Fact Check: ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಹೇಳಿಕೆ ನಿಜವೇ? 

ಅಲ್ಪಸಂಖ್ಯಾತರ ಹಾಸ್ಟೆಲ್‌, ಜೈನ ವಿದ್ಯಾರ್ಥಿಗಳು, ಮುಸ್ಲಿಂ, ಕರ್ನಾಟಕ ಸರ್ಕಾರ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ

Fact
ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಹೇಳಿಕೆ ನಿಜವಲ್ಲ, ಜೈನ ವಿದ್ಯಾರ್ಥಿಗಳಿಗೂ ಅವಕಾಶ ಇದೆ. ಸರ್ಕಾರ ಅಂತಹ ಯಾವುದೇ ಆದೇಶ ತಂದಿಲ್ಲ

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಸರ್ಕಾರಿ ಹಾಸ್ಟೆಲ್ಗಳನ್ನು ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಕಾಯ್ದಿರಿಸಿದೆ ಎಂದು ಮಹೇಶ್ ಜೈನ್ ಎಂಬ ವ್ಯಕ್ತಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಆಗಸ್ಟ್ 26, 2024 ರಂದು ವೆರಿಫೈಡ್ ಎಕ್ಸ್ ಹ್ಯಾಂಡಲ್ ಹಂಚಿಕೊಂಡ ಪೋಸ್ಟ್ನಲ್ಲಿ (ಆರ್ಕೈವ್) ಸುಮಾರು ಏಳು ನಿಮಿಷಗಳ ವೀಡಿಯೊದೊಂದಿಗೆ ಹೀಗೆ ಹೇಳಲಾಗಿದೆ. “ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಮತ್ತು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ 314 ಸರ್ಕಾರಿ ಹಾಸ್ಟೆಲ್ಗಳಿವೆ, ಆದರೆ ಕರ್ನಾಟಕ ಸರ್ಕಾರವು ಎಲ್ಲಾ ಹಾಸ್ಟೆಲ್ಗಳನ್ನು ಮುಸ್ಲಿಂ ಮಕ್ಕಳಿಗೆ ಕಾಯ್ದಿರಿಸಿದೆ. … ಕೇಳಿ, ಜೈನ ವಿದ್ಯಾರ್ಥಿಗಳ ನೋವು ಮತ್ತು ಕಾಂಗ್ರೆಸ್‌ ನ ಈ ಮುಸ್ಲಿಂ ಪರ ನೀತಿಯನ್ನು ನೀವು ಅರ್ಥಮಾಡಿಕೊಂಡಿದ್ದರೆ, ಅದನ್ನು ಸಾಧ್ಯವಾದಷ್ಟು ಜನರಿಗೆ ತಿಳಿಸಿ.

Also Read: ಮಂಕಿ ಪಾಕ್ಸ್ ಇನ್ನು ಜಾಗತಿಕ ಆರೋಗ್ಯ ತುರ್ತು ಸ್ಥಿತಿ ಅಲ್ಲ? WHO ಮುಖ್ಯಸ್ಥರ ಬೇರೆ ಸಂದರ್ಭದ ಹಳೆ ವೀಡಿಯೋ ಹಂಚಿಕೆ

Fact Check: ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಹೇಳಿಕೆ ನಿಜವೇ? 

ಈ ವೀಡಿಯೋದಲ್ಲಿ, ತನ್ನನ್ನು ಮಹೇಶ್ ಜೈನ್ ಎಂದು ಗುರುತಿಸಿಕೊಳ್ಳುವ ವ್ಯಕ್ತಿಯು ಜೈನ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಜೈನ ಸಮಾಜದ ಗುರುಗಳಿಗೆ ಮನವಿ ಮಾಡುತ್ತಾರೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಇಲಾಖೆ ನಡೆಸುತ್ತಿರುವ 314 ಸರ್ಕಾರಿ ಅಲ್ಪಸಂಖ್ಯಾತ ಹಾಸ್ಟೆಲ್ ಗಳಲ್ಲಿ ಒಂದೂ ಜೈನ ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿಲ್ಲ. ಎಲ್ಲ 314 ಹಾಸ್ಟೆಲ್ ಗಳನ್ನು ಮುಸ್ಲಿಂ ಮಕ್ಕಳಿಗೆ ಮೀಸಲಿಡಲಾಗಿದೆ. ’ ಎಂದು ಹೇಳುತ್ತಾರೆ.

ಆಗಸ್ಟ್ 27, 2024 ರಂದು, ಮತ್ತೊಂದು ಎಕ್ಸ್ ವೆರಿಫೈಡ್ ಹ್ಯಾಂಡಲ್ ನಿಂದ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ (ಆರ್ಕೈವ್ ಮಾಡಲಾಗಿದೆಇದರಲ್ಲಿ “ಕರ್ನಾಟಕದ ಜೈನ ವಿದ್ಯಾರ್ಥಿ ಮಹೇಶ್ ಜೈನ್ ತನ್ನ ದುಃಖವನ್ನು ಹೇಗೆ ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ನೋಡಿ… ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ ಕರ್ನಾಟಕದಲ್ಲಿ 314 ಸರ್ಕಾರಿ ಅಲ್ಪಸಂಖ್ಯಾತ ಹಾಸ್ಟೆಲ್ ಗಳಿವೆ, ಜೈನರು, ಸಿಖ್ಖರು, ಕ್ರಿಶ್ಚಿಯನ್ನರು, ಪಾರ್ಸಿಗಳು, ಯಹೂದಿಗಳು ಎಲ್ಲರೂ ಅಲ್ಪಸಂಖ್ಯಾತರು, ಆದರೆ ಕರ್ನಾಟಕ ಸರ್ಕಾರವು ಎಲ್ಲಾ ಅಲ್ಪಸಂಖ್ಯಾತ ಹಾಸ್ಟೆಲ್ ಗಳನ್ನು ಮುಸ್ಲಿಂ ಮಕ್ಕಳಿಗೆ ಮಾತ್ರ ಕಾಯ್ದಿರಿಸಿದೆ. ಯಾವುದೇ ಜೈನ ಸಿಖ್, ಕ್ರಿಶ್ಚಿಯನ್ ಅಥವಾ ಯಹೂದಿ ವಿದ್ಯಾರ್ಥಿ ಈ ಅಲ್ಪಸಂಖ್ಯಾತ ಹಾಸ್ಟೆಲ್ ಗಳಿಗೆ ಹೋಗಲು ಅರ್ಜಿ ಸಲ್ಲಿಸಿದರೆ, ಕರ್ನಾಟಕ ಅಲ್ಪಸಂಖ್ಯಾತ ಇಲಾಖೆ ಅದನ್ನು ರದ್ದುಗೊಳಿಸುತ್ತದೆ.. ನಾನು ಮತ್ತೆ ಹೇಳುತ್ತೇನೆ, ಹಿಂದೂಗಳು, ಜೈನರು, ಸಿಖ್ಖರು, ಕ್ರಿಶ್ಚಿಯನ್ನರು, ಈ ಕಾಂಗ್ರೆಸ್ ನಿಮ್ಮದಲ್ಲ, ಈ ಕಾಂಗ್ರೆಸ್ ಅವರದು ಮಾತ್ರ.” ಎಂದಿದೆ.

Fact Check: ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಹೇಳಿಕೆ ನಿಜವೇ? 

Fact Check/Verification

ಸತ್ಯಶೋಧನೆಗಾಗಿ ನಾವು ಮೊದಲು ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ಯಾವುದೇ ವರದಿಗಳು ಕಂಡುಬಂದಿಲ್ಲ. ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಅಧಿಕೃತ ವೆಬ್ಸೈಟ್ನಲ್ಲಿ ಅಂತಹ ಯಾವುದೇ ಆದೇಶವೂ ಕಂಡುಬಂದಿಲ್ಲ.

ಕರ್ನಾಟಕ ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು 314 ಸರ್ಕಾರಿ ಹಾಸ್ಟೆಲ್ಗಳನ್ನು ನಡೆಸುತ್ತಿದೆ ಎಂದು ತನಿಖೆಯಿಂದ ನಾವು ಕಂಡುಕೊಂಡಿದ್ದೇವೆ, ಅವುಗಳ ಪಟ್ಟಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

Fact Check: ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಹೇಳಿಕೆ ನಿಜವೇ? 

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ, 1994 ರ ಸೆಕ್ಷನ್ 2 (ಡಿ) ಅಡಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್ ಮತ್ತು ಜೊರಾಸ್ಟ್ರಿಯನ್ (ಪಾರ್ಸಿ) ಸಮುದಾಯಗಳನ್ನು ಕರ್ನಾಟಕ ಸರ್ಕಾರವು “ಅಲ್ಪಸಂಖ್ಯಾತ ಸಮುದಾಯಗಳು” ಎಂದು ಘೋಷಿಸಿದೆ. ಈ ಎಲ್ಲಾ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಸರ್ಕಾರಿ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆಯಲು ಅರ್ಹರು ಎಂದು ಇದು ಸ್ಪಷ್ಟಪಡಿಸುತ್ತದೆ.

ಅರ್ಜಿ ನಮೂನೆಯನ್ನು ಕರ್ನಾಟಕ ಸರ್ಕಾರದ ರಾಜ್ಯ ಹಾಸ್ಟೆಲ್ ಪೋರ್ಟಲ್ನ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಬಳಕೆದಾರ ಕೈಪಿಡಿಯಲ್ಲಿ ಅರ್ಜಿದಾರರಿಗೆ ವಿವರಿಸಲಾಗಿದೆ. ಬಳಕೆದಾರ ಕೈಪಿಡಿಯ 15 ನೇ ಪುಟದಲ್ಲಿ, ಧರ್ಮದ ಅಡಿಯಲ್ಲಿ, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಜೈನ್ ಮುಂತಾದ ವಿವಿಧ ಆಯ್ಕೆಗಳನ್ನು ನೀಡಲಾಗಿದೆ ಎಂದು ನಾವು ನೋಡಿದ್ದೇವೆ.

Fact Check: ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ ಗಳಲ್ಲಿ ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಹೇಳಿಕೆ ನಿಜವೇ? 

ತನಿಖೆಯ ಭಾಗವಾಗಿ ನಾವು ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯದ ಜಂಟಿ ನಿರ್ದೇಶಕರಾದ ಮಹಮೂದ್ ಎಸ್ ಅವರೊಂದಿಗೆ ಮಾತನಾಡಿದ್ದೇವೆ. ಫೋನ್ ಸಂಭಾಷಣೆಯಲ್ಲಿ, ಅವರು ವೈರಲ್ ಹೇಳಿಕೆ ಸುಳ್ಳಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ನಿರ್ದೇಶನಾಲಯವು 314 ಸರ್ಕಾರಿ ಹಾಸ್ಟೆಲ್ಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಕಾಯ್ದಿರಿಸಲು ನಿರ್ಧರಿಸಿದೆ ಎಂಬ ಹೇಳಿಕೆಯನ್ನು ಅವರು ನಿರಾಕರಿಸಿದರು.

ತನಿಖೆಯ ಸಮಯದಲ್ಲಿ, ನಾವು ಬೆಂಗಳೂರು ಗ್ರಾಮಾಂತರ ನೆಲಮಂಗಲದಲ್ಲಿರುವ ಜಯನಗರದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಾರ್ಡನ್ ಶ್ರೀ ಕೃಷ್ಣ ಎಂ.ಆರ್ ಅವರೊಂದಿಗೆ ಮಾತನಾಡಿದ್ದೇವೆ. ಅವರೂ ಸರ್ಕಾರಿ ಹಾಸ್ಟೆಲ್ಗಳು ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿವೆ ಎಂಬ ಹೇಳಿಕೆಗಳನ್ನು  ತಳ್ಳಿಹಾಕಿದ್ದಾರೆ ಮತ್ತು ಅವರ ಹಾಸ್ಟೆಲ್‌ ನಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಜೈನ ಸಮುದಾಯದ ಒಬ್ಬ ವಿದ್ಯಾರ್ಥಿ ಮಾತ್ರ ಇದ್ದಾರೆ ಎಂದು ಅವರು ಹೇಳಿದರು. ಇದಕ್ಕೆ ಕಾರಣ ಕೇಳಿದಾಗ, ಜೈನ ಸಮುದಾಯದ ಮಕ್ಕಳಿಂದ ಅರ್ಜಿಗಳನ್ನು ಸ್ವೀಕರಿಸದ ಕಾರಣ, ಜೈನ ಸಮುದಾಯದ ಮಕ್ಕಳಿಗೆ ಮೀಸಲಿಟ್ಟ 4-5 ಸೀಟುಗಳು ತಮ್ಮ ಹಾಸ್ಟೆಲ್‌ ನಲ್ಲಿ ಖಾಲಿ ಇವೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಕಂಟನಕುಂಟೆಯ ಅಲ್ಪಸಂಖ್ಯಾತ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ವಾರ್ಡನ್ ರಾಧಾಮಣಿ ಅವರನ್ನೂ ನಾವು ಸಂಪರ್ಕಿಸಿದ್ದು, ವೈರಲ್ ಹೇಳಿಕೆಯನ್ನು ನಿರಾಕರಿಸಿದರು. ಜೈನ ಸಮುದಾಯದ ಯಾವುದೇ ವಿದ್ಯಾರ್ಥಿಯಿಂದ ಅರ್ಜಿಯನ್ನು ಸ್ವೀಕರಿಸದ ಕಾರಣ ತಮ್ಮ ಹಾಸ್ಟೆಲ್ನಲ್ಲಿ ಜೈನ ವಿದ್ಯಾರ್ಥಿಗಳಿಗೆ ಕಾಯ್ದಿರಿಸಿದ ಸೀಟುಗಳು ಖಾಲಿ ಇವೆ ಎಂದು ಅವರು ಹೇಳಿದರು.

Conclusion

ಸತ್ಯಶೋಧನೆಯ ಪ್ರಕಾರ, ಎಲ್ಲ ಸರ್ಕಾರಿ ಅಲ್ಪಸಂಖ್ಯಾತರ ಹಾಸ್ಟೆಲ್ಗಳನ್ನು ಮುಸ್ಲಿಂ ವಿದ್ಯಾರ್ಥಿಗಳಿಗೆ ಮಾತ್ರ ಕಾಯ್ದಿರಿಸಲಾಗಿದೆ ಎಂಬ ಹೇಳಿಕೆ ಸುಳ್ಳು ತಿಳಿದುಬಂದಿದೆ.

Also Read: ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಸಂತ್ರಸ್ತೆ ಮೃತರಾಗುವ ಮೊದಲಿನ ವೀಡಿಯೋ ನಿಜವಾದ್ದೇ?

Result: False

Our Sources
Official website of Directorate of Minorities, Karnataka Government

State Hostel Portal, Karnataka Government.

Conversation with Mahimood S, Joint Director, Directorate of Minorities, Government of Karnataka

Conversation with Krishna M R., Warden of Minority Post Matric Boys Hostel, Jayanagara, Nelamangala

Conversation with Radhamani Warden of Minority Post Matric Girls Hostel, Kantankunte, Doddaballapura

(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು, ಅದು ಇಲ್ಲಿದೆ)


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.