವುದನ್ನು ಅವರು ಸ್ಪಷ್ಟವಾಗಿ ನೋಡಿದ್ದಾರೆ… ಅದ್ಭುತವಾದ ವಿಡಿಯೋ, ಇದನ್ನು ನೋಡಿ ಮತ್ತು ದಯವಿಟ್ಟು ನಿಮ್ಮ ಮಕ್ಕಳಿಗೆ ತೋರಿಸಿ” ಎಂದಿದೆ.

Also Read: ರಾಹುಲ್‌ ಗಾಂಧಿಗೆ ಉದ್ಧವ್ ಠಾಕ್ರೆ ಬಾಗಿ ನಮಸ್ಕರಿಸಿದ ಎಡಿಟ್ ಮಾಡಿದ ಫೋಟೋ ವೈರಲ್

Fact Check: ಆಸ್ಟ್ರೇಲಿಯನ್‌ ಖಗೋಳ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿದರು ಎನ್ನುವ ಹೇಳಿಕೆ ಹಿಂದಿನ ನಿಜಾಂಶ ಏನು?

ಈ ಪೋಸ್ಟ್ ನ ಆರ್ಕೈವ್ ಆವೃತ್ತಿ ಇಲ್ಲಿದೆ.

ಈ ಕುರಿತು ಸತ್ಯಶೋಧನೆ ನಡೆಸಿದ್ದು ಇದು ತಪ್ಪುಹೇಳಿಕೆ ಎಂದು ಕಂಡುಬಂದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಪೋಸ್ಟ್ನಲ್ಲಿರುವ ವೈರಲ್ ವೀಡಿಯೋದ ಕೀವರ್ಡ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

ಅಕ್ಟೋಬರ್ 15, 2012 ಆನ್‌ ಡಿಮ್ಯಾಂಡ್ ನ್ಯೂಸ್‌ ಯೂಟ್ಯೂಬ್‌ ಚಾನೆಲ್ ಪ್ರಕಟಿಸದ ವೀಡಿಯೋದಲ್ಲಿ “Space jump: Felix Baumgartner describes his record-breaking skydive” ಶೀರ್ಷಿಕೆಯಡಿಯಲ್ಲಿ ಫೆಲಿಕ್ಸ್ ಬಾಮ್‌ಗಾರ್ಟ್ನರ್ ಎಂಬವರು ಬಾಹ್ಯಾಕಾಶದಿಂದ ಸ್ಕೈಡೈವಿಂಗ್‌ ಮಾಡಿದ್ದ ಬಗ್ಗೆ ಇದರಲ್ಲಿ ಹೇಳಲಾಗಿದೆ. ಈ ವೀಡಿಯೋವನ್ನು ಕೂಲಂಕಷವಾಗಿ ನೋಡಿದಾಗ ಇದು ವೈರಲ್‌ ವೀಡಿಯೋಕ್ಕೆ ಸಾಮ್ಯತೆ ಇರುವುದನ್ನು ನಾವು ಗಮನಿಸಿದ್ದೇವೆ.

ಇದನ್ನು ಆಧಾರವಾಗಿಟ್ಟುಕೊಂಡು ನಾವು ಶೋಧ ನಡೆಸಿದ್ದು, ಮಾಹಿತಿಗಳು ಲಭ್ಯವಾಗಿವೆ.

ಅಕ್ಟೋಬರ್ 14, 2022ರಂದು ರೆಡ್ ಬುಲ್‌ ಯೂಟ್ಯೂಬ್‌ ಚಾನೆಲ್ ಪ್ರಕಟಿಸಿದ ವೀಡಿಯೋದಲ್ಲಿ “I Jumped From Space (World Record Supersonic Freefall)” ಶೀರ್ಷಿಕೆಯಿದ್ದು ಫೆಲಿಕ್ಸ್ ಬಾಮ್‌ಗಾರ್ಟ್ನರ್ ಅವರು ಬಾಹ್ಯಾಕಾಶದಿಂದ ನೆಗೆದ ಬಗ್ಗೆ ಮಾಹಿತಿ ಇದೆ. ಈ ವೀಡಿಯೋದ ವಿವರಣೆಯಲ್ಲಿ, “ಬಾಹ್ಯಾಕಾಶದಿಂದ ಜಿಗಿಯಲು *ನಿಜವಾಗಿ* ಏನನಿಸುತ್ತದೆ? 2012 ರಲ್ಲಿ ಫೆಲಿಕ್ಸ್ ಬೌಮ್ಗಗರ್ಟ್ನರ್ ಅವರು ಹೀಲಿಯಂ ಬಲೂನ್ ಅನ್ನು ವಾಯುಮಂಡಲಕ್ಕೆ ತೆಗೆದುಕೊಂಡು ವಿಶೇಷವಾಗಿ ತಯಾರಿಸಿದ ಬಾಹ್ಯಾಕಾಶ ಸೂಟ್‌ನಲ್ಲಿ ಭೂಮಿಗೆ ವಾಪಾಸಾದರು. ಫ್ರೀ ಫಾಲ್‌ನಲ್ಲಿ ಅವರು ಶಬ್ದದ ವೇಗವನ್ನು ಮುರಿದು ಭೂಮಿಗೆ ಪ್ರವೇಶಿಸಿದರು. ಈ ವೇಳೆ ಅವರು ತಿರುಗಿದ್ದು ಇಡೀ ಇಡೀ ರೆಡ್ ಬುಲ್ ಸ್ಟ್ರಾಟೋಸ್ ಮಿಷನ್‌ಗೆ ಬೆದರಿಕೆ ಹಾಕಿತು… ಫೆಲಿಕ್ಸ್ ಅವರು ಸಾಧನೆಯನ್ನು ಪ್ರತಿಬಿಂಬಿಸುತ್ತಾರೆ ಮತ್ತು ಬಾಹ್ಯಾಕಾಶದಿಂದ ಜಿಗಿಯಲು ಏನ್ನಿಸಿತು ಎಂಬುದನ್ನು ನಿಜವಾಗಿ ಹಂಚಿಕೊಳ್ಳುತ್ತಾರೆ” ಎಂದಿದೆ.

ಫೆಲಿಕ್ಸ್ ಬಾಮ್‌ಗಾರ್ಟ್ನರ್ ಅವರ ಐತಿಹಾಸಿಕ ನೆಗೆತಕ್ಕೆ 10ವರ್ಷ ಆದ ಬಗ್ಗೆ ಸಿಎನ್‌ಎನ್‌ ಅಕ್ಟೋಬರ್ 14, 2022ರಂದು ವರದಿಯನ್ನು ಪ್ರಕಟಿಸಿದ್ದು, ಅವರ ಬಾಹ್ಯಾಕಾಶ ನೆಗೆತದ ಬಗ್ಗೆ ಮೆಲುಕು ಹಾಕಿದೆ.

Fact Check: ಆಸ್ಟ್ರೇಲಿಯನ್‌ ಖಗೋಳ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿದರು ಎನ್ನುವ ಹೇಳಿಕೆ ಹಿಂದಿನ ನಿಜಾಂಶ ಏನು?

ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತನ್ನ ವೆಬ್‌ ಸೈಟ್ ನಲ್ಲಿ ನೀಡಿದ ಲೇಖನದಲ್ಲಿ, “ಆಸ್ಟ್ರಿಯಾದ ಸ್ಕೈಡೈವರ್ ಫೆಲಿಕ್ಸ್ ಬಾಮ್‌ಗಾರ್ಟ್ನರ್ 38,969.4 ಮೀಟರ್ ಎತ್ತರದಿಂದ ಪ್ಯಾರಾಚೂಟ್ ಜಿಗಿತವನ್ನು ಪೂರ್ಣಗೊಳಿಸಿದ ಮಹತ್ವದ ಕ್ಷಣವನ್ನು ವೀಕ್ಷಿಸಲು ಅಭೂತಪೂರ್ವ ಎಂಟು ಮಿಲಿಯನ್ ಜನರು 14 ಅಕ್ಟೋಬರ್ 2012 ರಂದು ಯೂಟ್ಯೂಬ್‌ ವೀಕ್ಷಣೆ ಮಾಡಿದ್ದಾರೆ. ಈ ಮೂಲಕ ಎಂಟು ವಿಶ್ವ ದಾಖಲೆಗಳನ್ನು ಮತ್ತು ಕೇವಲ ಮೂರು ಗಂಟೆಗಳ ಅಂತರದಲ್ಲಿ ಬಾಹ್ಯಾಕಾಶದ ಧ್ವನಿ ತಡೆಗೋಡೆಯನ್ನು ಮುರಿದಿದ್ದಾರೆ” ಎಂದಿದೆ.  

Also Read: Fact Check: ಮಾಲ್ಡೀವ್ಸ್‌ ಭಾರತಕ್ಕೆ 28 ದ್ವೀಪಗಳನ್ನು ನೀಡಿದೆ ಎನ್ನುವ ಹೇಳಿಕೆ ನಿಜವೇ?

Fact Check: ಆಸ್ಟ್ರೇಲಿಯನ್‌ ಖಗೋಳ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿದರು ಎನ್ನುವ ಹೇಳಿಕೆ ಹಿಂದಿನ ನಿಜಾಂಶ ಏನು?

ಇದರೊಂದಿಗೆ ಫೆಲಿಕ್ಸ್ ಬಾಮ್‌ಗಾರ್ಟ್ನರ್ ರಾಷ್ಟ್ರೀಯತೆಯನ್ನು ಪರಿಶೀಲಿಸಲು ಅವರ ವೆಬ್‌ ಸೈಟ್ ವೀಕ್ಷಿಸಿದ್ದೇವೆ. ಇದರಲ್ಲಿ ಅವರ ವಿವರಗಳನ್ನು ನೀಡಲಾಗಿದ್ದು, ಅವರು ಆಸ್ಟ್ರಿಯನ್‌ ಪ್ರಜೆ ಎಂದು ಉಲ್ಲೇಖಿಸಿರುವುದನ್ನು ಗಮನಿಸಿದ್ದೇವೆ.

Conclusion

ಈ ಸತ್ಯಶೋಧನೆಯ ಪ್ರಕಾರ, ಆಸ್ಟ್ರೇಲಿಯಾದ ಖಗೋಳ ವಿಜ್ಞಾನಿಯೊಬ್ಬರು ಬಾಹ್ಯಾಕಾಶದಿಂದ ಜಿಗಿದು ಭೂಮಿಯನ್ನು ತಲುಪಿದ್ದಾರೆ ಎಂದ ವೀಡಿಯೋ 2012ರದ್ದಾಗಿದ್ದು, ಅವರು ಆಸ್ಟ್ರೇಲಿಯಾದವರಲ್ಲ ಮತ್ತು ಆಸ್ಟ್ರಿಯನ್ ಪ್ರಜೆ ಫೆಲಿಕ್ಸ್ ಬಾಮ್‌ಗಾರ್ಟ್ನರ್ ಎಂಬವರಾಗಿದ್ದಾರೆ ಎಂದು ಗೊತ್ತಾಗಿದೆ.

Result: False

Our Sources
YouTube Video By On demand News, Dated: October 15, 2012

YouTube Video By Redbull, Dated: October 14, 2022

Report By CNN, Dated: October 14, 2022

Guinnessworldrecords: Felix Baumgartner: First person to break sound barrier in freefall

Felixbaumgartner Biodata


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.