Fact Check: ಬೆಂಗಳೂರಲ್ಲಿ ಬೀಚ್ ಉದ್ಘಾಟನೆಯಾಗಿದೆ ಎಂದ ಈ ನೆರೆ ವೀಡಿಯೋ ಎರಡು ವರ್ಷ ಹಳೆಯದು!

ಬೆಂಗಳೂರು ನೆರೆ, ಮಹಾಮಳೆ, ಬೆಂಗಳೂರು ಮಳೆ

Claim
ಬೆಂಗಳೂರಲ್ಲಿ ಬೀಚ್ ಉದ್ಘಾಟನೆಯಾಗಿದೆ ಎಂದು ನೆರೆ ವೀಡಿಯೋ

Fact
2022ರ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿ ಬೆಳ್ಳಂದೂರು ಭಾಗದಲ್ಲಿ ಸೃಷ್ಟಿಯಾದ ನೆರೆಯ ದೃಶ್ಯಗಳನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ಬೆಂಗಳೂರಿನಲ್ಲಿ ಮಹಾಮಳೆಗೆ ಪರಿಸ್ಥಿತಿ ತೀವ್ರ ಅಸ್ತವ್ಯಸ್ತ ಆದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್ ನಲ್ಲಿ ಕಂಡುಬಂದಂತೆ “ಬೆಂಗಳೂರಿನ ಮೊಟ್ಟಮೊದಲ ಬೀಚ್ ಉದ್ಘಾಟನೆಗೊಂಡಿದೆ…ಬೆಂಗಳೂರಿನ ಪ್ರಜೆಗಳು ಈ ರಮಣೀಯ ಬೀಚಿಗೆ ಬೇಟಿನೀಡಬೇಕಾಗಿ ಸವಿನಯ ವಿನಂತಿ”, “ಬನ್ನಿ ಪ್ರೆಂಡ್ಸ್ ಬೆಂಗಳೂರು ಬೀಚ್ ನೋಡ್ಕೊಂಡ್ ಬರೋಣ.” ಎಂಬ ಲಘು ಹಾಸ್ಯದ ಹೇಳಿಕೆಗಳೊಂದಿಗೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇವುಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

Also Read: ಗರ್ಬಾದಲ್ಲಿ ಮಹಿಳೆಯರ ಮೇಲೆ ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಯುವಕರನ್ನು ಥಳಿಸಿದ ಹಳೆಯ ವೀಡಿಯೋ ವೈರಲ್

ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ಇದು ಹಳೆಯ ವೀಡಿಯೋ ಆಗಿದ್ದು ಮೊನ್ನೆಯ ಮಹಾಮಳೆ ಹಿನ್ನೆಲೆಯಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬುದನ್ನು ಕಂಡುಕೊಂಡಿದ್ದೇವೆ.

Fact Check/Verification

ಸತ್ಯಶೋಧನೆಗಾಗಿ ನಾವು ವೈರಲ್‌ ವೀಡಿಯೋದ ಕೀಫ್ರೇಮ್‌ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದ್ದೇವೆ. ಈ ವೇಳೆ ಹಲವು ಫಲಿತಾಂಶಗಳು ಲಭ್ಯವಾಗಿವೆ.

ಸೆಪ್ಟೆಂಬರ್ 8, 2022ರಂದು ವಿಕಾಸ್‌ ಕುಮಾರ್ ಯೂಟ್ಯೂಬ್‌ ಚಾನೆಲ್‌ ಪ್ರಕಟಿಸಿದ ವೀಡಿಯೋಕ್ಕೆ ಬೆಂಗಳೂರಿನಲ್ಲಿ ಮಳೆನೀರು|ಬೆಳ್ಳಂದೂರು ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೋ ವೈರಲ್‌ ವೀಡಿಯೋಕ್ಕೆ ಸಾಮ್ಯತೆಯನ್ನು ಹೊಂದಿದೆ.

ಸೆಪ್ಟೆಂಬರ್ 7, 2022ರಂದು ಟೈಮ್ಸ್ ನೌ ಮರಾಠಿ ಪ್ರಕಟಿಸಿದ ಫೋಟೋವೊಂದರಲ್ಲಿ ಶೀರ್ಷಿಕೆಯಾಗಿ, ಬೆಂಗಳೂರಿನಲ್ಲಿ ಮಳೆಯಿಂದಾಗಿ ಹಾಹಾಕಾರ (ಅನುವಾದಿಸಲಾಗಿದೆ) ಎಂದು ಬರೆಯಲಾಗಿದೆ.  

Fact Check: ಬೆಂಗಳೂರಲ್ಲಿ ಬೀಚ್ ಉದ್ಘಾಟನೆಯಾಗಿದೆ ಎಂದ ಈ ನೆರೆ ವೀಡಿಯೋ 2 ವರ್ಷ ಹಳೆಯದು!
ಟೈಮ್ಸ್ ನೌ ಮರಾಠಿ ವರದಿ

ಈ ಕುರಿತು ಇನ್ನೂ ಹೆಚ್ಚಿನ ಶೋಧ ನಡೆಸಿದಾಗ, ಸೆಪ್ಟೆಂಬರ್ 5, 2022ರಂದು ಇಂಡಿಯಾ.ಕಾಮ್ ಪ್ರಕಟಿಸಿದ ಬೆಂಗಳೂರು ಮಳೆಯ ಕುರಿತ ಫೋಟೋ ವರದಿಯಲ್ಲಿ ವೈರಲ್ ವೀಡಿಯೋವನ್ನು ಹೋಲುವ ಫೊಟೋ ಪತ್ತೆಯಾಗಿದೆ.

Fact Check: ಬೆಂಗಳೂರಲ್ಲಿ ಬೀಚ್ ಉದ್ಘಾಟನೆಯಾಗಿದೆ ಎಂದ ಈ ನೆರೆ ವೀಡಿಯೋ 2 ವರ್ಷ ಹಳೆಯದು!
ಇಂಡಿಯಾ.ಕಾಮ್‌ ವರದಿ

ಸೆಪ್ಟೆಂಬರ್ 6, 22024ರಂದು ಸುವರ್ಣ ನ್ಯೂಸ್‌ ಯೂಟ್ಯೂಬ್‌ ವೀಡಿಯೋದಲ್ಲಿ “ಬೆಳ್ಳಂದೂರಿನಲ್ಲಿ ಉಕ್ಕಿ ಹರಿಯುತ್ತಿರುವ ಪ್ರವಾಹ; ಡ್ರೋಣ್ ಕಣ್ಣಲ್ಲಿ ಇಕೋ ಸ್ಪೇಸ್ ಮುಳುಗಡೆ ದೃಶ್ಯ !” ಶೀರ್ಷಿಕೆಯಲ್ಲಿ ಬೆಂಗಳೂರಿನ ಬೆಳ್ಳಂದೂರು ಭಾಗದಲ್ಲಿ ನೆರೆಯಿಂದಾಗಿ ಸಮಸ್ಯೆಯಾದ ಬಗ್ಗೆ ವರದಿಯಿದೆ. ಇಲ್ಲೂ ವೈರಲ್ ವೀಡಿಯೋ ಹೋಲುವ ದೃಶ್ಯಗಳನ್ನು ನೋಡಿದ್ದೇವೆ.

ಇದೇ ರೀತಿಯ ವರದಿಗಳು ಇಲ್ಲಿ ಇಲ್ಲಿ ಕಂಡುಬಂದಿವೆ.

Conclusion

ಈ ಸತ್ಯಶೋಧನೆ ಪ್ರಕಾರ, 2022ರ ಸೆಪ್ಟೆಂಬರ್ ನಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿ ಬೆಳ್ಳಂದೂರು ಭಾಗದಲ್ಲಿ ಸೃಷ್ಟಿಯಾದ ನೆರೆಯ ದೃಶ್ಯಗಳನ್ನು ಇತ್ತೀಚಿನದ್ದು ಎಂದು ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಬಂದಿದೆ.

Result: Missing Context

Our Sources
YouTube Video By Vikas Kumar, Dated: September 8, 2024

Report By Times Now Marathi, Dated: September 7, 2024

Report By India.com, Dated: September 5, 2024

YouTube Video By Suvarna News, Dated: September 6, 2024


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.