Fact Check: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ನಿಜವೇ?

ನಿವೃತ್ತಿ ವಯಸ್ಸು, 62 ವರ್ಷ ಕೇಂದ್ರ ಸರ್ಕಾರ

Authors

Pankaj Menon is a fact-checker based out of Delhi who enjoys ‘digital sleuthing’ and calling out misinformation. He has completed his MA in International Relations from Madras University and has worked with organisations like NDTV, Times Now and Deccan Chronicle online in the past.

Claim
ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ

Fact
ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60-62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ಸುಳ್ಳು ಹೇಳಿಕೆ, ಸರ್ಕಾರ ಅಂತಹ ಯಾವುದೇ ಪ್ರಸ್ತಾವನೆ ಹೊಂದಿಲ್ಲ

ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60-62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎಂಬಂತೆ ಹೇಳಿಕೆಯೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯ ಪ್ರಕಾರ, “ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಸುಮಾರು 9 ವರೆ ಲಕ್ಷ ಹುದ್ದೆಗಳು ಖಾಲಿಯಿದೆ.ಈ ಸಮಯದಲ್ಲಿ ಅಲ್ಪ ಪ್ರಮಾಣದ ಹುದ್ದೆಗಳನ್ನು ಭರ್ತಿ ಮಾಡದೆ ಸರ್ಕಾರವು ಈಗ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60-62ಕ್ಕೆ ಹೆಚ್ಚಳ ಮಾಡಲು ಹೊರಟಿದಿಯಂತೆ ಇದೆ ನಾಟಕ ಮುಂದುವರಿದರೆ? ಉದ್ಯೋಗಾಕಾಂಕ್ಷಿಗಳು ಪಾಡೇನು?ಇದನ್ನೆಲ್ಲ,ಅಚ್ಚೆ ದಿನ್ ಅನ್ನಬೇಕೆ.” ಎಂದಿದೆ.

Also Read: ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಮೇಲೆ ವಕ್ಫ್ ಮಂಡಳಿ ಹಕ್ಕು ಸಾಧಿಸಿದೆಯೇ? ವೈರಲ್ ಪೋಸ್ಟ್ ಗಳು ಸುಳ್ಳು

Fact Check: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ನಿಜವೇ?

ನ್ಯೂಸ್ ಚೆಕರ್ ಈ ಬಗ್ಗೆ ಸತ್ಯಶೋಧನೆ ಮಾಡಿದ್ದು ಇದು ಸುಳ್ಳು ಎಂದು ಕಂಡುಹಿಡಿದಿದೆ.

Fact Check/Verification

ಸತ್ಯಶೋಧನೆಗಾಗಿ ನಾವು ಹೇಳಿಕೆಯ ಕುರಿತಾಗಿ ವರದಿಗಳನ್ನು ಶೋಧಿಸಿದ್ದೇವೆ. ಯಾವುದೇ ವಿಶ್ವಸನೀಯ ವರದಿಗಳು ಕಂಡುಬಂದಿಲ್ಲ

ಆದರೆ ವೈದ್ಯಕೀಯ ಮತ್ತು ವೈಜ್ಞಾನಿಕ ತಜ್ಞರಿಗೆ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ನಿಗದಿಗೊಳಿಸಿರುವ ಬಗ್ಗೆ ಸೆಪ್ಟೆಂಬರ್ 27, 2017ರ ಪಿಐಬಿ ಪತ್ರಿಕಾ ಹೇಳಿಕೆಯನ್ನು ಕಂಡುಕೊಂಡಿದ್ದೇವೆ. ಇದರಲ್ಲಿ “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ವಿವಿಧ ಇಲಾಖೆಗಳು/ಸಚಿವಾಲಯಗಳು/ಸ್ವಾಯತ್ತ ಸಂಸ್ಥೆಗಳ ಅಡಿಯಲ್ಲಿ ಬರುವ ಕೇಂದ್ರ ಆರೋಗ್ಯ ಸೇವೆಗಳ (CHS) ವೈದ್ಯರನ್ನು ಹೊರತುಪಡಿಸಿ ಉಳಿದ ವೈದ್ಯರ ನಿವೃತ್ತಿ ವಯಸ್ಸನ್ನು 65 ವರ್ಷಗಳಿಗೆ ಹೆಚ್ಚಿಸಲು ಅನುಮೋದಿಸಿದೆ.” ಎಂದಿದೆ.

Fact Check: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ನಿಜವೇ?

ಕೇಂದ್ರ ಸರ್ಕಾರದ ಸಿಬ್ಬಂದಿ ಇಲಾಖೆಯ ಅಧಿಕೃತ ಹೇಳಿಕೆಯಲ್ಲಿ ನಿವೃತ್ತಿ ವಯಸ್ಸು 60 ವರ್ಷ ಎಂದಿರುವುದನ್ನು ನೋಡಿದ್ದೇವೆ. ಈ ಹೇಳಿಕೆಯನ್ನು ಡಿಸೆಂಬರ್ 1, 2022 ರಂದು ಹೊರಡಿಸಲಾಗಿದ್ದು ಆ ಬಳಿಕ ಯಾವುದೇ ಅಧಿಕೃತ ಆದೇಶಗಳು ಬಂದಿಲ್ಲ ಎಂಬುದನ್ನು ಗಮನಿಸಿದ್ದೇವೆ.

Fact Check: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ನಿಜವೇ?

ಆಗಸ್ಟ್ 9, 2023ರ ಎಐಆರ್ ವರದಿ ಪ್ರಕಾರ ಕೇಂದ್ರ ಸಿಬ್ಬಂದಿ ಸಚಿವ ಜಿಂತೇಂದ್ರ ಸಿಂಗ್ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ನಿವೃತ್ತಿ ವಯಸ್ಸನ್ನು 62 ವರ್ಷಕ್ಕೇರಿಸುವ ಯಾವುದೇ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಹೇಳಿದ್ದಾಗಿ ಇದೆ.

Fact Check: ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಳ ಮಾಡಲು ಹೊರಟಿದೆ ಎನ್ನುವುದು ನಿಜವೇ?

ಇದೇ ರೀತಿಯ ವರದಿಗಳನ್ನು ಇಲ್ಲಿ, ಇಲ್ಲಿ ನೋಡಬಹುದು.

ಇದಾದ ಬಳಿಕ ಪಿಐಬಿ ನವೆಂಬರ್ 19 2024 ರಂದು ಈ ಕುರಿತ ಸುದ್ದಿಗಳಿಗೆ ಉತ್ತರವಾಗಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ನಿವೃತ್ತಿ ವಯಸ್ಸನ್ನು ಸರ್ಕಾರ ಏರಿಸುವ ಪ್ರಸ್ತಾವನೆಯಿಲ್ಲ ಇದು ಸುಳ್ಳು ಎಂದಿದೆ.

Conclusion

ಈ ಸಾಕ್ಷ್ಯಾಧಾರಗಳ ಪ್ರಕಾರ ನಿವೃತ್ತಿ ವಯಸ್ಸು 62 ವರ್ಷಕ್ಕೆ ಏರಿಕೆಯಾಗಲಿದೆ ಎನ್ನುವುದು ತಪ್ಪಾಗಿದೆ, ಆ ರೀತಿಯ ಯಾವುದೇ ಪ್ರಸ್ತಾವನೆ ಕೇಂದ್ರದ ಮುಂದಿಲ್ಲ ಎಂದು ಈ ಸತ್ಯಶೋಧನೆ ಕಂಡುಕೊಂಡಿದೆ.

Also Read: ಸ್ಪೀಕರ್ ಓಂ ಬಿರ್ಲಾ ಪುತ್ರಿ ಅಂಜಲಿ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದಾರಾ? ಇಲ್ಲ, ವೈರಲ್ ಹೇಳಿಕೆ ಸುಳ್ಳು

Result: False

Our Sources
Press Release By PIB, Dated: September 27, 2017

Statement By Ministry of Personnel, Public Grievances & Pensions Department of Personnel and Training, Dated: December 1, 2022

Report By AIR, Dated: August 9, 2023

X post By PIB, Dated: November 19, 2024

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.