Authors
Claim
ಭಾರತದಲ್ಲಿ ವಕ್ಫ್ ಮಂಡಳಿ ಆಸ್ತಿ ಗಾತ್ರದಲ್ಲಿ ಪಾಕಿಸ್ತಾನಕ್ಕಿಂತ ದೊಡ್ಡದಿದೆ, ಪಾಕಿಸ್ತಾನದ ವಿಸ್ತೀರ್ಣ 8.81 ಲಕ್ಷ ಚದರ ಕಿ.ಮೀ. ಮತ್ತು ವಕ್ಫ್ ಮಂಡಳಿಯ ವಿಸ್ತೀರ್ಣ 9.40 ಲಕ್ಷ ಚದರ ಕಿ.ಮೀ.
Fact
ಭಾರತದ ವಕ್ಫ್ ಮಂಡಳಿಯ ಅಡಿಯಲ್ಲಿರುವ ಆಸ್ತಿಯ ಒಟ್ಟು ವಿಸ್ತೀರ್ಣ ಇಡೀ ಪಾಕಿಸ್ತಾನಕ್ಕಿಂತ ಹೆಚ್ಚಿದೆ ಎನ್ನುವ ಹೇಳಿಕೆ ತಪ್ಪಾಗಿದೆ. ಭಾರತಲ್ಲಿ ವಕ್ಫ್ ಆಸ್ತಿ 9.4 ಲಕ್ಷ ಎಕರೆಯಾಗಿದ್ದು, ಪಾಕಿಸ್ಥಾನದ ವಿಸ್ತೀರ್ಣ 8,81,913 ಲಕ್ಷ ಚದರ ಕಿ.ಮೀ. ಆಗಿದೆ.
ಭಾರತದ ವಕ್ಫ್ ಮಂಡಳಿಯ ಅಡಿಯಲ್ಲಿರುವ ಆಸ್ತಿಯ ಒಟ್ಟು ವಿಸ್ತೀರ್ಣ ಇಡೀ ಪಾಕಿಸ್ತಾನಕ್ಕಿಂತ ಹೆಚ್ಚಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ಬಳಕೆದಾರರು ಹೇಳುತ್ತಿದ್ದಾರೆ. “ಪಾಕಿಸ್ತಾನದವಿಸ್ತೀರ್ಣ 8.81 ಲಕ್ಷ ಚದರ ಕಿ.ಮೀ. ಮತ್ತು ವಕ್ಫ್ ಮಂಡಳಿಯ ವಿಸ್ತೀರ್ಣ 9.40 ಲಕ್ಷ ಚದರ ಕಿ.ಮೀ., ಒಂದು ಪಾಕಿಸ್ತಾನವನ್ನು ಹೊರಗೆ ರಚಿಸಲಾಯಿತು, ಇನ್ನೊಂದು ಒಳಗೆ ಸೃಷ್ಟಿಸಲಾಯಿತು. ಮಲಗಿ, ಇದು ಕಾಂಗ್ರೆಸ್‌ನ ಅದ್ಭುತ ಕೆಲಸ” ಎಂದು ಹಿರಿಯ ನಟ ಸತೀಶ್ ಶಾ ಅವರ ಎಕ್ಸ್ ಪೋಸ್ಟ್ ಹೇಳುತ್ತಿದೆ. ಇದು 1.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
Also Read: ಡೊನಾಲ್ಡ್ ಟ್ರಂಪ್ ರಾಹುಲ್ ಗಾಂಧಿಯವರನ್ನು ‘ಸೊರೊಸ್ ಏಜೆಂಟ್’ ಎಂದು ಕರೆದಿದ್ದಾರೆಯೇ? ಸತ್ಯ ಇಲ್ಲಿದೆ
ಈ ಪೋಸ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ನಾವು ಇದೇ ರೀತಿಯ ಪೋಸ್ಟ್ ಅನ್ನು ನ್ಯೂಸ್‌ಚೆಕರ್ ವಾಟ್ಸಾಪ್ ಟಿಪ್ ಲೈನ್ (+919999499044) ಮೂಲಕ ಸ್ವೀಕರಿಸಿದ್ದು, ಬಳಕೆದಾರರು ಸತ್ಯಶೋಧನೆ ಮಾಡುವಂತೆ ಕೇಳಿಕೊಂಡಿದ್ದಾರೆ. ಅದನ್ನು ಸತ್ಯಶೋಧನೆಗೆ ಅಂಗೀಕರಿಸಲಾಗಿದೆ.
Fact Check/ Verification
ನ್ಯೂಸ್ಚೆಕರ್ ಮೊದಲು ” Waqf board 9.40 lakh” ಎಂಬ ಕೀವರ್ಡ್ ಹುಡುಕಾಟವನ್ನು ನಡೆಸಿದೆ, ಈ ವೇಳೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಿಂದ ಸೆಪ್ಟೆಂಬರ್ 13, 2024 ರ ಪಿಐಬಿ ಹೇಳಿಕೆ ಲಭ್ಯವಾಗಿದೆ. “ವಕ್ಫ್ ತಿದ್ದುಪಡಿ ಮಸೂದೆ 2024 ರ ವಿವರಣೆ” ಎಂಬ ಶೀರ್ಷಿಕೆ ಇದರಲ್ಲಿದೆ. ವಕ್ಫ್ ಮಂಡಳಿಯ ಕೆಲಸವನ್ನು ಸುಗಮಗೊಳಿಸುವ ಮತ್ತು ವಕ್ಫ್ ಆಸ್ತಿಗಳ ಸಮರ್ಥ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ 2024 ರ ಆಗಸ್ಟ್ 8 ರಂದು ವಕ್ಫ್ (ತಿದ್ದುಪಡಿ) ಮಸೂದೆ, 2024 ಮತ್ತು ಮುಸಲ್ಮಾನ್ ವಕ್ಫ್ (ರದ್ದತಿ) ಮಸೂದೆ, 2024 ಎಂಬ ಎರಡು ಮಸೂದೆಗಳನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು. ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವಲ್ಲಿ ಮತ್ತು ನಿರ್ವಹಿಸುವಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು ವಕ್ಫ್ ಕಾಯ್ದೆ, 1995 ಅನ್ನು ತಿದ್ದುಪಡಿ ಮಾಡುವುದು ವಕ್ಫ್ (ತಿದ್ದುಪಡಿ) ಮಸೂದೆ, 2024 ರ ಉದ್ದೇಶವಾಗಿದೆ” ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ವಕ್ಫ್ ಮಂಡಳಿಗಳು ಭಾರತದಾದ್ಯಂತ 9.4 ಲಕ್ಷ ಎಕರೆ ಪ್ರದೇಶದಲ್ಲಿ ಹರಡಿರುವ 8.7 ಲಕ್ಷ ಆಸ್ತಿಗಳನ್ನು ನಿಯಂತ್ರಿಸುತ್ತಿದ್ದು, ಇದರ ಅಂದಾಜು ಮೌಲ್ಯ 1.2 ಲಕ್ಷ ಕೋಟಿ ರೂ. ಆಗಿದೆ. ಸಶಸ್ತ್ರ ಪಡೆಗಳು ಮತ್ತು ಭಾರತೀಯ ರೈಲ್ವೆಯ ನಂತರ ವಕ್ಫ್ ಮಂಡಳಿ ಭಾರತದಲ್ಲಿ ಅತಿದೊಡ್ಡ ಭೂಮಾಲೀಕನಾಗಿದ್ದು, ಭಾರತವು ವಿಶ್ವದ ಅತಿದೊಡ್ಡ ವಕ್ಫ್ ಹಿಡುವಳಿಯನ್ನು ಹೊಂದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪೋಸ್ಟ್ ನಲ್ಲಿ ಹೇಳಿರುವಂತೆ ವಕ್ಫ್ ಆಸ್ತಿ 9.4 ಲಕ್ಷ ಎಕರೆಗಳಲ್ಲಿದೆ, ಅದು ಚದರ ಕಿ.ಮೀ ಅಲ್ಲ ಎನ್ನುವುದನ್ನು ನಾವು ಗಮನಿಸಬಹುದು. ಭಾರತದಾದ್ಯಂತ 9.4 ಲಕ್ಷ ಎಕರೆ ಪ್ರದೇಶದಲ್ಲಿ ಹರಡಿರುವ 8.7 ಲಕ್ಷ ಆಸ್ತಿಗಳನ್ನು ವಕ್ಫ್ ಮಂಡಳಿಗಳು ನಿಯಂತ್ರಿಸುತ್ತವೆ ಎಂದು ಹೇಳುವ ಸುದ್ದಿ ವರದಿಗಳನ್ನು ನಾವು ನೋಡಿದ್ದೇವೆ.
9.4 ಲಕ್ಷ ಎಕರೆ ಅಂದರೆ 3,804.04504 ಚದರ ಕಿ.ಮೀ ಆಗುತ್ತದೆ. ಆದರೆ ಪಾಕಿಸ್ತಾನದ ಒಟ್ಟು ವಿಸ್ತೀರ್ಣ 8,81,913 ಚದರ ಕಿ.ಮೀ – ಇದು ಭಾರತದ ವಕ್ಫ್ ಮಂಡಳಿಗಳ ನಿಯಂತ್ರಣದಲ್ಲಿರುವ ಭೂಮಿಗಿಂತ ಸುಮಾರು 232 ಪಟ್ಟು ದೊಡ್ಡದಾಗಿದೆ ಎಂದು ನ್ಯೂಸ್ಚೆಕರ್ ಕಂಡುಕೊಂಡಿದೆ.
ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗಳಿಗಾಗಿ ನಾವು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದ್ದೇವೆ ಮತ್ತು ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ಈ ಲೇಖನವನ್ನು ನವೀಕರಿಸುತ್ತೇವೆ.
Conclusion
ಭಾರತದ ವಕ್ಫ್ ಮಂಡಳಿಯ ಅಡಿಯಲ್ಲಿರುವ ಆಸ್ತಿಯ ಒಟ್ಟು ವಿಸ್ತೀರ್ಣ ಇಡೀ ಪಾಕಿಸ್ತಾನಕ್ಕಿಂತ ಹೆಚ್ಚಿದೆ ಎನ್ನುವ ಹೇಳಿಕೆ ತಪ್ಪಾಗಿದೆ. ಭಾರತಲ್ಲಿ ವಕ್ಫ್ ಆಸ್ತಿ 9.4 ಲಕ್ಷ ಎಕರೆಯಾಗಿದ್ದು, ಪಾಕಿಸ್ಥಾನದ ವಿಸ್ತೀರ್ಣ 8,81,913 ಲಕ್ಷ ಚದರ ಕಿ.ಮೀ. ಆಗಿದೆ.
Also Read: ವಕ್ಫ್ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್‌ಗೆ ರೈತರು ಘೇರಾವ್ ಹಾಕಿದರೇ, ನಿಜ ಏನು?
Result: False
Our Sources
PIB release, Dated: September 13, 2024
Consulate General Of Pakistan, Los Angeles website
(ಈ ಲೇಖನವನ್ನು ಮೊದಲು ನ್ಯೂಸ್‌ಚೆಕರ್ ಇಂಗ್ಲಿಷ್ ನಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದೆ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.