Authors
ವಕ್ಫ್ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್‌ಗೆ ರೈತರ ಘೇರಾವ್, ಡೊನಾಲ್ಡ್ ಟ್ರಂಪ್ ರಾಹುಲ್ ಗಾಂಧಿಯವರನ್ನು ‘ಸೊರೊಸ್ ಏಜೆಂಟ್’ ಎಂದು ಕರೆದಿದ್ದಾರೆ, ಭಾರತದಲ್ಲಿ ವಕ್ಫ್ ಮಂಡಳಿ ಆಸ್ತಿ ಗಾತ್ರದಲ್ಲಿ ಪಾಕಿಸ್ತಾನಕ್ಕಿಂತ ದೊಡ್ಡದು, ಖಾಲಿ ಹೊಟ್ಟೆಯಲ್ಲಿ ದಿನಕ್ಕೆರಡು ಬಾರಿ ನೆನೆಸಿದ ಹುರುಳಿಕಾಳು ತಿನ್ನುವುದರಿಂದ ದೇಹದ ಕೊಬ್ಬು ಕಡಿಮೆಯಾಗುತ್ತದೆ ಎಂಬ ಹೇಳಿಕೆಗಳು ಈ ವಾರ ಪ್ರಮುಖವಾಗಿದ್ದವು. ಇವುಗಳ ಬಗ್ಗೆ ನ್ಯೂಸ್‌ಚೆಕರ್ ಸತ್ಯಶೋಧನೆ ನಡೆಸಿದ್ದು, ನಿಜಾಂಶವನ್ನು ತೆರೆದಿಟ್ಟಿದೆ.
ವಕ್ಫ್ ಪ್ರಕರಣದಲ್ಲಿ ಸಚಿವ ಜಮೀರ್ ಅಹ್ಮದ್‌ಗೆ ರೈತರು ಘೇರಾವ್ ಹಾಕಿದರೇ, ನಿಜ ಏನು?
ರೈತರು ಮತ್ತು ಇತರ ಆಸ್ತಿಗಳನ್ನು ವಕ್ಫ್ ಗೆ ಮ್ಯೂಟೇಶನ್ ಮಾಡುವ ಕುರಿತು ರಾಜ್ಯಾದ್ಯಂತ ವಿವಾದ ಭುಗಿಲೆದ್ದ ಬೆನ್ನಲ್ಲೇ, ರಾಜ್ಯದ ವಕ್ಫ್ ಸಚಿವ ಜಮೀರ್ ಅಹಮದ್ ಅವರಿಗೆ ರೈತರು ಘೇರಾವ್ ಹಾಕಿ, ಪ್ರತಿಭಟನೆಗಳನ್ನು ಸಲ್ಲಿಸಿದ್ದಾರೆ ಎಂಬಂತೆ ಹೇಳಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಸಚಿವ ಜಮೀರ್ ಅಹ್ಮದ್‌ಗೆ ರೈತರು ಘೇರಾವ್ ಹಾಕಿದ ವೀಡಿಯೋ ಇದಲ್ಲ, 2020ರಲ್ಲಿ ಬಳ್ಳಾರಿಯಲ್ಲಿ ಸೋಮಶೇಖರ ರೆಡ್ಡಿ ಅವರ ವಿರುದ್ಧ ಜಮೀರ್ ಅವರು ಪ್ರತಿಭಟನೆ ನಡೆಸಿದ ವೀಡಿಯೋ ಇದಾಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಡೊನಾಲ್ಡ್ ಟ್ರಂಪ್ ರಾಹುಲ್ ಗಾಂಧಿಯವರನ್ನು ‘ಸೊರೊಸ್ ಏಜೆಂಟ್’ ಎಂದು ಕರೆದಿದ್ದಾರೆಯೇ? ಸತ್ಯ ಇಲ್ಲಿದೆ
ಡೊನಾಲ್ಡ್ ಟ್ರಂಪ್ ಅವರು ರಾಹುಲ್ ಗಾಂಧಿಯನ್ನು ‘ಜಾರ್ಜ್ ಸೊರೊಸ್’ ಏಜೆಂಟ್ ಎಂದು ಕರೆದಿದ್ದಾರೆ, ಎಂಬಂತೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯನ್ನು ಹಂಚಲಾಗುತ್ತಿದೆ. ಸತ್ಯಶೋಧನೆ ಪ್ರಕಾರ ಡೊನಾಲ್ಡ್ ಟ್ರಂಪ್ ರಾಹುಲ್ ಗಾಂಧಿಯನ್ನು ‘ಸೊರೊಸ್ ಏಜೆಂಟ್’ ಎಂದು ಕರೆದಿದ್ದಾರೆ ಎಂದು ಹೇಳಲು ಟ್ರಂಪ್ ಅವರನ್ನು ವಿಡಂಬಿಸುವ ಖಾತೆಯಿಂದ ಮಾಡಲಾದ ಎಕ್ಸ್ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ. ಈ ಕುರಿತ ವರದಿ ಇಲ್ಲಿದೆ
ಭಾರತದಲ್ಲಿ ವಕ್ಫ್ ಮಂಡಳಿ ಆಸ್ತಿ ಗಾತ್ರದಲ್ಲಿ ಪಾಕಿಸ್ತಾನಕ್ಕಿಂತ ದೊಡ್ಡದಿದೆಯೇ, ಇಲ್ಲ ವೈರಲ್ ಹೇಳಿಕೆ ಸುಳ್ಳು!
ಭಾರತದಲ್ಲಿ ವಕ್ಫ್ ಮಂಡಳಿ ಆಸ್ತಿ ಗಾತ್ರದಲ್ಲಿ ಪಾಕಿಸ್ತಾನಕ್ಕಿಂತ ದೊಡ್ಡದಿದೆ, ಪಾಕಿಸ್ತಾನದ ವಿಸ್ತೀರ್ಣ 8.81 ಲಕ್ಷ ಚದರ ಕಿ.ಮೀ. ಮತ್ತು ವಕ್ಫ್ ಮಂಡಳಿಯ ವಿಸ್ತೀರ್ಣ 9.40 ಲಕ್ಷ ಚದರ ಕಿ.ಮೀ. ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಳಕೆದಾರರು ಹೇಳಿಕೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸತ್ಯಶೋಧನೆ ನಡೆಸಿದಾಗ, ಭಾರತದ ವಕ್ಫ್ ಮಂಡಳಿಯ ಅಡಿಯಲ್ಲಿರುವ ಆಸ್ತಿಯ ಒಟ್ಟು ವಿಸ್ತೀರ್ಣ ಇಡೀ ಪಾಕಿಸ್ತಾನಕ್ಕಿಂತ ಹೆಚ್ಚಿದೆ ಎನ್ನುವ ಹೇಳಿಕೆ ತಪ್ಪಾಗಿದೆ. ಭಾರತಲ್ಲಿ ವಕ್ಫ್ ಆಸ್ತಿ 9.4 ಲಕ್ಷ ಎಕರೆಯಾಗಿದ್ದು, ಪಾಕಿಸ್ಥಾನದ ವಿಸ್ತೀರ್ಣ 8,81,913 ಲಕ್ಷ ಚದರ ಕಿ.ಮೀ. ಆಗಿದೆ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ
ಖಾಲಿ ಹೊಟ್ಟೆಯಲ್ಲಿ ದಿನಕ್ಕೆರಡು ಬಾರಿ ನೆನೆಸಿದ ಹುರುಳಿಕಾಳು ತಿನ್ನುವುದರಿಂದ ಕೊಬ್ಬು ಕಡಿಮೆಯಾಗುತ್ತದೆಯೇ?
ಖಾಲಿ ಹೊಟ್ಟೆಯಲ್ಲಿ ದಿನಕ್ಕೆರಡು ಬಾರಿ ನೆನೆಸಿದ ಹುರುಳಿಕಾಳು ತಿನ್ನುವುದರಿಂದ ದೇಹದ ಕೊಬ್ಬು ಕಡಿಮೆಯಾಗುತ್ತದೆ ಎಂಬ ಹೇಳಿಕೆಯನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಖಾಲಿ ಹೊಟ್ಟೆಯಲ್ಲಿ ದಿನಕ್ಕೆರಡು ಬಾರಿ ನೆನೆಸಿದ ಹುರುಳಿಕಾಳು ತಿನ್ನುವುದರಿಂದ ದೇಹದ ಕೊಬ್ಬು ಕಡಿಮೆಯಾಗುತ್ತದೆ ಎನ್ನುವುದಕ್ಕೆ ನಿರ್ದಿಷ್ಟ ವೈಜ್ಞಾನಿಕ ಕಾರಣಗಳಿಲ್ಲ, ಖಾಲಿ ಹೊಟ್ಟೆಯಲ್ಲಿ ಅಥವಾ ದಿನದ ಯಾವುದೇ ನಿರ್ದಿಷ್ಟ ಸಮಯದಲ್ಲಿ ಅದನ್ನು ತಿನ್ನುವುದರಿಂದ ಮಾಂತ್ರಿಕವಾಗಿ ಕೊಬ್ಬನ್ನು ಕರಗಿಸುವುದಿಲ್ಲ ಎಂದು ಗೊತ್ತಾಗಿದೆ. ಈ ಕುರಿತ ವರದಿ ಇಲ್ಲಿದೆ