Authors
Claim
ದೀಪಾವಳಿಯನ್ನು ಸೌದಿಯಲ್ಲೂ ಆಚರಿಸಲಾಗಿದೆ, ರಾಮನ ಆಗಮನವನ್ನು ಸೌದಿ ಅರೇಬಿಯಾ ಕೂಡ ಸಂಭ್ರಮಿಸಿದೆ ಎಂಬ ಹೇಳಿಕೆಯೊಂದಿಗೆ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಈ ಪೋಸ್ಟ್ ಕಂಡುಬಂದಿದ್ದು, 0.47 ಸೆಕೆಂಡ್ ಗಳ ಈ ವೀಡಿಯೋದಲ್ಲಿ ಪಟಾಕಿಗಳನ್ನು ಸಿಡಿಸಲಾಗುತ್ತಿರುವ ಮತ್ತು ಕೆಲವು ಮುಸಲ್ಮಾನ ಮಹಿಳೆಯರು ಅದನ್ನು ವೀಕ್ಷಿಸುತ್ತಿರುವ ದೃಶ್ಯವಿದೆ.
Fact
ಸತ್ಯಶೋಧನೆಗಾಗಿ ನ್ಯೂಸ್ಚೆಕರ್ ವೈರಲ್ ವೀಡಿಯೋದ ಕೀ ಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಈ ವೇಳೆ ಸೆಪ್ಟೆಂಬರ್ 23, 2024 ರಂದು WPid ಯೂಟ್ಯೂಬ್ ಚಾನೆಲ್ ಪ್ರಕಟಿಸಿದ ವೀಡಿಯೋ ನಮಗೆ ಲಭ್ಯವಾಗಿದೆ. ಇದರಲ್ಲಿ “ಹ್ಯಾಪಿ 94 ನೇ ಸೌದಿ ನ್ಯಾಷನಲ್ ಡೇ” ಎಂಬ ಶೀರ್ಷಿಕೆ ನೀಡಲಾಗಿದ್ದು, ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವ ದೃಶ್ಯಗಳನ್ನು ಇದು ಒಳಗೊಂಡಿದೆ.
Sky Technical guide ಎಂಬ ಇನ್ನೊಂದು ಯೂಟ್ಯೂಬ್ ಚಾನೆಲ್ ಕೂಡ ಸೆಪ್ಟೆಂಬರ್ 23, 2024 ರಲ್ಲಿ ಇದೇ ಕ್ಲಿಪ್ ಅನ್ನು ಪೋಸ್ಟ್ ಮಾಡಿದೆ.
ಸೌದಿ ಅರೇಬಿಯಾದಲ್ಲಿ ದೀಪಾವಳಿ ಆಚರಣೆ ನಡೆದಿದೆ ಎಂಬಂತೆ ತೋರಿಸಲು ಹಂಚಿಕೊಂಡಿರುವ ವೈರಲ್ ವೀಡಿಯೋಕ್ಕೆ ಸಾಮ್ಯತೆ ಇರುವ ವೀಡಿಯೋವನ್ನು ಆಗಸ್ಟ್ 22, 2024 ರಂದು @kapil___ahmed ಅವರ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲೂ ನಾವು ಕಂಡುಕೊಂಡಿದ್ದೇವೆ.
ಇದರೊಂದಿಗೆ ಈ ವರ್ಷದ ಫೆಬ್ರವರಿ ವೇಳೆಯೂ ಪಟಾಕಿಗಳ ಸಿಡಿತದ ಇದೇ ರೀತಿಯ ವೀಡಿಯೋವನ್ನು ಯೂಟ್ಯೂಬ್ನಲ್ಲಿ ಹಂಚಿಕೊಳ್ಳಲಾಗಿತ್ತು.
ಈ ವೀಡಿಯೋದ ಬಗ್ಗೆ ಇತರ ವಿವರಗಳನ್ನು ಕಂಡುಹಿಡಿಯಲು ನಮಗೆ ಸ್ವತಂತ್ರವಾಗಿ ಸಾಧ್ಯವಾಗಿಲ್ಲ. ಆದಾಗ್ಯೂ ಇದು 2 ತಿಂಗಳ ಹಳೆಯದು, ಮತ್ತು ಸೌದಿಯಲ್ಲೂ ದೀಪಾವಳಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂದು ಕಂಡುಕೊಳ್ಳಲಾಗಿದೆ.
Also Read: ಬ್ರಿಕ್ಸ್ ಶೃಂಗಸಭೆಯಲ್ಲಿ ಗ್ರೂಪ್ ಫೋಟೋದಿಂದ ಪ್ರಧಾನಿ ಮೋದಿ ಔಟ್? ವೀಡಿಯೋ ಹಿಂದಿನ ಸತ್ಯ ಇಲ್ಲಿದೆ
Result: Missing Context
Our Sources
YouTube Video By WPid, Dated: September 23, 2024
Instagram Post By kapil___ahmed, Dated: August 22, 2024
(ಈ ಲೇಖನವನ್ನು ಮೊದಲು ನ್ಯೂಸ್ಚೆಕರ್ ತಮಿಳಿನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.